Link copied!
Sign in / Sign up
14
Shares

ಮೊಡವೆ ಇಂದ ಆದ ಸ್ಕಾರ್ಸ್ ಅನ್ನು ಸುಲಭವಾಗಿ ನಿವಾರಿಸಿಕೊಳ್ಳಲು ಸಲಹೆಗಳು!

ಮೊಡವೆ ಸಾಮಾನ್ಯವಾಗಿ ಎಲ್ಲಾ ವಯಸ್ಸಿನ ಅದರಲ್ಲೂ, ವಯಸ್ಕರಲ್ಲಿ, ಮತ್ತು ಹುಡುಗಿಯರಲ್ಲಿ ಕಾಣಿಸುವ ಸಮಸ್ಯೆ ಆಗಿದೆ. ಇದನ್ನು ಸರಿಯಾಗಿ ಗಮನಿಸದೆ ನಿರ್ಲಕ್ಷ್ಯ ಮಾಡಿದರೆ, ಮುಖದ ಮೇಲೆ ಮೊಡವೆಯ ಗುರುತುಗಳು, ಕಲೆಗಳು, ಸಣ್ಣ ಸಣ್ಣ ರಂಧ್ರಗಳು ಅಥವಾ ಸ್ಕಾರ್ಸ್ ಗಳು ಮುಖದ ಲಕ್ಷಣವನ್ನೇ ಬದಲಾಯಿಸಿಬಿಡುವುದು. ಇದು ಮೊಡವೆಯಿಂದ ನಿಮ್ಮ ತ್ವಚೆ ಹಾನಿಯಾಗಿರುವುದರ ಚಿಹ್ನೆಯಾಗಿದೆ. ಚಿಂತಿಸದಿರಿ ಇದಕ್ಕೆ ನೈಸರ್ಗಿಕವಾಗಿ ಪರಿಹಾರವಿದೆ, ಇದು ನಿಮ್ಮ ಸ್ಕಾರ್ಸ್ ಅನ್ನು ನಿಧಾನವಾಗಿ ಮಂಕಾಗುವಂತೆ ಮಾಡುತ್ತದೆ.

ರಾಸಾಯನಿಕ ಕ್ರೀಮ್ ಗಳನ್ನು ಬಳಸುವುದರಿಂದ ನಿಮ್ಮ ತ್ವಚೆ ಮತ್ತಷ್ಟು ಹಾನಿಯಾಗಬಹುದು. ಅದಕ್ಕೆ ನೈಸರ್ಗಿಕ ವಿಧಾನಗಳನ್ನು ಬಳಸಿ ಇವುಗಳಿಂದ ಮುಕ್ತಿ ಪಡೆಯಿರಿ. ಇವುಗಳನ್ನು ತಿಳಿಯಲು ಮುಂದೆ ಓದಿ. 

೧.ಲೋಗಸರ

ಇದರ ಉರಿಯೂತ ವಿರೋಧಿ, ಮತ್ತು ಬ್ಯಾಕ್ಟಿರಿಯ ವಿರೋಧಿ ಗುಣಗಳು ನಿಮ್ಮ ತ್ವಚೆಯಲ್ಲಿ ಆಗಿರುವ ಕಲೆಗಳನ್ನು ಮತ್ತು ಸ್ಕಾರ್ಸ್ ಅನ್ನು ನಿವಾರಣೆ ಮಾಡಿ, ತ್ವಚೆಯ ಹೊಳಪನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಲೋಗಸರದ ಲೋಳೆಯನ್ನು ತೆಗೆದು ನೇರವಾಗಿ ತ್ವಚೆಯ ಮೇಲೆ ಅನ್ವಯಿಸಿ, 30 ನಿಮಿಷಗಳ ಕಾಲ ಅದನ್ನು ಹಾಗೆಯೇ ಬಿಡಿ. ನಂತರ ಇದನ್ನ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ. ಹಚ್ಚಿದ ನಂತರ ಮಸಾಜ್ ಮಾಡಿ, ಇದರಿಂದ ತ್ವಚೆಯ ಮೇಲೆ ಇರುವ ಕಲ್ಮಶಗಳು ಮತ್ತು ವಿಷ ಅಂಶಗಳು ಕಡಿಮೆಯಾಗಲು ಸಹಾಯ ಮಾಡುತ್ತದೆ.

೨.ನಿಂಬೆಹಣ್ಣು

ನಿಂಬೆಹಣ್ಣನ್ನು ಹೊಳಪಿನ ಅಂಶ ಎಂದು ಕರೆಯುವರು. ಇದು ತ್ವಚೆಯ ಹೊಳಪನ್ನು ಹೆಚ್ಚಿಸುವ ಜೊತೆಗೆ, ಯಾವುದೇ ತರಹದ ಸ್ಕಾರ್ಸ್ ಮತ್ತು ಕಲೆಗಳನ್ನು ತೆಗೆಯುದರಲ್ಲಿ ನೆರವಾಗುತ್ತದೆ. ಇದಲ್ಲಿರುವ ವಿಟಮಿನ್ C collagen ಅನ್ನು ಮರುಸೃಷ್ಟಿಸಲು ಸಹಾಯ ಮಾಡುತ್ತದೆ.

ಮುಖ ತೊಳೆದುಕೊಂಡು, ಬಟ್ಟೆಯಿಂದ ಒರೆಸಿಕೊಂಡು, ನಿಂಬೆ ರಸವನ್ನು ನೇರವಾಗಿ ಮುಖದ ಮೇಲೆ ಹಚ್ಚಿ, 10 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ಇದನ್ನು ಹತ್ತಿ ಬಟ್ಟೆಯಿಂದ ಒರೆಸಿಕೊಳ್ಳಿ ಅಥವಾ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ.

ಇದಕ್ಕೆ ನೀವು ಜೇನುತುಪ್ಪವನ್ನು ಸೇರಿಸಿ ಅನ್ವಯಿಸಬಹುದು.

ಎಚ್ಚರಿಕೆ : ಇದನ್ನು ತ್ವಚೆಗೆ ಹಾಕಿಕೊಂಡು ಸೂರ್ಯನ ಕಿರಣಗಳ ಕೆಳಗೆ ಹೋಗಬೇಡಿ. ಇದರಿಂದ ನಿಮ್ಮ ಮುಖ ಸುಟ್ಟ ಕಲೆಗಳನ್ನು ಎದುರಿಸಬೇಕಾಗಬಹುದು.

೩.ಕೊಬ್ಬರಿ ಎಣ್ಣೆ

ಕೊಬ್ಬರಿ ಎಣ್ಣೆಯಲ್ಲಿ, ವಿಟಮಿನ್ E ಮತ್ತು ಫ್ಯಾಟಿ ಆಸಿಡ್ ಇರುವುದರಿಂದ ಇವು ಚರ್ಮದ ಸ್ನಾಯುಗಳನ್ನು ಮರು ಹೊಂದಿಸಲು ಮತ್ತು ಹೊಳಪನ್ನು ನೀಡಲು ಸಹಾಯ ಮಾಡುತ್ತವೆ.

ಕೊಬ್ಬರಿ ಎಣ್ಣೆಯನ್ನು ಬಿಸಿ ಮಾಡಿ(ಬೆಚ್ಚಗೆ ಇರಲಿ), ಅದನ್ನು ಚರ್ಮದಲ್ಲಿ ಕಲೆ ಅಥವಾ ಸ್ಕಾರ್ಸ್ ಆಗಿರುವ ಜಾಗಕ್ಕೆ ಹಚ್ಚಿರಿ. ಇದನ್ನು 10 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ.

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

Recently, we launched a baby-safe, natural and toxin-free floor cleaner. Recommended by moms and doctors all over India, this floor-cleaner liquid gets rid of germs and stains without adding harmful toxins to the floor. Click here to buy it and let us know if you liked it.

Stay tuned for our future product launches - we plan to launch a range of homecare products that will keep your little explorer healthy, safe and happy!

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon