Link copied!
Sign in / Sign up
15
Shares

ಮಗುವಿನ ಮೂಗು ಕಟ್ಟಿದೆ ಅಂತ ಈ 6 ಕೆಲಸಗಳನ್ನ ಮಾಡಲೇ ಬೇಡಿ ಜೋಕೆ!

ಜಗತ್ತಿನಲ್ಲಿ ಅತ್ಯಂತ ಅಹಿತಕರವಾದ ಅನುಭವಗಳಲ್ಲಿ ಒಂದು ಅನುಭವ ಎಂದರೆ ಅದು ಕಟ್ಟಿದ ಮೂಗು. ಇದರ ಅನುಭವ ಹೇಗಿರುತ್ತದೆ ಎಂಬುದು ನಿಮಗೇ ತಿಳಿದಿರುತ್ತದೆ. ಆದರೆ ಇದು ಸುಲಭವಾಗಿ ಹೋಗುವಂತದ್ದಲ್ಲ. ಅದರಲ್ಲೂ ಚಿಕ್ಕ ಮಕ್ಕಳಿಗೆ ಇದು ಉಂಟಾದರಂತೂ ಪೋಷಕರಿಗೂ ಒಂದು ಪೀಕಲಾಟ. ಒಂದು ವೇಳೆ ನಿಮಗೇ ನೆಗಡಿ ಆದರೆ, ನೀವು ಸೀನಿ ಕಫ/ಲೋಳೆ ಹೊರಹಾಕುತ್ತೀರಿ. ಆದರೆ, ಮಕ್ಕಳಿಗೆ ಹೀಗೆ ಮಾಡಿಸಲು ಆಗುವುದಿಲ್ಲವೇ. ಮಗುವಿನ ಮೂಗಿನಲ್ಲಿರುವ ಲೋಳೆಯನ್ನ ನೀವೇ ತೆಗೆಯುತ್ತೀರ ಎಂದು ಹೇಳಲು ಆಗುವುದಿಲ್ಲ. ಏಕೆಂದರೆ, ನಮ್ಮ ಮಗುವನ್ನ ಎಷ್ಟೇ ಮುದ್ದು ಮಾಡಿದರೂ, ಏನೇ ಅಂದರು, ಕೆಲವು ವಿಷಯಗಳು ಅಸಹ್ಯ ಎಂದೆನಿಸೇ ಅನಿಸುತ್ತವೆ.


ಒಂದು ವೇಳೆ ನಿಮ್ಮ ಮಗುವಿನ ಮೂಗು ಸೋರುತ್ತಿದ್ದರು, ಮಗುವು ಚೆನ್ನಾಗಿ ಉಸಿರಾಡುತ್ತಿದೆ, ತಿನ್ನುತಿದೆ, ಜ್ವರ ಇಲ್ಲ ಎಂದರೆ ಮತ್ತು ಬೇಕಿರುವ ಪ್ರಮಾಣದಷ್ಟು ಶಕ್ತಿಯನ್ನ ಹೊಂದಿದೆ ಎಂದರೆ, ಮೂಗು ಸೋರಲು ಶುರುವಾಗಿ ಒಂದೇ ವಾರ ಕಳೆದಿರುವುದು ಎಂದರೆ, ನೀವು ಅಷ್ಟಾಗಿ ತಲೆ ಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ. ಆದರೆ ಈ ಕೆಳಗಿನ ವಿಧಾನಗಳನ್ನ ಎಂದಿಗೂ ಬಳಸಬೇಡಿ ಎಂದು ಮಕ್ಕಳ ತಜ್ಞರು ಹೇಳುತ್ತಾರೆ :


೧. ವಿಕ್ಸ್ ವೇಪರಬ್


ಮಕ್ಕಳ ತಜ್ಞರಾದ ಗಂಜಿಯಾನ್ ಪ್ರಕಾರ ನೀವು 2 ವರ್ಷದ ಕೆಳಗಿನ ಮಕ್ಕಳಿಗೆ ವಿಕ್ಸ್ ವೇಪರಬ್ ಅನ್ನು ಉಪಯೋಗಿಸಿದರೆ, ಆ ಮಗುವಿನ ಮೂಗಿನಲ್ಲಿ ಮತ್ತು ಗಂಟಲಿನಲ್ಲಿ ಲೋಳೆಯು ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳೇ ಹೆಚ್ಚು. ಇದು ಯಾರಿಗೂ ಬೇಡ.


೨. ಮೆಡಿಕಲ್ ಶಾಪ್ ಅಲ್ಲಿ ಸಿಗುವ ಕಟ್ಟಿದ ಮೂಗನ್ನ ಬಿಡಿಸುವ ಸ್ಪ್ರೇ/ಲಿಕ್ವಿಡ್


ಒಟ್ರಿವಿಯನ್ ಅಥವಾ ಅಫ್ರಿನ್ ಅಂತಹ ಡ್ರಿಪ್ಸ್ ಅಥವಾ ಸ್ಪ್ರೇ ಮಕ್ಕಳ ಮೇಲೆ ಪರೀಕ್ಷೆ ಮಾಡಿರುವುದಿಲ್ಲ. ಹೀಗಾಗಿ ಇವುಗಳು ಮಕ್ಕಳಿಗೆ ಮಾರಕವಾಗಬಹುದು ಕೂಡ. ಇದರ ಬದಲಿಗೆ ನೀವು ಅವರ ಮೂಗಿಗೆ ನೀವು ಉಪ್ಪಿನ ನೀರನ್ನೇ ಬಿಡಬಹುದು.


೩. ನೆಟಿಪೊಟ್


ಮಕ್ಕಳ ತಜ್ಞರ ಪ್ರಕಾರ ಮಕ್ಕಳಿಗೆ ನೆಟಿಪೊಟ್ ತುಂಬಾ ಒತ್ತಾಯಪೂರ್ವಕವಾಗಿ ಮಾಡಿಸುವ ಒಂದು ಕೆಲಸವಾಗಿರುತ್ತದೆ. ಇದು ಅವರಿಗೆ ಬಹಳಷ್ಟು ಅಹಿತಕರ ಅನುಭವ ಉಂಟುಮಾಡುತ್ತದೆ. ನೀವೇ ಇದನ್ನ ಬಳಸುವಾಗಲೂ ನಿಮ್ಮ ಮೂಗನ್ನು ಸಂಪೂರ್ಣವಾಗಿ ಸ್ವಚ್ಛ ಮಾಡಿಕೊಳ್ಳುವುದನ್ನ ಮರೆಯಲೇ ಬೇಡಿ.


೪. ನಿಮ್ಮ ಉಗುರು


ಇದನ್ನ ಯಾರು ಮಾಡುತ್ತಾರೆ ಎಂದು ನೀವು ಅಂದುಕೊಳ್ಳಬಹುದು. ಆದರೆ ಹತಾಶೆಯ ಪರಿಸ್ಥಿತಿಯಲ್ಲಿ ನಾವು ಇದನ್ನ ಮಾಡಿದರೂ ಮಾಡುತ್ತೀವಿ. ಮಗುವಿನ ಅಳು ಅಥವಾ ಅದರ ಕಷ್ಟ ನೋಡಲಾಗದೆ ನೀವೇ ನಿಮ್ಮ ಬೆರಳು, ಉಗುರುಗಳ ಸಹಾಯದಿಂದ ಮಗುವಿನ ಮೂಗನ್ನ ಸ್ವಚ್ಛ ಮಾಡಲು ಪ್ರಯತ್ನಿಸಬೇಡಿ. ಏಕೆಂದರೆ ಇದರಿಂದ ಮಗುವಿನ ಮೂಗಿನಿಂದ ರಕ್ತಸ್ರಾವ ಉಂಟಾಗುವ ಸಾಧ್ಯತೆಗಳು ಹೆಚ್ಚಾಗುತ್ತವೆ. ಹೀಗಾಗಿ ಉಗುರು, ಬೆರಳು ಅಥವಾ ಇನ್ನಿತರೇ ಯಾವುದೇ ವಸ್ತುಗಳನ್ನ ಮೂಗಿನೊಳಗೆ ಹಾಕಬೇಡಿ.


೫. ಟಿಶ್ಯೂ ಪೇಪರ್ ಉಂಡೆಗಳು


ಇದು ಕೂಡ ನಿಮಗೆ ನೋಡಲಿಕ್ಕೆ ಒಳ್ಳೆಯ ಉಪಾಯ ಎಂಬ ಭಾವನೆ ನೀಡಬಹುದು. ಆದರೆ ಅದು ಸುಳ್ಳು. ಟಿಶ್ಯೂ ಪೇಪರ್ ಅನ್ನು ಸುತ್ತಿ ಉಂಡೆ ಮಾಡಿ, ಅದರಿಂದ ಮೂಗಿನ ಲೋಳೆಯನ್ನ ಹೊರತೆಗೆಯಲು ಮುಂದಾಗಬೇಡಿ. ಈ ಟಿಶ್ಯೂ ಪೇಪರ್ ಉಂಡೆಗಳು ಮೂಗಿನ ಮೇಲ್ಭಾಗಕ್ಕೆ ಹೋಗಿ, ಹೊರಬರದೆ ಅಲ್ಲೇ ಸಿಲುಕಿ ಹಾಕಿಕೊಳ್ಳಬಹುದು.

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

Recently, we launched a baby-safe, natural and toxin-free floor cleaner. Recommended by moms and doctors all over India, this floor-cleaner liquid gets rid of germs and stains without adding harmful toxins to the floor. Click here to buy it and let us know if you liked it.

Stay tuned for our future product launches - we plan to launch a range of homecare products that will keep your little explorer healthy, safe and happy!

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon