Link copied!
Sign in / Sign up
8
Shares

ಗೃಹಿಣಿಯರು ಮೊಟ್ಟೆ ಯ ಸಿಪ್ಪೆಯ ಈ ಟ್ರಿಕ್ಸ್ ಕಲಿತರೆ ಮತ್ತೆಂದೂ ಅದನ್ನು ಕಸವೆಂದು ಹೊರಗೆಸೆವುದಿಲ್ಲ !

ನಿಮಗೆ ಯಾವಾಗಲಾದರೂ ಮೊಟ್ಟೆಯ ಸಿಪ್ಪೆಯು ಕೇವಲ ಮೊಟ್ಟೆಯೊಳಗಿನ ಬಿಳಿ ಮತ್ತು ಹಳದಿ ಪದಾರ್ಥವನ್ನ ಕಾಪಾಡುವುದಕ್ಕೆ ಅಷ್ಟೇ ಅಲ್ಲದೆ ಎಷ್ಟೊಂದು ಇತರೆ ಕೆಲಸಗಳಿಗೂ ಉಪಯೋಗಕ್ಕೆ ಬರುತ್ತದೆ ಎಂದು? ಬಹುಷಃ ಇಲ್ಲ ಎಂದುಕೊಳ್ಳುತ್ತೀನಿ! ಈ ಲೇಖನವನ್ನ ಓದಿದರೆ ನಿಮಗೆ ಅಚ್ಚರಿ ಆಗದೆ ಇರುವುದಿಲ್ಲ. ಹೌದು ಅಷ್ಟೊಂದು ಉಪಯೋಗಗಳಿವೆ ಇದರಿಂದ. ಅವುಗಳು ಏನೆಂದು ತಿಳಿದರೆ ನೀವು ಮತ್ತೆ ಎಂದಿಗೂ ಮೊಟ್ಟೆಯ ಸಿಪ್ಪೆಯನ್ನು ಕಸ ಎಂದು ಭಾವಿಸಿ ಹೊರಗೆ ಎಸೆಯುವುದಿಲ್ಲ. ಹಾಗಿದ್ದರೆ ಅಂತಹ ಉಪಯೋಗಗಳು ಏನೆಂದು ತಿಳಿಯೋಣ ಬನ್ನಿ :

೧. ಕ್ಯಾಂಡಲ್ ಆಗಿ ಬಳಸಿ

ಮೊಟ್ಟೆಯನ್ನು ಒಡೆಯಬೇಕಾದರೆ, ಮೊಟ್ಟೆಯ ಮೇಲ್ಭಾಗವನ್ನು ಸ್ವಲ್ಪವೇ ಮುರಿಯಿರಿ. ನಂತರ ಒಳಗಿನ ಪದಾರ್ಥವನ್ನೆಲ್ಲಾ ತೆಗೆದು ಹಾಕಿ. ಖಾಲಿ ಮೊಟ್ಟೆ ಸಿಪ್ಪೆಯೊಳಗೆ ಒಂದು ಬತ್ತಿಯನ್ನು ಇಡಿ. ಕ್ಯಾಂಡಲ್ ತುಂಡುಗಳನ್ನ ಸ್ಟೋವ್ ಮೇಲೆ ಇಟ್ಟು ಒಂದು ಪಾತ್ರೆಯಲ್ಲಿ ಕರಗಿಸಿಕೊಳ್ಳಿ. ಅದನ್ನು ಮೊಟ್ಟೆಯ ಸಿಪ್ಪೆಯೊಳಗೆ ಸುರಿದುಕೊಳ್ಳಿ. ಬೇಕಾದರೆ ಮೊಟ್ಟೆಯ ಸಿಪ್ಪೆಗೆ ಬಣ್ಣದ ಅಲಂಕಾರ ಕೂಡ ಮಾಡಬಹುದು.


೨. ಬಿಳಿಯ ಬಟ್ಟೆಗಳನ್ನ ಮತ್ತಷ್ಟು ಬೆಳ್ಳಗಾಗಿಸಿ

ಒಂದು ಮೆಷ್ ಬ್ಯಾಗ್ ಅಲ್ಲಿ ಮೊಟ್ಟೆಯ ಸಿಪ್ಪೆಗಳನ್ನ ಸುತ್ತಿ, ಅದನ್ನು ನಿಮ್ಮ ಬಿಳಿಯ ಬಟ್ಟೆಗಳೊಂದಿಗೆ ವಾಷಿಂಗ್ ಮಷೀನ್ ಅಲ್ಲಿ ಹಾಕಿ ತಿರುಗಿಸಿ. ಆಗ ನಿಮ್ಮ ಬಿಳಿಯ ಬಟ್ಟೆ ಮೇಲಿರುವ ಸಿಮೆಂಟ್ ಬಣ್ಣದ ಪದರವನ್ನ ಹೋಗಲಾಡಿಸಿ ಝಳಪಿಸುವ ಬಿಳಿ ಬಣ್ಣವನ್ನು ನೀಡುತ್ತದೆ.


೩. ಬಾಟಲಿಯ ಚಿಕ್ಕ ಚಿಕ್ಕ ಮೂಲೆಗಳನ್ನ ತೊಳೆಯಿರಿ

ನಿಮ್ಮ ಅಡುಗೆ ಮನೆಯ ಬಾಟಲಿ ಅಥವಾ ಡಬ್ಬಿಗಳಿಂದ ಒಳಗೆ ಅಂಟಿಕೊಂಡಿರುವ ಪದಾರ್ಥಗಳನ್ನ ತೆಗೆಯಬೇಕು ಎಂದರೆ ಕೇವಲ ಅದನ್ನು ನಲ್ಲಿಯ ನೀರಿಗೆ ಹಿಡಿದರೆ ಸಾಲುವುದಿಲ್ಲ. ಆದರೆ ಒಳಗಡೆ ಬೆರಳು ಹಾಕಿಯೂ ತೆಗೆಯಲು ಆಗುವುದಿಲ್ಲ, ಏಕೆಂದರೆ ಅವುಗಳ ಮೂಲೆಗಳು ಅಷ್ಟು ಚಿಕ್ಕದಾಗಿರುತ್ತವೆ. ಹೀಗಾಗಿ ನೀವು ಅಂತಹ ಬಾಟಲಿ ಅಥವಾ ಡಬ್ಬಿಗಳನ್ನ ಸ್ವಲ್ಪ ಬಿಸಿ ನೀರಿನಲ್ಲಿ ಜಾಲಾಡಿ. ನಂತರ ಅದರೊಳಗೆ ಸ್ವಲ್ಪ ಚಿಕ್ಕ ಚಿಕ್ಕ ತುಂಡಾಗಿ ಮುರಿದ ಮೊಟ್ಟೆಯ ಸಿಪ್ಪೆಗಳನ್ನ ಹಾಕಿ, ಸಿಪ್ಪೆಯ ಅರ್ಧದ ಭಾಗ ತುಂಬುವಷ್ಟು ನೀರನ್ನು ಹಾಕಿ ಚೆನ್ನಾಗಿ ಶೇಕ್ ಮಾಡಿ. ಆಗ ಮೂಲೆಯಲ್ಲಿ ಅಂಟಿಕೊಂಡಿದ್ದ ಎಲ್ಲಾ ಪದಾರ್ಥಗಳು ಹೊರಬರುತ್ತವೆ.


೪. ಗೊಬ್ಬರವಾಗಿ

ಗಿಡ ನೆಡುವ ಮುನ್ನ ಮೊಟ್ಟೆಯ ಸಿಪ್ಪೆಯನ್ನು ಪುಡಿ ಮಾಡಿ ಅದನ್ನು ಗಿಡ ನೆಡುವ ಜಾಗದಲ್ಲಿನ ಮಣ್ಣಿನೊಂದಿಗೆ ಬೆರೆಸಿ. ಇದರೊಂದಿಗೆ ನೀವು ಗಿಡದ ಸುತ್ತಲೂ ಕೂಡ ಎರಡು ವಾರಗಳಿಗೆ ಒಮ್ಮೆ ಮೊಟ್ಟೆಯ ಸಿಪ್ಪೆಗಳನ್ನ ಇಡಬಹುದು. ಸಿಪ್ಪೆಯಲ್ಲಿರುವ ಕ್ಯಾಲ್ಸಿಯಂ ಮತ್ತು ಪೋಷಕಾಂಶಗಳು ಗಿಡಕ್ಕೆ ಪೋಷಣೆ ನೀಡುತ್ತವೆ.


೫. ಹುಳಗಳಿಂದ ದೂರವಿರಿಸಲು

ನಿಮ್ಮ ಅಡುಗೆ ಮನೆಯಲ್ಲೇ ಆಗಲಿ ಅಥವಾ ನೀವು ಬೆಳೆದಿರುವ ಗಿಡಗಳಲ್ಲೇ ಆಗಲಿ, ತರಕಾರಿಗಳು ಮತ್ತು ಹಣ್ಣುಗಳು ಇದ್ದರೆ, ಅದರ ಸುತ್ತ ಚಿಕ್ಕ ಚಿಕ್ಕ ತುಂಡು ಮಾಡಿದ ಮೊಟ್ಟೆಯ ಸಿಪ್ಪೆಯನ್ನು ಸುರಿಯಿರಿ. ಇದು ಗೊಂಡೆಹುಳು, ಬಸವನ ಹುಳು ಮತ್ತು ಇನ್ನಿತರೇ ಹುಳಗಳನ್ನ ದೂರವಿಡುತ್ತದೆ. ಏಕೆಂದರೆ ಈ ಹುಳುಗಳು ಚೂಪಾದ ಸಿಪ್ಪೆಯ ಮೇಲೆ ಅಥವಾ ನಡುವಲ್ಲಿ ನಡೆಯಲು ಹಿಂದೇಟು ಹಾಕುತ್ತವೆ.


೬. ಕಹಿ ಇರದ ಕಾಫಿ

ಅಗ್ಗದ ಬೆಲೆಯ ಕಾಫಿಪುಡಿಯು ಸ್ವಲ್ಪ ಕಹಿ ರುಚಿಯನ್ನು ನೀಡುತ್ತದೆ. ಒಂದು ವೇಳೆ ನಿಮಗೆ ಅಷ್ಟೊಂದು ಕಹಿ ರುಚಿ ಹಿಡಿಸದೆ ಇದ್ದರೆ, ಅದಕ್ಕೆ ನೀವು ಈ ಉಪಾಯ ಬಳಸಬಹುದು. ಕಾಫಿಪುಡಿಯನ್ನು ಹಾಲಿಗೆ ಬೆರೆಸುವ ಮುನ್ನ ಅದಕ್ಕೆ  ಸ್ವಲ್ಪ ಮೊಟ್ಟೆಯ ಸಿಪ್ಪೆಯನ್ನು ಬೆರೆಸಿ. ನಂತರ ಅದನ್ನು ಹಾಲಿನಲ್ಲಿ ಬೆರೆಸಿ, ಕಾಫಿಯನ್ನು ಚೆನ್ನಾಗಿ ಸೋಸಿ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon