Link copied!
Sign in / Sign up
2
Shares

ಮೊಣಕಾಲಿನ ನೋವಿಗೆ ನೀವು ಮನೆಯಲ್ಲೇ ಬಳಸಬಹುದಾದ ಔಷಧಿಗಳು

ಮೊಣಕಾಲಿನ ನೋವು ಮೂಳೆಗಳ ಆಕಾರದಿಂದ ಉಂಟಾಗುವ ಅತಿ ಸಾಮಾನ್ಯ ತೊಂದರೆ. ಇದು ಮೊಣಕಾಲಿನ ಪಾಯಿಂಟ್, ಮಂಡಿ ಚಿಪ್ಪು, ಲಿಗಾಮೆಂಟ್ಸ್ ಮತ್ತು ಮೊಣಕಾಲಿನ ಕಾರ್ಟಿಲೇಜ್ ಅನ್ನು ಒಳಗೊಂಡಿರುತ್ತದೆ. ಮೊಣಕಾಲಿನ ನೋವು ಎಲ್ಲರಿಗೂ, ಯಾವುದೇ ವಯಸ್ಸಿನವರಲ್ಲೂ ಕಾಣಿಸಿಕೊಳ್ಳಬಹುದು. ನಿಮಗೆ ನಡೆಯಲು ಕಷ್ಟವಾಗುತ್ತಿದ್ದರೆ, ಕುಂಟುವಂತೆ ಆದರೆ, ಮೊಣಕಾಲು ಹಿಡಿದುಕೊಂಡಂತೆ ಆದರೆ, ಊದಿಕೊಳ್ಳುವುದು ಅಥವಾ ಕೆಂಪಗಾಗುವುದು ಅಥವಾ ನಿಮಗೆ ಕಾಲುಗಳನ್ನು ಚಾಚಲು ನೋವು ಆಗುತ್ತಿದೆ , ನಿಮಗೆ ಮೊಣಕಾಲು ನೋವಿನ ಸಮಸ್ಯೆ ಉಂಟಾಗಲಿದೆ ಎನ್ನಬಹುದು.

ಇಂತಹ ಮೊಣಕಾಲಿನ ನೋವನ್ನು ಹೋಗಲಾಡಿಸಲು ನೀವು ಮನೆಯಲ್ಲೇ ಏನೆಲ್ಲಾ ಮಾಡಬಹುದು ಎಂಬುದನ್ನು ನಾವು ನಿಮಗೆ ತಿಳಿಸುತ್ತೇವೆ ಓದಿ.

 

೧. ನಿಮ್ಮ ತೂಕದ ಬಗ್ಗೆ ಗಮನವಿಡಿ

ಮೊಣಕಾಲು ನೋವು ಹೆಚ್ಚಾಗಲು ನಿಮ್ಮ ದೇಹದ ಹೆಚ್ಚು ತೂಕವು ತುಂಬಾ ದೊಡ್ಡ ಸಹಾಯ ಮಾಡಬಹುದು. ಒಂದು ವೇಳೆ ನೀವು ಸ್ಥೂಲಕಾಯ ಅಥವಾ ಬೇಕಿದ್ದಕ್ಕಿಂತ ಹೆಚ್ಚು ತೂಕ ಹೊಂದಿದ್ದರೆ, ನಿಮಗೆ ಮೊಣಕಾಲು ನೋವು ಉಂಟಾಗುವ ಸಾಧ್ಯತೆಗಳು ಕೂಡ ಹೆಚ್ಚು. ಹೀಗಾಗಿ ಮೊಣಕಾಲಿನ ನೋವನ್ನು ಕಡಿಮೆ ಮಾಡಿಕೊಳ್ಳಲು ಅತ್ಯಂತ ಸಿಂಪಲ್ ವಿಧಾನವೆಂದರೆ ತೂಕ ಕಡಿಮೆ ಮಾಡಿಕೊಳ್ಳುವುದು.

 

೨. ವಿಶ್ರಾಂತಿ ಪಡೆದುಕೊಳ್ಳಿ

ನಿಮಗೆ ಮೊಣಕಾಲು ನೋವು ಉಂಟಾದಾಗ ನೀವು ಮನೆಯಲ್ಲೇ ರೆಸ್ಟ್ ಮಾಡಿ ಆರಾಮ ಪಡೆದುಕೊಳ್ಳುವುದು ಬಹಳಾನೇ ಅವಶ್ಯಕ. ಹೀಗೆ ವಿಶ್ರಾಂತಿಸುವುದರಿಂದ ನಿಮ್ಮ ಮೊಣಕಾಲಿನ ಮೇಲಿನ ಒತ್ತಡ ಕಡಿಮೆ ಆಗುತ್ತದೆ ಮತ್ತು ನಿಮ್ಮ ನೋವು ಗಣನೀಯವಾಗಿ ಕಡಿಮೆ ಆಗುತ್ತದೆ. ಆಳವಾದ ಉಸಿರು ತೆಗೆದುಕೊಳ್ಳುವುದರಿಂದ ಅಥವಾ ಧ್ಯಾನ ಮಾಡುವುದರ ಮೂಲಕ ಆರಾಮ ಪಡೆದುಕೊಳ್ಳಬಹುದು.

