Link copied!
Sign in / Sign up
6
Shares

ಪಿರಿಯಡ್ ನ ಈ ಗುಣಲಕ್ಷಣಗಳು ನಿಮ್ಮ ಆರೋಗ್ಯದ ಗಂಭೀರ ಸಮಸ್ಯೆಯ ಸಂಕೇತವಾಗಿರಬಹುದು

ನಿಮಗೆ ಇಷ್ಟ ಇರಲಿ ಇಲ್ಲದಿರಲಿ, ಮುಟ್ಟು ನಿಮ್ಮ ಜೀವನದ ಒಂದು ಭಾಗ. ಮತ್ತು ನಿಮಗೆ ಯಾವುದು ಸಹಜ ಹರಿವು ಮತ್ತು ಯಾವುದು ಅಸಹಜ ಹರಿವು ಎಂಬುದು ತಿಳಿದಿರುತ್ತದೆ. ಅಥವಾ ಅದರ ಬಗ್ಗೆ ಒಂದು ಕಲ್ಪನೆ ಇರುತ್ತದೆ. ಕೆಲವು ಮಹಿಳೆಯರು ತಮ್ಮ ಮುಟ್ಟಿನಲ್ಲಿ ವ್ಯತ್ಯಾಸಗಳನ್ನು ಕಾಣುವರು. ಅಲ್ಲಿ ಏನಾದರು ಆದರೆ ಅದು ನಿಮಗೆ ತಿಳಿಯುತ್ತದೆ. ನಿಮ್ಮ ಮುಟ್ಟು ನೀವು ಅರ್ಥ ಮಾಡಿಕೊಂಡಿರುವುದಕ್ಕಿಂತ ಹೆಚ್ಚು ನಿಮ್ಮ ಆರೋಗ್ಯದ ಬಗ್ಗೆ ತಿಳಿಸುತ್ತದೆ.

ಈ ಕೆಳಗಿನವುಗಳಲ್ಲಿ ಯಾವುದಾದರೂ ಗುಣಲಕ್ಷಣಗಳನ್ನು ಕಂಡರೆ ನೀವು ಸ್ತ್ರೀರೋಗ ತಜ್ಞರನ್ನು ಭೇಟಿ ಮಾಡುವುದು ಒಳಿತು.
೧.ನೀವು ನಿರಂತರವಾಗಿ ಹೆಚ್ಚು ಹೆಪ್ಪುಗಟ್ಟಿದ ಕಲೆಯನ್ನು(ರಕ್ತ) ಕಾಣುವುದು

ಮುಟ್ಟಿನ ದಿನಗಳಲ್ಲಿ ಹೆಪ್ಪುಗಟ್ಟಿದ ರಕ್ತವನ್ನು ಕಾಣುವುದು ಸಾಮಾನ್ಯ, ಆದರೆ ನೀವು ನಿರಂತರವಾಗಿ ಹೆಪ್ಪುಗಟ್ಟಿದ ರಕ್ತವನ್ನು ಹೆಚ್ಚಾಗಿ ಕಾಣುವುದು, ಗರ್ಭಕೋಶದ ಫೈಬ್ರಾಯಿಡ್ಸ್, ನಿಮ್ಮ ಗರ್ಭಾಶಯದಲ್ಲಿ ಬೆಳೆಯುವ ಕೆಲವು ಕ್ಯಾನ್ಸರ್ ಅಲ್ಲದ ಬೆಳವಣಿಗೆಗಳ ಸಂಕೇತವಾಗಿರಬಹುದು.

೨.ಒಂದು ಗಂಟೆಯೊಳಗೆ ನಿಮ್ಮ ಪ್ಯಾಡ್ ವದ್ದೆ ಆಗುವುದು

ಇದು ಕಿರಿಕಿರಿ. ಹೆಚ್ಚು ಹರಿವು, ನಿಮ್ಮ ಗರ್ಭಾಶಯದಲ್ಲಿ ತಂತುರೂಪುಗಳು ಉಂಟಾಗಿದೆ ಎಂಬುದರ ಸಂಕೇತವಾಗಿವೆ. ಅಧಿಕ ಸ್ರಾವದ ಜೊತೆಗೆ ನೀವು ಉಸಿರಾಟದ ಏರಿಳಿತ ಅಥವಾ ತಲೆತಿರುಗುವಿಕೆಯನ್ನು ಕಂಡರೆ ಆದಷ್ಟು ಬೇಗ ವೈದ್ಯರನ್ನು ಭೇಟಿ ಮಾಡುವುದು ಒಳಿತು. ಇದು ಹಾರ್ಮೋನುಗಳ ಅಸಮತೋಲನದಿಂದ ಆಗಿರುತ್ತದೆ ಇದನ್ನು ಸರಿಪಡಿಸುವ ಅಗತ್ಯವಿದ್ದು ನಂತರ ನೀವು ಸಾಮಾನ್ಯ ಹರಿವನ್ನು ಕಾಣುವಿರಿ.

೩.ನಿಮ್ಮ ಪಿರಿಯಡ್ ೭ ದಿನಗಳಿಗಿಂತ ಹೆಚ್ಚಾಗಿರುತ್ತದೆ

ಹೀಗೆ ಹಾಗಲು ಹಲವು ಕಾರಣಗಳಿವೆ, ಅದು ಒತ್ತಡವನ್ನು ಒಳಗೊಂಡಿದೆ ಎಂದು ತಜ್ಞರು ಹೇಳುತ್ತಾರೆ. ಮತ್ತು ಕೆಲವು ಮಹಿಳೆಯರು ಅಧಿಕ ಮುಟ್ಟನ್ನು ಹೊಂದಿರುವರು. ಆದರೆ ಇದು ನಿಮಗೆ ಸಾಮಾನ್ಯವಾದ ಮುಟ್ಟಿನ ದಿನಕ್ಕಿಂತ ಹೆಚ್ಚಾದರೆ, ಇದಕ್ಕೆ ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ ಮತ್ತು ಗರ್ಭಾಶಯದ ಸಂಯುಕ್ತಗಳು ಕಾರಣ. ಇದನ್ನು ನೀವು ಯಾವುದೇ ಕಾರಣಕ್ಕೂ ಕಡೆಗಣಿಸುವಂತಿಲ್ಲ.

೪.ನಿಮ್ಮ ಋತುಚಕ್ರ ೨೦ ದಿನಗಳಿಗಿಂತ ಕಡಿಮೆ ಇದ್ದರೆ

ಪ್ರತಿಯೊಬ್ಬರ ಋತುಚಕ್ರವು ವಿಭಿನ್ನವಾಗಿರುತ್ತದೆ. ಆದರೆ ನೀವು ಸಾಮಾನ್ಯವಾಗಿ ಅನುಭವಿಸುವ ಅವಧಿಗಿಂತ ಕಡಿಮೆ ಅವಧಿಗೆ ಇದನ್ನು ಅನುಭವಿಸಿದರೆ, ಇದು ಅಂಡಾಶಯದ ಅಸಾಮಾನ್ಯ ಕ್ರಿಯೆ ಅಥವಾ ಥೈರಾಯಿಡ್ ಕಾಯಿಲೆಯ ಸಂಕೇತವಾಗಿರಬಹುದು. ಇದು ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ ಕೂಡ ಆಗಿರಬಹುದು. ಇದು ವಿಲಕ್ಷಣ ಮತ್ತು ಅನಿಯಮಿತ ಸ್ರಾವವನ್ನು ಉಂಟುಮಾಡಬಹುದು.

೫.ನೀವು ಪಿರಿಯಡ್ ಅನ್ನು ಅನುಭವಿಸದೇ ಇರುವುದು

ನೀವು ಎದೆಹಾಲುಣಿಸುತ್ತಿಲ್ಲ ಅಥವಾ ಗರ್ಭಿಣಿ ಆಗಿಲ್ಲ, ಆದರೂ ನೀವು ಮುಟ್ಟು ಆಗುತ್ತಿಲ್ಲ, ಎಂದರೆ ನೀವು ಅಧಿಕ ಒತ್ತಡಕ್ಕೆ ಒಳಗಾಗುವಿರಿ, ಅಥವಾ ತೀವ್ರತೆಯ ವ್ಯಾಯಾಮವನ್ನು ಮಾಡುತ್ತಿರುವುದು ನಿಮ್ಮ ಮುಟ್ಟನ್ನು ಹೊಂದದೆ ಇರಲು ಕಾರಣ ಆಗಿರಬಹುದು. ಆದರೆ ಥೈರಾಯಿಡ್ ಸಮಸ್ಯೆ ಕೂಡ ನೀವು ಋತುಮತಿ ಆಗದೆ ಇರಲು ಕಾರಣವಾಗಬಹುದು. ನೀವು ಪಿರಿಯಡ್ ಅನ್ನು ಮಿಸ್ ಮಾಡಿಕೊಂಡು ಯಾವುದೇ ನೋವನ್ನು ಅನುಭವಿಸುತ್ತಿಲ್ಲ ಎಂದರೆ ಸ್ವಲ್ಪ ಸಮಯ ಕಾಯಬಹುದು, ಆದರೆ ನಿರಂತರವಾಗಿ ಅಥವಾ ಆಗಾಗ್ಗೆ ಮಿಸ್ ಮಾಡಿಕೊಳ್ಳುತ್ತಿರುವಿರಿ ಎಂದರೆ ವೈದ್ಯರನ್ನು ಅಥವಾ ಸ್ತ್ರೀರೋಗ ತಜ್ಞರನ್ನು ಭೇಟಿ ಮಾಡುವುದು ಉತ್ತಮ.

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

We have a great opportunity for you. You can EARN up to Rs 10,000/- every month right in the comfort of your own HOME. Sounds interesting? Fill in this form and we will call you.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon