Link copied!
Sign in / Sign up
34
Shares

ಮುಖದ ಮೇಲಿನ ಕೂದಲನ್ನು ನೈಸರ್ಗಿಕವಾಗಿ ಮತ್ತು ಶಾಶ್ವತವಾಗಿ ನಿವಾರಿಸುವುದು ಹೀಗೆ !

ಕೈ ಕಾಲುಗಳಲ್ಲಿ ಬೆಳೆಯುವ ಕೂದಲುಗಳಿಗಿಂತಾ ಮುಜುಗರವೆನಿಸುವುದೇನಿದೆ....? ಮುಖದ ಮೇಲೆ ಬೆಳೆಯುವ ರೋಮಗಳು...! ಮುಖದ ರೋಮಗಳನ್ನು ಬಟ್ಟೆಗಳಿಂದ ಮುಚ್ಚಲಾಗದು. ಹಾರ್ಮೋನುಗಳ ಬದಲಾವಣೆಗಳಿಂದ ಚಿಗುರುವ ಈ ರೋಮಗಳಿಂದ ಹಲವಾರು ಸ್ತ್ರೀಯರು ಕಿರಿಕಿರಿಯನ್ನು ಅನುಭವಿಸುತ್ತಾರೆ. ಬ್ಲೇಡುಗಳಿಂದ ಕೆರೆದು ತೆಗೆಯುವುದಕ್ಕಿಂತ ಅಥವಾ ಕಿತ್ತು ತೆಗೆಯುವುದಕ್ಕಿಂತ ಶಾಶ್ವತ ಪರಿಹಾರಕ್ಕಾಗಿ ನೀವು ಯಾಕೆ ಪ್ರಯತ್ನಿಸಬಾರದು ?

೧.ಸಕ್ಕರೆ+ಜೇನು ತುಪ್ಪ+ಲಿಂಬೆ ರಸ

ಎರಡು ಚಮಚ ಸಕ್ಕರೆ ಮತ್ತು ಒಂದು ಚಮಚ ಲಿಂಬೆರಸ.

ಸಕ್ಕರೆಯನ್ನು ಸಂಪೂರ್ಣವಾಗಿ ಲೀನವಾಗದಂತೆ ಕದಡಿ.

ದೊರಗಾದ ಸಕ್ಕರೆಯ ತುಣುಕುಗಳು ಸ್ಕ್ರಬ್‍ನಂತೆ ಸಹಾಯ ಮಾಡುವುದು. ಈ ಮಿಶ್ರಣಕ್ಕೆ ಜೇನು ತುಪ್ಪವನ್ನು ಸೇರಿಸಿ, ಅಗತ್ಯ ಭಾಗಗಳ‍ಲ್ಲಿ ಮಾತ್ರ ಹಚ್ಚಿರಿ.

೧೦ ನಿಮಿಷಗಳ ಬಳಿಕ ನೇರವಾಗಿ ಸ್ಕ್ರಬ್ ಮಾಡಿಕೊಳ್ಳಿ ವಾರದಲ್ಲಿ ಮೂರು ಬಾರಿಯಾದರೂ ಇ ರೀತಿ ಸ್ಕ್ರಬ್ ಮಾಡಿಕೊಳ್ಳುವುದರಿಂದ ನಿರೀಕ್ಷಿತ

ಫಲಿತಾಂಶವನ್ನು ಕಂಡು ನೀವೇ ದಂಗಾಗುವಿರಿ.

ನಿಮ್ಮ ಮುಖದ ಕೂದಲಿನ ಸ್ವಭಾವಕ್ಕೆ ಅನುಗುಣವಾಗಿ ಕೂದಲು ಅದು ನಿವಾರಣೆಯಾಗುವ ಸಮಯವೂ ಬದಲಾಗುವುದು.

೨.ಬಟಾಟೆ+ಕಡಲೆ ಬೇಳೆ

ಮುನ್ನಾ ದಿನ ನೆನೆಸಿಟ್ಟ ಕಡಲೆ ಬೇಳೆಯನ್ನು ಅರೆದಿಟ್ಟುಕೊಳ್ಳಿ.

ಬಟಾಟೆ ರಸವನ್ನು ಹಿಂಡಿ ತೆಗೆದು ಆ ರಸವನ್ನು ಕೂಡ ಈ ಹಿಟ್ಟಿಗೆ ಬೆರೆಸಿಕೊಳ್ಳಿ.

ಇದಕ್ಕೆ ನಾಲ್ಕು ಚಮಚ ಲಿಂಬೆರಸ ಮತ್ತು ಒಂದು ಚಮಚ ಜೇನುತುಪ್ಪವನ್ನು ಸೇರಿಸಿ ಮುಖ ಹಾಗೂ ಶರೀರದ ಇತರ ಅಗತ್ಯ ಭಾಗಗಳಿಗೆ ಲೇಪಿಸಿ.

ಒಣಗಿದ ಬಳಿಕ ಮುಖದ ಪೂರಾ ತಿಕ್ಕಿ ಮಿಶ್ರಣವನ್ನು ಕೆರೆದು ತೆಗೆಯಿರಿ.

ಬಟಾಟೆಯಲ್ಲಿರುವ ನೈಸರ್ಗಿಕ ಬ್ಲೀಚಿಂಗ್ ಗುಣದಿಂದಾಗಿ ಮುಖದ ಕೂದಲಿನ ಬಣ್ಣವು ಕಳೆಗುಂದುವುದರೊಂದಿಗೆ, ಕೂದಲಿನ ಬೆಳವಣಿಗೆಯೂ ಕಡಿಮೆಯಾಗುವುದು.

೩.ಆಲಂ + ಗುಲಾಬಿ ನೀರು

ಒಂದು ಚಮಚ ಏಲಂ ಪೌಡರ್‌ಗೆ, ಮೂರು ಚಮಚ ಗುಲಾಬಿ ನೀರನ್ನು ಸೇರಿಸಿ ಮಿಶ್ರಣವನ್ನು ತಯಾರಿಸಿರಿ.

ಕಠಿಣ ಸ್ವಭಾವದ ಏಲಂ ನಿಮ್ಮ ತ್ವಚೆಯನ್ನು ಒಣಗಿಸದಂತೆ ಸ್ವಲ್ಪ ತೆಂಗಿನೆಣ್ಣೆಯನ್ನು ಕೂಡ ಮಿಶ್ರಮಾಡಿರಿ.

ಹತ್ತಿಯನ್ನು ಈ ಮಿಶ್ರಣದಲ್ಲಿ ಅದ್ದಿಕೊಂಡು ಅದರಿಂದ ಮುಖದ ಮೇಲೆ ಲೇಪಿಸಿಕೊಳ್ಳಿ. ಈ ಲೇಪನವು ಸಂಪೂರ್ಣವಾಗಿ ಒಣಗಿದ ಬಳಿಕ ಅದರ ಮೇಲೆ ಇನ್ನೊಂದು ಪದರವನ್ನು ಲೇಪಿಸಿಕೊಳ್ಳಿ.

ಹೀಗೆ ಹದಿನೈದು ಬಾರಿ ಆವರ್ತಿಸಿ, ನಂತರ ತಣ್ಣೀರಿನಿಂದ ತೊಳೆದುಕೊಳ್ಳಿ.

ವಾರದಲ್ಲಿ ಮೂರು ಬಾರಿಗಿಂತಲೂ ಹೆಚ್ಚಾಗಿ ಈ ಮಿಶ್ರಣದ ಬಳಕೆಯನ್ನು ನಿಷೇಧಿಸಲಾಗಿದೆ. ಎಲ್ಲ ಹೊಸ ಕೂದಲಿನ ಬೆಳವಣಿಗೆಯನ್ನು ತಡೆಯುವುದರಿಂದ, ಈ ಮಿಶ್ರಣವನ್ನು ಕೂದಲ ಸಮಸ್ಯೆಗೆ ಶಾಶ್ವತ ಪರಿಹಾರವಾಗಿ ಬಳಸಬಹುದು ಹಾಗೂ ಮಕ್ಕಳಂತೆ ಮೃದುವಾದ ತ್ವಚೆಯನ್ನೂ ಪಡೆಯಬಹುದು.

೪.ಕಡಲೆ ಹಿಟ್ಟು+ ಅರಶಿನದ ಮಿಶ್ರಣ

ಎರಡು ಚಮಚ ಅರಿಶಿನ ಪುಡಿ ಮತ್ತು ಸ್ವಲ್ಪ ಕಡಲೆಹಿಟ್ಟನ್ನು ಸೇರಿಸಿ ಬಿಸಿ ನೀರಿನಲ್ಲಿ ಕಲೆಸಿ ಮಿಶ್ರ ಮಾಡಿ.

- ಮುಖದ ಮೇಲೆ ಲೇಪಿಸಿದ ಈ ಮಿಶ್ರಣವು ೬೦% ಒಣಗುತ್ತಿದ್ದಂತೆಯೇ ವೃತ್ತಾಕಾರವಾಗಿ ಮಸಾಜ್ ಮಾಡಿಕೊಳ್ಳಿ.

ಈ ಮಿಶ್ರಣದ ಬಳಕೆಯು ನಿಮ್ಮ ಅನಗತ್ಯವಾದ ರೋಮದ ಬೆಳವಣಿಗೆಯನ್ನು ತಡೆಯುವುದಲ್ಲದೆ ಪ್ರತಿ ಸ್ತ್ರೀಯರು ವ್ಯಾಮೋಹಿಸುವಂತಹ ತ್ವಚೆಯನ್ನು ನೀಡುವುದು.

ಸೂಚನೆ: ಪ್ರತಿಯೊಬ್ಬ ವ್ಯಕ್ತಿಯ ತ್ವಚೆಯು ವಿಭಿನ್ನವಾಗಿದ್ದು, ಅವರಿಗೆ ದೊರೆಯುವ ಫಲಿತಾಂಶವೂ ಭಿನ್ನವಾಗಿರುವುದು. ಯಾವುದೇ ಮಿಶ್ರಣವನ್ನು ಮುಖಕ್ಕೆ ಪ್ರಯೋಗಿಸುವ ಮುನ್ನ, ಕೈಕಾಲುಗಳಿಗೆ ಹಚ್ಚಿಕೊಂಡು ಪರೀಕ್ಷಿಸಿದ ಬಳಿಕವಷ್ಟೇ ಮುಖದ ಮೇಲೆ ಲೇಪಿಸಿ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon