Link copied!
Sign in / Sign up
7
Shares

ಮೊದಲ ಬಾರಿ ತಾಯಿಯಾದವರ ೫ ಅಚ್ಚರಿಯ ತಪ್ಪೋಪ್ಪಿಗೆಗಳು

ನೀವು ಮೊದಲ ಬಾರಿಗೆ ತಾಯಿಯಾದಾಗ ಯಾರಿಗೂ ಹೇಳಲಾಗದ ಕೆಲವೊಂದು ಯೋಚನೆಗಳು ನಿಮ್ಮ ತಲೆಯಲ್ಲಿ ಹರಿದಾಡುತ್ತಿರುತ್ತವೆ. ಅವುಗಳಲ್ಲಿ ಕೆಲವೊಂದು ಗೊಂದಲಮಯ, ಕೆಲವೊಂದು ವಿಚಿತ್ರ ಹಾಗು ಇನ್ನೂ ಕೆಲವ ಭಯ ಹುಟ್ಟಿಸುವಂತವು. ಅಯ್ಯೋ ! ಹಾಗಂತ ನೀವು ಗಾಬರಿ ಆಗಬೇಡಿ, ಏಕೆಂದರೆ ಈ ಯೋಚನೆಗಳನ್ನು ಎದುರಿಸುತ್ತಿರುವವರು ಕೇವಲ ನೀವೊಬ್ಬರೇ ಅಲ್ಲ.

ಇಲ್ಲಿ ತಾಯಿಯಂದಿರು ಬಹಿರಂಗ ಮಾಡಿರುವ ವಿಷಯಗಳು ತೀರಾ ಸಾಮಾನ್ಯ. ಕೆಲವೊಂದು ನಿಮ್ಮನ್ನು ಕೂಡ ಆಶ್ಚರ್ಯ ಪಡಿಸಬಹುದು.

೧. ಅಪೇಕ್ಷೆ :

ನಿಮ್ಮ ಮಗು ತುಂಬಾ ಮುದ್ದಾಗಿದೆ ಎಂದು ತಿಳಿಯುವಿರಿ ಅಷ್ಟೇ

ವಾಸ್ತವ :

ಬಿಟ್ಟರೆ ನಿಮ್ಮ ಮಗುವನ್ನು ನೀವು ಮುಕ್ಕಿಕೊಂಡು ತಿಂದು ಬಿಡುತ್ತೀರ

ಇದು ಮನುಷ್ಯ ಮನುಷ್ಯನನ್ನೇ ತಿನ್ನುವ ವಿಷಯವಲ್ಲ, ಇದು ಕೇವಲ ನಿಮ್ಮ ಕಣ್ಣಿಗೆ ನಿಮ್ಮ ಮಗು ಎಷ್ಟು ಅಮೂಲ್ಯವಾಗಿ ಕಾಣುತ್ತದೆ ಎಂದು. ನಿಮ್ಮ ಮಗುವಿನ ಹೊಟ್ಟೆಯ ಮೇಲೆ ಬೆರಳಾಡಿಸಿ ಅದನ್ನು ನಗಿಸುವುದು ಅಥವಾ ಅವರ ಕುತ್ತಿಗೆ ಸವರಿ ಅವರಿಗೆ ಕಚಗುಳಿ ಇಡುವುದು, ಇವೇ ಪ್ರತಿದಿನದ ನಿಮ್ಮ ನೆಚ್ಚಿನ ಕೆಲಸ. ಮಗುವು ಖುಷಿಯಿಂದ ನಗುವುದನ್ನು ನೋಡಿಯೇ ನೀವು ಹೊಟ್ಟೆ ತುಂಬಿಸಿಕೊಳ್ಳುತ್ತೀರಿ. ಹೀಗಾಗಿ ನಿಮ್ಮ ಮಗುವನ್ನು ನಿಮ್ಮ ಆಹಾರವೆಂದು ಕರೆದಿದ್ದು. ನಿಮ್ಮ ಮನೆಗೆ ಬಂದ ಅತಿಥಿಗಳು ಕೂಡ ನಿಮ್ಮ ಮಗುವನ್ನು ನೋಡಿ ಬೆಣ್ಣೆ ಇದ್ದ ಹಾಗೆ ಇದೆ ಎನ್ನುವರು.

೨. ಅಪೇಕ್ಷೆ :

ಅದು ಡಯಾಪರ್ ಅಷ್ಟೇ, ಅದರಲ್ಲಿ ಏನಿದೆ

ವಾಸ್ತವ :

ಡಯಾಪರ್ ನಿಮ್ಮ ಕನಸಿನಲ್ಲಿ ಬಂದರು ಎಚ್ಚರವಾಗುತ್ತದೆ

ನಿಮ್ಮ ಮಗುವಿಗೆ ಸ್ನಾನ ಮಾಡಿಸಿದ ನಂತರ ಒಂದು ಡಯಾಪರ್ ಹಾಕಿ ಬಿಟ್ಟುಬಿಟ್ಟರೆ, ಕೆಲಸ ಮುಗೀತು ಅಂದುಕೊಂಡಿರುತ್ತೀರ. ಆದರೆ ಖಂಡಿತ ಇಲ್ಲ, ಇದೇ ಕೆಲಸ ನೀವು ಹೆಚ್ಚು ಕಮ್ಮಿ ಇನ್ನು ೧೨ ಬಾರಿ ಮಾಡಬೇಕು. ಅಡುಗೆ ಮಾಡುವುದು, ಮನೆ ಸ್ವಚ್ಛ ಮಾಡುವುದಕ್ಕಿಂತ ಹೆಚ್ಚು ಶಕ್ತಿಯೆಲ್ಲಾ ನೀವು ಇದನ್ನು ಮಾಡುವುದರಲ್ಲೇ ಕಳೆದುಕೊಳ್ಳುತ್ತೀರ. ನೀವು ಡಯಾಪರ್ ಗಳ ಅಡ್ಡಪರಿಣಾಮಗಳ ಬಗ್ಗೆ ಯೋಚಿಸಿರುತ್ತೀರ, ಹಾಗಾಗಿ ಒಳ್ಳೆ ಡಯಾಪರ್ ಗಳನ್ನ ಖರೀದಿಸಿ.

೩. ಅಪೇಕ್ಷೆ :

ನೀವು ಪೋಷಣೆ ಬಗ್ಗೆ ಎಲ್ಲವನ್ನು ಓದಿ ತಿಳಿದುಕೊಂಡು, ನಿಮ್ಮ ಮಗುವಿನ ಒಳ್ಳೆ ಬೆಳವಣಿಗೆಗೆ ಸರ್ವವೂ ಸಿದ್ದಪಡಿಸಿಕೊಳ್ಳುವಿರಿ.

ವಾಸ್ತವ:

ನಿಮ್ಮ ಮಗುವನ್ನು ಸಂಭಾಲಿಸಲು ನೀವು ಎಂದಿಗೂ ಸರ್ವ ಸಿದ್ದರಿರುವುದಿಲ್ಲ

ನೀವು ನಿಮ್ಮ ಮಗುವನ್ನ ಕೈಯಲ್ಲಿ ಎತ್ತಿಕೊಂಡಿರುವಾಗ ಕಾಲು ಎಡವಿ ಬೀಳುವುದನ್ನು, ಯಾರಿಗಾದರು ಡಿಕ್ಕಿ ಹೊಡೆದು ಮಗುವನ್ನು ಬೀಳಿಸುವುದು, ಈ ರೀತಿಯ ದೃಶ್ಯಗಳು ನಿಮ್ಮ ತಲೆಯಲ್ಲಿ ಒಮ್ಮೆಯಾದರು ಆಗಲೇ ಬಂದು ಹೋಗಿರುತ್ತವೆ. ನೀವು ಅವರ ಸುರಕ್ಷತೆಯ ಬಗ್ಗೆ ತುಂಬಾನೇ ಕಾಳಜಿ ವಹಿಸುತ್ತೀರ ಹಾಗು ನಿಮ್ಮ ಮಗುವು ನಿಮಿಗಿಂತ ಒಂದು ಅಡಿ ದೂರವಿದ್ದಾಗಲೇ ನೀವು ಇನ್ನು ಹೆಚ್ಚು ಜಾಗ್ರತೆ ವಹಿಸಲು ಶುರು ಮಾಡುತ್ತೀರ. ನಿಮ್ಮ  ಸುತ್ತ ಸದಾ ಇರುತ್ತಿದ್ದ ವಸ್ತುಗಳೆಲ್ಲವೂ ಇವಾಗ ನಿಮ್ಮ ಮಗುವಿಗೆ ಅಪಾಯಕಾರಿಯಾಗಿ ಕಾಣುತ್ತವೆ ಹಾಗು ಭೂಮಿಯ ಮೇಲಿನ ಪ್ರತಿಯೊಂದು ವ್ಯಕ್ತಿಯು ಇವಾಗ ನಿಮ್ಮ ಕಣ್ಣಲ್ಲಿ ಅಸುರಕ್ಷಿತ (ಕಡೆ ಪಕ್ಷ ನಿಮ್ಮ ಮಗುವಿಗಗೆ ಆದರೂ ಅವರು ಅಸುರಕ್ಷಿತ). ನೀವು ಅಚಾನಕ್ ಆಗಿ ನಿಮ್ಮ ಮಗುವಿನ ತಲೆಯನ್ನು ಗೋಡೆಗೆ ತಾಕಿಸಿದರೆ ಅಂತೂ ಮುಗಿದೇ ಹೋಯಿತು. ವೈದ್ಯರು ಬಂದು ನೀವು ಎಂತ ಘೋರ ಅಪರಾಧ ಮಾಡಿಬಿಟ್ಟಿರಿ ಎಂದು ನಿಮಗೆ ಛೀಮಾರಿ ಹಾಕಿ ನಿಮ್ಮ ಮಗುವಿಗೆ ಏನು ತೊಂದರೆ ಇಲ್ಲ ಎಂದು ಹೇಳುವವರೆಗೂ ನಿಮ್ಮ ಮನಸ್ಸಿಗೆ ಶಾಂತಿ ಇಲ್ಲ.

೪. ಅಪೇಕ್ಷೆ :

ನಿಮಗೆ ಬೆಂಬಲ ನೀಡುವ ಗಂಡ ಹಾಗು ಪ್ರೀತಿಸುವ ಕುಟುಂಬ ಇದೆ

ವಾಸ್ತವ :

ಇವರೆಲ್ಲ ನನ್ನ ಜೀವನದಲ್ಲಿ ಯಾಕೆ ಬಂದರು?

ನಿಮ್ಮ ಮಗುವಿನ ಪೋಷಣೆಯ ಪ್ರಶ್ನೆ ಬಂದೊಡನೆ ನೀವು ನಿಮ್ಮ ಮನೆಯಲ್ಲಿನ ಯಾರನ್ನು ನಂಬುವುದಿಲ್ಲ. ನಿಮ್ಮ ಪತಿಯೂ ನಿಮ್ಮ ಮಗುವಿಗೆ ಎಷ್ಟೇ ಕಾಳಜಿ ಮಾಡಿದರು, ಅವರು ಮಾಡುತ್ತಿರುವುದು ತಪ್ಪು. ಏಕೆಂದರೆ “ನಿಮ್ಮ ಮಗು ಬಗ್ಗೆ ನಿಮಗೆ ಮಾತ್ರ ಸರಿಯಾಗಿ ಗೊತ್ತು!” ನಿಮಗೆ ಇವರೆಲ್ಲರನ್ನೂ ಮನೆಯಲ್ಲೇ ಬಿಟ್ಟು ನೀವ ಮತ್ತು ನಿಮ್ಮ ಮಗು ಇಬ್ಬರೇ ಎಲ್ಲಾದರು ಹೋಗಿ ಇರಬೇಕೆಂದು ಅನಿಸುವುದು. ಕಾಲಕ್ರಮೇಣ, ನೀವು ನಿಮ್ಮ ಮನೆಯವರು ನಿಮ್ಮ ಮಕ್ಕಳ ಕಾಳಜಿಗೆ ಹಾಕುತ್ತಿರುವ ಶ್ರಮವನ್ನು ನೀವು ಶ್ಲಾಘಿಸುತ್ತೀರ.

೫. ಅಪೇಕ್ಷೆ

ನೀವು ಜಗತ್ತಿನ ಅತ್ಯುತ್ತಮ ತಾಯಿ ಆಗುತ್ತೀರಿ

ವಾಸ್ತವ :

ನೀವು ಮಾಡುವ ಪ್ರತಿಯೊಂದು ವಿಷಯವು ತಪ್ಪು

ನೀವು ಎದೆಹಾಲು ನೀಡುವುದು, ಡಯಾಪರ್ ಬದಲಾಯಿಸುವುದು, ಪುಡಿಹಾಲು ಕುಡಿಸುವುದು, ಆಟ ಆಡಿಸುವುದು ನಿಮಗಿಂತ ಕೆಟ್ಟದಾಗಿ ಯಾರು ಮಾಡಲು ಸಾಧ್ಯವಿಲ್ಲ ಎಂದು ಅಂದುಕೊಳ್ಳುವಿರಿ. ನೀವು ಅತ್ಯುತ್ತಮ ತಾಯಿ ಆಗುವ ಕನಸು ಕಾಣುತ್ತಿರುತ್ತೀರಿ. ಅಯ್ಯೋ ನಾನು ಮಾಡಿದ ತಪ್ಪುಗಳನ್ನು ನನ್ನ ಮಗು ನೆನಪಲ್ಲಿ ಇಟ್ಟುಕೊಳ್ಳದೆ ಇದ್ದಾರೆ ಸಾಕಪ್ಪ ಎಂದುಕೊಳ್ಳುವಿರಿ. ನೀವು ಒಂದು ೮-೧೦ ಬಾರಿ ನೆಲದ ಮೇಲೆ ಹಾಲು ಚೆಲ್ಲಬಹುದು ಅಥವಾ ಇನ್ನೇನೋ ಎಡವಟ್ಟು ಮಾಡಿಕೊಳ್ಳಬಹುದು. ಆದರೆ ಇದರಿಂದ ನೀವು ಕಲಿಯುತ್ತೀರಿ. ಒಳ್ಳೆ ವಿಷಯ ಏನೆಂದರೆ ನೀವು ಮತ್ತಷ್ಟು ಮಕ್ಕಳನ್ನು ಬೆಳೆಸಲು ಒಳ್ಳೆ ಅನುಭವ ಪಡೆಯುತ್ತೀರಿ.

Tinystep Baby-Safe Natural Toxin-Free Floor Cleaner

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon