Link copied!
Sign in / Sign up
2
Shares

ಕಡಿಮೆ ದುಡ್ಡಿಗೆ ಚಿಕಿತ್ಸೆ ನೀಡುತ್ತಾನೆ ಅಂತ ಊರಿನ ಜನ ಮುಗಿಬಿದ್ದರು!ಮುಂದೆ ಊರೇ ಸರ್ವನಾಶ!

ನೀವು ಬಹಳಷ್ಟು ಸಿನಿಮಾಗಳಲ್ಲಿ ವ್ಯಕ್ತಿಯೊಬ್ಬನು ಹಳ್ಳಿಯ ಮುಗ್ದ ಜನರನ್ನ ಮರುಳು ಮಾಡಿ, ಅವರನ್ನ ಸುಲಿಗೆ ಮಾಡುವ ದೃಶ್ಯಗಳನ್ನ ನೋಡಿರುತ್ತೀರಾ. ಇಂತಹ ಸನ್ನಿವೇಶಗಳು ಹೊರಜಗತ್ತಿನ ಅರಿವು ಕಡಿಮೆ ಇರುವ ಮುಗ್ದ ಜನರು ವಾಸಿಸುವ ಹಳ್ಳಿಗಳಲ್ಲಿ ಕಂಡು ಬರುವುದು ಹೆಚ್ಚು. ಏಕೆಂದರೆ, ಈ ಜನರನ್ನ ಮರುಳು ಮಾಡುವುದು ಸುಲಭ. ಆದರೆ ಇಲ್ಲೊಬ್ಬ ವ್ಯಕ್ತಿ ತಾನು ಜನರಿಗೆ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ನೀಡುತ್ತೇನೆ ಎಂದು ಹೇಳಿ, ಆ ಜನರ ಜೀವನವನ್ನೇ ಹಾಳು ಮಾಡಿಬಿಟ್ಟಿದ್ದಾನೆ. ಅಂದಹಾಗೆ ಇವನಿಗೆ ಬಲಿಯಾಗಿರುವುದು ಒಂದಿಬ್ಬರು ಅಲ್ಲ, ಬದಲಿಗೆ ಗ್ರಾಮಕ್ಕೆ ಗ್ರಾಮವೇ ಈತನ ಕುತಂತ್ರಕ್ಕೆ ಬಲಿಯಾಗಿದೆ!


ಇಲ್ಲಿ ನಾವು ಹೇಳಲು ಹೊರಟಿರುವ ವ್ಯಕ್ತಿಯ ಹೆಸರು ರಾಜೇಂದ್ರ ಯಾದವ್. ಇವನು ಉತ್ತರ ಪ್ರದೇಶದ ಹಳ್ಳಿ ಭಾಗಗಳಲ್ಲಿ ಒಂದು ಹಳ್ಳಿಯಿಂದ ಇನ್ನೊಂದು ಹಳ್ಳಿಗೆ ಸೈಕಲ್ ಮೇಲೆ ಅಡ್ಡಾಡುವ ಒಂದು ಸಂಚಾರಿ ಕ್ಲಿನಿಕ್. ಈತನು ಜನರಿಗೆ ಚಿಕಿತ್ಸೆ ನೀಡಲು ಯಾವುದೇ ರೀತಿಯ ಪರವಾನಗಿ ಅಥವಾ ಶೈಕ್ಷಣಿಕ ಅರ್ಹತೆ ಹೊಂದಿಲ್ಲ. ಆದರೆ, ಬಂಗಾರಮೌ, ಪ್ರೇಂಗುಂಜ್, ಕರೀಂ ನಗರ ಮತ್ತು ಸುತ್ತಮುತ್ತಲಿನ ಗ್ರಾಮಗಳ ಜನರಿಗೆ ಈತನೇ ಒಂದು ರೀತಿಯಲ್ಲಿ ದೇವರು! ಈತನೇ ಅವರನ್ನ ಕಾಯುವ ದೈವದೂತ! ಈತ ಹಳ್ಳಿಯಿಂದ ಹಳ್ಳಿಗೆ ಸೈಕಲ್ ಮೇಲೆ ಸುತ್ತುತ್ತಾ ಜನರಿಗೆ ವೈದ್ಯಕೀಯ ಸಲಹೆ, ಗುಳಿಗೆಗಳು ಮತ್ತು ಚುಚ್ಚುಮದ್ದುಗಳನ್ನ ನೀಡುತ್ತಿದ್ದ. ಈತ ಚಾರ್ಜ್ ಮಾಡುತ್ತಿದ್ದದ್ದು ಕೇವಲ 10 ರೂಪಾಯಿ!


ಸುಮಾರು 35 ವರ್ಷದ ರಾಜೇಂದ್ರ ಯಾದವ್ ಹಳ್ಳಿಯಲ್ಲಿ ಯಾರಿಗೇ ಶೀತ, ಕೆಮ್ಮು ಅಥವಾ ಮೂಳೆ ನೋವು ಉಂಟಾದರೆ ಚಿಕಿತ್ಸೆ ನೀಡುತ್ತಿದ್ದ. ಆದರೆ, ಯಾವುದೇ ರೀತಿಯ ವೈದ್ಯಕೀಯ ಶಿಕ್ಷಣ ಆಗಲಿ ಅಥವಾ ಅರ್ಹತೆ ಆಗಲಿ ಇಲ್ಲದಿರುವ ಈತನು ಮುಗ್ದ ಜನರಿಗೆ ಚಿಕಿತ್ಸೆ ನೀಡುವ ನೆಪದಲ್ಲಿ ದುಡ್ಡು ಮಾಡಿಕೊಳ್ಳುತ್ತಿದ್ದ.

ಹೀಗೆ ಸುಳ್ಳು ಹೇಳಿಕೊಂಡು, ತಮಗೆ ವೈದ್ಯಕೀಯ ಜಗತ್ತು ಎಂದು ಹೇಳಿಕೊಂಡು ಜನರನ್ನ ಮೋಸ ಮಾಡುವ ನಕಲಿ ವೈದ್ಯರಿಗೆ, ಸುರಕ್ಷಿತ ವೈದ್ಯಕೀಯ ಅಭ್ಯಾಸಗಳ ಬಗ್ಗೆ ಯಾವ ಅರಿವೂ ಇರುವುದಿಲ್ಲ. ಸಿರಿಂಜ್ ಹೇಗೆ ಬಳಸಬೇಕು, ಒಮ್ಮೆ ಬಳಸಿದ್ದನ್ನು ಮತ್ತೊಮ್ಮೆ ಬಳಸಬಾರದು ಮತ್ತು ಇಂತಹ ಇನ್ನೂ ಅನೇಕ ಸುರಕ್ಷಿತ ಕ್ರಮಗಳ ಬಗ್ಗೆ ಏನು ತಿಳಿದಿರುವುದಿಲ್ಲ. ಹೀಗಾಗಿ ಇವರು ಒಂದೇ ಸಿರಿಂಜ್ ಅನ್ನು ಹಲವು ಮಂದಿಗೆ ಚುಚ್ಚುಮದ್ದು ನೀಡಲು ಬಳಸುತ್ತಾರೆ.


ಹೀಗೆ ಕೆಲವು ತಿಂಗಳ ಹಿಂದೆ ಸರ್ಕಾರದವರು ಪ್ರೇಂಗುಂಜ್ ಅಲ್ಲಿ ಆಯೋಜಿಸಿದ್ದ ಉಚಿತ ವೈದ್ಯಕೀಯ ತಪಾಸಣಾ ಶಿಬಿರದಲ್ಲಿ 13 ಜನರಿಗೆ ಏಡ್ಸ್ ಇದೆ ಎಂಬುದು ತಿಳಿದು ಬಂತು. ಇದರ ನಂತರ ನವೆಂಬರ್ ತಿಂಗಳಲ್ಲಿ ಮತ್ತೊಂದು NGO ನಡೆಸಿದ ಶಿಬಿರದಲ್ಲಿ ಅದೇ ಊರಿನಲ್ಲಿ ಇನ್ನೂ 12 ಜನರಿಗೆ ಏಡ್ಸ್ ಇದೆ ಎಂಬುದು ತಿಳಿದು ಬಂದಿತು. ಇದು ಅಲ್ಲಿನ ಆಯೋಜಕರಿಗೆ ಮತ್ತು ಜಿಲ್ಲಾ ವೈದ್ಯಕೀಯ ಅಧಿಕಾರಿಗಳಿಗೆ ಗಾಬರಿ ಹುಟ್ಟಿಸಿತು.

ಹೀಗಾಗಿ, ಸರ್ಕಾರವು ಜನವರಿಯಲ್ಲಿ ಇನ್ನೊಮ್ಮೆ ಕರೀಂ ನಗರ, ಪ್ರೇಂಗುಂಜ್ ಮತ್ತು ಬಂಗಾರಮೌ ಪ್ರದೇಶದಲ್ಲಿ ಉಚಿತ ವೈದ್ಯಕೀಯ ಶಿಬಿರ ನಡೆಸಿತು. ಸುಮಾರು 566 ಜನರನ್ನ ಈ ಶಿಬಿರದಲ್ಲಿ ಪರೀಕ್ಷಿಸಲಾಯಿತು. ಇದರಲ್ಲಿ ಇನ್ನೂ 38 ಜನರಿಗೆ ಏಡ್ಸ್ ಇರುವುದಾಗಿ ತಿಳಿದು ಬಂದಿತು. ಒಟ್ಟಾರೆ, ಕಳೆದ ಏಳು ತಿಂಗಳಲ್ಲಿ ಏಡ್ಸ್ ಪೀಡಿತ ಜನರ ಸಂಖ್ಯೆ 63ಕ್ಕೆ ಏರಿತ್ತು! ಇದರಲ್ಲಿ 6 ವರ್ಷದ ಒಂದು ಪುಟ್ಟ ಬಾಲಕಿ ಇದೆ! ಒಂದೇ ಕುಟುಂಬದ 6 ಜನರಿಗೆ ಏಡ್ಸ್ ಹರಡಿದೆ! ಇಂತಹ ದುಸ್ಥಿತಿಗೆ ಕಾರಣ ಏನೆಂದು ಹುಡುಕುತ್ತಾ ಹೋದಾಗ ಅಧಿಕಾರಿಗಳಿಗೆ ರಾಜೇಂದ್ರ ಯಾದವನ ಹೆಸರು ಕೇಳಿಬಂದಿತು.

ಈ ರಾಜೇಂದ್ರ ಯಾದವ್ ಯಾವುದೊ ಏಡ್ಸ್ ಪೀಡಿತ ರೋಗಿದೆ ಬಳಸಿದ ಸಿರಿಂಜ್ ಅನ್ನೇ ಊರಿನ ಎಲ್ಲಾ ಜನರಿಗೂ ಚುಚ್ಚುಮದ್ದು ನೀಡಲಿಕ್ಕೆ ಬಳಸಿರುವುದೇ ಇದಕ್ಕೆ ಕಾರಣ ಎನ್ನಲಾಗಿದೆ. ಒಂದು ಏಡ್ಸ್ ಪೀಡಿತ ರೋಗಿಗೆ ಬಳಸಿದ ಸಿರಿಂಜ್ ಅಲ್ಲಿ ಸುಮಾರು 4 ವಾರಗಳ ಕಾಲ HIV ವೈರಾಣು ಹಾಗೆಯೇ ಬದುಕುಳಿದಿರುತ್ತದೆ. ಈ ಸಿರಿಂಜ್ ಅನ್ನು ಬೇರೆಯವರಿಗೆ ಚುಚ್ಚಿದರೆ, ಅವರಿಗೂ ಏಡ್ಸ್ ಹರಡುತ್ತದೆ. ಈ ವಿಷಯ ಎಲ್ಲೆಡೆ ಹರಡುತ್ತಿದ್ದಂತೆ, ರಾಜೇಂದ್ರ ಯಾದವ್ ಎಲ್ಲೋ ಓಡಿ ಹೋಗಿ, ತಲೆ ಮರೆಸಿಕೊಂಡಿದ್ದಾನೆ. ಈತನಿಗಾಗಿ ಶೋಧಕಾರ್ಯ ಚಾಲ್ತಿಯಲ್ಲಿದೆ. ಈ ಹಳ್ಳಿಯ ಜನರಿಗೆ ಈಗ ಇನ್ನ್ಯಾರು ಗತಿ? ಇಂತಹ ಮಾರಕ ರೋಗವನ್ನ ಊರಿನ ಜನರಿಗೆಲ್ಲಾ ಉಂಟು ಮಾಡಿ, ಎಷ್ಟೋ ಕುಟುಂಬಗಳು ಮುಂದಿನ ಪೀಳಿಗೆಯೇ ನೋಡದಿರುವಂತೆ ಮಾಡಿದ್ದಾನೆ ಈ ನಕಲಿ ನಾಟಿ ವೈದ್ಯ!

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon