Link copied!
Sign in / Sign up
12
Shares

ಓರಲ್ ಸೆಕ್ಸ್ : ಮೌಖಿಕ ಲೈಂಗಿಕತೆಯ ಉಪಯೋಗಗಳು

ನಮಗೆ ಸುಖ ನೀಡುವ ವಿಷಯದಿಂದ ನಮಗೆ ಉಪಯೋಗವೂ ಆಗುತ್ತದೆ ಎಂದರೆ ಅದಕ್ಕಿಂತ ಖುಷಿಯ ವಿಷಯ ಏನಿದೆ. ಸೆಕ್ಸ್ ಎನ್ನುವುದು ಕೇವಲ ಸುಖ ನೀಡುವುದಷ್ಟೇ ಅಲ್ಲದೆ, ನಾವು ಉತ್ತಮ ಅರೋಗ್ಯ ಹೊಂದಲೂ ಸಹಕರಿಸುತ್ತದೆ ಎಂಬುದು ನಿಮಗೆ ತಿಳಿದಿರುತ್ತದೆ. ಇಲ್ಲಿ ಈಗ ನಾವು ಹೇಳಲು ಹೊರಟಿರುವುದು ಮೌಖಿಕ ಲೈಂಗಿಕತೆ ಅಥವಾ ಓರಲ್ ಸೆಕ್ಸ್ ಇಂದ ಆಗುವ ಉಪಯೋಗಗಳು. ಬಹಳಷ್ಟು ಹೆಂಗಸರು ಇದರಿಂದ ಹಿಂದೆ ಸರಿಯುವರು, ಆದರೆ ಈ ಲೇಖನ ಓದಿದ ಮೇಲೆ ಅವರ ಯೋಚನೆ ಬದಲಾಗಬಹುದು. ಮೌಖಿಕ ಲೈಂಗಿಕತೆ ಇಂದ ನಿಮಗೆ ಆಗುವ 10 ಉಪಯೋಗಗಳು ಯಾವುದೆಂದು ಇಲ್ಲಿ ತಿಳಿಸಿದ್ದೇವೆ ಓದಿ :

೧. ತಾರುಣ್ಯ ರಕ್ಷಕ

ನಿಮಗೆ ನಿಮ್ಮ ತ್ವಚೆಯ ಯೌವ್ವನವನ್ನ ಕಾಪಾಡಿಕೊಳ್ಳಲು ಹಲವಾರು ಕ್ರೀಂ ಗಳನ್ನ ಬಳಸಿ, ಬಳಸಿ ಸುಸ್ತಾಗಿದೆಯೇ? ಹಾಗಿದ್ದರೆ, ನೀವು ನಿಮ್ಮ ಸಂಗಾತಿಯನ್ನು ಮೌಖಿಕವಾಗಿ ತೃಪ್ತಿಪಡಿಸಿ ನಿಮ್ಮ ತಾರುಣ್ಯವನ್ನ ಕಾಪಾಡಿಕೊಳ್ಳಬಹುದು. ಹೌದು, ಪುರುಷರ ವೀರ್ಯದಲ್ಲಿ ಸ್ಪೆರ್ಮಿಡೈನ್ ಎಂಬ ರಾಸಾಯನಿಕ ಪದಾರ್ಥ ಇದ್ದು, ಇದು ನಿಮ್ಮ ತ್ವಚೆಯ ಕೋಶಗಳು ತುಂಬಾ ಕಡಿಮೆ ವೇಗದಲ್ಲಿ ವಯಸ್ಸಾಗುವಂತೆ ನೋಡಿಕೊಳ್ಳುತ್ತದೆ.

೨. ಸ್ತನ ಕ್ಯಾನ್ಸರ್ ದೂರವಿಡುತ್ತದೆ

ಈಗ 40 ವರ್ಷ ದಾಟಿದ ಹೆಂಗಸರಲ್ಲಿ ಸ್ತನದ ಕ್ಯಾನ್ಸರ್ ತುಂಬಾ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಇತ್ತೀಚಿಗೆ ವಿಜ್ಞಾನಿಗಳು ನಡೆಸಿದ ಅಧ್ಯಯನದಲ್ಲಿ ವಾರದಲ್ಲಿ ಕನಿಷ್ಠಪಕ್ಷ 2 ಬಾರಿ ಆದರೂ ಮೌಖಿಕ ಲೈಂಗಿಕತೆಯಲ್ಲಿ ತೊಡಗಿಕೊಂಡ ಹೆಂಗಸರು ಸ್ತನ ಕ್ಯಾನ್ಸರಿಗೆ ತುತ್ತಾಗುವ ಸಾಧ್ಯತೆಗಳು ಇತರೆ ಹೆಂಗಸರಿಗಿಂತ ಕಡಿಮೆ ಎಂದು ವೈಜ್ಞಾನಿಕ ಪುರಾವೆಗಳೊಂದಿಗೆ ಸಾಬೀತು ಮಾಡಿದ್ದಾರೆ. ಪುರುಷರ ವೀರ್ಯದಲ್ಲಿ ಸ್ತನ ಕ್ಯಾನ್ಸರ್ ದೂರವಿಡುವ ರಾಸಾಯನಿಕಗಳು ಇವೆ.

೩. ಒತ್ತಡದಿಂದ ಮುಕ್ತಿ ನೀಡುತ್ತದೆ

ಮೌಖಿಕ ಲೈಂಗಿಕತೆಯಲ್ಲಿ ಅಥವಾ ವೀರ್ಯಕ್ಕೆ ತೆರೆದುಕೊಂಡ ಹೆಂಗಸರು ಖಿನ್ನತೆ ಒಳಗಾಗುವ ಸಾಧ್ಯತೆಗಳು ಕಡಿಮೆ ಎಂಬುದು ಸಾಬೀತಾಗಿದೆ. ಪುರುಷರ ವೀರ್ಯದಲ್ಲಿ ಕಾರ್ಟಿಸೋಲ್, ಈಸ್ಟ್ರೋಜೆನ್, ಆಕ್ಸಿಟೋಸಿನ್ ಅಂತಹ ರಾಸಾಯನಿಕಗಳು ಇದ್ದು, ಇವು ಖಿನ್ನತೆ ವಿರುದ್ಧ ಹೋರಾಡುವಂತವು ಆಗಿವೆ.

೪. ಗರ್ಭದಾರಣೆ ವೇಳೆಯ ಬೆಳಗಿನ ಬೇನೆಯಿಂದ ಮುಕ್ತಿ ನೀಡುತ್ತದೆ

ಮೌಖಿಕ ಲೈಂಗಿಕತೆಯ ಅತ್ಯಂತ ಹಿತಕಾರಿ ಉಪಯೋಗ ಎಂದರೆ ಬಹುಷಃ ಅದು ಇದೇ ಇರಬಹದು. ಒಂದು ವೇಳೆ ನೀವು ಗರ್ಭಿಣಿಯಾಗಿದ್ದು, ನಿಮಗೆ ಬಹಳ ವಾಕರಿಕೆ ಕಾಣಿಸಿಕೊಂಡರೆ, ನೀವು ಓರಲ್ ಸೆಕ್ಸ್ ಅಲ್ಲಿ ತೊಡಗಬೇಕು. ಪುರುಷರ ವೀರ್ಯದಲ್ಲಿರುವ ಪೋಷಕಾಂಶಗಳು ಬೆಳಗಿನ ಬೇನೆ ಅಂದರೆ ಮಾರ್ನಿಂಗ್ ಸಿಕ್ಕ್ನೆಸ್ಸ್ ಅನ್ನು ಕಡಿಮೆ ಮಾಡುತ್ತವೆ. ಇದಲ್ಲದೆ ವೀರ್ಯದ ಗುಣಗಳು ಹಾರ್ಮೋನುಗಳೊಂದಿಗೆ ಬೆರೆತು, ಅವುಗಳನ್ನ ಬ್ಯಾಲೆನ್ಸ್ ಮಾಡಿ, ನಿಮಗೆ ವಾಕರಿಕೆ ಇಂದ ಮುಕ್ತಿ ಕೊಡುತ್ತವೆ.

೫. ರಕ್ತದೊತ್ತಡ ನಿಯಂತ್ರಿಸುತ್ತವೆ

ವೀರ್ಯವು ರಕ್ತದೊತ್ತಡವನ್ನ ನಿಯಂತ್ರಣದಲ್ಲಿ ಇಡಲು ಸಹಾಯ ಮಾಡುತ್ತದೆ. ಮುಖ್ಯವಾಗಿ ಇದು ಪ್ರಿಎಕ್ಲ್ಯಾಮ್ಪ್ಸಿಯ (ಗರ್ಭಧಾರಣೆ ವೇಳೆ ಕಾಣಿಸಿಕೊಳ್ಳುವ ರಕ್ತದೊತ್ತಡದ ತೊಂದರೆ) ತೊಂದರೆಯನ್ನು ಹೆಂಗಸರಲ್ಲಿ ದೂರವಿಡುತ್ತದೆ.

೬. ಸುಖನಿದ್ರೆ ನೀಡುತ್ತದೆ

ನಿಮಗೆ ಒಳ್ಳೆಯ ನಿದ್ದೆ ಮಾಡಲು ಕಷ್ಟ ಆಗುತ್ತಿದೆಯೇ? ಆಗಿದ್ದರೆ ನೀವು ವೀರ್ಯಕ್ಕೆ ತೆರೆದುಕೊಂಡರೆ, ಇದನ್ನ ಬಗೆಹರಿಸಬಹುದು. ವೀರ್ಯದಲ್ಲಿ ಮೆಲಟೋನಿನ್ ಎನ್ನುವ ರಾಸಾಯನಿಕ ಇದ್ದು, ಈ ರಾಸಾಯನಿಕವು ಅತ್ಯುತ್ತಮ ನಿದ್ರಾ ಪ್ರಚೋದಕ ಏಜೆಂಟ್ ಆಗಿದೆ.

೭. ಮೈಕೈ ನೋವು ತೊಲಗಿಸುತ್ತದೆ

ವೀರ್ಯದಲ್ಲಿ ಆಕ್ಸಿಟೋಸಿನ್ ಮತ್ತು ಎಂಡೋಮೊರ್ಫಿನ್ ಇದ್ದು ಇವುಗಳು ಅತ್ಯುತ್ತಮ ನೋವು ನಿವಾರಕ ಔಷಧಿಗಳ ಹಾಗೆ ಕೆಲಸ ಮಾಡುತ್ತವೆ. ಹೀಗಾಗಿ ಮೌಖಿಕ ಲೈಂಗಿಕತೆ ಹೊಂದುವುದರಿಂದ ನಿಮ್ಮ ದೇಹದಲ್ಲಿನ ನೋವುಗಳನ್ನ ತೊಲಗಿಸಿಕೊಳ್ಳಬಹುದು.

೮. ನಿಮ್ಮ ಪತಿಯು ಪ್ರಾಸ್ಟೇಟ್ ಕ್ಯಾನ್ಸರ್ ಇಂದ ದೂರವಿರುವಂತೆ ಮಾಡುತ್ತದೆ

ಎಲ್ಲಾ ಉಪಯೋಗಗಳು ಹೆಂಗಸರಿಗೆ ಆದರೆ, ಗಂಡಸರಿಗೆ ಏನು ಉಪಯೋಗ ಎಂದು ಕೇಳುವಿರಾ? ಖಂಡಿತ ಇದೆ. ನಿಮ್ಮ ಸಂಗಾತಿಯು ಹೆಚ್ಚೆಚ್ಚು ಬಾರಿ ವೀರ್ಯ ವಿಸರ್ಜನೆ ಮಾಡಿದಷ್ಟು, ಅವರು ಪ್ರಾಸ್ಟೇಟ್ ಕ್ಯಾನ್ಸರಿಗೆ ತುತ್ತಾಗುವ ಸಾಧ್ಯತೆಗಳು ಕ್ಷೀಣಿಸುತ್ತವೆ.

Click here for the best in baby advice
What do you think?
0%
Wow!
100%
Like
0%
Not bad
0%
What?
scroll up icon