Link copied!
Sign in / Sign up
1
Shares

ವೀಕ್ಷಿಸಿ - ಈಕೆ ನಡು ರಸ್ತೆಯಲ್ಲೇ ನಿಂತುಕೊಂಡು ಮಗುವಿಗೆ ಜನ್ಮ ನೀಡಿದ ಮಹಾತಾಯಿ!

ಒಂದು ಹೆಂಗಸು ಅನಿರೀಕ್ಷಿತವಾಗಿ ರಸ್ತೆಯ ಮಧ್ಯದಲ್ಲೇ ನಿಂತುಕೊಂಡು ಮಗುವಿಗೆ ಜನ್ಮ ನೀಡಿದಳು ಮತ್ತು ಕರುಳ ಬಳ್ಳಿಯು ಇನ್ನೂ ಮಗುವಿಗೆ ಅಂಟಿಕೊಂಡಿದ್ದ ಕಾರಣ ಆಕೆ ಬೇರೆ ವಿಧಿ ಇಲ್ಲದೆ ಕೂತುಕೊಳ್ಳಬೇಕಾಯಿತು. ಇದನ್ನು ನೀವು ಈ ಹೃದಯ ಕಲಕುವ ದೃಶ್ಯಾವಳಿಯಲ್ಲಿ ಕಾಣಬಹುದು.

ಚೀನಾ ದೇಶದ ಈ ಹೆಂಗಸು, ಮುಂದಕ್ಕೆ ಬಗ್ಗುತ್ತಾ ತನ್ನ ಪ್ಯಾಂಟ್ ಅನ್ನು ಕೆಳಗಿಳಿಸಿದೊಡನೆ ನವಜಾತ ಶಿಶುವು ಧಡ್ ಎಂದು ನೆಲಕ್ಕೆ ಅಪ್ಪಳಿಸುತ್ತದೆ. ಈ ವಿಡಿಯೋ ಅನ್ನು ಏಷ್ಯಾ ಖಂಡದ ಎಲ್ಲೆಡೆ ಸಾಮಾಜಿಕ ಜಾಲತಾಣಗಳಲ್ಲಿ ವೀಕ್ಷಿಸಲಾಗುತ್ತಿದೆ. ರಸ್ತೆ ಮೇಲಿನ ಟ್ರಾಫಿಕ್ ಸದ್ದು ಮತ್ತು ಬೀದಿ ಬದಿಯ ನೂರಾರು ಅಸ್ಪಷ್ಟ ಶಬ್ದಗಳು ಮಗುವಿನ ಅಳುವನ್ನ ಕೇಳಿಸದಂತೆ ಮಾಡುತ್ತವೆ. ಆದರೆ ರಕ್ತ ಮಾತ್ರ ರಸ್ತೆಬದಿಯಲ್ಲಿ ಹರಿಯುತ್ತಾ ಹೋಗುತ್ತದೆ.

ಈ ತಾಯಿಯು ಆಘಾತಕ್ಕೆ ಒಳಗಾದವಳಂತೆ ಕಾಣಿಸಿಕೊಳ್ಳುತ್ತಾಳೆ ಹಾಗು ರಸ್ತೆ ಬದಿಯಲ್ಲಿ ನಿಂತಿದ್ದ ವ್ಯಕ್ತಿಯು ಆ ಮಗುವನ್ನು ಒಂದು ರೊಟ್ಟಿನ ಮೇಲೆ ಮಲಗಿಸುತ್ತಾನೆ. ಆದರೆ ಒಂದು ಸಮಾಧಾನಕರ ವಿಷಯ ಎಂದರೆ ಮಗುವು ನೆಲಕ್ಕುರುಳಿದ ಮೇಲೆಯೂ ತನ್ನ ಕೈ ಕಾಲುಗಳನ್ನ ಆಡಿಸುತ್ತಿತ್ತು. ಈ ಘಟನೆ ನಡೆದಿದ್ದು ಯಾವ ಊರಿನಲ್ಲಿ ಎಂದು ತಿಳಿದು ಬಂದಿಲ್ಲ. ಆದರೆ, ಇದು ಸಂಭವಿಸಿದ ನಂತರ ತಾಯಿ ಮತ್ತು ಮಗು ಇಬ್ಬರನ್ನೂ ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ತಿಳಿದು ಬಂದಿದೆ.   

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon