Link copied!
Sign in / Sign up
9
Shares

ಮೊದಲ ಬಾರಿಗೆ ತಾಯಿಯಾದವರಿಗೆ ಎದೆಹಾಲುಣಿಸಲು ೮ ಸಲಹೆಗಳು

ಮೊದಲ ಮಗುವನ್ನು ಹೊಂದುವುದು ಬಹುಶಃ ನಿಮ್ಮ ಜೀವನದ ಅತ್ಯಂತ ಉತ್ತಮ ಅನುಭವ. ೯ ತಿಂಗಳು ಅವನು/ಅವಳು ನಿಮ್ಮ ಉದರದಲ್ಲಿ ಕಾಲ ಕಳೆದಿರುತ್ತದೆ, ಯಾರು ಅನುಭವಿಸಲಾಗದ ಸಂವೇದನೆ ಮತ್ತು ಅನುಭವವನ್ನು ನಿಮಗೆ ಕೊಡುತ್ತದೆ, ಆಳವಾದ ಬಂಧ ಮತ್ತು ಬೇಷರತ್ತಾದ ಪ್ರೀತಿ, ಮತ್ತು ನೀವು ಮಾತ್ರ, ನಿಮ್ಮ ಮಗುವಿನ ಜೊತೆ ಹಂಚಿಕೊಳ್ಳುವುದು ಇದಕ್ಕೆ ಸರಿಸಮನಾದದು ಯಾವುದು ಇಲ್ಲ. ಆ ಮೊದಲ ಅಳುವಿನಿಂದ, ಮಗುವು ಜೀವಿಸುತ್ತಿದೆ ಮತ್ತು ಆರೋಗ್ಯವಾಗಿದೆ ಎಂದು ತಿಳಿಯುತ್ತದೆ, ನಿಮಗೆ ಗೊತ್ತು ನಾನಾ ಮಾಡಬಲ್ಲೆನು ಮತ್ತು ಮಾಡುವೆನು, ಎಲ್ಲವನ್ನು ಮಗುವಿನ ಖುಷಿ ಮತ್ತು ರಕ್ಷಣೆಗಾಗಿ.

ನಿಮ್ಮ ಸುಂದರವಾದ ಮಾತೃತ್ವದ ಈ ಹೊಸ ಪಯಣದಲ್ಲಿ ನೀವು ಮೊದಲು ಕಲಿಯುವುದು, ಮಗುವು ಪ್ರತಿಯೊಂದು ಚಿಕ್ಕ ವಿಷಯದಲ್ಲೂ ನಿಮ್ಮ ಮೇಲೆ ಹೇಗೆ ಅವಲಂಬಿತವಾಗಿದೆ ಎಂಬುದನ್ನು. ನಿಮ್ಮ ಮಗು ಅರೋಗ್ಯ ಮತ್ತು ಶಕ್ತಿಯಿಂದಿರಲು ಮೊದಲು ಮತ್ತು ಬಹಳ ಮುಖ್ಯವಾಗಿ ಬೇಕಾಗಿರುವುದು ಎದೆಹಾಲು. ಎದೆಹಾಲುಣಿಸುವುದು ಮೊದಲ ಬಾರಿಗೆ ಕಷ್ಟ ಎನಿಸಬಹುದು, ಆದರೆ ಅದರ ಬಗ್ಗೆ ಚಿಂತಿಸಬೇಡಿ, ಅದು ಕ್ರಮೇಣ ಸುಲಭವಾಗುತ್ತದೆ.

ಮೊದಲ ಬಾರಿಗೆ ಎದೆಹಾಲುಣಿಸುತ್ತಿರುವ ತಾಯಿಯಂದಿರಿಗೆ, ನಾವು ೮ ಉಪಯುಕ್ತ ಸಲಹೆಗಳನ್ನು ಇಲ್ಲಿ ನೀಡಿರುವೆವು.

೧.ಎದೆಹಾಲುಣಿಸಲು ಆರಾಮದಾಯಕ ಬಟ್ಟೆಗಳು

ನೀವು ಮಗುವನ್ನು ಆರೈಸುವಾಗ, ಆರಾಮದಾಯಕ ಮತ್ತು ಅನುಕೂಲಕರವಾಗಿರುವ ಬಟ್ಟೆಗಳನ್ನು ಧರಿಸಿ. ನೀವು ಟಿ-ಶರ್ಟ್ ಅಥವಾ ಕುರ್ತಿ ಧರಿಸಿದರೆ ಪ್ರತಿ ಸಲ ಎದೆಹಾಲುಣಿಸಲು ಅನಾನುಕೂಲವಾಗುತ್ತದೆ ಮತ್ತು ನಿಮಗೆ ಕಷ್ಟವಾಗುತ್ತದೆ. ಆದ್ದರಿಂದ ಮಗುವಿಗೆ ಎದೆಹಾಲುಣಿಸಲು ಸುಲಭವಾಗುವಂತಹ ಬಟ್ಟೆಗಳನ್ನು ಧರಿಸುವುದು ಉತ್ತಮ. ಮತ್ತು ಅತಿ ಬಿಗಿಯಾದ ಬಟ್ಟೆಗಳನ್ನು ಹಾಕುವುದರಿಂದ ಸ್ತನ ನೋವು ಉಂಟಾಗಬಹುದು. ನಿಮಗೆ ಆರಾಮು ಎನಿಸುವ ಬಟ್ಟೆಯನ್ನು ಧರಿಸಿ.

೨.ಅಭ್ಯಾಸ ನಿಮ್ಮನ್ನು ಪರಿಪೂರ್ಣರನ್ನಾಗಿ ಮಾಡುತ್ತದೆ

ನೀವು ಹೆಚ್ಚು ಅಭ್ಯಾಸ ಮಾಡಿದಷ್ಟು, ಎದೆಹಾಲುಣಿಸುವುದು ಸುಲಭವಾಗುವುದು. ಮೊದಲೆರಡು ವಾರಗಳು ಇದು ತುಂಬಾ ಕಷ್ಟ ಎನಿಸಬಹುದು, ಆದರೆ ಬೇಗನೆ, ನಿಮ್ಮ ದೇಹವು ಇದಕ್ಕೆ ಹೊಂದಾಣಿಕೆಯಾಗುತ್ತದೆ. ಮತ್ತು ನೀವು ಎದೆಹಾಲುಣಿಸುವ ಅವಧಿಯನ್ನು ಹೆಚ್ಚಿಸಿದಂತೆ, ನಿಮ್ಮ ದೇಹ ಹೆಚ್ಚು ಹಾಲನ್ನು ಉತ್ಪತ್ತಿ ಮಾಡುತ್ತದೆ ಮತ್ತು ಇದರಿಂದ ಮಗುವಿನ ಅಗತ್ಯಕ್ಕೆ ಹಾಲು ಸಿಗುತ್ತದೆ.

೩.ಆರ್ಧ್ರಕ (Moisturize)

ನೀವು ಎದೆಹಾಲು ನೀಡದ ಸಂದರ್ಭಗಳಲ್ಲಿ, ನಿಮ್ಮ ಮೊಲೆತೊಟ್ಟುಗಳನ್ನು ಆರ್ಧ್ರಕ ಮಾಡಿಕೊಳ್ಳಿ. ಅವುಗಳನ್ನು ಹಿತವಾಗಿ ಮಾಡಿಕೊಳ್ಳಲು ತೊಟ್ಟು ಕ್ರೀಮ್ ಅಥವಾ ನಿಪ್ಪಲ್ ಬಟರ್ ಅನ್ನು ಖರೀದಿಸಿ ಅಥವಾ ಆಲಿವ್ ಎಣ್ಣೆ ಅಥವಾ ನಿಮ್ಮ ಎದೆಹಾಲನ್ನೇ ಮೊಲೆ ತೊಟ್ಟನ್ನು ತೇವಾಂಶಗೊಳಿಸಲು ಉಪಯೋಗಿಸಬಹುದು. ನಿಮ್ಮ ಎದೆಹಾಲಿನಿಂದ ಮಾಡಿಕೊಂಡರೆ ಮಗುವಿಗೆ ಹಾಲುಣಿಸುವ ಮೊದಲು ತೊಳೆದುಕೊಳ್ಳಬೇಕಿಲ್ಲ, ಇದರಿಂದ ನಿಮ್ಮ ನೋವು ಕಡಿಮೆಯಾಗುತ್ತದೆ.

೪.ನಿಮ್ಮನ್ನು ನೀವು ಜಲೀಕರಿಸಿಕೊಳ್ಳಿ

ನೀವು ಹಾಲುಣಿಸುವಾಗ ನಿಮ್ಮನ್ನು ನೀವು ಜಲೀಕರಿಸಿಕೊಳ್ಳುವುದು ಒಳ್ಳೆಯದು. ನೀವು ಹೈಡ್ರೀಕರಿಸಿದ ಸ್ಥಿತಿಯಲ್ಲಿರುವುದನ್ನು ಖಚಿತಪಡಿಸಿಕೊಳ್ಳಲು ಒಂದು ಮಾರ್ಗವೆಂದರೆ ನಿಮ್ಮ ಸ್ತನ್ಯಪಾನ ಕೇಂದ್ರವನ್ನು ಮನೆಯಲ್ಲಿಯೇ ಸ್ಥಾಪಿಸುವುದು(ಅಂದರೆ ಮನೆಯಲ್ಲಿಯೇ ಹೆಚ್ಚು ಎದೆಹಾಲುಣಿಸುವುದು). ನಿಮ್ಮ ಬಳಿ ನೀರು, ಆರೋಗ್ಯಕರ ತಿನಿಸು, ಹಾಲಿನ ಉತ್ಪನ್ನಗಳು, ಪುಸ್ತಕ ಮತ್ತು ಟಿ.ವಿ ರಿಮೋಟ್ ಯಾವಾಗಲು ಇರಲಿ.

೫.ತಿನ್ನಿರಿ

ನೀವು ನಿಮ್ಮ ಅಗತ್ಯಕ್ಕೆ ತಕ್ಕ ಆಹಾರವನ್ನು ಸೇವಿಸುತ್ತಿರುವೆ ಎಂದು ಖಚಿತಪಡಿಸಿಕೊಳ್ಳಿ, ಏಕೆಂದರೆ ನಿಮ್ಮ ಮೂಲಕ ನೇರವಾಗಿ ಪೌಷ್ಟಿಕಾಂಶಗಳನ್ನು ನಿಮ್ಮ ಮಗುವು ಪಡೆಯುತ್ತದೆ. ಎದೆಹಾಲುಣಿಸುವುದರಿಂದ ನಿಮ್ಮಲ್ಲಿ ಕ್ಯಾಲೋರಿಗಳು ಕಡಿಮೆಯಾಗುತ್ತವೆ, ಮತ್ತು ನೀವು ಅದನ್ನು ಸರಿಯಾಗಿ ಆಹಾರ ಸೇವನೆ ಮಾಡುವ ಮೂಲಕ ಪಡೆದುಕೊಳ್ಳಬೇಕು. ನೀವು ಸರಿಯಾಗಿ ಆಹಾರ ಸೇವನೆ ಮಾಡಲಿಲ್ಲವಾದರೆ, ನೀವು ಆಯಾಸ ಮತ್ತು ನಿಷ್ಕ್ರಿಯೆಗೆ ಪಡಬೇಕಾಗುತ್ತದೆ ಮತ್ತು ನಿಮ್ಮ ಮಗುವಿಗೆ ಬೇಕಾಗಿರುವ ಅಗತ್ಯ ಪೌಷ್ಟಿಕಾಂಶಗಳಲ್ಲಿ ಕೊರತೆಯಾಗಬಹುದು.

೬.ಹೋಲಿಕೆ ಮಾಡಬೇಡಿ

ಬೇರೆ ತಾಯಿಯರೊಂದಿಗೆ ನಿಮ್ಮನ್ನು ಹೋಲಿಕೆ ಮಾಡಿಕೊಳ್ಳುವುದನ್ನು ನಿಲ್ಲಿಸಿ, ಪ್ರತಿಯೊಬ್ಬ ತಾಯಿಯು ಅವರದೇ ಆದ ವಿಭಿನ್ನ ಗುಣಗಳಿಂದ/ಶೈಲಿಯಿಂದ ಆರೈಕೆ ಮಾಡುತ್ತಾರೆ. ಕೆಲವರು ಕಡಿಮೆ ಹಾಲನ್ನು ಉತ್ಪತ್ತಿ ಮಾಡುವರು, ಕೆಲವರು ಹೆಚ್ಚು ಹಾಲನ್ನು ಉತ್ಪತ್ತಿ ಮಾಡುವರು. ಕೆಲವರು ಎದೆಹಾಲುಣಿಸುವುದನ್ನು ಸುಲಭವಾಗಿ ಮಾಡುತ್ತಾರೆ, ಕೆಲವರು ಕಷ್ಟಪಡುತ್ತಾರೆ. ಬೇರೆಯವರೊಂದಿಗೆ ನಿಮ್ಮ ಮಾತೃತ್ವವನ್ನು ಹೋಲಿಕೆ ಮಾಡುವುದರ ಬದಲು, ನಿಮ್ಮ ರೀತಿಯಲ್ಲಿ, ನಿಮಗೆ ಆರಾಮದಾಯಕವಾಗುವಂತೆ ಮಾತೃತ್ವವನ್ನು ಆನಂದದಿಂದ ಅನುಭವಿಸಿ.

೭.ನಿಮ್ಮ ಪತಿಯಿಂದ ಸಹಾಯ ಪಡೆಯಿರಿ

ಬಾಟಲಿ ಹಾಲನ್ನು ಕುಡಿಸುವುದರಿಂದ ಇಡಿದು ಹೆಚ್ಚಿನ ಸಹಾಯವನ್ನು ಅವರು ನಿಮಗಾಗಿ ಮಾಡುತ್ತಾರೆ. ತಲೆ ಮಾಲೀಸು ಮಾಡಲು ಹೇಳಿ, ಅಥವಾ ನೀವು ಎದೆಹಾಲುಣಿಸುವಾಗ ನಿಮಗೆ ನೀರು ಅಥವಾ ಆಹಾರವನ್ನು ತಂದುಕೊಡುವುದನ್ನು ಮಾಡಲು ಹೇಳಿ. ಅವರು ಮಾತನಾಡಲು ನಿಮ್ಮ ಸಹಯೋಗಿಯಾಗಬಹುದು ಮತ್ತು ನಿಮ್ಮ ವಿವೇಕವನ್ನು ಉಳಿಸಿಕೊಳ್ಳಲು ಸಹಾಯ ಮಾಡಬಹುದು.

೮.ಸಾರ್ವಜನಿಕ ಸ್ಥಳಗಳಲ್ಲಿ ಮಗುವಿಗೆ ಎದೆಹಾಲುಣಿಸಲು ಮುಜುಗರ ಪಡಬೇಡಿ

ನೀವು ಹೊರಗಡೆ ಇರುವ ಸಮಯದಲ್ಲಿ, ನಿಮ್ಮ ಮಗುವಿಗೆ ಹಾಲುಣಿಸುವ ಸಂದರ್ಭ ಬಂದರೆ ಮುಜುಗರ ಪಟ್ಟುಕೊಂಡು ಮಗುವನ್ನು ಹಸಿವಿನಲ್ಲಿರುವಂತೆ ಮಾಡಬೇಡಿ. ಇದು ಸುಂದರವಾದ ಮತ್ತು ನೈಸರ್ಗಿಕ ಪ್ರಕ್ರಿಯೆ ಇದನ್ನು ಮಾಡಲು ನಾಚಿಕೆ ಪಡಬೇಡಿ. ಜನರು ನಿಮ್ಮನ್ನೇ ನೋಡುತ್ತಿದ್ದರೆ, ಅವರ ಕಡೆ ನೀವು ಗಮನ ಹರಿಸದೆ ನಿಮ್ಮ ಪತಿ ಅಥವಾ ಕುಟುಂಬದವರನ್ನು ಅಡ್ಡಲಾಗಿ ನಿಲ್ಲಿಸಿ ನಿಮ್ಮ ಮಗುವಿನ ಹಸಿವನ್ನು ನೀಗಿಸಿ. ಅಂತಹ ಸಂದರ್ಭಗಳಲ್ಲಿ ನಿಮಗೆ ಆರಾಮದಾಯಕ ಮತ್ತು ಅನುಕೂಲಕರವಾಗಿರುವ ಬಟ್ಟೆಯನ್ನು ಮಾತ್ರ ಧರಿಸಿ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon