Link copied!
Sign in / Sign up
1
Shares

ನಡೆಯಲು ಕಲಿತಿರುವ ಮಗುವಿನ ಪೋಷಕರಿಗೆ 6 ಸೂಪರ್ ಟ್ರಿಕ್ಸ್!

ಮುದ್ದು ಮಕ್ಕಳೊಂದಿಗೆ ಆಟವಾಡಲು ಇಷ್ಟಪಡದ ಪೋಷಕರಿಲ್ಲ. ಹಾಗೆಯೇ, ಮಕ್ಕಳೊಂದಿಗೆ ಆಟವಾಡುತ್ತಾ, ಅವರೊಂದಿಗೆ ನೀವು ಕೂಡ ಮನೆಯ ಸುತ್ತ-ಮುತ್ತ ಓಡಾಡಿ ಸುಸ್ತಾಗುವುದು ಮಾತ್ರ ಸುಳಲ್ಲ.

ಜಿಮ್ ಗೆ ಹೋಗದೆ ಪೋಷಕರಿಗೆ ವ್ಯಾಯಾಮ ಮಾಡಿದಷ್ಟು ಆಯಾಸ, ಮಕ್ಕಳೊಂದಿಗೆ ಆಟವಾಡಿದಾಗ ಆಗುತ್ತದೆ. ಆದರೆ ಮಕ್ಕಳಿಗೆ ಎಷ್ಟು ಆಟವಾಡಿದರು ಸುಸ್ತಾಗದೆ, ಮತ್ತಷ್ಟು ಉತ್ಸುಕಾರಾಗಿ ದಿನವಿಡೀ ಆಟವಾಡುವುದನ್ನು ನೀವು ಗಮನಿಸಿರಬಹುದು. ಹೀಗೆ, ಹೆಚ್ಚು ಉತ್ಸುಕರಾಗಿ, ಮನೆಯ ಒಳಗೆ ಜಿಗಿದಾಡುವ ಮಕ್ಕಳನ್ನು ಹಿಡಿಯಲು ನಿಮಗೆ ಈಗಾಗಲೇ ಹಲವಾರು ಟಿಪ್ಸ್ಗಳನ್ನೂ ನಿಮ್ಮ ಸ್ನೇಹಿತರು ನೀಡಿರಬಹುದು, ಆದರೆ ಯಾವ ಟಿಪ್ಸ್ ಕೂಡ ಪ್ರಯೋಜನವಿಲ್ಲವೆಂದು, ನೀವು ಸುಮ್ಮನಾಗಿದ್ದೀರಾ? ನಿಲ್ಲಿ, ಇಲ್ಲಿದೆ ನೋಡಿ ಸ್ಮಾರ್ಟ್ ಪೇರೆಂಟ್ಸ್ ಮಾಡುವ ೬ ಉಪಾಯಗಳು.


೧. ಇಬ್ಬರು ಮಕ್ಕಳು ಜಗಳವಾಡಿದಾಗ


ಮನೆಯಲ್ಲಿ, ಅಣ್ಣ-ತಂಗಿ, ಅಕ್ಕ-ತಮ್ಮಂದಿರ ಜಗಳ ಮುಗಿಯದ ಯುದ್ಧ ಎಂದರೆ ತಪ್ಪಾಗುವುದಿಲ್ಲ. ಹೀಗೆ ಜಗಳವಾಡಿದಾಗ, ನೀವು ಈ ಚಿತ್ರದಲ್ಲಿ ತೋರಿಸಿದ ಹಾಗೆ ಒಂದು ದೊಡ್ಡದಾದ ಟಿ-ಶರ್ಟ್ನೊಳಗೆ ಇಬ್ಬರನ್ನು ಸೇರಿಸಿ, ಒಬ್ಬರಿಗೊಬ್ಬರು ಕ್ಷಮೆ ಕೇಳುವ ತನಕ ಹೊರಗೆ ಬಾರದಂತೆ ಮಾಡಿ. ಪ್ರತಿಬಾರಿ ಜಗಳ ಮಾಡಿದಾಗ, ಹೀಗೆ ಮಾಡಿದರೆ, ತಪ್ಪಿನ ಅರಿವಾಗಿ ಇಬ್ಬರು ಸೋಲವುದನ್ನು ಕಲಿತುಕೊಳ್ಳುತ್ತಾರೆ.


೨. ದೆವ್ವಗಳನ್ನೂ ಹೊಡೆದೋಡಿಸಿ


ಏನಿದು, ಎಂದು ಹೆದರದಿರಿ. ಪುಟ್ಟ ಮಕ್ಕಳು, ಕತ್ತಲೆ ಕೋಣೆ, ಮಂಚದ ಕೆಳಗೆ ನೋಡಲು, ಅದ್ರ ಕೆಳಗೆ ಹೋಗಲು ಹೆದರುತ್ತಾರೆ. ಇಂತಹ ಸಮಯದಲ್ಲಿ ನೀವು, ಗಿಡಗಳಿಗೆ ನೀರು ಹಾಕುವ ಬಾಟಲಿ ಸ್ಪ್ರಾಯೆರ್ ನ ಸ್ಟಿಕರ್ ಎಲ್ಲ ತೆಗೆದು, ಚಿತ್ರದಲ್ಲಿ ತೋರಿಸಿರುವ ಹಾಗೆ ಚಿಕ್ಕ ಚಿಕ್ಕ ಮಾನ್ಸ್ಟರ್ಸ್ ಚಿತ್ರವನ್ನು ಅಂಟಿಸಿ. ನಂತರ ಮಕ್ಕಳು ಹೆದರಿದ ಜಾಗಗಳಿಗೆ, ನೀರನ್ನು ಹಾಕಿ, ಅವರಿಗೆ ಧೈರ್ಯ ತುಂಬಿ. ಹೀಗೆ ಮಾಡುವುದರಿಂದ ಮಕ್ಕಳು, ದೆವ್ವ, ಭೂತಗಳೆಂಬ ಅಪನಂಬಿಕೆಯಿಂದ ಹೊರಗೆ ಬರುತ್ತಾರೆ. ಹಾಗು ಬೇಗನೆ ನಿದ್ರೆಗೆ ಜಾರುತ್ತಾರೆ.


೩. ಮಗುವಿನ ಪಾದದ ಚಿತ್ರವನ್ನು ಇಟ್ಟುಕೊಳ್ಳಿ.


ನೀವು ಹೊರಗೆ ಹೋದಾಗ, ಸುಂದರವಾಗಿ ಕಾಣುವ ನಿಮ್ಮ ಮಗುವಿನ ಶೂ ಅಥವಾ ಚಪ್ಪಲಿಗಳು ಕಾಣಿಸಿದಲ್ಲಿ, ನೀವು ಬಿಡಿಸಿ ಇಟ್ಟುಕೊಂಡ ಒಂದು ಹಾಳೆಯ ಮೇಲಿನ ಮಗುವಿನ ಪಾದದ ಅಳತೆಯನ್ನು ಬಳಸಿ ಕೂಡಲೇ ನಿಮ್ಮ ಮಗುವಿನ ಪಾದರಕ್ಷೆಗಳನ್ನು ಖರೀದಿಸಬಹುದು. ಹೀಗೆ ಮಾಡುವುದರಿಂದ, ಪಾದರಕ್ಷೆಗಳ ಸೇಲ್ ಕಂಡ ಕೂಡಲೇ ನೀವು ಖರೀದಿಸಬಹುದು.


೪. ಮಗುವಿನ ಲಿಂಗದ ಬಗ್ಗೆ ಕನ್ಫ್ಯೂಸ್ ಆಗಬೇಡಿ


ನೀವು ನಿಮ್ಮ ಸ್ನೇಹಿತರ ಮನೆಗೆ ಹೋದಾಗ ಹೆಣ್ಣು ಮಗುವನ್ನು, ನೀವು ಗಂಡು ಮಗು ಎಂದು ಕರೆದು ಪೇಚಿಗೆ ಒಳಗಾಗುವ ಬದಲು, ನಯವಾಗಿ ನೀವೇ ಮಗುವಿನ ಹೆಸರನ್ನು ಕೇಳಿ. ಮಾತನಾಡಲು ಬಂದರೆ ಮಗುವೇ ತನ್ನ ಹೆಸರನ್ನು ಹೇಳುತ್ತದೆ, ಇಲ್ಲವಾದರೆ ಅದರ ಪೋಷಕರೇ ನಿಮಗೆ ಮಗುವಿನ ಹೆಸರನ್ನು ಹೇಳುತ್ತಾರೆ. ಹೀಗೆ, ಮಾಡುವುದರಿಂದ, ಎಲ್ಲರ ಮುಂದೆ ಮುಜುಗರಕ್ಕೆ ಒಳಗಾಗುವುದನ್ನು ತಪ್ಪಿಸಬಹುದು.


೫. ಮನೆಯ ಕೆಲಸವನ್ನು ಆಟವಾಗಿ ಪರಿವರ್ತಿಸಿ


ಹೌದು, ನಿಮ್ಮ ಕೂಸು ನಿಮ್ಮ ಕೆಲಸಗಳಿಗೆ ಸಹಾಯ ಮಾಡಬಲ್ಲದು. ಉದಾ. ಕಾಳುಗಳನ್ನು, ಅದರ ಸಿಪ್ಪೆಯಿಂದ ಬೇರೆ ಮಾಡಿ ಒಂದು ಚೌಕದೊಳಗೆ ಹಾಕುವುದು ಅಥವಾ ನಿಮ್ಮ ಮನೆಯಲ್ಲಿ ೨-೩ ಮಕ್ಕಳಿದ್ದಾರೆ, ಯಾರು ಹೆಚ್ಚುಕಸವನ್ನು ಸಂಗ್ರಹಿಸುತ್ತಾರೆ ಎಂದು ಹೇಳಿಕೊಡಬಹುದು. ಹೀಗೆ ಮಾಡುವುದರಿಂದ ಮಕ್ಕಳಿಗೆ ಆಟವಾಡಿದಂತೆ ಹಾಗು ನಿಮಗೆ ಕೆಲಸಗಳು ಸಹ ಸುಲಭವಾಗುತ್ತದೆ.


೬. ಕಾರ್ಗೋ ಪಾಂಟ್ಸ್ ಧರಿಸಿ


ಹೌದು, ಸ್ವಲ್ಪ ಹಾಸ್ಯವೆನಿಸಿದರೂ, ಇದು ನಿಮಗೆ ತುಂಬಾ ಸಹಾಯಮಾಡಲಿದೆ. ಎಲ್ಲವನ್ನು ಪರ್ಸ್ ನೊಳಗೆ ತುಂಬಿಕೊಳ್ಳುವುದು ಕಷ್ಟ, ಅದಕ್ಕಾಗಿಯೇ ನೀವು ಕಾರ್ಗೋ ಪ್ಯಾಂಟ್ ಧರಿಸಿದರೆ, ಮಗುವಿನ ಫೀಡಿಂಗ್ ಬಾಟಲಿ, ವೈಪ್ಸ್, ಡೈಪರ್, ಪೆಸಿಫಿರ್ ಎಲ್ಲವನ್ನು ಇಟ್ಟುಕೊಂಡು, ಅದನ್ನು ತೆಗೆದು ಬಳಸುವಲ್ಲಿಯೂ ನಿಮಗೆ ಸುಲಭವಾಗುತ್ತದೆ.

ಮೇಲೆ ಹೇಳಿದ, ಟ್ರಿಕ್ಸ್ ಗಳು ನಿಮಗೆ ಇಷ್ಟವಾದಲ್ಲಿ, ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡುವ ಮೂಲಕ ತಿಳಿಸಿ, ಅವರ ಜೀವನವನ್ನು ಸುಲಭಗೊಳಿಸಿ.

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

We have a great opportunity for you. You can EARN up to Rs 10,000/- every month right in the comfort of your own HOME. Sounds interesting? Fill in this form and we will call you.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon