Link copied!
Sign in / Sign up
11
Shares

ಮೊಳಕೆಗಳ ೨೫ ಅರೋಗ್ಯ ಲಾಭಗಳು (25 Health Benefits of Sprouts in Kannada)

ನೀವು ಯಾವುದೇ ರೋಗದಿಂದ ಬಳಲುತ್ತಿಲ್ಲ ಎನ್ನುವುದರ ಅರ್ಥ ನೀವು ಆರೋಗ್ಯದ ಉತ್ತುಂಗದಲ್ಲಿದ್ದೀರಿ ಎಂದರ್ಥವಲ್ಲ. ಆರೋಗ್ಯಕರ ದೇಹ ಆರೋಗ್ಯಕರ ಆಹಾರ ಮತ್ತು ಒಳ್ಳೆಯ ಆಯ್ಕೆಗಳ ಮೇಲೆ ಅವಲಂಬಿತವಾಗಿರುತ್ತದೆ. ಮೊಳಕೆ ಕಾಳು - ಪೌಷ್ಟಿಕತೆಯ ಪವರ್-ಹೌಸ್ ಆರೋಗ್ಯಕರ ಆಹಾರಕ್ಕೆ ಅದ್ಭುತ ಸೇರ್ಪಡೆ. ಮೊಳಕೆಗಳ ಲಾಭಗಳೆಂದರೆ ಉತ್ತಮ ದೃಷ್ಟಿ, ಉರಿಯೂತ ಕಡಿಮೆಗೊಳಿಸುವುದು, ಬಲಿಷ್ಠ ಕೂದಲು, ಆರೋಗ್ಯಕರ ಚರ್ಮ, ಆರೋಗ್ಯಕರ ಹೃದಯ ರಕ್ತನಾಳ, ಶುದ್ಧ ರಕ್ತ, ನಿರ್ವೀಷೀಗೊಳಿಸಿರುವ ದೇಹ, ಇತ್ಯಾದಿ. ಪ್ರಖ್ಯಾತ ಡೈಟಿಷಿಯನ್ ಗಳು ಮೊಳಕೆಗಳ ಪೌಷ್ಟಿಕತೆ ಮತ್ತು ಕಚ್ಚಾ ಮೊಳಕೆಗಳ ಲಾಭಗಳ ಬಗ್ಗೆ ಹೊಗಳುವುದನ್ನು ತಡೆಯಲಾರರು. ಅದಕ್ಕೆ ಕಾರಣ ಇಲ್ಲಿ ತಿಳಿದುಕೊಳ್ಳಿ. 

ಪರಿವಿಡಿ: 

೧. ಮೊಳಕೆಗಳು ಎಂದರೇನು? (What are sprouts? in Kannada)

೨. ಮೊಳಕೆಗಳ ಪೌಷ್ಟಿಕ ಮೌಲ್ಯ (Nutritional Value of Sprouts in Kannada)

೩. ಪ್ರತಿನಿತ್ಯ ಮೊಳಕೆಗಳನ್ನು ಸೇವಿಸುವುದರಿಂದ ಆಗುವ ಲಾಭಗಳು (Benefits of Eating Sprouts daily in Kannada)

೪. ಮೊಳಕೆಗಳ ಅಡ್ಡಪರಿಣಾಮಗಳು (Side Effects of Sprouts in Kannada)

೧. ಮೊಳಕೆಗಳು ಎಂದರೇನು? (What are sprouts? in Kannada)

ಮೊಳಕೆಗಳು ಎಂದರೆ ಕುಡಿಯೊಡೆದ ಧಾನ್ಯ. ಇದನ್ನು ಕಚ್ಚಾ ರೂಪದಲ್ಲಿ ಅಥವಾ ಬೇಯಿಸಿದ ರೂಪದಲ್ಲಿ ಸೇವಿಸಬಹುದು. ಮೊಳಕೆಗಳನ್ನು ಗರ್ಭಾವಸ್ಥೆಯ ಅತ್ಯದ್ಭುತ ಆಹಾರ ಎಂದು ಪರಿಗಣಿಸಲಾಗುತ್ತದೆ. ಅದಕ್ಕೆ ಕಾರಣ ಈ ಕಾಳುಗಳಿಂದ ಶುದ್ಧಗೊಳ್ಳುವ ರಕ್ತ ಮತ್ತು ನಿರ್ವೀಷೀಗೊಂಡಿರುವ ದೇಹ. ನ್ಯಾಚುರೋಪಾತ್ ಗಳ ಅನುಸಾರ ವಿವಿಧ ಬಗೆಯ ಮೊಳಕೆಗಳು ವಿವಿಧ ರೀತಿಯ ಅರೋಗ್ಯ ತೊಂದರೆಗಳನ್ನು ನಿವಾರಿಸುವಲ್ಲಿ ಸಹಾಯ ಮಾಡುತ್ತವೆ. ಮೆಂತೆ ಕಾಳು, ಬೇಳೆ, ಬ್ರುಸ್ಸೆಲ್ಸ್ ಮೊಳಕೆ ಕಾಳು ಮತ್ತು ಹೆಸರು ಕಾಳಿನ ಮೊಳಕೆ ನಿಮ್ಮ ದೇಹಕ್ಕೆ ವಿವಿಧ ರೀತಿಯಲ್ಲಿ ಉಪಯೋಗಗಳನ್ನುಂಟು ಮಾಡುತ್ತದೆ. 

೨. ಮೊಳಕೆಗಳ ಪೌಷ್ಟಿಕ ಮೌಲ್ಯ (Nutritional Value of Sprouts in Kannada):

ಮೊಳಕೆಗಳು ವಿಟಮಿನ್ ಎ, ಬಿ, ಸಿ, ಈ, ಕೆ, ಬಯೊಟಿನ್, ಸೆಲೆನಿಯಮ್, ಪೊಟ್ಯಾಸಿಯಂ, ಐರನ್, ಆಂಟಿಆಕ್ಸಿಡೆಂಟ್ಸ್, ಫಿಟೊಕೆಮಿಕಲ್ಸ್, ಪ್ರೋಟೀನ್ಮ್ ಬಿಓಫ್ಲ್ಯಾವೊನೊಯ್ಡ್, ಕೆಮೋ ಪ್ರೊಟೆಕ್ಟಂಟ್ಸ್, ಫೋಲಿಕ್ ಆಮ್ಲ, ಜಿಂಕ್, ನಿಯಾಸಿನ್, ಕಾಪರ್, ಮೆಗ್ನೀಷಿಯಂ, ಮ್ಯಾಂಗನೀಸ್, ಕ್ಯಾಲ್ಸಿಯಂ, ರಿಬೋಫ್ಲಾವಿನ್ ಇತ್ಯಾದಿಗಳನ್ನು ಸಮೃದ್ಧವಾಗಿ ಹೊಂದಿದೆ. 

[Back To Top]

೩. ಪ್ರತಿನಿತ್ಯ ಮೊಳಕೆಗಳನ್ನು ಸೇವಿಸುವುದರಿಂದ ಆಗುವ ಲಾಭಗಳು (Benefits of Eating Sprouts daily in Kannada):

೧. ಕೂದಲ ಬೆಳವಣಿಗೆಯನ್ನು ಉತ್ತೇಜಿಸುತ್ತದೆ:

ಬಲಿಷ್ಠವಾದ ಮತ್ತು ಆರೋಗ್ಯಕರ ಕೂದಲು ಗರ್ಭಾವಸ್ಥೆಯಲ್ಲಿ ಮೊಳಕೆಗಳನ್ನು ಪ್ರತಿನಿತ್ಯ ಸೇವಿಸುವುದರಿಂದಾಗುವ ಅರೋಗ್ಯ ಪ್ರಯೋಜನಗಳಲ್ಲಿ ಒಂದು. ಮೊಳಕೆಗಳು ನಿಮ್ಮ ಕೂದಲನ್ನು ದುರ್ಬಲಗೊಳಿಸುವ ಫ್ರೀ ರಾಡಿಕಲ್ಸ್ ವಿರುದ್ಧ ಹೋರಾಡುತ್ತವೆ.  ಮೊಳಕೆಗಳಲ್ಲಿ ಪ್ರೋಟೀನ್ ಇರುವುದರಿಂದ ಅದು ನಿಮ್ಮ ಕೂದಲಿನ ಹೊಸ ಎಳೆಗಳ ರಚನೆಗೆ ಸಹಾಕಾರಿಯಾಗಿ, ನಿಮ್ಮ ಕೂದಲು ತುಳುವಾಗುವುದು, ಅಲೋಫೇಶಿಯ, ಇತ್ಯಾದಿ ರೋಗದಿಂದ ಬಳಲುವುದನ್ನು ತಡೆಗಟ್ಟುತ್ತದೆ. 

೨. ನೆತ್ತಿಯಲ್ಲಾಗುವ ರಕ್ತ ಸಂಚಲನವನ್ನು ಸುಧಾರಿಸುತ್ತದೆ: 

ಮೊಳಕೆಗಳನ್ನು ಪ್ರತಿನಿತ್ಯ ಸೇವಿಸುವುದರ ಇನ್ನೊಂದು ಪ್ರಯೋಜನ - ಇದರಿಂದ ನಿಮ್ಮ ನೆತ್ತಿಗೆ ಆಗುವ ರಕ್ತ ಸಂಚಲನ ಸುಧಾರಿಸುತ್ತದೆ. ಇದರಿಂದ ನಿಮ್ಮ ಕೂದಲಿಂಡ್ ಕಿರುಚೀಲಗಳು ಪ್ರಚೋದನೆಗೊಂಡು, ಕ್ಯಾಪಿಲರಿ ಗಳನ್ನು ರಿಪೇರಿ ಮಾಡಿ, ಹೊಸ ರಕ್ತನಾಳಗಳನ್ನು ರಚಿಸುತ್ತವೆ. 

೩. ಒಣಗಿರುವ ಬೇರು ಮತ್ತು ನೆತ್ತಿಯ ಮದ್ದು:

ಮೊಳಕೆಗಳಲ್ಲಿ ಹೆಚ್ಚಿನ ವಿಟಮಿನ್ ಇ ಮತ್ತು ವಿಟಮಿನ್ ಎ ಗಳಿವೆ. ಮೊಳಕೆ ಕಾಳುಗಳನ್ನು ತಿನ್ನುವುದರಿಂದ ನಿಮ್ಮ ಶುಷ್ಕಗೊಂಡಿರುವ ನೆತ್ತಿ, ದುರ್ಬಲ ಕೂದಲ ಬೇರು ಗಳನ್ನು ಚಿಕಿತ್ಸಿಸಬಹುದು. ವಿಟಮಿನ್ ಆ ಮತ್ತು ವಿಟಮಿನ್ ಈ ನಿಮ್ಮ ಕೂದಲಿಗೆ ಅಗತ್ಯವಿರುವ ಪೌಷ್ಟಿಕತೆಯನ್ನು ನೀಡುತ್ತದೆ. 

೪. ಆಂಟಿಆಕ್ಸಿಡೆಂಟ್ ಪಾವೆರ್ ಹೌಸ್: 

ಮೊಳಕೆ ಕಾಳುಗಳನ್ನು ಸೇವಿಸುವುದರಿಂದ ಆಗುವ ಹಲವಾರು ಪ್ರಯೋಜನಗಳಲ್ಲಿ, ಅದರಲ್ಲಿ ಉದಾರವಾಗಿ ಇರುವ ಆಂಟಿಆಕ್ಸಿಡೆಂಟ್ಸ್ ಮೊದಲೇ ಸ್ಥಾನವನ್ನು ಪಡೆಯುತ್ತದೆ. ಇದರಿಂದ ಫ್ರೀ ರಾಡಿಕಲ್ ಗಳ ವಿರುದ್ಧ ಹೋರಾಡಿ, ಮುಪ್ಪನ್ನು ತಡೆಗಟ್ಟಬಹುದು. ಇದು ನಿಮ್ಮ ಜೀವಕೋಶಗಳ ಜೇವಾವಧಿಯನ್ನು ಹೆಚ್ಚಿಸಿ, ನಿಮ್ಮ ಕೂದಲು ಬೆಳ್ಳಗಾಗವುದುನ್ನು ತಡೆಯುತ್ತದೆ. 

೫. ವಿಟಮಿನ್ ಕೆ ಯನ್ನು ಸಮೃದ್ಧವಾಗಿ ಹೊಂದಿದೆ: 

ವಿಟಮಿನ್ ಕೆ ಫ್ಯಾಟ್ ಸೊಲ್ಯುಬಲ್ ಪೌಷ್ಟಿಕಾಂಶವಾಗಿದ್ದು, ನಿಮ್ಮ ದೇಹದಲ್ಲಿ ಪ್ರೋಟೀನ್ ಉತ್ಪಾದಿಸಲು ಅಗತ್ಯವಾಗಿದೆ. ಇದು ನಿಮ್ಮ ಕೂದಲನ್ನು ಬೇರಿಂದ ಬಲಿಷ್ಠಗೊಳಿಸಿ, ಪ್ರೋಟೀನ್ ಉತ್ಪಾದನೆಯಿಂದಾಗಿ ನಿಮ್ಮ ಸ್ನಾಯುಗಳನ್ನು ಸಹ ಬಲಿಷ್ಠಗೊಳಿಸುತ್ತದೆ.

[Back To Top]

೬. ಐರನ್ ಸಮೃದ್ಧತೆ: 

ಮೊಳಕೆಗಾ ಎಲ್ಲಾ ಪ್ರಯೋಜನಗಳನ್ನು ಮೆಟ್ಟಿಹಾಕುವ ಒಂದು ಪ್ರಯೋಜನ ಎಂದರೆ ಅದರಲ್ಲಿರುವ ಸಮೃದ್ಧ ಐರನ್ ಅಂಶ. ಇದು ಅನಿಮಿಯಾವನ್ನು ತಡೆಗಟ್ಟಿ, ನಿಮ್ಮ ಜೀವಕೋಶಗಳಿಗೆ ಅಗತ್ಯವಿರುವ ಆಮ್ಲಜನಕವನ್ನು ನೀಡುತ್ತದೆ. 

೭. ಜಿಂಕ್ ನ ಅದ್ಭುತ ಮೂಲ

ಮಾನವನ ದೇಹ ಸೂಕ್ತವಾಗಿ ಕಾರ್ಯನಿವಹಿಸಲು, ಮಿತವಾದ ಜಿಂಕ್ ಅಂಶದ ಅಗತ್ಯವಿದೆ. ಇದು ಜೀವಕೋಶಗಳ ಪುನರುತ್ಪಾದನೆಯಲ್ಲಿ ಸಹಾಯ್ ಮಾಡಿ, ನಿಮ್ಮ ನೆತ್ತಿಯಲ್ಲಿ ಸೆಬಮ್ ಉತ್ಪಾದನೆಯನ್ನು  ಪ್ರೇರಿಪಿಸುತ್ತದೆ. ಇದರಿಂದಾಗಿ ನಿಮ್ಮ ಕೂದಲ ಬಳವಣಿಗೆ, ನಿಮ್ಮ ಉಗುರು ಮತ್ತು ಚರ್ಮದ ಆರೋಗ್ಯವನ್ನು ನಿಭಾಯಿಸಬಹುದು. 

೮. ತಲೆಹೊಟ್ಟಿನ ವಿರುದ್ಧ ಹೋರಾಡುತ್ತದೆ: 

ಮೊಳಕೆ ಕಾಳುಗಳು ಸೆಲೆನಿಯಮ್ ಅನ್ನು ಸಮೃದ್ಧವಾಗಿ ಹೊಂದಿದ್ದು, ಮಲಸ್ಸೇಜಿಯಾ ಎಂಬ ತಲೆಹೊಟ್ಟನ್ನು ಉಂಟು ಮಾಡುವ ಶಿಲಿಂಧ್ರವನ್ನು ಕೊಳ್ಳುವಲ್ಲಿ ಸಹಾಯ ಮಾಡುತ್ತದೆ. ಪ್ರತಿನಿತ್ಯ ಮೊಳಕೆ ಕಾಳುಗಳನ್ನು ಸೇವಿಸುವುದರಿಂದ ನಿಮ್ಮ ಈ ಬಗೆಯ ಶಿಲಿಂದ್ರಗಳನ್ನು ದೂರವಿಟ್ಟು, ತಲೆಹೊಟ್ಟನ್ನು ನಿವಾರಿಸುತ್ತದೆ. ಮೊಳಕೆ ಕಾಳುಗಳ ನೆವೆ ಉಂಟಾಗುವ ನೆತ್ತಿಯಿಂದ ಮುಕ್ತಿ ದೊರಕಿಸುತ್ತವೆ. ಕಚ್ಚಾ ಕಾಳುಗಳನ್ನು ಸೇವಿಸುವುದು ಬೇಯಿಸಿದ ಕಾಳುಗಳಿಗಿಂತ ಉತ್ತಮ. 

೯. ಒಮೇಗಾ ಆಮ್ಲದ ಸಮೃದ್ಧ ಮೂಲ

ಹೃದಯದ ಅರೋಗ್ಯ, ಕೂದಲು, ಚರ್ಮ ಮತ್ತು ಉಗುರಗಳ ಅರೋಗ್ಯಕ್ಕೆ ಮೊಳಕೆ ಕಾಳುಗಳಲ್ಲಿರುವ ಒಮೇಗಾ ೩ ಫ್ಯಾಟಿ ಆಸಿಡ್ ಗಳು ಅತ್ಯಗತ್ಯ. ಇವುಗಳು, ನಿಮ್ಮ ಶುಷ್ಕ ಕೂದಲನ್ನು ಹೊಳೆಯುವಂತೆ ಮಾಡಿ, ಕೂದಲಿನೆ ಸ್ಥಿಸ್ಥಾಪಕತ್ವವನ್ನು ಹೆಚ್ಚಿಸಿ, ಕೂದಲಿನ ಬಲಿಷ್ಠತೆಯನ್ನು ಎಚ್ಚ್ಚಿಸುತ್ತದೆ. ಒಮೇಗಾ ೩ ಫ್ಯಾಟಿ ಆಸಿಡ್ಸ್ ದೇಹದ ಟ್ರಿಗ್ಲ್ಯ್ವೇರೈಡ್ ಮಟ್ಟವನ್ನು ಕಡಿಮೆಗೊಳಿಸಿ, ನಿಮ್ಮ ರಕ್ತನಾಳಗಳು ಜಡಗೊಳ್ಳುವುದನ್ನು ನಿವಾರಿಸುತ್ತದೆ. 

೧೦.  ಹಾರ್ಮೋನ್ ಗಳ ಸಮತೋಲನವನ್ನು ಕಾಪಾಡುತ್ತದೆ: 

ಹಾರ್ಮೋನ್ ಗಳು ಅಸಮತೋಲನಗೊಂಡರೆ, ಅದರಿಂದ ತೂಕ ಹೆಚ್ಚುವುಸು, ಕೂದಲು ಉದುರುವುದು, ಶಿಂನಂತೆ ಉಂಟಾಗುವುದು ಆಗುತ್ತದೆ. ಮೊಳಕೆ ಕಾಳುಗಳನ್ನು ಪ್ರತಿನಿತ್ಯ ಸೇವಿಸುವುದರಿಂದ ನಿಮ್ಮ ದೇಹದ ಹಾರ್ಮೋನ್ ಗಳನ್ನೂ ಸಮತೋಲನಗೊಳಿಸುತ್ತದೆ. ಆರೋಗ್ಯಕರ ಮತ್ತು ಸುಖಕರ ಜೀವನಕ್ಕಾಗಿ ದಿನನಿತ್ಯ ತಿನಿದ್ಯಲ್ಲಿ ಮೊಳಕೆ ಕಾಳುಗಳನ್ನು ಸೇವಿಸಿರಿ. 

೧೧. ಆರೋಗ್ಯಕರ ಚರ್ಮಕ್ಕಾಗಿ: 

ವಿಟಮಿನ್ ಇ ಮೊಳಕೆ ಕಾಳುಗಳಲ್ಲಿ ಇದ್ದು, ಅದು ನಿಮ್ಮ ಚರ್ಮಕ್ಕೆ ಅಗತ್ಯವಿರುವ ಪೌಷ್ಟಿಕತೆಯನ್ನು ನೀಡುತ್ತದೆ ಮತ್ತು ಕಾಲಜನ್ ಉತ್ಪಾಧನೆಯನ್ನೂ ಪ್ರಚೋದಿಸುತ್ತದೆ.  ಕಾಲಜನ್ ನಿಮ್ಮ ಚರ್ಮ ಹೊಳೆಯುವಂತೆ ಮಾಡಿ, ನಿಮ್ಮ ಚರ್ಮವನ್ನು ಮೃದುವಾಗಿ, ಆರೋಗ್ಯಕರವಾಗಿಸುತ್ತದೆ. 

೧೨. ಬಯೊಟಿನ್ ಭಂಡಾರ

ಬಯೊಟಿನ್ ಅಗತ್ಯವಿರುವ ವಿಟಮಿನ್ ಗಳಲ್ಲಿ ಒಂದಾಗಿದ್ದು, ಅದು ನಿಮ್ಮ ದೇಹದಲ್ಲಿ ಉತ್ಪಾದನೆ ಆಗುವುದಿಲ್ಲ. ಇದು ನಿಮ್ಮ ಅತ್ಯುತ್ತಮ ಆರೋಗ್ಯಕೆ ಅತ್ಯಗತ್ಯ. ಬಯೊಟಿನ್ ಹೊಂದಿರುವ ಆಹಾರ ಸೇವಿಸುವುದರಿಂದ ನಿಮ್ಮ ದೇಹಕ್ಕೆ ಅಗತ್ಯವಿರುವ ಪೌಷ್ಟಕೀಯತೆ ನೀಡುತ್ತದೆ. ಮೊಳಕೆ ಕಾಳುಗಳು ಬಯೊಟಿನ್ ಭಂಡಾರವಾಗಿದ್ದು, ಅದು ಆರೋಗ್ಯಕರ ಕೂದಲು, ಉಗುರು ಮತ್ತು ಚರ್ಮವನ್ನು ಪ್ರಚೋದಿಸುತ್ತದೆ. 

೧೩. ಚರ್ಮದ ಕ್ಯಾನ್ಸರ್ ವಿರುದ್ಧ ಹೋರಾಡುತ್ತದೆ: 

ನಿಯಮಿತವಾಗಿ ಸೂರ್ಯನ ಹಾನಿಕಾರಕ ಕಿರಣಗಳಿಗೆ ಪ್ರಕಟಿಸಿರುವುದರಿಂದ ನಿಮ್ಮ ದೇಹದ ಫ್ರೀ ರಾಡಿಕಲ್ ಗಳಿಗೆ ಹಾನಿ ಉಂಟುಮಾಡಿ ಅವುಗಳನ್ನು ಚರ್ಮದ ಕ್ಯಾನ್ಸರ್ ಆಗಿ ಪರಿವರ್ತಿಸುತ್ತದೆ. ಮೊಳಕೆಗಳು ನಿಮ್ಮ ಚರ್ಮವನ್ನು ಈ ತರಹದ ಹಾನಿಯಿಂದ  ಸಂರಕ್ಷಿಸುತ್ತದೆ.ಹಾಗಾಗಿ ಮೊಳಕೆ ಕಾಳುಗಳನ್ನು ಪ್ರತಿದಿನ ನಿಮ್ಮ ಸೇವಿಸುವುದು ಸೂಕ್ತ.

೧೪. ಜೀವಕೋಶಗಳ ಪುನರುತ್ಪಾದನೆ: ಮೊಳಕೆ ಕಾಳುಗಳು ಜೀವಕೋಶಗಳ ಪುನರುತ್ಪಾದನೆಯ ಮೂಲಕ ನಿಮ್ಮ ದೇಹಕ್ಕೆ ಯಾವುದೇ ರೀತಿಯ ಹಾನಿಯುಂಟಾಗಿರುವುದನ್ನು ಗುಣಪಡಿಸುವಲ್ಲಿ ಸಹಾಯ ಮಾಡುತ್ತದೆ. ಪ್ರತಿನಿತ್ಯ ಮೊಳಕೆಗಳನ್ನು ಸೇವಿಸುವುದರಿಂದ ನಿಮ್ಮ ಚರ್ಮ ಕಳೆಯನ್ನು ಪಡೆದುಕೊಳ್ಳುತ್ತದೆ. ಹಾನಿಗೊಳಗಾಗಿರುವ ಜೀವಕೋಶಗಳು ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ. 

೧೫. ವಿಟಮಿನ್ ಬಿ ಪವರ್ ಹೌಸ್:

ನಿಮ್ಮ ದೇಹದ ಜೀರ್ಣಕ್ರಿಯೆಗೆ, ಜೀವಕೋಶಗಳ ರಚನೆಗೆ, ನಿಮ್ಮ ಕೂದಲು ಮತ್ತು ಚರ್ಮದ ಆರೋಗ್ಯಕ್ಕೆ, ವಿಟಮಿನ್ ಅಗತ್ಯವಿರುವ ಪೌಷ್ಟಿಕಾಂಶ. ಮೊಳಕೆಗಳು ವಿಟಮಿನ್ ಬಿ ಹೊಂದಿದ್ದು, ಅದು ನಿಮ್ಮ ದಿನನಿತ್ಯದ ಆಹಾರದಲ್ಲಿ ಒಂದಾದರೆ ನಿಮಗೆ ಒಳಿತನ್ನು ಮಾಡುತ್ತದೆ. ಮೊಳಕೆ ಕಾಳುಗಳು, ವಿಶೇಷವಾಗಿ, ಹೆಸರು ಕಾಳಿನ ಮೊಳಕೆ, ನಿಮ್ಮ ದೇಹಕ್ಕೆ ಅದ್ಭುತವಾದ ರೀತಿಯಲ್ಲಿ ಪ್ರಯೋಜನಕಾರಿ. 

೧೬. ಉರಿಯೂತದ ವಿರೋಧಿ ಪರಿಣಾಮ:

ಮೊಳಕೆಗಳು ನಿಮ್ಮ ದೇಹದಲ್ಲಿ ಉಂಟಾಗುವ ಉರಿಯೂತವನ್ನು ಕಡಿಮೆಗೊಳಿಸುತ್ತದೆ. ಇದರ ಮೂಲಕ ನಿಮ್ಮ ಅರೋಗ್ಯ ಸ್ಟಿಸ್ಥಿಯನ್ನು ವರ್ಧಿಸುತ್ತದೆ. ಉರಿಯೂತ ಮೊಡವೆ, ಸೋರಿಯಾಸಿಸ್, ಸ್ಕೇಲಿಂಗ್, ಮೂತ್ರಪಿಂಡದ ತೊಂದರೆ, ಎರಿಥಿಮಾಟೂರ್ಸ್ ರೋಗಗಳು, ರೋಗನಿರೋಧಕ ಶಕ್ತಿ-ಸಂಬಂಧಿತ ರೋಗಗಳಂತಹ, ಇತ್ಯಾದಿ ರೋಗಗಳಿಗೆ ಕಾರಣವಾಗಬಹುದು. ಈ ರೀತಿಯ ರೋಗಗಳನ್ನು ತಡೆಗಟ್ಟಲು ಮತ್ತು ಅದರಿಂದ ಉಂಟಾಗುವ ಉರಿಯೂತವನ್ನು ತಡೆಗಟ್ಟಲು ಪ್ರತಿನಿತ್ಯ ಮೊಳಕೆ ಕಾಳುಗಳನ್ನು ಸೇವಿಸುವುದು ಸೂಕ್ತ. 

೧೭. ದೇಹದ ನಂಜನ್ನು ತೊಡೆದುಹಾಕುತ್ತದೆ: 

ಸಿಲಿಕಾ, ಮೊಳಕೆ ಕಾಳುಗಳಲ್ಲಿ ಕಂಡುಬರುವ ಒಂದು ಪೌಷ್ಟಿಕಾಂಶವಾಗಿದ್ದು, ಅದು ನಿಮ್ಮ ದೇಹದಲ್ಲಿ ಮತ್ತು ರಕ್ತದಲ್ಲಿ ಇರುವ ರೋಗಗಳನ್ನು ಉಂಟು ಮಾಡಬಹುದಾದ ನಂಜನ್ನು ತೊಡೆದುಹಾಕುತ್ತದೆ. ಇದರಿಂದ ನಿಮ್ಮ ದೇಹ ಚೈತನ್ಯಭರಿತವಾಗುತ್ತದೆ. 

೧೮. ಮುಪ್ಪಿನ ಸೂಚ್ಯಂಕಗಳ ವಿರುದ್ಧದ ಪರಿಣಾಮ:

ಮೊಳಕೆ ಕಾಳುಗಳು ವಿಟಮಿನ್ ಬಿ, ಸಿ, ಇ ಮತ್ತು ಬಯೊಟಿನ್ ನ ಖಜಾನೆಯಾಗಿದ್ದು, ಕೊಲ್ಲಾಜೆನ್ ಉತ್ಪಾದನೆಯ ಮೂಲಕ ನಿಮ್ಮ ದೇಹಕ್ಕೆ ಮುಪ್ಪಡರದಂತೆ ಕಾಪಾಡುತ್ತದೆ. ಅದು ಕೇವಲ ಯೌವ್ವನಭರಿತ ಚರ್ಮವನ್ನು ನೀಡುವುದಷ್ಟೇ ಅಲ್ಲದೇ ನಿಮ್ಮ ದೇಹದ ಒಳಗಿನಿಂದ ಅಂಡಾಂಶಗಳನ್ನು ರಚಿಸುತ್ತವೆ. 

೧೯. ಡಿಎನ್ಎ ಪುನರ್ರಚನೆಯನ್ನು ತಡೆಗಟ್ಟುತ್ತದೆ:

ದೇಹದಲ್ಲಿ ಫ್ರೀ ರಾಡಿಕಲ್ಸ್ ಪರಿಸರ ಮಾಲಿನ್ಯ ಮತ್ತು ಹಾನಿಕಾರಕ ಸೂರ್ಯನ ಕಿರಣಗಳಿಂದ ಉಂಟಾಗುತ್ತದೆ. ಈ ಫ್ರೀ ರಾಡಿಕಲ್ಸ್ ನ ಕೆಟ್ಟ ಪರಿಣಾಮವೆಂದರೆ ಅದು ನಿಮ್ಮ ದೇಹದ ಡಿಎನ್ಎ ಯನ್ನು ಪುನರ್ರಚಿಸುತ್ತದೆ. ಪ್ರತಿನಿತ್ಯ ಮೊಳಕೆ ಕಾಳುಗಳನ್ನು ಸೇವಿಸುವುದರಿಂದ ಫ್ರೀ ರಾಡಿಕಲ್ಸ್ ನ ಈ ಪರಿಣಾಮವನ್ನು ತಪ್ಪಿಸಬಹುದು. 

೨೦. ಗರ್ಭಾವಸ್ಥೆಯಲ್ಲಿ ಆರೋಗ್ಯವನ್ನು ಕಾಪಾಡುತ್ತದೆ:

ಗರ್ಭಾವಸ್ಥೆಯಲ್ಲಿ ಮೊಳಕೆ ಕಾಳುಗಳನ್ನು ಸೇವಿಸುವುದರಿಂದ ಹಲವಾರು ಅರೋಗ್ಯ ಲಾಭಗಳಿವೆ. ಮಗುವಿನ ಸ್ನಾಯುಗಳ ಬೆಳವಣಿಗೆಗೆ ಪ್ರೋಟೀನ್ಸ್, ರೋಗನಿರೋಧಕ ಶಕ್ತಿಯನ್ನು ವರ್ಧಿಸಲು ವಿಟಮಿನ್ ಸಿ, ಭ್ರೂಣದ ಅರಿವಿನ ಬೆಳವಣಿಗೆಗೆ ಐರನ್, ಕೂದಲುದುರುವಿಕೆಯನ್ನು ತಡೆಗಟ್ಟಲು ಬಯೊಟಿನ್, ಮಲಬದ್ಧತೆಯನ್ನು ತಡೆಗಟ್ಟಲು ವಿಟಮಿನ್ ಬಿ, ಚರ್ಮದ ಮೆಲಸ್ಮ ತಡೆಗಟ್ಟಲು ವಿಟಮಿನ್ ಬಿ - ಈ ರೀತಿಯ ಗರ್ಭಿಣಿಯ ದೇಹಕ್ಕೆ ಅಗತ್ಯವಿರುವ ಎಲ್ಲವನ್ನೂ ಮೊಳಕೆ ಕಾಳುಗಳು ನೀಡುತ್ತವೆ. 

೨೧. ಜೀರ್ಣಕ್ರಿಯೆಯಲ್ಲಿ ಸಹಾಯ ಮಾಡುತ್ತದೆ:

ಮೊಳಕೆ ಕಾಳುಗಳು ಕರಗುವ ಮತ್ತು ಕರಗದೆ ಇರುವ ಡೈಯೆಟರಿ ಫೈಬರ್ ಗಳನ್ನು ಹೊಂದಿದ್ದು, ನಿಮ್ಮ ದೇಹದ ಜೀರ್ಣಕ್ರಿಯೆಯಲ್ಲಿ ಮತ್ತು ಮಲಬದ್ಧತೆಯನ್ನು ತಡೆಗಟ್ಟುವಲ್ಲಿ ಸಹಾಯ ಮಾಡುತ್ತದೆ. 

೨೨. ಉತ್ತಮ ದೃಷ್ಟಿಗಾಗಿ: 

ಮೊಳಕೆ ಕಾಳುಗಳು ವಿಟಮಿನ್ ಎ ಹೊಂದಿದ್ದು, ಅದು ನೈಟ್ ಬ್ಲಾಯ್ನ್ಡ್-ನೆಸ್ ತಡೆಗಟ್ಟಲು, ದೃಷ್ಟಯನ್ನು ಸರಿಪಡಿಸಲು, ಮತ್ತು ದೃಷ್ಟಿಯನ್ನು ಉತ್ತಮಗೊಳಿಸಲು ಸಹಾಯ ಮಾಡುತ್ತದೆ. ಉತ್ತಮ ಫಲಿತಾಂಶಕ್ಕಾಗಿ ಕಚ್ಚಾ ಮೊಳಕೆಗಳನ್ನು ಸೇವಿಸುವುದು ಒಳಿತು. 

೨೩. ಜನನಾಂಗ ನಿಮಿರುವಿಕೆಯ ಸಮಸ್ಯೆಯನ್ನು ತಡೆಗಟ್ಟುತ್ತದೆ: 

ಮೊಳಕೆ ಕಾಳುಗಳು ರಕ್ತ ನಾಳಗಳ ರಚನೆಯಲ್ಲಿ ಪಾಲ್ಗೊಂಡು, ರಕ್ತ ಸಂಚಲನವನ್ನು ಹೆಚ್ಚಿಸುತ್ತದೆ. ಮೊಳಕೆ ಕಾಳುಗಳನ್ನು ಹೊಂದಿರುವ ಆಹಾರ ಪದ್ಧತಿಯಿಂದ ಆಧುನಿಕ ಜೀವನಶೈಲಿಯಿಂದ ಉಂಟಾಗಬಹುದಾದ ಒತ್ತಡವನ್ನು ತಡೆಗಟ್ಟಿ, ಜನನಾಂಗದ ನಿಮಿರುವಿಕೆಯ ಸಮಸ್ಯೆಯನ್ನು ತೊಡೆದುಹಾಕುತ್ತದೆ. 

೨೪. ತೂಕ ನಿಯಂತ್ರಿಸುತ್ತದೆ:

ಮೊಳಕೆ ಕಾಳುಗಳು ಹೆಚ್ಚಿನ ಪೌಷ್ಟಿಕಾಂಶಗಳನ್ನು ಹೊಂದಿದ್ದರೂ, ಕಡಿಮೆ ಕ್ಯಾಲೋರಿಗಳನ್ನು ಹೊಂದಿರುತ್ತದೆ. ಅಧಿಕ ಫೈಬರ್ ಗಳನ್ನು ಹೊಂದಿರುವ ಮೊಳಕೆ ಕಾಳುಗಳು ಹೆಚ್ಚಿನ ಸಮಯ ಹೊಟ್ಟೆ ತುಂಬಿರುವ ಭಾವ ನೀಡುತ್ತದೆ. ಹಾಗಾಗಿ, ಕಚ್ಚಾ ಮೊಳಕೆ ಕಾಳುಗಳನ್ನು ಸೇವಿಸುವುದರಿಂದ ತೂಕ ನಿಯಂತ್ರಿಸಬಹುದು. 

೨೫. ಅಸ್ತಮಾ ತಡೆಗಟ್ಟುತ್ತದೆ: 

ನಿತ್ಯದ ಆಹಾರದಲ್ಲಿ ಮೊಳಕೆ ಕಾಳುಗಳನ್ನು ಸೇವಿಸುವುದರಿಂದ ಅಸ್ತಮಾ ರೋಗವನ್ನು ತಡೆಗಟ್ಟಬಹುದು. ಅದರೊಂದಿಗೆ, ಮುಂದೆ ಬ್ಯಾಕ್ಟೀರಿಯಾ ಗಳಿಂದ ಸಂಭವಿಸಬಹುದಾದ ಶೀತವನ್ನೂ ತಡೆಗಟ್ಟುವಲ್ಲಿ ಸಹಾಯ ಮಾಡುತ್ತದೆ. 

[Back To Top]

೪. ಮೊಳಕೆಗಳ ಅಡ್ಡಪರಿಣಾಮಗಳು (Side Effects of Sprouts in Kannada):

ಮೊಳಕೆ ಕಾಳುಗಳು ಹೆಚ್ಚಿನ ಪೌಷ್ಟಿಕತೆಯನ್ನು ಹೊಂದಿದ್ದರೂ, ಮನ್ನೆಚ್ಚರಿಕೆ ವಹಿಸಿ ಅವುಗಳನ್ನು ಸೇವಿಸುವುದು ಸೂಕ್ತ. ಮೊಳಕೆ ಕಾಳುಗಳ ಕೆಲವು ಅಡ್ಡಪರಿಣಾಮಗಳು ಇಲ್ಲಿವೆ:

* ಸಾಲ್ಮೊನೆಲ್ಲ ಎನ್ನುವ ಇ-ಕೋಲಿ ಬ್ಯಾಕ್ಟೀರಿಯಾ ವನ್ನು ಮೊಳಕೆಗಳು ಹೊಂದಿರಬಹುದು. ಇದರಿಂದಾಗಿ ನೀವು ಸೇವಿಸುವ ಕಾಳುಗಳು ನಿಮ್ಮ ದೇಹದಲ್ಲಿ ವಿಷಾಹಾರವಾಗಬಹುದು. 

* IBS ರೋಗದಿಂದ ಬಳಲುತ್ತಿರುವವರಲ್ಲಿ ಮೊಳಕೆಗಳು ಹೊಟ್ಟೆಯ ಸ್ನಾಯುಗಳ ಸೆಳೆತವನ್ನು ಉಂಟು ಮಾಡಬಹುದು. 

* ಮೊಳಕೆಯಲ್ಲಿರುವ ಫೈಬರ್ ಅಂಶ ದೇಹದಲ್ಲಿ ಗ್ಯಾಸ್ ಗಳನ್ನು ಉಂಟು ಮಾಡಿ, ಗ್ಯಾಸ್ಟ್ರಿಕ್ ಗೆ ಕಾರಣವಾಗಬಹುದು, 

* ಕಳಪೆ ಮಟ್ಟದ ಮೊಳಕೆಗಳಿಂದ ಬೇಧಿ ಉಂಟಾಗಬಹುದು. 

[Back To Top]

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon