Link copied!
Sign in / Sign up
49
Shares

ಈ 3 ರಾಶಿಯವರೇ ಸಂಬಂಧದಲ್ಲಿ ಮೋಸ ಮಾಡುವುದು ಹೆಚ್ಚು, ಏಕೆ ಗೊತ್ತಾ?

ನೀವು ಕೊನೆಗೂ ನಿಮ್ಮ ಜೀವನ ಪಯಣವನ್ನ ಜೊತೆಯಾಗಿ ಸಾಗಲು ಜೀವನಸಂಗಾತಿಯನ್ನ ಪಡೆದಿದ್ದೇನೆ ಎಂದುಕೊಳ್ಳುವಿರಿ, ಅದು ನಿಜಕ್ಕೂ ಅದ್ಭುತವಾದದ್ದೇ. ಆದರೆ ನೀವು ನಿಮ್ಮ ಸಂಗಾತಿಯ ಭಾವನೆಗಳ ಬಗ್ಗೆಯೂ ಗಮನ ಹರಿಸಬೇಕು. ನಿಮ್ಮ ಸಂಗಾತಿಗೆ ನೀವೇ ಪಂಚಪ್ರಾಣ ಆಗಿರಬಹುದು, ನಿಮ್ಮನ್ನು ಒಂದು ದಿನವೂ ಬಿಟ್ಟಿರದೇ ಇರಲಾಗದಿರಬಹುದು, ಆದರೆ ಅವರಿಗೆ ಈ ಸಂಬಂಧ, ಮದುವೆ ಬಂಧನ, ಬದ್ಧತೆ ಇವೆಲ್ಲವುಗಳ ಬಗ್ಗೆ ಭಯ ಅಥವಾ ತಿರಸ್ಕಾರ ಇರುವ ಸಣ್ಣ ಸಾಧ್ಯತೆ ಕೂಡ ಇರಬಹುದು ಅಲ್ಲವಾ?

ನಿಮ್ಮ ಸಂಗಾತಿಯ ನಡವಳಿಕೆ ಮತ್ತು ಅವರ ಮುಂದಿನ ಹೆಜ್ಜೆಗಳ ಬಗ್ಗೆ ತಿಳಿಯಲು ನಾವು ಜ್ಯೋತಿಷ್ಯದ ಸಹಾಯವನ್ನು ತೆಗೆದುಕೊಳ್ಳಬಹುದು. ಈ ರಾಶಿ, ನಕ್ಷತ್ರಗಳು ನಿಮ್ಮ ಜೀವನದ ಮೇಲೆ ಹೆಚ್ಚು ಪ್ರಭಾವ ಅಥವಾ ನಿಯಂತ್ರಣ ಹೊಂದದೆ ಇರಲಿ. ಆದರೆ ನಿಮಗೆ ಏನಾದರೂ ಕುತೂಹಲ ಇದ್ದರೆ, ವಿಶ್ವವಿಖ್ಯಾತ ಜ್ಯೋತಿಷ್ಯ ತಜ್ಞ ಶಿವಶಂಕರ್ ಶಾಸ್ತ್ರೀ ಅವರು ಸಂಬಂಧಗಳನ್ನ ತೊರೆಯುವ ಸಾಧ್ಯತೆಗಳು ಹೆಚ್ಚಿರುವುದು ಯಾವ ರಾಶಿಯವರು ಎಂಬ ಮಾಹಿತಿಯನ್ನು ನೀಡುತ್ತಾರೆ ಓದಿ.


ಮೇಷ


ಮೇಷ ರಾಶಿಯವರು ಜೀವನದಲ್ಲಿ ಸ್ಥಿರತೆಯನ್ನೇನೋ ಹೊಂದಿರುತ್ತಾರೆ, ಆದರೆ “ಏಕಸಂಗಾತಿ ವೃತಸ್ಥ/ವೃತಸ್ಥೆ” ಆಗಿರಲು ಅವರು ಕಷ್ಟ ಪಡುತ್ತಾರೆ. ಮೇಷ ರಾಶಿಯರು ಅಧಿಕವಾಗಿ ಸಂವೇದನಾಶೀಲರು, ಲೈಂಗಿಕ ಆಸಕ್ತಿ ಉಳ್ಳವರು ಮತ್ತು ತಮಗೆ ಇಷ್ಟವಾದದ್ದನ್ನು ಏನಾದರೂ ಮಾಡಿ ಪಡೆದುಕೊಳ್ಳುವವರು ಆಗಿರುತ್ತಾರೆ. ಅವರಿಗೆ ಏನಾದರು ಬೇಕಾದರೆ, ಅದನ್ನು ಅವರು ಪಡೆಯಲು ಏನು ಬೇಕಾದರೂ ಮಾಡುತ್ತಾರೆ, ನಿಮಗೂ ಅವರನ್ನ ತಡೆಯಲಾಗುವುದಿಲ್ಲ. ಅಲ್ಲದೆ, ಅಗ್ನಿಯ ಚಿಹ್ನೆ ಆಗಿರುವ ಮೇಷ ರಾಶಿ ಎಂದರೆ, ಈ ರಾಶಿಯವರು ಹೊಸತನ್ನು, ಥ್ರಿಲ್ ಅನ್ನು ಯಾವಾಗಲೂ ಅಪೇಕ್ಷಿಸುತ್ತಲೇ ಇರುತ್ತಾರೆ. ಅವರು ಸದಾ ಹೊಸ ಪ್ರೀತಿಯ ಹುಡುಕಾಟದಲ್ಲೇ ಇರುತ್ತಾರೆ.

ಇದು ಕೇವಲ ಗಂಡಸರಷ್ಟೇ ಅಲ್ಲ, ಹೆಂಗಸರಲ್ಲೂ ನಿಜ. ಮೇಷ ರಾಶಿಯವರು ತಾಳ್ಮೆ ಎನ್ನುವುದು ತೆಗೆದುಕೊಳ್ಳುವುದು, ಕೇವಲ ಅವರಿಗೆ ಬೇಕಾದದ್ದು ಪಡೆಯಲು ಅದು ಅಗತ್ಯವಿದ್ದಾಗ.


ಮಿಥುನ


ಮಿಥುನ ರಾಶಿಯವರು ಚತುರರು ಆಗಿರುತ್ತಾರೆ. ಇವರ ನಡವಳಿಕೆ ಅರ್ಥಮಾಡಿಕೊಳ್ಳುವುದೇ ಕಷ್ಟ, ಏಕೆಂದರೆ ಇವರು ಒಂದೊಂದು ಸಮಯದಲ್ಲಿ ಒಂದೊಂದು ರೀತಿ ಇರುತ್ತಾರೆ. ಅವರ ಗಮನ ಕೂಡ ಕುದುರೆಯ ದೃಷ್ಟಿ ಇದ್ದಂತೆ. ಹೀಗಾಗಿ ಅವರು ಸಂಬಂಧದಲ್ಲಿ ಬದ್ಧತೆ ಕಾಯ್ದುಕೊಳ್ಳುವುದು ಇರಲಿ, ಅವರ ಸ್ವಲ್ಪ ಸಮಯವನ್ನು ನೀವು ಪಡೆಯಲು ಕಷ್ಟಪಡಬೇಕಾಗುತ್ತದೆ. ಹೀಗೆಂದ ಮಾತ್ರಕ್ಕೆ ಅವರು ಪ್ರಣಯದ ಮಾತುಗಳನ್ನ ಆಡಲ್ಲ ಎಂದಾಗಲಿ ಅಥವಾ ನಿಮ್ಮ ಕಣ್ಣುಗಳಲ್ಲಿನ ಹೊಳಪನ್ನು ಗುರುತಿಸುವುದಿಲ್ಲ ಎಂದರ್ಥವಲ್ಲ, ಆದರೆ ಅವರಿಗೆ ಆಳವಾದ, ದೊಡ್ಡ ದೊಡ್ಡ ಮಾತುಗಳು ಇಷ್ಟವಾಗುವುದಿಲ್ಲ. ಅಂತಹ ಮಾತುಗಳು ಅವರಿಗೆ ಭಯ ಹುಟ್ಟಿಸುತ್ತವೆ. ನೀವು ತಿಳಿಯಾಗಿ ಮಾತುದುವವರೆಗೂ, ಅವರೂ ಖುಷಿಯಿಂದ ಸ್ಪಂದಿಸುತ್ತಾರೆ. ಆದರೆ, ನೀವು ಸಂಬಂಧದ ಬಗ್ಗೆ ದೊಡ್ಡ ದೊಡ್ಡ ಮಾತುಗಳನ್ನ ಆಡಿದರೆ, ಅವರು ಜೂಟ್ ಹೇಳುತ್ತಾರೆ.


ತುಲಾ


ಎಲ್ಲರಲ್ಲೂ ಇರುವ ಒಂದು ತಪ್ಪು ಗ್ರಹಿಕೆ ಎಂದರೆ, ಅದು ತುಲಾ ರಾಶಿಯವರು ಸಂಬಂಧಗಳ ವಿಷಯದಲ್ಲಿ ನಿಪುಣರು ಎಂಬುದು. ಸತ್ಯ ಏನು ಎಂದರೆ, ಈ ರಾಶಿಯವರು ತಮ್ಮ ತುಲನೆ ತಾವು ಕಂಡುಕೊಳ್ಳುತ್ತಲೇ, ತಮ್ಮ ಬದುಕನ್ನು ಸೂಕ್ತ ಸಂಗಾತಿಯನ್ನು ಹುಡುಕುವುದರಲ್ಲಿ ಕಳೆಯುತ್ತಾರೆ. ಸಂಗಾತಿ ಎಂದರೆ ಕೇವಲ ಪತಿ/ಪತ್ನಿ ಅಷ್ಟೇ ಅಲ್ಲ. ಎಲ್ಲಾ ಸಂಬಂಧಗಳಲ್ಲಿಯೂ ಹೀಗೆ. ಅವರು ಸಂಬಂಧದ ಹೊಸತರಲ್ಲಿ ನಿಮ್ಮನ್ನು ಆಕರ್ಷಿಸುತ್ತಾರೆ. ನಂತರ ಅದು ಮಾಯಾ ಆಗುತ್ತದೆ. ಇಲ್ಲಿ ಪ್ರಣಯಕ್ಕೆ ತೊಂದರೆ ಏನಾಗುವುದಿಲ್ಲ. ಆದರೆ ತುಲಾ ರಾಶಿಯವರು ತಮ್ಮ ಜೀವನದಲ್ಲಿ, ನಿರ್ಧಾರಗಳಲ್ಲಿ ಎರಡರಲ್ಲೂ ಸ್ಥಿರತೆ ಹೊಂದಿರುವುದಿಲ್ಲ. ಇದು ನಿಮಗೂ ನೋವು ತರುತ್ತದೆ.

ಇದೊಂದು ಮುಗಿಯದ ಕಥೆ ಆಗಿ ಹೋಗುತ್ತದೆ. ಅವರು ಮಾಡಿದ ತಪ್ಪುಗಳನ್ನೇ ಪದೇ ಪದೇ ಮಾಡುತ್ತಲೇ ಇರುತ್ತಾರೆ, ಇದು ನಿಮಗೂ ತೊಂದರೆ ಉಂಟು ಮಾಡುತ್ತದೆ. ಹೀಗಾಗಿಯೇ ಅವರಿಗೆ ನಿಮ್ಮ ಮೇಲೆ ಪ್ರೀತಿ ಆದೊಡನೆ, ಅದನ್ನು ಅವರು ಚೆನ್ನಾಗಿಯೇ ತೋರಿಸಿಕೊಳ್ಳುತ್ತಾರೆ, ಆದರೆ ಅದು ಮೊದಲೇ ಹೇಳಿದಂತೆ ಅಸ್ಥಿರ ನಿರ್ಧಾರ ಆಗಿರಬಹುದು. ಅವರು ಎಂದಿಗೂ ಹಾಗೆಯೇ ಇರುತ್ತಾರೆ ಎಂದು ಹೇಳಲು ಆಗುವುದಿಲ್ಲ.  

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

Recently, we launched a baby-safe, natural and toxin-free floor cleaner. Recommended by moms and doctors all over India, this floor-cleaner liquid gets rid of germs and stains without adding harmful toxins to the floor. Click here to buy it and let us know if you liked it.

Stay tuned for our future product launches - we plan to launch a range of homecare products that will keep your little explorer healthy, safe and happy!

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon