Link copied!
Sign in / Sign up
5
Shares

ಹೆಣ್ಣಿನ ಮೊದಲ ಪಿರಿಯಡ್(ಹುಡುಗಿ ಹೆಣ್ಣಾಗುವ ಪ್ರೌಡಾವಸ್ಥೆಯ ಕ್ಷಣ) …. !

ಋತುಮತಿ, ಇದನ್ನು ಪಿರಿಯಡ್ ಎಂದು ಕರೆಯುವರು, ಇದು ಹುಡುಗಿಯರ ಪ್ರೌಡಾವಸ್ಥೆಯ ಪ್ರಮುಖ ಹಂತಗಳಲ್ಲಿ ಒಂದಾಗಿದೆ. ಹುಡುಗಿಯರ ಮೊದಲ ಮುಟ್ಟಿಗೆ ವೈಜ್ಞಾನಿಕ ಹೆಸರು “ಮೆನರ್ಚೆ”. ಒಂದು ಹುಡುಗಿ ಅವಳ ಮೊದಲ ಮುಟ್ಟನ್ನು ಪಡೆಯುತ್ತಿದ್ದಾಳೆ ಎಂದರೆ, ಅವಳು ಲೈಂಗಿಕವಾಗಿ ಪ್ರಬುದ್ಧತೆ ಹೊಂದುತ್ತಿದ್ದಾಳೆ, ಮತ್ತು ಸಂತಾನೋತ್ಪತ್ತಿ ಮಾಡಲು ತಯಾರಾಗುತ್ತಿದ್ದಾಳೆ ಎಂದರ್ಥ. ಅವರ ಮೊದಲ ಮುಟ್ಟನ್ನು ಪಡೆಯುದರಲ್ಲಿ ಹುಡುಗಿಯರ ಭಾವನೆಗಳಲ್ಲಿ ಏರಿಳಿತಗಳು ಕಾಣುತ್ತವೆ. ಕೆಲವು ಹುಡುಗಿಯರು ಭಯ ಮತ್ತು ಆತಂಕವನ್ನು ಹೊಂದಿರುತ್ತಾರೆ, ಕೆಲವರು ಮುಜುಗರಕ್ಕೆ ಒಳಗಾದರೆ, ಕೆಲ ಹುಡುಗಿಯರಿಗೆ ತನ್ನ ದೇಹದಲ್ಲಿ ಏನಾಗುತ್ತಿದೆ ಎಂಬುದರ ಬಗ್ಗೆ ಅರಿವೇ ಇರುವುದಿಲ್ಲ.

ಒಂದು ಹುಡುಗಿ ಅವಳ ಮೊದಲ ಪಿರಿಯಡ್ ಅನ್ನು ೧೧ - ೧೪ ವರ್ಷದಲ್ಲಿ ಪಡೆಯಬಹುದು. ಅಪರೂಪದ ಸಂದರ್ಭಗಳಲ್ಲಿ, ಕೆಲವು ಹುಡುಗಿಯರು ೯ - ೧೬ ವರ್ಷದ ವಯಸ್ಸಿನಲ್ಲಿ ತಮ್ಮ ಮೊದಲ ಪಿರಿಯಡ್ ಅನ್ನು ಅನುಭವಿಸುವರು. ಇದಕ್ಕೆ ಹಾರ್ಮೋನುಗಳು ಕಾರಣ. ಅವಳ ಮೊದಲ ಮುಟ್ಟು ಆಗುವ ಮೊದಲು ಅವಳ ದೇಹದಲ್ಲಿ ಹಲವು ಬದಲಾವಣೆಗಳನ್ನು ಕಾಣಬಹುದು. ಅದರಲ್ಲಿ ತುಂಬಾ ಸಾಮಾನ್ಯವಾದ ಕೆಲವು ಚಿಹ್ನೆಗಳು.

೧.ಸ್ತನಗಳ ಬೆಳವಣಿಗೆ

ಸ್ತನಗಳ ಮೊಗ್ಗುಗಳು ಬೆಳೆಯುವುದು ಹುಡುಗಿ ಲೈಂಗಿಕವಾಗಿ ಪ್ರಬುದ್ಧತೆ ಹೊಂದುತ್ತಿದ್ದಾಳೆ ಎಂಬುದರ ಒಂದು ಬಹಳ ಮುಖ್ಯವಾದ ಲಕ್ಷಣ. ಹಾರ್ಮೋನುಗಳ ಬದಲಾವಣೆ ಇಂದ ಹುಡುಗಿಯು ಕೊಬ್ಬಿನ ಅಂಗಾಂಶಗಳನ್ನು ಮತ್ತು ಹಾಲಿನ ಗ್ರಂಥಿಗಳನ್ನು ಬೆಳೆಸಿಕೊಳ್ಳುವಳು. ಹುಡುಗಿಯು ತೊಟ್ಟು ಮತ್ತು ಸ್ತನಗಳನ್ನು ಬೆಳೆಸಿಕೊಳ್ಳುವುದರಿಂದ ಸ್ತನವು ದಪ್ಪವಾಗಿರುವಂತೆ ಕಾಣುತ್ತದೆ. ಹುಡುಗಿಯ ಮೊದಲ ಪಿರಿಯಡ್ ಗೆ ೨ ರಿಂದ ಎರಡೂವರೆ ವರ್ಷದ ಮುಂಚೆಯೇ ಸ್ತನಗಳು ಬೆಳೆಯಲು ಶುರುವಾಗುತ್ತವೆ. ಸ್ತನಗಳು ಸಂಪೂರ್ಣವಾಗಿ ಬೆಳೆಯಲು ೪ ವರ್ಷಗಳವರೆಗೆ ಸಮಯ ಬೇಕಾಗುವುದು.

೨.ಖಾಸಗಿ ಅಂಗದಲ್ಲಿ ಕೂದಲ ಬೆಳವಣಿಗೆ

ಸ್ತನ ಬೆಳವಣಿಗೆ ಆಗುತ್ತಿದ್ದಂತೆ, ಕೆಳಗೆ ರೋಮಗಳು ಬೆಳೆಯಲು ಪ್ರಾರಂಭಿಸುತ್ತವೆ. ಪ್ರಾರಂಭದಲ್ಲಿ ಇದು ಮೃದು ಮತ್ತು ತೆಳ್ಳಗೆ ಇರುತ್ತದೆ, ನಂತರ ಇದು ಗಟ್ಟಿಯಾಗಿ, ಗುಂಗುರು ಆಗಿ ಮತ್ತು ನಾಜೂಕಿಲ್ಲದ ಹಾಗೆ ಬೆಳೆಯುತ್ತದೆ. ಈ ಕೂದಲು ಬೆಳೆದ ಒಂದು ಅಥವಾ ಎರಡು ವರ್ಷದ ನಂತರ ಹುಡುಗಿಯು ತನ್ನ ಮೊದಲ ಮುಟ್ಟನ್ನು ಅನುಭವಿಸುವಳು.

೩.ಕಂಕುಳಿನಲ್ಲಿ ಕೂದಲ ಬೆಳವಣಿಗೆ

ಸೊಂಟದ ಕೆಳಗೆ ಕಾಲಿನ ಮದ್ಯೆ ಕೂದಲ ಬೆಳವಣಿಗೆ ಕಂಡ ನಂತರ ಬೇಗನೆ ಕಂಕುಳಿನಲ್ಲಿ ಕೂದಲ ಬೆಳವಣಿಗೆಯನ್ನು ಹುಡುಗಿಯರು ಅನುಭವಿಸುವರು. ಇದು ಕೂಡ ಪ್ರಾರಂಭದಲ್ಲಿ ಮೃದು ಮತ್ತು ತೆಳ್ಳಗೆ ಇರುತ್ತದೆ ನಂತರ ಸಮಯವಾದಂತೆ ಗಡಸುತನವನ್ನು ಪಡೆದುಕೊಳ್ಳುತ್ತದೆ. ಇದು ಹುಡುಗಿಯು ಅವಳ ಮೊದಲ ಮುಟ್ಟಿಗೆ (ಪಿರಿಯಡ್) ಒಂದರಿಂದ ಎರಡು ವರ್ಷ ಸನಿಹದಲ್ಲಿರುವಳು ಎಂಬುದನ್ನು ಸೂಚಿಸುತ್ತದೆ.

೪.ಯೋನಿಯಲ್ಲಿ ವಿಸರ್ಜನೆ

ಇದು ಹುಡುಗಿ ತನ್ನ ಮೊದಲ ಮುಟ್ಟನ್ನು ಶೀಘ್ರದಲ್ಲೇ(೬-೮ ತಿಂಗಳು) ಅನುಭವಿಸುವಳು ಎಂಬುದನ್ನು ನಿಖರವಾಜಿ ಹೇಳುವ ಸೂಚಕವಾಗಿದೆ. ಈ ವಿಸರ್ಜನೆ ದ್ರವ ಬಿಳಿ ಅಥವಾ ಹಳದಿ ಬಣ್ಣದಲ್ಲಿ ಇರುತ್ತದೆ. ಹುಡುಗಿಯರು ಯೋನಿಯ ವಿಸರ್ಜನೆ ಅನುಭವಿಸುವುದು ಸಾಮಾನ್ಯವಾಗಿದೆ.

ಅವಳ ತಾಯಿ ಅನುಭವಿಸಿದ ಮೊದಲ ಪಿರಿಯಡ್ ಅನುಭವವನ್ನೇ ಅಥವಾ ಬದಲಾವಣೆಗಳನ್ನೇ ಅವಳು ಅನುಭವಿಸುವಳು ಎಂಬುದು ಹಲವು ಪ್ರಕಾರಗಳಿಂದ ಸಾಭೀತಾಗಿದೆ. ಈ ಸಮಯದಲ್ಲಿ ಅವಳ ತಾಯಿ ಅವಳಿಗೆ ಮೊದಲ ಮುಟ್ಟಿನ ಅನುಭವವನ್ನು ಅರ್ಥವಾಗುವಂತೆ ವಿವರಿಸಿ ಅವಳಲ್ಲಿನ ಭಯವನ್ನು ದೂರವಾಗಿಸಿ, ಅವಳಿಗೆ ಅಭ್ಯಾಸ ಮಾಡಿಸುವುದು ಒಳ್ಳೆಯದು. ಈ ಗುಣಲಕ್ಷಣಗಳನ್ನು ಕಂಡ ವರ್ಷದ ನಂತರ ಪ್ಯಾಡ್ ಅನ್ನು ತನ್ನ ಜೊತೆ ತೆಗೆದುಕೊಂಡುವುದು ಉತ್ತಮ.

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

We have a great opportunity for you. You can EARN up to Rs 10,000/- every month right in the comfort of your own HOME. Sounds interesting? Fill in this form and we will call you.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon