Link copied!
Sign in / Sign up
5
Shares

ಈ 5 ವಿಷಯಗಳನ್ನ ಮೊದಲ ಬಾರಿಗೆ ಗರ್ಭಿಣಿ ಆಗುತ್ತಿರುವವರು ತಿಳಿದಿರಲೇ ಬೇಕು

ಒಂದು ಹೆಣ್ಣಿನ ತಾಳ್ಮೆ, ಗುಣ, ಧೃತಿ ಎಲ್ಲವನ್ನೂ ಪರೀಕ್ಷಿಸುವ ಒಂದು ಕಾಲ ಎಂದರೆ ಅದು ಪ್ರೆಗ್ನನ್ಸಿ ಸಮಯ. ಇದು ಎಷ್ಟು ಉತ್ಸಾಹ ಭರಿತ ಸಮಯವೋ ಅಷ್ಟೇ ಸವಾಲಿನ ಸಮಯವೂ ಆಗಿರುತ್ತದೆ. ಈ ಕಾಲದಲ್ಲಿ ನಿಮಗೆ ಹಲವಾರು ಪ್ರಶ್ನೆಗಳು ಮೂಡುತ್ತವೆ, ಹಲವಾರು ಪ್ರಶ್ನೆಗಳು ಎದುರಾಗುತ್ತವೆ. ಮೊದಲ ಬಾರಿಗೆ ಗರ್ಭ ಧರಿಸುತ್ತಿರುವವರು ಸಾಮಾನ್ಯವಾಗಿ ಗೊಂದಲಕ್ಕೆ ಒಳಗಾಗುತ್ತಾರೆ ಮತ್ತು ಹೆದರಿಕೊಳ್ಳುತ್ತಾರೆ. ಇಂತಹ ಸಮಯದಲ್ಲಿ ನೀವು ವಿಷಯಗಳನ್ನ ಚೆನ್ನಾಗಿ ಅರಿಯುವುದು ಒಳ್ಳೆಯದು. ನೀವು ಮೊದಲ ಬಾರಿಗೆ ಗರ್ಭ ಧರಿಸಿದಾಗ ನೀವು ತಿಳಿದಿರಬೇಕಾದ ವಿಷಯಗಳು ಯಾವುದೆಂದು ನಾವು ಇಲ್ಲಿ ತಿಳಿಸುತ್ತೇವೆ ಓದಿ.

 

೧. ನೀವು ಗರ್ಭಿಣಿ ಎಂದು ಖಾತ್ರಿ ಮಾಡುವ ಸರಿಯಾದ ಲಕ್ಷಣಗಳು

ಹಲವಾರು ಲಕ್ಷಣಗಳು ನಿಮಗೆ ಸುಳ್ಳು ಸೂಚನೆಯನ್ನ ನೀಡಬಹುದು. ಖುಷಿಯಲ್ಲಿ ಬಹುತೇಕ ಮಂದಿ ನೋಡಬೇಕಾದ ಧೃಢವಾದ ಲಕ್ಷಣಗಳ ಕಡೆ ಗಮನವೇ ಕೊಡುವುದಿಲ್ಲ. ನೀವೇ ಮನೆಯಲ್ಲಿ ಯೂರಿನ್ (ಮೂತ್ರ) ಪರೀಕ್ಷೆ ಮಾಡಿಕೊಳ್ಳುವ ಮೂಲಕ ನೀವು ಗರ್ಭಿಣಿ ಆಗಿದ್ದೀರಾ ಎಂದು ನೋಡಿಕೊಳ್ಳುವುದರೊಂದಿಗೆ ನೀವು ಶುರು ಮಾಡಬಹುದು. ಮೆಡಿಕಲ್ ಸ್ಟೋರ್ಸ್ ಅಲ್ಲಿ ಸಿಗುವ ಹೋಂ ಪ್ರೆಗ್ನನ್ಸಿ ಟೆಸ್ಟ್ ಕಿಟ್ ಅನ್ನು ನೀವು ಖರೀದಿಸಿ ಪರೀಕ್ಷಿಸಿಕೊಳ್ಳಬಹುದು. ಇವುಗಳೊಂದಿಗೆ ನೀವು ಗಮನಿಸಬಹುದಾದ ಇತರೆ ಲಕ್ಷಣಗಳು ಎಂದರೆ ವಾಕರಿಕೆ, ಬೆನ್ನು ನೋವಿರಬಹುದು, ಚಿತ್ತ ಚಂಚಲತೆ ಉಂಟಾಗಬಹುದು, ಕೆಲವೊಂದು ತಿನಿಸುಗಳ ಬಯಕೆ ಉಂಟಾಗಬಹುದು ಮತ್ತು ನಿಮಗೇ ತಿಳಿದಿರುವ ಹಾಗೆ ನಿಮ್ಮ ಪಿರಿಯಡ್ಸ್ ಮಿಸ್ ಆಗುತ್ತದೆ. ನಿಮಗೆ ಇನ್ನೂ ಸಂಶಯವಿದ್ದರೆ, ವೈದ್ಯರ ಬಳಿ ಹೋಗಿ ಖಾತ್ರಿ ಪಡಿಸಿಕೊಳ್ಳಬಹುದು.

 

೨. ಲಸಿಕೆಯ ಮಹತ್ವವನ್ನು ಅರ್ಥ ಮಾಡಿಕೊಳ್ಳಿ

ಸರಿಯಾದ ಲಸಿಕೆಗಳು ಈ ಕಾಲದಲ್ಲಿ ಅತ್ಯಂತ ಮಹತ್ವವಾದವು. ತಾಯಿಯಲ್ಲಿನ ಯಾವುದಾದರು ಅಸ್ವಸ್ಥತೆಯು ಭ್ರೂಣದ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಗರ್ಭಿಣಿ ಹೆಂಗಸರಿಗೆ ಲಸಿಕೆ ನಿದಿಸುವುದರಿಂದ ಅಡ್ಡ ಪರಿಣಾಮಗಳು ಉಂಟಾಗುತ್ತವೆ ಎಂಬ ತಪ್ಪು ನಂಬಿಕೆ ಕೆಲವು ಜನರಲ್ಲಿ ಇದ್ದು, ಇದು ಅಕ್ಷರಸಹ ಸುಳ್ಳು. ಪ್ರೆಗ್ನನ್ಸಿ ಸಮಯದಲ್ಲಿ ಲಸಿಕೆಗಳನ್ನ ನೀಡುವುದರಿಂದ ಅನೇಕ ಉಪಯೋಗಗಳು ಇವೆ ಮತ್ತು ಗರ್ಭಿಣಿ ಹೆಂಗಸನ್ನು ಆರೋಗ್ಯಕರವಾಗಿ ಇಡಲು ಇದರ ಭಾಗ ತುಂಬಾ ಮಹತ್ವದ್ದಾಗಿದೆ.

 

೩. ಸ್ತ್ರೀರೋಗತಜ್ನರನ್ನ ಭೇಟಿ ಮಾಡಿ

ಕೆಲವೊಮ್ಮೆ ಜನರು ತಮಗೆ ತಾವೇ ವೈದ್ಯರು ಆಗಿಬಿಡುತ್ತಾರೆ. ಪ್ರೆಗ್ನನ್ಸಿ ಸಮಯದಲ್ಲಿ ಹೀಗೆ ಮಾಡುವುದು ಬಹಳ ಕೆಟ್ಟದ್ದು. ನಿಮಗೆ ಸ್ವಲ್ಪ ತೊಂದರೆ ಅಥವಾ ಸಂಶಯ ಉಂಟಾದರೂ ವೈದ್ಯರನ್ನ ಭೇಟಿ ಮಾಡಿ. ನೀವು ಒಬ್ಬರು ಒಳ್ಳೆಯ ಸ್ತ್ರೀರೋಗತಜ್ಞರನ್ನು ಹುಡುಕಿ, ಅವರೊಂದಿಗೆ ಒಳ್ಳೆಯ ಒಡನಾಟ ಇಟ್ಟುಕೊಳ್ಳುವುದು ತುಂಬಾನೇ ಮುಖ್ಯ. ಅವಾಗವಾಗ ನೀವು ಅವರಿಗೆ ಭೇಟಿ ನೀಡುತ್ತಲೇ ಇರಬೇಕು. ಒಂದು ವೇಳೆ ಮಗುವಿನ ಬೆಳವಣಿಗೆಯ ಹಂತದಲ್ಲಿ ಏನಾದರು ತೊಂದರೆಗಳು ಕಾಣಿಸಿಕೊಂಡರೆ, ತಜ್ಞರು ಅದನ್ನು ಆರಂಭದಲ್ಲೇ ಕಂಡು ಹಿಡಿದು ಸೂಕ್ತ ಸಲಹೆಗಳನ್ನ ನೀಡುತ್ತಾರೆ.

 

೪. ಗರ್ಭಧಾರಣೆಯು ಅಹಿತಕರ ಅನುಭವಗಳನ್ನು ಕೂಡ ಹೊಂದಿರುತ್ತದೆ

ಮೊದಲೇ ಹೇಳಿದಂತೆ ಪ್ರೆಗ್ನನ್ಸಿ ಸಮಯವು ಸವಾಲಿನ ಸಮಯ ಆಗಿರುತ್ತದೆ. ಇದು ಸುಲಭದ ಸಮಯವಲ್ಲ. ನೀವು ಪ್ರತಿದಿನ ಮಾಡುವ ಚಿಕ್ಕ ಪುಟ್ಟ ಕೆಲಸಗಳಾದ ಕೂತುಕೊಳ್ಳುವುದು, ನಡೆದಾಡುವುದು ಕೂಡ ನಿಮಗೆ ಅಹಿತಕರ ಎಣಿಸಬಹುದು. ಹೊಟ್ಟೆ ಕಟ್ಟುವುದು ಮತ್ತು ವಾಂತಿ ಮಾಡುವಂತಹ ಸಮಸ್ಯೆಗಳಿಂದ ನಿಮ್ಮ ಶಕ್ತಿಯೆಲ್ಲಾ ಕುಂದು ಹೋಗಿರುತ್ತದೆ. ಆರೋಗ್ಯಕರವಾದದ್ದನ್ನು ತಿನ್ನುವುದು, ಚೆನ್ನಾಗಿ ನೀರು ಕುಡಿಯುವುದು, ಸರಿಯಾದ ಪ್ರಮಾಣದ ದೈಹಿಕ ಚಟುವಟಿಕೆಗಳು ಮತ್ತು ವಿಶ್ರಾಂತಿ ಮಾಡುವುದರಿಂದ ನಿಮ್ಮ ಅಹಿತಕರ ಅನುಭವಗಳನ್ನ ಕಡಿಮೆ ಮಾಡಿಕೊಳ್ಳಬಹುದು.

 

೫. ಹೆರಿಗೆ ನೋವಿನ ಬಗ್ಗೆ ಅರ್ಥ ಮಾಡಿಕೊಳ್ಳುವುದು

ಸಮಯ ಬಂದಾಗ ನಿಮಗೇ ಹೆರಿಗೆ ನೋವು ಕಾಣಿಸಿಕೊಳ್ಳುತ್ತದೆ. ಇದಕ್ಕೂ ಮುಂಚೆ ನೀವು ವೈದ್ಯರನ್ನ ಭೇಟಿ ಮಾಡಿ ಹೆರಿಗೆ ನೋವು ಎಂದರೆ ಹೇಗಿರುತ್ತದೆ, ಹೇಗೆ ಅನಿಸುತ್ತದೆ ಎಂಬುದನ್ನು ಕೇಳಿಕೊಳ್ಳಿ. ಇದು ನೀವು ಸಿದ್ಧರಾಗಿರಲು ಸಹಾಯ ಮಾಡುತ್ತದೆ. ನಿಮಗೆ ಹೆರಿಗೆ ನೋವು ಕಾಣಿಸಿಕೊಂಡಾಗ ನಿಮ್ಮ ಸಂಕೋಚನಗಳ ಸಂಖ್ಯೆ ಮತ್ತು ತೀವ್ರತೆ ಎರಡೂ ಹೆಚ್ಚುತ್ತವೆ. ಹೆರಿಗೆ ನೋವು ಕಾಣಿಸಿಕೊಂಡ ಆರಂಭದಲ್ಲೇ ಸ್ವಲ್ಪ ನಡೆಯುವುದು ಒಳ್ಳೆಯ ಪರಿಹಾರ ಎಂದು ಹೇಳಲಾಗುತ್ತದೆ.

ನಾವು ನೋಡಿದಂತೆ ಗರ್ಭಧಾರಣೆಯ ಸಮಯವು ತುಂಬಾ ಸವಾಲಿನ ಸಮಯ ಆಗಿದ್ದು, ಹೆಜ್ಜೆ ಹೆಜ್ಜೆಗೂ ನಿಮ್ಮನ್ನು ಪರೀಕ್ಷಿಸುತ್ತದೆ. ನಿಮ್ಮ ಧೋರಣೆ ಪಾಸಿಟಿವ್ ಆಗಿರಬೇಕು ಮತ್ತು ಸವಾಲುಗಳನ್ನ ಎದುರಿಸಲು ನೋಡಬೇಕು. ಆದರೆ, ಇದು ನಿಮಗೇ ಗೊತ್ತಿಲ್ಲದೇ ನೀವೆಷ್ಟು ಗಟ್ಟಿಗಿತ್ತಿ ಎಂದು ನಿಮಗೆ ತೋರಿಸಿಕೊಡುತ್ತದೆ. ಪ್ರೆಗ್ನನ್ಸಿಯನ್ನು ಆನಂದಿಸಿ!

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon