Link copied!
Sign in / Sign up
28
Shares

ಸ್ಟ್ರೆಚ್ ಮಾರ್ಕುಗಳನ್ನ ಹೋಗಲಾಡಿಸುವ ಮಾರುಕಟ್ಟೆಯಲ್ಲಿನ ಟಾಪ್ 5 ಅತ್ಯುತ್ತಮ ಕ್ರೀಮ್ ಗಳು!

ನಿಮ್ಮ ಗರ್ಭಧಾರಣೆಯಿಂದ ಉಂಟಾಗುವ ಈ ಪಟ್ಟಿಗಳನ್ನ ಹುಲಿಯ ಪಟ್ಟಿಗಳು ಎಂದು ಕರೆಯುತ್ತಾರೆ ಕೆಲವರು. ನೀವು ಇದನ್ನ ಕಷ್ಟಪಟ್ಟು ಸಂಪಾದಿಸಿದ್ದೀರ ಮತ್ತು ನೀವು ಇಂದಿನಷ್ಟೇ ಸುಂದರವಾಗಿದ್ದೀರ. ಆದರೆ, ಒಂದು ವೇಳೆ ನೀವು ಇವುಗಳನ್ನ ಹೋಗಲಾಡಿಸಬೇಕು ಎಂದು ಅಂದುಕೊಂಡರೆ, ಅದರಲ್ಲಿ ತಪ್ಪೇನಿಲ್ಲ. ನಿಮಗೆ ಅನುಕೂಲವಾಗುವಂತೆ ನಿಮ್ಮ ತ್ವಚೆಗೆ ನೀವು ಏನು ಮಾಡಿಕೊಂಡರೂ ಅದು ಸಮರ್ಥನೀಯ. ನಿಮಗೆ ಸ್ಟ್ರೆಚ್ ಮಾರ್ಕುಗಳನ್ನ ನಿರ್ಮೂಲನೆ ಮಾಡಬೇಕು ಎಂದುಕೊಂಡರೆ, ನಿಮಗೆ ಸಹಾಯ ಹಸ್ತ ನೀಡಲು ನಾವಿದ್ದೇವೆ. ಜಗತ್ತಿನಾದ್ಯಂತ ಹೆಚ್ಚು ಪ್ರಶಂಸೆ ಮತ್ತು ಬಳಕೆಗೆ ಪಾತ್ರವಾಗಿರುವ 5 ಸ್ಟ್ರೆಚ್ ಮಾರ್ಕ್ ಉತ್ಪನ್ನಗಳು ಇಲ್ಲಿವೆ.

೧. ಬಯೋ ಆಯಿಲ್

ನೀವು ಈಗಾಗಲೇ ಬಯೋ ಆಯಿಲ್ ಚಮತ್ಕಾರದ ಬಗ್ಗೆ ಕೇಳಿರುತ್ತೀರಾ. ಇದು ವಿಟಮಿನ್ A,E,ಕ್ಯಾಲೆಂಡುಲ ಆಯಿಲ್, ಲ್ಯಾವೆಂಡರ್ ಆಯಿಲ್ ಮತ್ತು ರೋಸ್ಮರಿ ಆಯಿಲ್ - ಎಲ್ಲಾ ಸ್ಟ್ರೆಚ್ ಮಾರ್ಕುಗಳನ್ನ ಕಡಿಮೆ ಮಾಡುವ ಪದಾರ್ಥಗಳನ್ನ ಹೊಂದಿರುತ್ತದೆ. ಇದು ಎಣ್ಣೆ ಆಗಿದ್ದರು ಕೂಡ, ಇದು ಜಿಡ್ಡು ರಹಿತವಾದದ್ದು ಮತ್ತು ನಿಮ್ಮ ತ್ವಚೆಯು ಸುಲಭವಾಗಿ ಹೀರಿಕೊಳ್ಳುವಂತದ್ದು.

ಅಷ್ಟೇ ಅಲ್ಲದೆ, ಇದು ಬಣ್ಣ ನೀಡುವುದರಲ್ಲಿ, ಶುಷ್ಕತೆ ನಿರ್ಮೂಲನೆಯಲ್ಲಿ, ಚರ್ಮ ಒಡೆಯುವುದರಿಂದ ಮತ್ತು ಕಳೆಗುಂದುವುದರ ವಿರುದ್ಧ ಹೋರಾಡುತ್ತದೆ. ಎಲ್ಲದಕ್ಕಿಂತ ಬಹುಮುಖ್ಯವಾಗಿ, ನೀವು ಇದನ್ನು ನಿಮ್ಮ ಗರ್ಭಧಾರಣೆಯ ಎರಡನೇ ತ್ರೈಮಾಸಿಕದಿಂದಲೇ ಬಳಸಲು ಶುರು ಮಾಡಬಹುದು. ಈ ಮೂಲಕ ನೀವು ಅವುಗಳು ಉಂಟಾಗುವುದನ್ನೇ ತಪ್ಪಿಸಬಹುದು.

ಇದರ ಅದ್ಬುತ ಉಪಯೋಗ ಪಡೆದುಕೊಳ್ಳಲು, ಇಲ್ಲಿ ಕ್ಲಿಕ್ ಮಾಡಿ.


೨. ಮಾಮಾ-ಅರ್ಥ್ ಬಾಡಿ ಕ್ರೀಮ್

ಈ ಬಾಡಿ ಬಟರ್ ಶೇ ಬಟರ್, ಪೆಪ್ಟೈಡ್ ಮತ್ತು ಹಾಲಿನ ಪ್ರೋಟಿನ್ಗಳ ಒಳ್ಳೆಯ ಗುಣಗಳನ್ನ ಹೊಂದಿದೆ. ಸ್ಟ್ರೆಚ್ ಮಾರ್ಕುಗಳು ತ್ವಚೆಯ ಅತಿಯಾದ ಹಿಗ್ಗುವಿಕೆ ಇಂದ ಆಗಿರುವ ಕಾರಣ, ತ್ವಚೆಯು ನಿರ್ಜಲೀಕರಣ ಹೊಂದದೆ, ತೇವಾಂಶದಿಂದ ಕೂಡಿರಲು, ಅದಕ್ಕೆ ಪೋಷಣೆ ಬೇಕಾಗುತ್ತದೆ. ಆ ಪೋಷಣೆಯನ್ನು ಈ ಕ್ರೀಮ್ ಅದ್ಭುತವಾಗಿ ಮಾಡುತ್ತದೆ. ಇದು ಕಾಲಜನ್ ಅನ್ನು ಹೆಚ್ಚಿಸಿ, ತ್ವಚೆಯ ಸ್ಥಿತಿಸ್ಥಾಪಕತ್ವ ಹೆಚ್ಚಿಸುತ್ತದೆ.

ಅಷ್ಟೇ ಅಲ್ಲದೆ ಈ ಕ್ರೀಮ್ ಪರಾಬೆನ್, ಸಲ್ಫೇಟ್, ಮಿನರಲ್ ಆಯಿಲ್ ಮತ್ತು ಕೃತಕ ಸುಗಂಧವರ್ಧಕಗಳಂತಹ ಅಪಾಯಕಾರಿ ಪದಾರ್ಥಗಳನ್ನ ಹೊಂದಿರುವುದಿಲ್ಲ.

ನೀವು ಕೂಡ ಇದನ್ನ ಬಳಸಬೇಕೆಂದರೆ ಇಲ್ಲಿ ಕ್ಲಿಕ್ ಮಾಡಿ.


೩. ಪಾಮೆರ್ಸ್ ಕೋಕೋ ಬಟರ್

ಪಾಮೆರ್ಸ್ ಕೋಕೋ ಬಟರ್ ಅನ್ನು ವಿಶ್ವದೆಲ್ಲೆಡೆ ತಾಯಂದಿರು ಬಳಸುತ್ತಾರೆ - ಕಾರಣ ಇದನ್ನು ಗರ್ಭಿಣಿ ಹೆಂಗಸರಿಗೆಂದೇ ತಯಾರಿಸಲಾಗಿದೆ. ಇದು ಶುದ್ಧ ಕೋಕೋ, ಶೇ ಬಟರ್, ವಿಟಮಿನ್ E ಮತ್ತು ಇನ್ನಷ್ಟು ಉಪಯುಕ್ತ ಪದಾರ್ಥಗಳಿದ್ದು, ಇವೆಲ್ಲುವುಗಳು ಸ್ಟ್ರೆಚ್ ಮಾರ್ಕುಗಳನ್ನ ಕಡಿಮೆ ಮಾಡುವುದರಲ್ಲಿ ಮತ್ತು ಅಳಿಸಿ ಹಾಕುವುದರಲ್ಲೂ ಸಹಾಯ ಮಾಡುತ್ತವೆ. ಇದು ನಿಮ್ಮ ತ್ವಚೆಯ ಮೃದುತ್ವ ಮತ್ತು ನವಿರತೆಯನ್ನ ಕಾಪಾಡಿಕೊಂಡೇ ನಿಮ್ಮ ತ್ವಚೆಯ ಎಲಾಸ್ಟಿಸಿಟಿಯನ್ನ ಹೆಚ್ಚಿಸುತ್ತವೆ.

ಇಲ್ಲಿ ಕ್ಲಿಕ್ ಮಾಡುವುದರ ಮೂಲಕ ಇತರೆ ತಾಯಿಯರಂತೆ ನೀವು ಒಳ್ಳೆಯ ಅನುಭವ ಪಡೆದುಕೊಳ್ಳಿ.


೪. ದಿ ಮಾಮ್ಸ್ ಕೋ. ಸ್ಟ್ರೆಚ್ ಮಾರ್ಕ್ ಆಯಿಲ್

ಗರ್ಭಿಣಿ ಹೆಂಗಸರಿಗೆಂದೇ ವಿನ್ಯಾಸಗೊಳಿಸಿರುವ ಹಲವಾರು ಉತ್ಪನ್ನಗಳು ದಿ ಮಾಮ್ಸ್ ಕೋ. ಇಂದ ಬಂದಿದ್ದು, ಈ ಬ್ರಾಂಡ್ ಸಂಪೂರ್ಣ ನೈಸರ್ಗಿಕವಾದದ್ದು. 7 ಎಸೆನ್ಷಿಯಲ್ (ಪೂರಕ) ತೈಲಗಳ ಸರಿಯಾದ ಮಿಶ್ರಣವು, ನಿಮ್ಮ ಹೊಟ್ಟೆಯೊಳಗಿನ ಮಗುವಿಗೆ ತೊಂದರೆ ಉಂಟು ಮಾಡದೆ ನಿಮ್ಮ ಉದರದ ಮೇಲಿನ ತ್ವಚೆಗೆ ಪೋಷಣೆ ನೀಡುತ್ತವೆ. ಅಷ್ಟೇ ಅಲ್ಲದೆ ಇದು ವಿಟಮಿನ್ C ಮತ್ತು ರೋಸ್ ಹಿಪ್ ಆಯಿಲ್ ಅನ್ನು ಒಳಗೊಂಡಿದ್ದು, ಇವುಗಳು ಕಾಲಜನ್ ಉತ್ಪತ್ತಿಗೆ ಉತ್ತೇಜನ ನೀಡುತ್ತವೆ ಮತ್ತು ಹಾಳಾದ ತ್ವಚೆಗೆ ಚಿಕಿತ್ಸೆ ನೀಡುತ್ತವೆ. ಇದು ಕೇವಲ ಕಡಿಮೆ ವೆಚ್ಚದ ಉತ್ಪನ್ನ ಅಷ್ಟೇ ಆಗಿರದೆ, ಇದು ಒಂದು ದುಬಾರಿ ಬ್ರಾಂಡಿನ ಉತ್ಪನ್ನದ ಅನುಭವವನ್ನೇ ನೀಡುತ್ತದೆ.

ನೀವೂ ಇದನ್ನ ಖರೀದಿಸಬೇಕೆಂದರೆ ಇಲ್ಲಿ ಕ್ಲಿಕ್ ಮಾಡಿ.


೫. ಮೆಡೆರ್ಮ ಸ್ಟ್ರೆಚ್ ಮಾರ್ಕ್ ಥೆರಪಿ

ಮೆಡೆರ್ಮವು ಕಲೆಗಳನ್ನ ಅಳಿಸಿಹಾಕುವ ಉತ್ಪನ್ನಗಳಿಗೆ ಜಗತ್ತಿನಾದ್ಯಂತ ಹೆಸರುವಾಸಿ. ಇಲ್ಲಿ ಮೇಲಿರುವ ಉತ್ಪನ್ನವು ಅದಕ್ಕೆ ಹೊರತಾಗಿಲ್ಲ. ಇದು ಕೂಡ ಅದೇ ಫಾರ್ಮುಲಾ ಬಳಸಿ ತಯಾರಿಸಿದ್ದರೂ, ಗಮನವು ಸ್ಟ್ರೆಚ್ ಮಾರ್ಕುಗಳ ಮೇಲೆ ಇಟ್ಟುಕೊಂಡು ತಯಾರಿಸಲಾಗಿದೆ. ಬಹಳಷ್ಟು ತಾಯಂದಿರು ಈ ಕ್ರೀಮ್ ಅನ್ನು ರೆಗ್ಯುಲರ್ ಆಗಿ ಬಳಸುವುದರ ಮೂಲಕ ತಮ್ಮ 75% ಅಷ್ಟು ಸ್ಟ್ರೆಚ್ ಮಾರ್ಕುಗಳು ಮಾಯವಾಗಿವೆ ಎಂದು ಹೇಳಿಕೊಳ್ಳುತ್ತಾರೆ. ಹೀಗಾಗಿ ನೀವು ಸ್ವಲ್ಪ ಹೆಚ್ಚಿನ ದುಡ್ಡನ್ನು ಖರ್ಚು ಮಾಡಲಿಕ್ಕೆ ತಯಾರಿದ್ದು, ಒಳ್ಳೆಯ ಫಲಿತಾಂಶ ಬೇಕು ಎಂದರೆ ನೀವು ಈ ಉತ್ಪನ್ನವನ್ನು ಆಯ್ದುಕೊಳ್ಳಬಹುದು.

ಇದನ್ನ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon