Link copied!
Sign in / Sign up
3
Shares

ಗರ್ಭಧಾರಣೆಯಲ್ಲಿ ಸೆಕ್ಸ್ ಅಲ್ಲಿ ತೊಡಗಿದಾಗ ನನಗಾದ 4 ನಗು ತರಿಸೋ ಮುಜುಗರದ ವಿಷಯಗಳು!

ಸಾಮಾನ್ಯವಾಗಿ ಹೇಳಬೇಕೆಂದರೆ ಲೈಂಗಿಕ ಕ್ರಿಯೆ ಎಂದರೆ ರಸಮಯವಾಗಿರುತ್ತದೆ ಮತ್ತು ಉಲ್ಲಾಸಭರಿತವಾಗಿರುತ್ತದೆ. ನೀವು ಕಳೆದು ಹೋಗಿ, ನಿಮ್ಮ ಸಂಗಾತಿಯೊಂದಿಗೆ ಮಿಲನ ಹೊಂದುವ ಸಮಯ. ಇದು ಮಾಡಿದಷ್ಟು ಬೇಕು ಅನಿಸುವುದು. ಆದರೆ ಇವೆಲ್ಲವೂ ನನಗೆ ಮತ್ತು ನನ್ನ ಪತಿಗೆ ನಾನು ಗರ್ಭಿಣಿ ಆಗುವವರೆಗೂ ನಿಜವಾಗಿತ್ತು. ಆಮೇಲೆ ಅದೆಲ್ಲಾ ಬದಲಾಯಿತು. ನನ್ನ ದೇಹ ಬದಲಾದ ರೀತಿಯಲ್ಲೇ. ನಾವು ಬೇರೆ ಬೇರೆ ಹೊಸ ವಿಷಯಗಳನ್ನ ಅನುಭವಿಸುವುದನ್ನ ಕಂಡೆವು. ಕೆಟ್ಟ ಅನುಭವ ಎಂದು ಹೇಳಲಿಕ್ಕೆ ಆಗುವುದಿಲ್ಲ, ಆದರೆ ಭಿನ್ನವಾದ ಅನುಭವ ಎಂದು ಮಾತ್ರ ಹೇಳಬಹುದು.

ಗರ್ಭಧಾರಣೆಯಲ್ಲಿ ಹಾರ್ಮೋನಿನ ಏರುಪೇರಿನಿಂದ ಬಯಕೆಗಳು ಉಂಟಾಗುತ್ತವೆ. ತಿನಿಸುಗಳ ಬಯಕೆ, ವಾಸನೆಯ ಬಯಕೆ ಅದರೊಂದಿಗೆ ನನಗೆ ಸೆಕ್ಸ್ ಬಯಕೆಯು ಉಂಟಾಗಿತ್ತು. ಹೀಗಾಗಿ ಅದರಲ್ಲಿ ನನ್ನನ್ನ ನಾನು ತೊಡಗಿಸಿಕೊಳ್ಳುವುದರಿಂದ ತಡೆಯಲು ನನಗೆ ಆಗಲಿಲ್ಲ.  

ಇನ್ನಿತರೇ ಅನುಭವಗಳಂತೆ ಗರ್ಭಧಾರಣೆ ವೇಳೆ ಸೆಕ್ಸ್ ಕೂಡ ಒಂದು ಅದ್ಭುತ ಅನುಭವವೇ ಆಗಿತ್ತು. ಅದು ನಾನು ಅಂದುಕೊಂಡಷ್ಟೆಲ್ಲ ಚೆನ್ನಾಗಿ ಇರದಿದ್ದರೂ, ನಾವು ಒಳ್ಳೆಯ ಕ್ಷಣಗಳನ್ನ ಕಳೆದೆವು. ಆದರೆ ಅದರೊಂದಿಗೆ ನಮ್ಮನ್ನ ನೋಡಿಕೊಂಡು ನಾವೇ ನಗುವಂತಹ ಸನ್ನಿವೇಶಗಳು ಕೂಡ ಉಂಟಾದವು. ಅದನ್ನ ನನ್ನ ತಲೆಯಲ್ಲಿ ಇಟ್ಟುಕೊಂಡು, ಗರ್ಭಿಣಿ ಆಗಿದ್ದಾಗ ಸೆಕ್ಸ್ ಅಲ್ಲಿ ತೊಡಗಿಸಿಕೊಂಡಾಗ ಆದ ನಾಚಿಕೆ ಉಂಟು ಮಾಡಿದ ಕೆಲವು ಅಂಶಗಳು ಯಾವುದೆಂದು ಇಲ್ಲಿ ನಾನು ಬರೆಯುತ್ತೇನೆ, ಓದಿ :

೧. ಕ್ರಿಯೆಯನ್ನ ಮುಗಿಸಲು ಕೂಡ ಆಗಲಿಲ್ಲ

ಹೌದು. ವಾಕರಿಕೆ ಅನ್ನುವುದು ನನ್ನ ಮೊದಲ ತ್ರೈಮಾಸಿಕದಲ್ಲಿ ನನ್ನನ್ನು ಬಿಡಲೇ ಇಲ್ಲ. ಆದರೆ ಅದು ಸ್ವಲ್ಪ ಸಮಯದಲ್ಲಿ ಮಾಸಿ ಹೋಗುತ್ತದೆ ಎಂದುಕೊಂಡು ನಾನು ಮತ್ತು ನನ್ನ ಪತಿ ಕಾರ್ಯ ಶುರು ಮಾಡಿಕೊಂಡೆವು. ಆದರೆ ವಾಕರಿಕೆ ತಡೆಯಲು ಆಗದಷ್ಟು ಜಾಸ್ತಿ ಆಗಿ ಹೋಯಿತು, ಅದು ಲೈಂಗಿಕ ಪರಾಕಾಷ್ಠೆ ಹೊಂದುವ ಸಮಯದಲ್ಲೇ. ಹೀಗಾಗಿ ಎದ್ದು ನೀರಿನ ಸಿಂಕ್ ಕೆಡೆ ಎದ್ದು ಓದಬೇಕಾಯಿತು.

೨. ವಿಚಿತ್ರ ಶಬ್ದಗಳು ಬರುತ್ತಲೇ ಇದ್ದವು

ಹೊಟ್ಟೆಯೊಳಗೆ ಗುಳುಗುಳು ಶಬ್ದ, ನನ್ನ ಗಾತ್ರ ಹೆಚ್ಚಿದ ತೊಡೆಗಳು ಒಂದಕ್ಕೊಂದು ಬಡೆದುಕೊಳ್ಳುವುದು, ಹೀಗೆ ಸದ್ದುಗಳು ಬರುತ್ತಲೇ ಇದ್ದವು. ನಮಗೆ ಒಬ್ಬರಲ್ಲಿ ಒಬ್ಬರು ಮಗ್ನರಾಗಲು ಆಗಲೇ ಇಲ್ಲ.

೩. ನನ್ನ ಬ್ಯಾಲೆನ್ಸ್ ಕಳೆದುಕೊಂಡೆ

ಗರ್ಭಿಣಿ ಆದಾಗ ಇನ್ನೊಂದು ನಗು ತರಿಸುವ ವಿಷಯ ಏನೆಂದರೆ ನೀವು ಒಂದೇ ಕಡೆ ಬಹಳ ವಾಲಿದ್ದೀರಾ ಎಂದು ನಿಮಗೆ ಬ್ಯಾಲೆನ್ಸ್ ತಪ್ಪುವವರೆಗೂ ಗೊತ್ತೇ ಆಗುವುದಿಲ್ಲ. ನಾನು “ನಗು” ತರಿಸೋ ವಿಷಯ ಎಂದು ಹೇಳಿದ್ದು ನಾಚಿಕೆ ಉಂಟು ಮಾಡೋ ವಿಷಯಾನೇ. ಅದನ್ನು ಮಾಡುವಾಗ ಪತಿಯ ಮೇಲೆಯೂ ಕೂರಲಾಗದೆ ಬ್ಯಾಲೆನ್ಸ್ ತಪ್ಪಿ ಮಂಚದ ಮೇಲೆ ಬಿದ್ದರೆ, ಅದು ನಾಚಿಕೆ ತರಿಸೋ ವಿಷಯವೇ ತಾನೇ! ಆದರೆ ಅದನ್ನು ಕೂಡ ಅಲ್ಲೇ ನಕ್ಕಿ ಬಿಟ್ಟುಬಿಟ್ಟೆವು.

೪. ರಕ್ತಸ್ರಾವ ಕಾಣಿಸಿಕೊಂಡಿತು

ಗರ್ಭಧಾರಣೆ ಮತ್ತು ಸೆಕ್ಸ್ ಎರಡರಲ್ಲೂ ನಿಮ್ಮ ಕೈಯಿಂದ ನಿಯಂತ್ರಿಸಲು ಆಗದಂತ ಕೆಲವೊಂದು ವಿಷಯಗಳು ನಡೆದು ಹೋಗುತ್ತವೆ. ರಕ್ತಸ್ರಾವ ಕೂಡ ಅದರಲ್ಲಿ ಒಂದು. ಬೆಡ್ ಮೇಲೆ ರಕ್ತದ ಕಲೆ ಆಗಾಗ ಕಾಣಿಸಿಕೊಳ್ಳುವುದು ಸಾಮಾನ್ಯವಾಗಿತ್ತು, ಇದು ಗಾಬರಿ ಉಂಟು ಮಾಡುವುದಲ್ಲದೆ ನಮ್ಮ ಮೂಡ್ ಅನ್ನು ಹಾಳು ಮಾಡುತ್ತಿತ್ತು. ಹೀಗೆ ಆಗುವ ರಕ್ತಸ್ರಾವ ನಿಜವಾಗಿಯೂ ಯಾವುದೇ ತೊಂದರೆಗಳನ್ನ ಉಂಟು ಮಾಡುವುದಿಲ್ಲ ಅಥವಾ ಯಾವುದೊ ತೊಂದರೆಯ ಸೂಚನೆಯು ಅಲ್ಲ. ಆದರೂ ಅಲ್ಲಿಗೆ ಆ ಕಾರ್ಯವನ್ನ ನಿಲ್ಲಿಸುವುದು ಒಳ್ಳೆಯದು ಅಂದುಕೊಂಡು ಸುಮ್ಮನಾಗುತ್ತಿದ್ದೆವು.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon