ನೀವು ಗರ್ಭಿಣಿಯಾಗಿರುವಾಗ, ನಿಮ್ಮ ಮಗುವಿನ ಮುಂದಿನ ಭವಿಷ್ಯದ ಬಗ್ಗೆ ಮಗುವಿನ ಜೀವನದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದುಒಳ್ಳೆಯದು, ಆದರೆ ಅದಕ್ಕೂ ಮುಂಚೆ ಮುಖ್ಯವಾಗಿ ಮಗುವಿಗೆ ಜನ್ಮ ನೀಡುವ ಹಲವು ಬಗೆಗಳನ್ನು ನೀವು ತಿಳಿದುಕೊಂಡು ನಿಮಗೆ ಉತ್ತಮವಾದುದ್ದನ್ನು ಆರಿಸಿಕೊಳ್ಳುವುದು ಉತ್ತಮ. ಗರ್ಭಿಣಿ ಮಹಿಳೆಯರ ದೇಹದ ಮತ್ತು ಮಾನಸಿಕ ಸ್ಥಿತಿಯನ್ನು ನಿರ್ಧರಿಸಿ ಮಹಿಳೆಯ ಹೆರಿಗೆಯ ವಿಧವನ್ನು ಆರಿಸಿಕೊಳ್ಳಬಹುದು. ಕೆಲವರು ಎಪಿಡ್ಯೂರಲ್ ಆಯ್ಕೆ ಮಾಡಿಕೊಂಡರೆ ಕೆಲವರು ನೈಸರ್ಗಿಕ ಅಥವಾ ಸಿಸೇರಿಯನ್ ಅನ್ನು ಆರಿಸಿಕೊಳ್ಳುತ್ತಾರೆ.
ನೈಸರ್ಗಿಕ ವಿಧಾನ ಯಾವುದೇ ವೈದ್ಯಕೀಯ ಪ್ರಕ್ರಿಯೆಯನ್ನು ಬಳಸದೆ ಸಂಪೂರ್ಣ ನೈಸರ್ಗಿಕ ವಿಧಾನದಿಂದ ಮಗುವಿಗೆ ಜನ್ಮ ನೀಡುವ ಕ್ರಿಯೆಯನ್ನು ಮಾಡುತ್ತಾರೆ. ನೀವು ನೈಸರ್ಗಿಕ ಹೆರಿಗೆಯನ್ನು ಬಯಸಿದರೆ ಯಾವುದೇ ತೊಂದರೆ ಇಲ್ಲದೆ ಸುಲಭವಾಗಿ ಹೆರಿಗೆಯಾಗಲು ಕೆಲವು ಸಲಹೆಗಳನ್ನು ಇಲ್ಲಿ ನೀಡಲಾಗಿದೆ.
೧.ನೀವು ನೈಸರ್ಗಿಕ ವಿಧಾನದ ಮೂಲಕ ಮಗುವಿಗೆ ಜನ್ಮ ನೀಡಲು ಇಚ್ಛಿಸಿದರೆ, ಹೆರಿಗೆ ಮುಗಿಯುವ ತನಕ ಒತ್ತಡಕ್ಕೆ ಅಥಾವ ಭಯವನ್ನು ಪಡಬಾರದು. ಮತ್ತು ನಿಮ್ಮ ಉಸಿರಾಟದ ಹೆರೀಳಿತ ಹೆಚ್ಚು ಅಥವಾ ಕಡಿಮೆಯಾಗಬಾರದು. ನೀವು ಹೆರಿಗೆಗೆ ಮುಂಚೆ ಉಸಿರಾಟದ ಅಭ್ಯಾಸ ಮಾಡುವುದು ಒಳ್ಳೆಯದು.
೨.ನಿಮ್ಮ ಸಂಗಾತಿ ಅಥವಾ ಆಪ್ತರು ನಿಮ್ಮ ದೇಹದ ಅಂಗ ಮರ್ಧನ ಅಥವಾ ಮಸಾಜ್ ಅನ್ನು ಮಾಡಿಸಿಕೊಳ್ಳಿ ಏಕೆಂದರೆ, ನೈಸರ್ಗಿಕ ಹೆರಿಗೆಯಲ್ಲಿ ಇದನ್ನು ಮಾಡಲೇಬೇಕು. ಇದರಿಂದ ಹೆರಿಗೆ ಸುಲಭ ಮತ್ತು ಬೇಗನೆ ಆಗಲು ಸಹಾಯವಾಗುತ್ತದೆ.
೩.ನಿಮ್ಮ ಕೈ ಕಾಲುಗಳಲ್ಲಿನ ಊತವನ್ನು ಕಡಿಮೆ ಮಾಡಿಕೊಳ್ಳಲು ವೈದ್ಯರನ್ನು ಭೇಟಿ ಮಾಡಿ. ಆದಷ್ಟು ನೆಮ್ಮದಿಯಿಂದ ಇರಲು ಪ್ರಯತ್ನಿಸಿ, ಯಾವುದೇ ಒತ್ತಡ ಅಥವಾ ಭಯವನ್ನು ಹೊಂದಬೇಡಿ.
೪.ನಿಮ್ಮ ದೇಹದ ಸ್ಥಿತಿಯನ್ನು ಬದಲಿಸಿಕೊಳ್ಳುವುದು ಹೆರಿಗೆಯಲ್ಲಿ ನೋವನ್ನು ಕಡಿಮೆಮಾಡಲು ಸಹಾಯವಾಗುತ್ತದೆ. ಪ್ರಸವಕ್ಕೂ ಮೊದಲು ಸ್ವಲ್ಪ ನಡೆದಾಡುವುದು ದೇಹದ ಸ್ಥಿತಿಯನ್ನು ಉತ್ತಮವಾಗಿರಿಸಿಕೊಳ್ಳುವುದು ಬಹಳ ಒಳ್ಳೆಯದು. ನಡೆದಾಡುವುದು ನಿಮ್ಮ ಸೆರ್ವಿಕ್ಸ್ ನ ಸಡಿಲಗೊಳಿಸಿ ಹೆರಿಗೆಯ ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
೫.ನೀರಿನಲ್ಲಿ ಜನ್ಮ ನೀಡುವುದು ಅಥವಾ ವಾಟರ್ ಬರ್ತ್ ನೈಸರ್ಗಿಕ ಹೆರಿಗೆಯ ಮತ್ತೊಂದು ವಿಧಾನ ಮತ್ತು ಇದರಲ್ಲಿ ಕೂಡ ವೈದ್ಯಕೀಯ ಪ್ರಕ್ರಿಯೆಗಳನ್ನು ಹೆಚ್ಚಾಗಿ ಬಳಸುವುದಿವುಲ್ಲ. ನೀರು ಬೆಚ್ಚಗೆ ಇರುವುದರಿಂದ ನೋವು ಹೆಚ್ಚಾಗಿ ಕಾಣಿಸಿಕೊಳ್ಳುವುದಿಲ್ಲ, ಮತ್ತು ಸ್ನಾಯುಗಳು ಸಡಿಲಗೊಂಡು ಹೆರಿಗೆ ಸಲೀಸಾಗಿ ಆಗಲು ಸಹಾಯವಾಗುತ್ತದೆ.
ನಿಮ್ಮ ಜೊತೆಗೆ ನಿಮಗೆ ಧೈರ್ಯ ತುಂಬುವ ಸಂಗಾತಿ ಅಥವಾ ಆಪ್ತರು ಜೊತೆಗೆ ಇದ್ದು ನಿಮ್ಮ ಕಾನ್ಫಿಡೆನ್ಸ್ ಅನ್ನು ಹೆಚ್ಚಿಸಿ ಆರಾಮದಾಯಕವಾಗಿ ಹೆರಿಗೆ ಆಗಲು ಸಹಾಯವಾಗುತ್ತದೆ. ವೈದ್ಯಕೀಯ ಪ್ರಕ್ರಿಯೆ ಅಥವಾ ಯಾವುದೇ ಪೈನ್ ಕಿಲ್ಲರ್ ಇಲ್ಲದೆ ಹೆರಿಗೆಮಾಡಿಸುವುದರಿಂದ ನಿಮ್ಮ ಮನೋಧೈರ್ಯ ಇದರಲ್ಲಿ ತುಂಬಾ ಮುಖ್ಯ ಪಾತ್ರವನ್ನು ವಹಿಸುತ್ತದೆ. ಅದು ಏನೇ ಇದ್ದರೂ, ನೈಸರ್ಗಿಕ ಹೆರಿಗೆಯನ್ನು ಆರಿಸಿಕೊಳ್ಳುವಾಗ ನಿಮ್ಮ ದೇಹದ ಸ್ಥಿತಿ ಮತ್ತು ಗರ್ಭಾವಸ್ಥೆಯ ಮೇಲೆ ಅವಲಂಭಿತವಾಗಿರುತ್ತದೆ. ಆದ್ದರಿಂದ ನಿಮ್ಮ ವೈದ್ಯರಿಂದ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಿ.