Link copied!
Sign in / Sign up
22
Shares

ಮೈಗ್ರೇನ್ ಸಮಸ್ಯೆಯೇ? ಇಲ್ಲಿದೆ ಪರಿಹಾರ

ಮೈಗ್ರೇನ್ ತಲೆನೋವಿಗಿಂತ ಇನ್ನೊಂದು ನರಕಯಾತನೆ ಮನುಷ್ಯನಿಗೆ ಈ ಭೂ ಲೋಕದಲ್ಲಿಲ್ಲ.ಈ ತಲೆ ನೋವು ಕೆಲವೊಮ್ಮೆ ಗಂಟೆಗಟ್ಟಲೆ ಕಾಡಬಹುದು ಇಲ್ಲವೇ ಆಗಿಂದೊಮ್ಮೆ, ಈಗಿಂದೊಮ್ಮೆ ಕಾಡಬಹುದು. ಹಲವು ಸಂದರ್ಭಗಳಲ್ಲಿ ಇಂತಹ ತಲೆನೋವಿಗೆ ಕಾರಣವಾಗುವ ಕೆಲವು ಘಟಕಗಳಿರಬಹುದು. ಮೈಗ್ರೇನ್ ತಲೆನೋವಿನಿಂದ ಬಳಲುತ್ತಿದ್ದರೂ, ಮಕ್ಕಳನ್ನು ನೋಡಿಕೊಳ್ಳಬೇಕಾದ ಪರಿಸ್ಥಿತಿ ಇರುವ ತಾಯಿಯರ ಪಾಡಂತೂ ದಯನೀಯವಾಗಿರುವುದು.

ಕಂಗಾಲಾಗಬೇಡಿ. ನಿಮಗೆ ಉಪಯುಕ್ತವಾಗುವಂತಹ ಕೆಲವು ಸಲಹೆಗಳನ್ನು ಕೆಳಗೆ ನೀಡಿದ್ದೇವೆ.

೧.ಔಷಧಗಳ ಸೇವನೆ

ಯಾವುದೇ ರೀತಿಯ ಅಸೌಖ್ಯವಾಗಿರಲಿ, ಅದರಲ್ಲೂ ಮೈಗ್ರೇನ್ ತಲೆನೋವಾಗಿದ್ದರೆ, ಸರಿಯಾದ ಔಷಧೋಪಚಾರಗಳನ್ನು ಮಾಡಲೇಬೇಕು. ಹಾಗೆ ಮೈಗ್ರೇನ್ ತಲೆನೋವು ಹೆಚ್ಚಾಗುವುದಕ್ಕೂ ಮುನ್ನವೇ ಅದನ್ನು ಪಡೆಯಬಹುದು. ಹಾಗೆಂದು ಅಜಾಗರೂಕತೆಯಿಂದ ತೆಗೆದುಕೊಳ್ಳುವ ಮಾತ್ರೆಗಳು ಕೂಡ ತೊಂದರೆಯನ್ನುಂಟು ಮಾಡಬಹುದು. ಆದ ಕಾರಣ ವೈದ್ಯರ ಸಲಹೆಯಂತೆ ನಡೆದುಕೊಳ್ಳುವುದು ಉತ್ತಮ.

೨.ನಿಮ್ಮ ತಲೆನೋವಿನ ಮೂಲಕಾರಣ ಪತ್ತಹಚ್ಚಿರಿ

ನಿಮ್ಮ ತಲೆನೋವಿಗೆ ಕಾರಣವಾಗುವ ಅಂಶಗಳನ್ನು ಕಂಡುಕೊಂಡರೆ, ಅವುಗಳಿಂದ ಮುಂಜಾಗರೂಕರಾಗಿರಬಹುದು. ಅದು ಕೆಲವೊಮ್ಮೆ ಹೆಚ್ಚಿನ ಶಬ್ದ ಮಾಲಿನ್ಯವಾಗಿರಬಹುದು ಅಥವಾ ದಿನನಿತ್ಯದ ಚಟುವಟಿಕೆಗಳಿಂದ ಹೊರತಾದ ಯಾವುದಾದರೂ ಕೆಲಸಕಾರ್ಯಗಳಾಗಿರಬಹುದು.

೩.ಮೊದಲೇ ತಯಾರಾಗಿರಿ

ಔಷಧಗಳು,ಐಸ್ ಪ್ಯಾಕ್ ಮತ್ತು ಕುರುಕಲು ತಿಂಡಿಗಳನ್ನೊಳಗೊಂಡ, ಮೈಗ್ರೇನ್ ಬ್ಯಾಗ್ ಅನ್ನು ಸಿದ್ಧಮಾಡಿಟ್ಟುಕೊಳ್ಳುವುದರಿಂದ ನೋವು ಉಲ್ಬಣಿಸುವುದಕ್ಕೂ ಮುನ್ನವೇ ಅದನ್ನು ಮೊಳಕೆಯಲ್ಲೇ ಚಿವುಟಿ ಹಾಕಬಹುದು. ಕೆಲವೊಮ್ಮೆ ಮನೆಯಿಂದ ಹೊರ ಹೋಗುವಾಗಲೂ ಮೈಗ್ರೇನ್ ತಗುಲಬಹುದಾದಕಾರಣ ‘ಮೈಗ್ರೇನ್ ಬ್ಯಾಗ್’ ಅನ್ನು ಸದಾ ನಿಮ್ಮೊಂದಿಗಿಟ್ಟುಕೊಳ್ಳಿರಿ.

೪.ಜೀವನ ಶೈಲಿಯ ಬದಲಾವಣೆ

ನಮ್ಮ ಜೀವನ ಶೈಲಿಯೂ ಆರೋಗ್ಯದ ಮೇಲೆ ಪರಿಣಾಮವನ್ನುಂಟುಮಾಡುತ್ತದೆ.ಆದಕಾರಣ, ಮಾತ್ರೆಗಳನ್ನು ಸೇವಿಸುವ ಮೊದಲು ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳುವುದೂ, ಮೈಗ್ರೇನ್ ತಲೆನೋವನ್ನು ಕಿತ್ತೆಸೆಯಲಿರುವ ಉತ್ತಮ ಸರಳ ಮಾರ್ಗ. ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳಲಿಲ್ಲವೆಂದಾದರೆ, ಮೈಗ್ರೇನ್ ಸಮಸ್ಯೆಯಿಂದ ಹೊರಬರಲು ಖಂಡಿತ ಸಾಧ್ಯವಿಲ್ಲ

೫.ಬದಲೀ ವ್ಯವಸ್ಥೆ

ಆಗಾಗ್ಗೆ ಮಾತ್ರೆಗಳನ್ನು ಸೇವಿಸುವುದು ಖಂಡಿತವಾಗಿ ಒಳ್ಳೆಯದಲ್ಲ.ಮೈಗ್ರೇನ್‌ ತಲೆ ನೋವನ್ನು ಮಾರು ದೂರದಲ್ಲಿರಿಸಲು ಬದಲಿ ವ್ಯವಸ್ಥೆಗಳನ್ನು ಕಂಡುಕೊಳ್ಳಬೇಕು. ತಲೆನೋವಿನಿಂದ ಬಳಲುತ್ತಿರುವವರಿಗೆ ಹೇಳಿ ಮಾಡಿಸಿದಂತಹ ವರವೇ-‘ಯೋಗ’. ದಿನನಿತ್ಯವೂ ಪ್ರಾತಃಕಾಲದಲ್ಲಿ, ಮೂವತ್ತು ನಿಮಿಷಗಳ ಕಾಲ ಯೋಗ ಮಾಡಿದರೆ ದಿನವಿಡೀ ಮೈಗ್ರೇನ್‌ ತಲೆನೋವು ನಿಮ್ಮತ್ತ ಸುಳಿಯದು.

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

We have a great opportunity for you. You can EARN up to Rs 10,000/- every month right in the comfort of your own HOME. Sounds interesting? Fill in this form and we will call you.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon