Link copied!
Sign in / Sign up
8
Shares

ನಿಮ್ಮ ಮುಖ ನಿಮ್ಮ ವ್ಯಕ್ತಿತ್ವದ ಬಗ್ಗೆ ಏನು ಹೇಳುತ್ತದೆ?

ಮುಖವನ್ನು ನೋಡಿ ಅವರ ಬಗ್ಗೆ ಅಥವಾ ಅವರ ವ್ಯಕ್ತಿತ್ವದ ಬಗ್ಗೆ ಹೇಳುವುದನ್ನು ಮುಖ ನೋಡಿ ಗುಣ ಹೇಳುವವರು ಅಥವಾ ಫೇಸ್ ರೀಡಿಂಗ್ ಎಂದು ಕರೆಯುವರು. ಈ ಕಲೆಯನ್ನು ಸಿದ್ಧಿಸಿಕೊಂಡಿರುವವರಿಗೆ ವ್ಯಕ್ತಿಯ ಬಗ್ಗೆ ಅರಿಯಲು ಕೇವಲ ಎರಡು ನಿಮಿಷ ಸಾಕು. ನಿಮ್ಮ ಮುಖದ ಆಕಾರ ನಿಮ್ಮ ವ್ಯಕ್ತಿತ್ವವನ್ನು ಹೇಗೆ ಹೇಳುತ್ತದೆ ಎಂಬುದನ್ನು ಇಲ್ಲಿ ತಿಳಿಯಿರಿ.

೧.ಅಗಲವಾದ ಮುಖ

ಅಗಲವಾದ ಮುಖ ಅಥವಾ ವೃತ್ತಾಕಾರದ ಮುಖ ಉಳ್ಳವರು, ಉದಾರ ಮನಸ್ಸಿನವರೂ, ಪ್ರಾಮಾಣಿಕರೂ, ತೆರೆದ ಹೃದಯ ಹಾಗೂ ದಾನ ನೀಡುವ ಪ್ರವೃತ್ತಿಯವರೂ ಆಗಿರುತ್ತಾರೆ. ಸುಲಭವಾಗಿ ಎಲ್ಲರೊಂದಿಗೆ ಬೆರೆಯುವವರಾಗಿರುತ್ತಾರೆ.

೨.ಉದ್ದನೆಯ ಮುಖ ಅಥವಾ ಕೋಲು ಮುಖ

ಇವರು ಸ್ವರಕ್ಷಣೆಗೆ ಹೆಸರುವಾಸಿ, ಮತ್ತು ಇವರಲ್ಲಿ ಒಳ್ಳೆಯ ನಾಯಕತ್ವ ಗುಣ ಇದ್ದು, ತಮ್ಮ ಸ್ವಂತ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ. ಒಂದು ವಿಷಯವನ್ನು ವಿವಿಧ ಕೋನಗಳಿಂದ ಯೋಚಿಸಿ ಉತ್ತಮ ನಿರ್ಧಾರಕ್ಕೆ ಬರುವ ಕಲೆಯನ್ನು ಇವರು ಪಡೆದಿರುವರು.

೩.ದೊಡ್ಡ ಮೂಗು

ಈ ಮುಖಕ್ಕೆ ಈ ಮೂಗು ದೊಡ್ಡದಾಯಿತು ಎಂದೆನ್ನಿಸುವ ಮುಖವಿರುವ ವ್ಯಕ್ತಿಗಳು ಅತಿ ಕುತೂಹಲಿಗಳಾಗಿದ್ದು ಕ್ರಿಯಾತ್ಮಕ ಜೀವನಶೈಲಿಯನ್ನು ಹೊಂದಿರುತ್ತಾರೆ. ಇವರು ಹೊಸ ಹೊಸ ವಸ್ತು ಹಾಗೂ ವಿಷಯಗಳನ್ನು ಅರಿಯಲು ಇಷ್ಟಪಡುವವರಾಗಿದ್ದು ವಿಶೇಷವಾಗಿ ವಿಭಿನ್ನ ಸಂಸ್ಕೃತಿಗಳನ್ನು ಅರಿಯಲು ಪ್ರಯಾಣ ಮಾಡಲು ಇಚ್ಛಿಸುವರು. ಇವರು ಅಷ್ಟು ಬೇಗ ಪ್ರತಿಕ್ರಿಯೆ ನೀಡುವುದಿಲ್ಲ.

೪.ಚಿಕ್ಕ ಮೂಗು

ಇವರಲ್ಲಿ ಎರಡು ಪ್ರಮುಖ ಲಕ್ಷಣಗಳನ್ನು ಕಾಣಬಹುದು, ಒಂದು ಇವರು ಯಾವುದೇ ವ್ಯಕ್ತಿಯ ಬಗ್ಗೆ ಮಾತನಾಡುವ ಮೊದಲು ಅವರ ಜಗದಲ್ಲಿ ನಿಂತು ಯೋಚಿಸುವರು. ಇನ್ನೊಂದು ಇವರು ಸಮಯ ಸಾಧಕರು. ಯಾವಾಗ ಹೇಗೆ ಬದಲಾಗುತ್ತಾರೆ ಎಂದು ಹೇಳಲಾಗುವುದಿಲ್ಲ, ಆದರೆ ಈ ಎರಡು ಗುಣಗಳು ಒಬ್ಬರಲ್ಲೇ ಇರುವುದಿಲ್ಲ. ಕೆಲವೊಮ್ಮೆ ಇದ್ದರು ಅಚ್ಚರಿ ಪಡಬೇಕಿಲ್ಲ.

೫.ಇಳಿಜಾರಿನ ಹಣೆ

ಇವರು ಸಾಮಾನ್ಯವಾಗಿ ತಮ್ಮ ಬಗ್ಗೆ ಹೆಚ್ಚು ಮಾತನಾಡಬಯಸದ ವ್ಯಕ್ತಿಗಳಾಗಿರುತ್ತಾರೆ. ಆದರೆ ಇವರು ನಾಯಕತ್ವ ವಹಿಸಿ ಅಂತಿಮ ಫಲಿತಾಂಶವನ್ನು ಉತ್ತಮವಾಗಿ ಬಯಸುವ ವಾಣಿಜ್ಯೋದ್ಯಮಿಗಳೂ ಆಗಿದ್ದು ದೊಡ್ಡದನ್ನೇ ನಿರೀಕ್ಷಿಸುತ್ತಾರೆ. ಇವರು ಸಂಬಂಧದಲ್ಲಿಯೂ ತಮ್ಮದೇ ಸ್ವಂತಿಕೆಯನ್ನು ಉಳಿಸಿಕೊಳ್ಳಲು ಯತ್ನಿಸುತ್ತಾರೆ.

೬.ಸಮತಟ್ಟಾದ ಅಥವಾ ಚಪ್ಪಟೆ ಹಣೆ

ಇವರು ಬೇರೆಯವರ ಮಾತನ್ನು ಅಷ್ಟಾಗಿ ಕೇಳುವುದಿಲ್ಲ, ತಮ್ಮದೇ ಆದ ನಿರ್ಧಾರವನ್ನು ನಿಧಾನವಾಗಿ ಆದರೂ ಸರಿ ಒಪ್ಪಿಕೊಳ್ಳುವರು. ಒಂದು ವಿಷಯದ ಬಗ್ಗೆ ಹಲವು ಮುಖಗಳಿಂದ ಯೋಚಿಸಿ ಅದರ ಉತ್ತಮವಾದ ಅಂತಿಮ ನಿಲುವನ್ನು ವ್ಯಕ್ತಪಡಿಸುವರು.

೭.ದಪ್ಪನೆಯ ಹುಬ್ಬುಗಳು

ಈ ವ್ಯಕ್ತಿಗಳು ಮಹತ್ವಾಕಾಂಕ್ಷಿಗಳಾಗಿದ್ದು ತಮ್ಮ ಬಗ್ಗೆಯೇ ಹೆಚ್ಚು ಯೋಚಿಸುವವರಾಗಿರುತ್ತಾರೆ. ಇವರು ಯಾವುದೇ ವಿಷಯವನ್ನು ತರ್ಕಬದ್ದವಾಗಿ ಅಭ್ಯಸಿಸುವ ಹಾಗೂ ಭಿನ್ನ ಕೋನಗಳಿಂದ ನೋಡುವ ಅಭ್ಯಾಸದವರಾಗಿರುತ್ತಾರೆ ಹಾಗೂ ಇವರಿಗೆ ಲೈಂಗಿಕ ವಿಷಯದಲ್ಲಿ ಅತಿ ಹೆಚ್ಚಿನ ಬಯಕೆ ಇರುತ್ತದೆ. ಇದರ ಹೊರತಾಗಿ ಇವರು ಭಾವನೆಗಳನ್ನು ನಿರ್ವಿಕಾರ ಭಾವದಿಂದ ಎದುರಿಸುವವರಾಗಿದ್ದು ಜನರ ದುಃಖ ದುಮ್ಮಾನಗಳ ನಡುವೆಯೂ ಎದ್ದು ನಿಲ್ಲಲು ಸಾಧ್ಯವಾಗುತ್ತದೆ.

೮.ತೆಳ್ಳನೆಯ ಹುಬ್ಬುಗಳು

ಈ ವ್ಯಕ್ತಿಗಳು ಆತ್ಮವಿಶ್ವಾಸದ ಕೊರತೆ ಹೊಂದಿರುತ್ತಾರೆ ಹಾಗೂ ಇದೇ ಕಾರಣದಿಂದ ಜೀವನದಲ್ಲಿ ಬಹಳಷ್ಟನ್ನು ಸಾಧಿಸದೇ ಹೋಗುತ್ತಾರೆ. ಒಂದು ವೇಳೆ ಈ ಹುಬ್ಬಿನ ಕೂದಲುಗಳನ್ನೂ ಕಿತ್ತುಕೊಂಡಿದ್ದರೆ ಇವರು ಸ್ವಯಂ ಭರವಸೆ ಅಥವಾ ಆತ್ಮವಿಶ್ವಾಸ ಕಳೆದುಕೊಂಡಿರುವುದನ್ನು ತಿಳಿಸುತ್ತದೆ.

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

We have a great opportunity for you. You can EARN up to Rs 10,000/- every month right in the comfort of your own HOME. Sounds interesting? Fill in this form and we will call you.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon