Link copied!
Sign in / Sign up
272
Shares

ಒಂದೇ ಒಂದು ಮುತ್ತು ಈ ಮಗುವಿನ ಜೀವವನ್ನೇ ತೆಗೆದುಬಿಟ್ಟಿತು !

ಮಗು ಭೂಮಿಗೆ ಕಾಲಿಡುತ್ತಿದ್ದಂತೆಯೇ ಪೋಷಕರು ಎಲ್ಲರೂ ಅದನ್ನ ಎತ್ತಿ, ಅಪ್ಪಿ, ಮುದ್ದಾಡಲು ಮುಗಿಬೀಳುತ್ತಾರೆ. ಆದರೆ ಅದು ಅಷ್ಟಕ್ಕೇ ಮುಗಿಯುವುದಿಲ್ಲ. ಪೋಷಕರ ನಂತರ ಮುದ್ದಾಡುವ ಸರದಿ ಸಂಬಂಧಿಕರದ್ದು, ಸ್ನೇಹಿತರದ್ದು. ಆದರೆ ಯಾವುದೇ ಕೇಡು ಮಾಡದ ಇಂತಹ ಒಂದು ಮುದ್ದಾದ ಕಾರ್ಯವು ಒಂದು ಮಗುವಿನ ಜೀವವನ್ನೇ ತೆಗೆದುಬಿಟ್ಟಿತೇ?


ಎಲೋಯಿಸ್ ಲಾಂಪ್ಟಾನ್ ಎಂಬ ಹೆಸರಿನ ಈ ಮಗುವು ಒಂದು ಅರೋಗ್ಯ ಮತ್ತು ಖುಷಿ ತುಂಬಿಕೊಂಡಿದ್ದ ಮಗುವಾಗಿತ್ತು. ಆದರೆ ಮಗುವಿನ ಆಗಮನವನ್ನ ಆಚರಿಸಿದ ಮನೆಯಲ್ಲಿ, ಕೇವಲ 24 ದಿನಗಳ ನಂತರ ನೀರವ ಮೌನ ಆವರಿಸಿದೆ. ಮಗುವು ತನ್ನ ಅಪ್ಪ-ಅಮ್ಮನ ಮಡಿಲಲ್ಲೇ ಪ್ರಾಣ ಬಿಟ್ಟಿತ್ತು ಇಲ್ಲಿ.

ಈಕೆ ಜನಿಸಿದ್ದು ಸಿಸೇರಿಯನ್ ಮೂಲಕ. ಇವಳು ಹುಟ್ಟಿದಾಗ ಇವಳ ತಂದೆ ತಾಯಿಯ ಸಂತೋಷಕ್ಕೆ ಪಾರವೇ ಇರಲಿಲ್ಲ. ಆಕೆ ಹುಟ್ಟಿದ ನಂತರ ಅವಳನ್ನ ಮನೆಗೆ ತರಲಾಯಿತು. ಎಲ್ಲವೂ ಸಹಜವಾಗಿಯೇ ಇತ್ತು. ಆದರೆ ಕೇವಲ ಒಂದೇ ವಾರದ ನಂತರ ಆಕೆ 1 ಕೆಜಿ ತೂಕ ಕಳೆದುಕೊಂಡಿದ್ದಳು. ಇದನ್ನ ಕಂಡ ಪೋಷಕರು ಭಯಭೀತರಾಗಿ ಆಸ್ಪತ್ರೆಗೆ ದವಾಡಯಿಸಿದರು.


ವೈದ್ಯರು ಮೊದಲಿಗೆ ಇದು ಆಹಾರ ನೀಡುವುದರಲ್ಲಿನ ತೊಂದರೆ ಎಂದು ಭಾವಿಸಿದರು. ಆದರೆ ಮಗುವಿನ ಪರಿಸ್ಥಿತಿ ನೋಡು ನೋಡುತ್ತಿದ್ದಂತೆ ಮತ್ತಷ್ಟು ಗಂಭೀರವಾಯಿತು. ಆಗಲೇ ವೈದ್ಯರು ಮಗುವಿಗೆ ಕೃತಕ ಉಸಿರಾಟದ ವ್ಯವಸ್ಥೆಯ ಸಹಾಯವನ್ನ ನೀಡಿದರು. ಆ ಸಮಯದಲ್ಲಿ ಆಕೆಯ ಪುಟ್ಟ ಪುಟ್ಟ ಅಂಗಗಳು ಮಾಡಬೇಕಿದ್ದ ಕೆಲಸವನ್ನ, ಯಂತ್ರವೊಂದು ಮಾಡುತ್ತಿತ್ತು. ಆ ದಿನಗಳ ಪ್ರತಿಯೊಂದು ನಿಮಿಷವೂ ಪೋಷಕರಿಗೆ ನರಕ ಯಾತನೆ. ಅವರಿಗೆ ಅವರ ಮಗುವನ್ನ ಆ ಸ್ಥಿತಿಯಲ್ಲಿ ನೋಡಲಿಕ್ಕೂ ಆಗುತ್ತಿರಲಿಲ್ಲ. 

ವೈದ್ಯರು ನಂತರ ಮಗುವಿಗೆ ರಕ್ತದ ಸೋಂಕು (ಬ್ಲಡ್ ಇಂಫೆಕ್ಷನ್) ಇರುವುದನ್ನ ಕಂಡು ಹಿಡಿದರು. ಈ ಸೋಂಕಿಗೆ ಕಾರಣವಾಗಿದ್ದ ವೈರಾಣು ಹರ್ಪಿಸ್ ಸಿಂಪ್ಲೆಕ್ಸ್ ವೈರಾಣು. ಆದರೆ ತಂದೆ ತಾಯಿ ಇಬ್ಬರಿಗೂ ಈ ಹರ್ಪಿಸ್ ಇಲ್ಲ ಎಂಬುದು ಪರೀಕ್ಷೆ ನಡೆಸಿದಾಗ ತಿಳಿಯಿತು.

ಈ ವೈರಾಣುವನ್ನ ಈಗಾಗಲೇ ತನ್ನ ದೇಹದಲ್ಲಿ ಇಟ್ಟುಕೊಂಡು ಸೋಂಕು ಹರಡಿಸಿಕೊಂಡ ಯಾವುದೊ ಒಂದು ವ್ಯಕ್ತಿ ಮಗುವನ್ನ ಮುಟ್ಟಿರುವುದರಿಂದ ಅಥವಾ ಮುತ್ತು ಕೊಟ್ಟಿರುವುದರಿಂದ ಪೋಷಕರು ಇಂತಹ ಒಂದು ದೊಡ್ಡ ಜೀವಹಾನಿಯನ್ನ ಅನುಭವಿಸಬೇಕಾಯಿತು.


ಮಗುವು ಕೊನೆಗೆ ಸಂಪೂರ್ಣ ದುರ್ಬಲವಾಗಿ ಇನ್ನೇನು ಉಳಿಯುವುದೇ ಇಲ್ಲ ಎನ್ನುವಾಗ ಕೃತಕ ಉಸಿರಾಟದ ವ್ಯವಸ್ಥೆಯನ್ನ ತೆಗೆದು, ಮಗುವನ್ನು ಪೋಷಕರ ಕೈಗೆ ಒಪ್ಪಿಸಿದರು ವೈದ್ಯರು. ಮಗುವು ಅಪ್ಪ ಅಮ್ಮನ ಕೈಯಲ್ಲೇ ಕೊನೆಯ ಉಸಿರೆಳೆಯಿತು. ಈ ಪ್ರಕರಣವು ಜಗತ್ತಿನೆಲ್ಲೆಡೆ ಇತರೆ ಪೋಷಕರಿಗೆ ಒಂದು ಪಾಠ ಆಗಲಿ ಮತ್ತು ನಾವು ಅನುಭವಿಸಿದ ನೋವನ್ನು ಮತ್ತ್ಯಾರು ಅನುಭವಿಸದಿರಲಿ ಎಂಬುದಷ್ಟೇ ಈಗ ಈ ಪೋಷಕರ ಪ್ರಾರ್ಥನೆ.

ನಮ್ಮ ಲೇಖನವನ್ನ ಓದಿದ ಸೂಪರ್ ಅಮ್ಮ ಆದ ನಿಮಗೆ ಥ್ಯಾಂಕ್ಸ್ !
ಇದೇ ಖುಷಿಯಲ್ಲಿ ನೀವು ಅಮೆಜಾನ್ ಇಂದ ಏನೇ ಖರೀದಿಸಿದರು ನಾವು ನಿಮಗೆ ವಿಶೇಷ ಡಿಸ್ಕೌಂಟ್ ಕೊಡುತ್ತಿದ್ದೇವೆ, ಹಾಗಿದ್ದರೆ ಇನ್ನೇಕೆ ತಡ? ಇಲ್ಲಿ ಕ್ಲಿಕ್ ಮಾಡಿ, ಡಿಸ್ಕೌಂಟ್ ಪಡೆಯಿರಿ, ಖರೀದಿಸಿ !
Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon