Link copied!
Sign in / Sign up
7
Shares

ಮೊದಲ ರಾತ್ರಿ ಪಾಲಿಸುವ 3 ಸಾಮಾನ್ಯ ಸಂಪ್ರದಾಯಗಳು ಮತ್ತು ಅವುಗಳ ಹಿಂದಿರುವ ಕಾರಣಗಳು

ಮದುವೆಯೆಂದರೆ ಅನೇಕ ಶಾಸ್ತ್ರಗಳು, ವಿಧಿ-ವಿಧಾನಗಳು ಕೂಡಿದ ಒಂದು ಸಂಭ್ರಮದ ಸುಸಂದರ್ಭ. ಆದರೆ, ಹಸೆಮಣೆ ಏರುತ್ತಿರುವ ವಧು-ವರರಿಗೆ ಮಾತ್ರ ಇದೊಂದು ಬೆವರಿಳಿಸುವ ಸಂದರ್ಭ. ಹೌದು, ನಮ್ಮ ದೇಶದಲ್ಲಿನ ಮದುವೆಗಳಲ್ಲಿ ಲೆಕ್ಕವಿಲ್ಲದಷ್ಟು ಶಾಸ್ತ್ರಗಳು, ಸಂಪ್ರದಾಯಗಳು, ಪೂಜೆಗಳು, ಪ್ರಕ್ರಿಯೆಗಳು ಇರುತ್ತವೆ. ವಧು-ವರರಿಗೆ ಇವುಗಳೆಲ್ಲಾ ಮುಗಿದು ಯಾವಾಗ ಕೋಣೆ ಸೇರಿ ವಿಶ್ರಾಂತಿ ಪಡೆಯುತ್ತೇವೆ ಎಂಬ ಯೋಚನೆ ಬಂದಿರುತ್ತದೆ. ಆದರೆ ಆ ಕೋಣೆಗೆ ಹೋಗುವಾಗಲೂ ನಮ್ಮಲ್ಲಿ ಹಲವಾರು ಶಾಸ್ತ್ರಗಳು ಇವೆ! ಆ ಶಾಸ್ತ್ರಗಳ, ಸಂಪ್ರದಾಯಗಳ ಹಿಂದೆ ಇರುವ ಕಾರಣಗಳು ಏನೆಂಬುದು ತಿಳಿಯಿರಿ.

೧. ಒಂದು ಲೋಟದ ತುಂಬ ಹಾಲು

ಹಿಂದೂ ವಿವಾಹಗಳಲ್ಲಿ ಬಹಳ ಸಾಮಾನ್ಯವಾದ ಸಂಪ್ರದಾಯ ಎಂದರೆ ಅದು ಮದುವೆಯಾದ ಮೊದಲ ರಾತ್ರಿಯಂದು ಹೆಣ್ಣು ಕೋಣೆಗೆ ಒಂದು ಲೋಟದಲ್ಲಿ ಹಾಲನ್ನು ತೆಗೆದುಕೊಂಡು ಒಳಹೋಗುವುದು. ಇದಕ್ಕೆ ಕಾರಣ ಹಾಲು ದಣಿದ ವರ-ವಧುವಿಗೆ “ಶಕ್ತಿ” ನೀಡಲೆಂದು. ಹಾಲನ್ನು ಒಂದು ಕಾಮೋತ್ತೇಜಕ ಎಂದು ಪರಿಗಣಿಸಿದ್ದು, ಅದು ವಧು-ವರ ಒಟ್ಟಿಗೆ ಒಳ್ಳೆಯ ಸಮಯ ಕಳೆಯಲೆಂದು ನೀಡಲಾಗುತ್ತದೆ.


೨. ಬಿಳಿಯ ಬೆಡ್ ಶೀಟ್

ಈಗಲೂ ಇದನ್ನು ಬಹಳಷ್ಟು ಜನರು ಪಾಲಿಸುತ್ತಾ ಬಂದಿದ್ದಾರೆ. ಇದೊಂದು ತುಂಬಾ ಹಳೆಯ ಸಂಪ್ರದಾಯ ಆಗಿದ್ದು, ಇದು ಒಂದು ರೀತಿ ಹೆಣ್ಣಿನ ನಡೆಗಳನ್ನ ಪ್ರಶ್ನಿಸುವಂತ್ತದ್ದು ಕೂಡ ಆಗಿದ್ದು, ಇದನ್ನು ಆದಷ್ಟು ಬೇಗ ಕೈಬಿಡುವುದೇ ಒಳಿತು. ಈ ಸಂಪ್ರದಾಯದಲ್ಲಿ ವಧು-ವರ ಮಲಗುವ ಮಂಚದ ಮೇಲೆ ಶುಚಿಯಾದ, ಬಿಳಿ ಬಟ್ಟೆಯನ್ನು ಹಾಸಿರುತ್ತಾರೆ. ಬೆಳಗ್ಗೆ  ಅಷ್ಟೊತ್ತಿಗೆ ಆ ಬಟ್ಟೆಯ ಮೇಲೆ ಕೆಂಪು ಕಲೆ ಆಗಿದ್ದರೆ, “ಕಾರ್ಯ” ನಡೆದಿದೆ ಎಂದು ಮತ್ತು ಹುಡುಗಿ ಕನ್ಯೆಯೇ ಆಗಿದ್ದಳು ಎಂಬುದು ತಿಳಿದುಕೊಳ್ಳುತ್ತಾರೆ.


೩. ಹೂವಿನ ಅಲಂಕಾರ

ಮಲಗುವ ಕೋಣೆಯನ್ನು, ಮಂಚವನ್ನು ಹೂವುಗಳಿಂದ ಅಲಂಕಾರ ಮಾಡುವುದು ಹಿಂದಿನಿಂದಲೂ ಪಾಲಿಸಿಕೊಂಡು ಬಂದ ಸಂಪ್ರದಾಯ. ಹೂವಿನ ಸಿಹಿಯಾದ, ನೈಸರ್ಗಿಕ ಸುಗಂಧವು ಒಳ್ಳೆಯ ವಾತಾವರಣ ಸೃಷ್ಟಿಸಿ, ದಂಪತಿ ಖುಷಿಯಿಂದ ಕಾಲ ಕಳೆಯುತ್ತಾರೆ ಎಂಬುದೇ ಇದರ ಹಿಂದಿರುವ ನಂಬಿಕೆ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon