Link copied!
Sign in / Sign up
18
Shares

ಮೊದಲ ಬಾರಿಗೆ ತಾಯಿಯಾದಾಗ ಅನುಭವಿಸುವ 6 ಭಾವನೆಗಳಲ್ಲಿ ನೀವು ಒಬ್ಬಂಟಿಯಲ್ಲ

ನಿಮಗೆ ಈಗ ಅಮ್ಮ ಅಥವಾ ತಾಯಿ ಎಂಬ ಹೊಸ ಹೆಸರು ಸೇರ್ಪಡೆಯಾಗಿದೆ. ಮೊದಲ ಬಾರಿಗೆ ತಾಯಿಯಾದಾಗ ನಿಮಗೆ ನಿಮ್ಮದೇ ಆದ ಕಲ್ಪನೆ, ಆಸೆ, ಭಾವನೆ ಮತ್ತು ಬಯಕೆಗಳು ಬರುವುದು ಸಹಜ. ಇಲ್ಲಿಂದ ನೀವು ನಿಮ್ಮ ಹೊಸ ಜೀವನಕ್ಕೆ ಕಾಲಿಡುತ್ತಿರಿ. ಈ ನಿಮ್ಮ ಹೊಸ ಜೀವನವನ್ನು ನಿಮ್ಮ ಇಚ್ಚೆಯಂತೆ ಬರ ಮಾಡಿಕೊಳ್ಳುವುದು ಅಥವಾ ನಿಮ್ಮ ಇಚ್ಚೆಯಂತೆ ಅನುಭವಿಸುವುದು ಅಷ್ಟು ಸುಲಭ ಮಾತಲ್ಲ. ಅದರಲ್ಲೂ ನಿಮ್ಮ ಮುದ್ದು ಕಂದಮ್ಮ ಬೇಗನೆ ಬೆಳೆಯುತ್ತಿರುವ ಕಾಲದಲ್ಲಿ. ನಿದ್ರೆ ಇಲ್ಲದ ರಾತ್ರಿಗಳು, ಸಂಕುಚಿತ ಭಾವನೆ ಮತ್ತು ನಾನು ಮಾಡುತ್ತಿರುವ ಕೆಲಸ ಉತ್ತಮವಾಗಿಲ್ಲ ಎಂಬ ಮನಸ್ಥಿತಿ, ಇವು ನೀವು ಒಬ್ಬ ತಾಯಿಯಾಗಿ ದಿನನಿತ್ಯ ಅನುಭವಿಸುವ ಕೆಲವು ಸಂಗತಿಗಳು. ಆದರೆ ಒಬ್ಬ ಒಳ್ಳೆಯ ತಾಯಿಯಾಗಿ ನೀವು ಉತ್ತಮ ಕೆಲಸವನ್ನೇ ಮಾಡುತ್ತಿರುವಿರಿ.

ಖುಷಿಯಿಂದಿರಿ, ಇವೆಲ್ಲವೂ ಕೆಲವೇ ದಿನಗಳಲ್ಲಿ ಮಾಯವಾಗುತ್ತದೆ.

೧. ನಿದ್ರೆ ಎಂಬುದು ಕನಸಾದಾಗ

ನಿದ್ರೆಯ ಅಭಾವ ಕಾಡಲು ಬರಬಹುದು. ನಿದ್ರಾಹಿನತೆಯಿಂದ ತಪ್ಪಿಸಿಕೊಳ್ಳಲು ಎಲ್ಲರೂ ಬಯಸುತ್ತಾರೆ, ಆದರೆ ತಾಯಿಯಾಗಿ ನೀವು ಇದರ ಅಭಾವವನ್ನು ಎದುರಿಸಬೇಕಾದಿತು. ಈ ನಿದ್ರೆಯ ಅಭಾವ ನಿಮಗೆ ಒಂದು ರಾತ್ರಿಗೆ ಮುಗಿಯುದಿಲ್ಲ, ಇದು ಹಲವು ತಿಂಗಳುಗಳ ತನಕ ಮುಂದುವರೆಯುತ್ತದೆ. ಇದರ ಪರಿಣಾಮ, ತಲೆ ನೋವು, ಸಿಡುಕುತನ, ಮರೆವು ಮತ್ತು ಕೆಟ್ಟ ಸಂದರ್ಭದಲ್ಲಿ ಖಿನ್ನತೆಗೆ ಒಳಗಾಗಬಹುದು. ಸಹಾಯವನ್ನು ಪಡೆಯಲು ಸಂಕೊಚಿಸಬೇಡಿ. ನಿಮ್ಮ ಪತಿ ಅಥವಾ ಮನೆಯವರು ನಿಮ್ಮ ಮಗುವನ್ನು ನೋಡಿಕೊಳ್ಳುವ ಸಮಯದಲ್ಲಿ ನಿದ್ರೆ ಮಾಡಿ.

೨. ನಿಮ್ಮ ನೆಚ್ಚಿನ ಜೀನ್ಸ್ ಧರಿಸುವುದು ದೂರದ ಸ್ಮರಣೆಯಾಗಿದೆ

ನಿಮ್ಮ ನೆಚ್ಚಿನ ಜೀನ್ಸ್ ಅಥವಾ ಯಾವುದೇ ಜೀನ್ಸ್ ಗೆ ನೀವು ಈಗ ಹೊಂದಾಣಿಕೆ ಆಗುವುದಿಲ್ಲ ಎಂಬುದನ್ನು ಗಮನಿಸಬೇಕು. ನಾನು ಮೋಹಕವಾಗಿ ಕಾಣುತ್ತಿಲ್ಲ, ಎಂಬ ಭಾವನೆ ಬರುವುದು ಸಹಜ ಅದರಿಂದ ನಿಮಗೆ ಅಹಿತಕರ ಭಾವನೆ ಉಂಟಾಗಬಹುದು. ಇಲ್ಲಿ ಕೇಳಿ, ನೀವು ತುಂಬಾ ಸುಂದರವಾಗಿದ್ದಿರಿ, ನಿಮ್ಮ ನಡು(ಸೊಂಟದ)ವಿನ ವೃತ್ತ ನಿಮ್ಮ ಆಕರ್ಷಣೆಯನ್ನು ತಿಳಿಸುವ ತೀರ್ಪುಗಾರನಲ್ಲ. ನೀವು ಖಂಡಿತವಾಗಿ ನಿಮ್ಮ ಆಕಾರವನ್ನು ಮರಳಿ ಪಡೆಯುತ್ತೀರಿ, ಆದ್ದರಿಂದ ಭರವಸೆಯನ್ನು ಕಳೆದುಕೊಳ್ಳಬೇಡಿ.ನಿಮ್ಮ ಪುಟ್ಟ ಕಂದ ಅಮೂಲ್ಯವಾದದ್ದು, ಮತ್ತು ಅದು ಯೋಗ್ಯವಾಗಿದೆ. ನಿಮ್ಮ ಮುಂಚಿನ ಆಕಾರ ಪಡೆಯಲು ಆಹಾರ ಪಥ್ಯ ಮತ್ತು ಯೋಗ ಮಾಡುವುದು ಬೇಗನೆ ನಿಮ್ಮ ಸೌಂದರ್ಯವನ್ನು ಮರಳಿ ಪಡೆಯಲು ಮಾರ್ಗ.

೩. ಸ್ತನ್ಯಪಾನವು(ಎದೆಹಾಲುಣಿಸುವುದು) ಆರಮದಾಯಕವಲ್ಲ

ಎದೆಹಾಲುಣಿಸುವುದು ನಿಜವಾದ ನೋವಾಗಿರಬಹುದು. ನಿಮ್ಮ ಮಗುವನ್ನು ತಪ್ಪು ರೀತಿಯಲ್ಲಿ ಇರಿಸಿದರೆ ನೀವು ನರಕಯಾತನೆ ಅನುಭವಿಸಿದಂತೆ ಸರಿ. ನೋಯುತ್ತಿರುವ ಮತ್ತು ಮೊನಚಾದ ಮೊಲೆತೊಟ್ಟುಗಳು ನಿಮ್ಮನ್ನು ಅಸ್ವಸ್ಥತೆಗೊಳಿಸಬಹುದು. ಚಿಂತಿಸದಿರಿ ಅಮ್ಮಂದಿರೆ, ಒಂದು ದೂರವಾಣಿ ಕರೆಗೆ ಹಾಲುಣಿಸುವ ಸಮಾಲೋಚಕರು ನಿಮ್ಮ ಕಷ್ಟ ಪರಿಹರಿಸಲು ಸಿದ್ದವಿದ್ದಾರೆ. ನಿಮಗೆ ಈಗ ಬೇಕಾಗಿರುವುದು ಒಳ್ಳೆಯ ಪೌಷ್ಠಿಕ ಆಹಾರ ಮಾತ್ರ.

೪. ಪರಿಪೂರ್ಣತೆ ಸಂಪೂರ್ಣವಾಗಿ ಗುರಿಮುಟ್ಟಿಲ್ಲ

ನಿಮಗೆ ಹೇಳಲಾಗಿರುವ ಎಲ್ಲವನ್ನೂ ಮತ್ತು ನಿಮಗೆ ಸಮಂಜಸವಾಗಿರುವ ಎಲ್ಲವನ್ನೂ ಮಾಡುತ್ತಿದ್ದರೂ, ನಿಮ್ಮ ಮಗು ಇನ್ನೂ ಅಳುವುದನ್ನು ನಿಲ್ಲಿಸಲ್ಲಿಲ್ಲ. ಪರಿಪೂರ್ಣ ಪೋಷಕರಾಗಲು ಯಾವುದೇ ವಿಷಯಗಳಿಲ್ಲ. ನಿಮ್ಮ ಮಗುವನ್ನು ಹೇಗೆ ಪರಿಪೂರ್ಣವಾಗಿ ಬೆಳೆಸುವುದು ಮತ್ತು ನಿಮ್ಮ ಮನೆಯನ್ನು ಅಚ್ಚುಕಟ್ಟಾಗಿ ಮತ್ತು ದೋಷರಹಿತವಾಗಿರುವಂತೆ ಮಾಡುವುದು ಹೇಗೆ ಎಂಬುದನ್ನು ಯೋಚಿಸಿರಿ.

೫. ಹಾರ್ಮೋನುಗಳು ತುಂಬಾ ಹಾನಿಯನ್ನುಂಟು ಮಾಡುತ್ತವೆ

ನೀವು ಕೋಣೆಗೆ ಹೋಗುವಿರಿ ಮತ್ತು ನಾನು ಏಕೆ ಇಲ್ಲಿಗೆ ಬಂದೆ ಎಂದು ಯೋಚಿಸುವಿರಿ. ನೀವು ಕೀಲಿ ಗೊಂಬೆಯಂತೆ ಓಡಾಡಬಹುದು, ಮತ್ತು ಏಕೆ ನಾನು ಇಗೆ ಮಾಡುತ್ತಿರುವೆ ಎಂದು ನಿಮ್ಮನ್ನು ನೀವು ದೂಷಿಸಿಕೊಳ್ಳದಿರಿ, ಇದಕ್ಕೆಲ್ಲ ಕಾರಣ ನಿಮ್ಮ ದೇಹದಲ್ಲಿ ಏರುಪೇರಾಗಿರುವ ಹಾರ್ಮೋನುಗಳು. ಇದು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ಆದರೆ ಶೀಘ್ರದಲ್ಲೇ ನಿಮ್ಮ ಸಂವೇದನಾಶೀಲತೆಗೆ ನೀವು ಮರಳುತ್ತೀರಿ. 

೬. ನೀವು ಏಕಾಂಗಿ

ನಿಮಗೆ ನೀವೇ ಭಾವಿಸುತ್ತಿರಿ, ನನ್ನ ಎಲ್ಲಾ ಪ್ರಯತ್ನಗಳಲ್ಲಿ ನಾನು ಒಬ್ಬಂಟಿ ಎಂದು. ನೀವು ಭಾವಿಸುತ್ತಿರಿ, ನನಗೆ ರಕ್ಷಣೆ ಇಲ್ಲ, ನನ್ನನ್ನು ಕಡೆಗಣಿಸಿದ್ದಾರೆ ಎಂದು, ಈಗ ನಿಮಗೆ ಭಾವನೆಗಳ ಬಾಂಧವ್ಯದ ಅಗತ್ಯ ಇದೆ ಮತ್ತು ಅದನ್ನು ನೀವು ಬಯಸುತ್ತೀರುವಿರಿ ಕೂಡ, ಆದರೆ ಆ ಸುಳಿವನ್ನು ಹೆಚ್ಚಿನ ಪತಿಯಂದಿರು ಅರ್ಥಮಾಡಿಕೊಳ್ಳುವುದಿಲ್ಲ. ನಿಮ್ಮ ಮಗು ನಿಮ್ಮನ್ನು ಕೆಲವು ಸಂಧರ್ಭಗಳಲ್ಲಿ ವಿರೋಧಿಸಬಹುದು. ಆ ಸಮಯದಲ್ಲಿ ಎಲ್ಲಿ ಹೋಗಬೇಕು, ಏನು ಮಾಡಬೇಕೆಂದು ತಿಳಿಯುವುದಿಲ್ಲ, ಆದರೆ ಈ ಎಲ್ಲಾ ಸವಾಲುಗಳನ್ನು ಸ್ವಿಕರಿಸಬೇಕಾಗುತ್ತದೆ. ನಿಮಗೆ ಏನು ಅನ್ನಿಸುತ್ತಿದೆ ಎಂದು ನಿಮ್ಮವರ ಬಳಿ ಹಂಚಿಕೊಳ್ಳಿ. ನಿಮ್ಮ ಭಾವನೆಗಳನ್ನು ನಿಮ್ಮಲ್ಲೇ ಮುಚ್ಚಿಕೊಳ್ಳುವುದು, ಅದು ನಿಮ್ಮನ್ನು ಮನೋರೋಗಿಯಾನ್ನಾಗಿ ಮಾಡುತ್ತದೆ ಅಥವಾ ನಿಮ್ಮನ್ನು ಖಿನ್ನತೆಗೆ ನೂಕುತ್ತದೆ.

ಮೊದಲ ಬಾರಿಗೆ ತಾಯಿಯಾಗಿ ಕಳೆಯುವ ಪ್ರತಿ ಕ್ಷಣವನ್ನು ಆನಂದದಿಂದ ಅನುಭವಿಸಿರಿ, ಏಕೆಂದರೆ ಇಂತಹ ಕ್ಷಣಗಳು ನಿಮಗೆ ಮತ್ತೆ ಸಿಗುವುದಿಲ್ಲ.

ನಿಮ್ಮ ಪೋಷಕತ್ವದ ಪ್ರಯಾಣ ಸುಗಮವಾಗಿರಲಿ!.

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

We have a great opportunity for you. You can EARN up to Rs 10,000/- every month right in the comfort of your own HOME. Sounds interesting? Fill in this form and we will call you.

Click here for the best in baby advice
What do you think?
100%
Wow!
0%
Like
0%
Not bad
0%
What?
scroll up icon