 

೩. ಸಾಕಾಗುವಷ್ಟು ನಿದ್ದೆ ಮಾಡಿ

ನೀವು ಮೊಣಕಾಲಿನ ನೋವಿಗೆ ಮನೆಮದ್ದುಗಳನ್ನ ಶುರು ಮಾಡಿದ್ದರೆ, ನೀವು ರಾತ್ರಿ ಹೊತ್ತು ಚೆನ್ನಾಗಿ ಮಲಗುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಹೌದು, ನಿಮಗೆ ನೋವಿನಿಂದ ಮಲಗಲು ಸ್ವಲ್ಪ ಕಷ್ಟ ಆಗಬಹುದು, ಆದರೆ ನೀವು ನಿದ್ರಾಹೀನತೆಯನ್ನು ದೂರ ಮಾಡಬೇಕು. ಹೆಚ್ಚು ಕೆಲಸ ಮಾಡುವುದನ್ನು ಮತ್ತು ಹೆಚ್ಚು ಒತ್ತಡವನ್ನು ಮೈ ಮೇಲೆ ಹಾಕಿಕೊಳ್ಳುವುದನ್ನು ನಿಲ್ಲಿಸಬೇಕು.

 

೪. ಕಾವು ಅಥವಾ ತಂಡಿಯನ್ನು ಉಪಯೋಗಿಸಿಕೊಳ್ಳಿ

ಬಹಳಷ್ಟು ಜನರಿಗೆ ಬಿಸಿ ಕಾವು ಅಥವಾ ಐಸ್ ತಂಡಿಯನ್ನು ನೀಡಿದರೆ ಊತ ಮತ್ತು ನೋವು ಕಡಿಮೆ ಆಗುತ್ತದೆ. ಅಲ್ಲದೆ ಇದರಿಂದ ಮೊಣಕಾಲು ಹಿಡಿದುಕೊಂಡಿರುವುದು ಕೂಡ ಬಿಟ್ಟುಕೊಳ್ಳುತ್ತದೆ. ನೀವು ಮೊಣಕಾಲಿನ ಮೇಲೆ ಬಿಸಿಯಾದ ಟವೆಲ್ ಅಥವಾ ಐಸ್ ಪ್ಯಾಕ್ ಅನ್ನು ಇಟ್ಟುಕೊಳ್ಳುವ ಮೂಲಕ ನೋವನ್ನು ಕಡಿಮೆ ಮಾಡಿಕೊಳ್ಳಬಹುದು. ಇದರೊಂದಿಗೆ ನೀವು ಮಲಗುವ ಮುನ್ನ ಇನ್ನೊಮ್ಮೆ ಬಿಸಿ ನೀರಿನ ಸ್ನಾನ ಮಾಡಿ ಮಲಗಬಹುದು.

 

೫. ಅರಿಶಿನ

ನೋವು ನಿವಾರಣೆಗೆ ಅರಿಶಿನ ಹೆಸರುವಾಸಿ. ಅರಿಶಿನವನ್ನು ಜಾಯಿಂಟ್ಸ್ ನೋವು, ತೆರೆಚಿದ ಗಾಯಗಳು, ಸೆಡೆತಗಳು ಮತ್ತು ಉಳುಕುಗಳಿಗೆ ನೀಡುವ ಔಷಧಿಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಹೀಗಾಗಿ ನೀವು ಮನೆಯಲ್ಲಿ ಮಾಡುವ ಆಹಾರಕ್ಕೆ ಅರಿಶಿನವನ್ನು ಹೆಚ್ಚು ಬಳಸಿ, ಅದರ ಉಪಯೋಗಗಳನ್ನ ಪಡೆದುಕೊಳ್ಳಬೇಕು.

 

೬. ಶುಂಠಿ

ಪ್ರತಿಯೊಂದು ಭಾರತೀಯ ಅಡುಗೆ ಮನೆಯಲ್ಲಿ ಇರಲೇಬೇಕಾದ ವಸ್ತು ಎಂದರೆ ಅದು ಶುಂಠಿ. ಶುಂಠಿಯನ್ನು ಬಹಳಷ್ಟು ವರ್ಷಗಳಿಂದ ನೋವು ನಿವಾರಣೆಗೆ ಬಳಸಲಾಗಿದೆ. ಹೀಗಾಗಿ ಇದು ಕಡ್ಡಾಯವಾಗಿ ನಿಮ್ಮ ಆಹಾರದಲ್ಲಿ ಇರಲೇಬೇಕಾದ ವಸ್ತು. ನೀವು ಪ್ರತಿದಿನ ಜಿಂಜರ್ ಟೀ (ಶುಂಠಿ ಟೀ) ಅನ್ನು ಮಾಡಿಕೊಂಡು ಕುಡಿಯಬಹುದು ಅಥವಾ ಜೇಜ್ಜಿಕೊಂಡ ಶುಂಠಿಯನ್ನು ನೋವಾದ ಜಾಗಗಳ ಮೇಲೆ ಹಚ್ಚಿಕೊಳ್ಳಬಹುದು.

 

೭. ಸರಿಯಾದ ಶೂಗಳನ್ನ ಬಳಸಿ

ಒಂದು ವೇಳೆ ನಿಮಗೆ ದೈಹಿಕ ಕಸರತ್ತು ಮಾಡುವ ಹವ್ಯಾಸವಿದ್ದರೆ, ನೀವು ಸೂಕ್ತವಾದ ಶೂಗಳನ್ನ ಧರಿಸಿ ಮಾಡುವುದು ತುಂಬಾನೇ ಮುಖ್ಯ. ಕಚೇರಿಗೆ ಹೋಗುವಾಗ ಹೀಲ್ಸ್ ಚಪ್ಪಲಿ ಬಳಸಬೇಡಿ. ಬದಲಿಗೆ ನೀವು ನಿಮ್ಮ ಕಾಲಿಗೆ ಸೂಕ್ತವಾಗುವ, ನೋವನ್ನು ಕಡಿಮೆ ಮಾಡುವ ವಿನ್ಯಾಸ ಹೊಂದಿರುವ ಶೂಗಳನ್ನು ಧರಿಸಬೇಕು.

 

೮. ಮಲಗುವಾಗ ತಲೆದಿಂಬನ್ನು ಬಳಸಿ

ಮಲಗುವಾಗ ನೀವು ಇನ್ನೊಂದು ತಲೆದಿಂಬನ್ನು ಜೊತೆಗಿಟ್ಟುಕೊಳ್ಳಿ. ಈ ದಿಂಬನ್ನು ಮಲಗುವಾಗ ನಿಮ್ಮ ಮೊಣಕಾಲುಗಳ ಮಧ್ಯೆದಲ್ಲಿ ಇಟ್ಟುಕೊಳ್ಳಿ. ತಲೆದಿಂಬು ಕೇವಲ ಬೆಣ್ಣಿಗಷ್ಟೇ ಅಲ್ಲದೆ, ಮೊಣಕಾಲು ನೋವಿಗೂ ಸಹಾಯ ಮಾಡುವಂತದ್ದು. ನೀವು TV ನೋಡುವಾಗಲೇ ಆಗಲಿ ಅಥವಾ ಪುಸ್ತಕಗಳನ್ನ ಓದುವಾಗಲೇ ಆಗಲಿ ತಲೆದಿಂಬನ್ನು ನಿಮ್ಮ ಮೊಣಕಾಲ ಕೆಳಗೆ ಇಟ್ಟುಕೊಳ್ಳಿ.

 

೯. ನಿಮ್ಮ ವೈದ್ಯರೊಡನೆ ಮಾತಾಡಿ

ಮೊಣಕಾಲು ನೋವು ತೀವ್ರವಾದದ್ದು ಅಥವಾ ಗಂಭೀರ ಸ್ವರೂಪದ್ದು ಆಗಿರದಿದ್ದರೆ, ಮನೆಮದ್ದುಗಳು ಪರಿಣಾಮಕಾರಿ ಆಗುತ್ತವೆ. ಆದರೆ ನಿಮಗೆ ಅತೀವ ನೋವಾಗುತ್ತಿದ್ದರೆ ಮತ್ತು ಅದು ಉಂಟು ಮಾಡುವ ಅನೇಕ ಅಂಶಗಳಿಂದ ನಿಮ್ಮ ಜೀವನದ ಮೇಲೆ ಅಡ್ಡ ಪರಿಣಾಮ ಉಂಟಾಗುತ್ತಿದ್ದರೆ, ನೀವು ವೈದ್ಯರನ್ನ ಭೇಟಿ ಮಾಡಿ ವೈದ್ಯಕೀಯ ಸಲಹೆಯನ್ನು ಪಡೆದುಕೊಳ್ಳಬೇಕು.

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

We have a great opportunity for you. You can EARN up to Rs 10,000/- every month right in the comfort of your own HOME. Sounds interesting? Fill in this form and we will call you.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon