Link copied!
Sign in / Sign up
13
Shares

ಮಾರ್ಚ್ ತಿಂಗಳ ನಿಮ್ಮ ರಾಶಿ ಭವಿಷ್ಯ.


ಮೇಷ

ಮಾರ್ಚ್ ನಲ್ಲಿ ನೀವು ತುಂಬ ಉತ್ಸುಕರಾಗಿರುತ್ತೀರಿ. ಈ ತಿಂಗಳು ಕೆಲಸದಲ್ಲಿ ಉತ್ತೇಜನವನ್ನು ನೀಡುತ್ತದೆ. ಶುಕ್ರ ಮಾರ್ಚ್ 6 ರಂದು ಮೇಷವನ್ನು ಪ್ರವೇಶಿಸುತ್ತದೆ, ಸ್ವಯಂ ನಿಮ್ಮ ಮೊದಲ ಮನೆಗೆ ಬೆಳಕು ಚೆಲ್ಲುತ್ತದೆ. ಇದು ನಿಮ್ಮ ಇಮೇಜ್ ಅನ್ನು ಒಂದು ಸೂಪರ್ಸ್ಟಾರ್ ಸ್ಪಾಟ್ಲೈಟ್ನೊಂದಿಗೆ ನಿಮ್ಮ ಪ್ರತಿಯೊಂದು ಚಲನೆಯ ಅನುಸರಿಸುವ ಮೂಲಕ ಪರಿಷ್ಕರಿಸುತ್ತದೆ. ಜನರು ನಿಮಗೆ ಆಕರ್ಷಿತರಾಗುತ್ತಾರೆ. ಜನರು ನಿಮ್ಮನ್ನು ತಿಳಿದುಕೊಳ್ಳಲು ಬಯಸುತ್ತಾರೆ. ಇದು ನೀವು ಪ್ರಯತ್ನಿಸದೆ ನಿಮ್ಮ ಪ್ರೀತಿಯ ಜೀವನ ಮತ್ತು ವೃತ್ತಿಗೆ ಅದ್ಭುತಗಳನ್ನು ತರುತ್ತದೆ. ಉತ್ತಮ ದಿನಗಳು ನಿಮ್ಮದಾಗುತ್ತದೆ. ಸೃಜನಾತ್ಮಕ ಯೋಜನೆಗಳಿಗೆ ಹೊಸ ಅವಕಾಶಗಳು ವಿಶೇಷವಾಗಿ ಸಂಗೀತ ಅಥವಾ ಇತರ ಅಧ್ಯಯನಗಳು ಸಂಬಂಧಿಸಿವೆ. ನೀವು ಈಗ ಕೆಲವು ದೀರ್ಘಕಾಲದ ಗುರಿಗಳನ್ನು ಆಯ್ಕೆ ಮಾಡಬೇಕಾಗುತ್ತದೆ.

ವೃಷಭ

ಈ ತಿಂಗಳುಗಳಲ್ಲಿ ನೀವು ಬ್ಯುಸಿ ಆಗಿರುವಿರಿ. ಚಿಕ್ಕ ವಿಷಯಗಳಿಗೆ ಕೋಪಗೊಳ್ಳುವಿರಿ ಮತ್ತು ಬೇರೆಯೊಬ್ಬರಮೇಲೆ ಉರಿದುಬೀಳುವಿರಿ. ಹಣಕಾಸಿನ ತೊಂದರೆಗಳು ದೂರವಾಗುತ್ತದೆ. ಒಳ್ಳೆಯ ಸ್ನೇಹಿತರಉ ನಿಮಗೆ ಈ ತಿಂಗಳನ್ನು ಸಿಗುವರು, ನೀವು ಅವರೊಂದಿಗೆ ಮಾತನಾಡುವುದಲ್ಲದೆ ಹೊರಹೋಗಿ ಅವರಜೊತೆ ಓಡಾಡುವಿರಿ. ಮನೆಯಲ್ಲಿ ತಂದೆ ತಾಯಿ ನಿಮ್ಮ ಮೇಲೆ ಕೋಪ ಮಾಡಿಕೊಳ್ಳಬಹುದು. ಕಡಿಮೆ ಖರ್ಚು ವೆಚ್ಚ ಮಾಡುವುದು ಒಳ್ಳೆಯದು. ನೀವು ಪ್ರೀತಿಯಲ್ಲಿದ್ದರೆ ನಿಮ್ಮ್ಮ ಸಂಗಾತಿಯೊಡನೆ ಮಾತುಕತನಡುವಾಗ ಜಾಗ್ರತೆ ವಹಿಸಿ ಇಲ್ಲವಾದರೆ ನೀವು ಹೇಳುವುದನ್ನು ಅವರು ಬೇರೆ ರೀತಿಯಲ್ಲಿ ಅರ್ಥೈಸಬಹುದು. ಅದ್ಯಾರ್ತಿನಿಕ ವಿಷಯಗಳಲ್ಲಿ ಹೆಚ್ಚು ಆಸಕ್ತರಾಗುತ್ತೀರಿ. ಮನಸ್ಸಿಗೆ ನೆಮ್ಮದಿ ಸಿಗುವುದು.

ಮಿಥುನ

2018 ರಲ್ಲಿ ಮಿಥುನ ರಾಶಿಯವರಿಗೆ ಮದುವೆಗೆ ಅಂತವರು ಈ ತಿಂಗಳನ್ನು ಪರಿಗಣಿಸಬೇಕು. ಅಂತಹ ಕಾರ್ಯಕ್ರಮಕ್ಕಾಗಿ ಮಾರ್ಚ್ ಪರಿಪೂರ್ಣ ತಿಂಗಳು ಎಂದು ತಿಳಿಯಬೇಕು. ನಿಮ್ಮ ಮನಸ್ಸಿನಲ್ಲಿದ್ದ ಹಳೆಯ ನಿಧಾನವಾಗಿ ಮರೆಯಾಗುತ್ತವೆ. ನಿಮ್ಮ ಮನಸ್ಸಿನಲ್ಲಿ ಏನೋ ಗೊಂದಲ ಯಾರ ಬಳಲಿಯು ಹೇಳಲಾಗದ ವಿಷಯಗಳನ್ನು ಹೇಳಲು ಪ್ರಯತ್ನಿಸುವಿರಿ. ಜಾತಕವು ಅವನ ಅಥವಾ ಅವಳ ಮನಸ್ಸಿನಲ್ಲಿ, ಭಾವನೆಗಳು ನಿಧಾನವಾಗಿ ಚಲಿಸುವುದಕ್ಕೆ ಪ್ರಾರಂಭಿಸುತ್ತವೆ, ನೀವು ನಿಮ್ಮ ಭವಿಷ್ಯದ ಸಂಬಂಧಗಳ ಬಗ್ಗೆ ಯೋಚಿಸುವುದು ಒಳ್ಳೆಯದು. ಮಾರ್ಚ್ 14ರ ನಂತರ ಮನೆಯ ವಾತಾವರಣದಲ್ಲಿ ಒಳ್ಳೆಯ ಬದಲಾವಣೆಕಾಣುವುದು. ನಿಮ್ಮ ಸಾಮಾಜಿಕ ಜೀವನದಲ್ಲಿ ಗೌರವ ಹೆಚ್ಚಾಗುವುದು.

ಕಟಕ

ನಿಮ್ಮ ಶಿಕ್ಷಣವನ್ನು ಮುಂದುವರಿಸಲು ನೀವು ಪ್ರವಾಸವನ್ನು ತೆಗೆದುಕೊಳ್ಳಲು ನಿರ್ಧರಿಸಬಹುದು.. ಮಾರ್ಚ್ 8 ಮತ್ತು 9 ನೇ ದಿನಗಳು ತುಂಬ ಒಳ್ಳೆಯ ದಿನಗಳು. ನೀವು ಏನೇ ಸಮಸ್ಯೆ ಬಂದರು ದೈರ್ಯವಾಗಿ ಎದಿರಿಸುತ್ತೀರಿ. ಮತ್ತು ವಿಶೇಷವಾಗಿ ನಿಮ್ಮ ಮನಮೋಹಕ ಬರವಣಿಗೆ ಮತ್ತು ಮಾತನಾಡುವ ಸಾಮರ್ಥ್ಯದೊಂದಿಗೆ ಹಲವರ ಹೃದಯಗಳನ್ನು ಸ್ಪರ್ಶಿಸಬಹುದು. ದಿನಾಂಕ 14 ರ ನಂತರ ಒಡಹುಟ್ಟಿದವರನ್ನು ಭೇಟಿಯಾಗಬಹುದು. ಪೋಷಕರು ಮಕ್ಕಳ ಓದಿನ ಕಡೆ ಗಮನಹರಿಸಬೇಕು. ಈ ತಿಂಗಳು ನಿಮ್ಮ ಪ್ರಯಾಣ ಹೆಚ್ಚಾಗುತ್ತದೆ ಬೇರೆ ಬೇರೆ ಸ್ಥಳಗಳಿಗೆ ಭೇಟಿ ನೀಡುವಿರಿ. ಹೊರಗಿನ ಆಹಾರಸೇವನೆಯಿಂದ ಸ್ವಲ್ಪ ದೂರವಿರಿ. ಈ ತಿಂಗಳನ್ನು ನೀವು ಸಂತೋಷದಿನ ಕಳೆಯುವಿರಿ.

ಸಿಂಹ

ನಿಮ್ಮ ಕೆಲಸಗಳು ಈ ತಿಂಗಳು ನಿಧಾನಗತಿಯಲ್ಲಿ ಸಾಗುತ್ತವೆ. ಆರ್ಥಿಕವಾಗಿ ಮುನ್ನಡೆ. ಬಾಕಿ ಇರುವ ಹಣ ಅಥವಾ ಯಾರಿಗಾದರೂ ಕೊಟ್ಟಿದ್ದ ಹಣ ನಿಮ್ಮ ಕೈಸೇರುವುದು. ನೀವು ಬೇರೆಯವರೊಂದಿಗೆ ಬೆರೆತು ಮಾತನಾಡುವುದನ್ನು ಕಲಿಯಿರಿ. ಈ ತಿಂಗಳು ಹೆಚ್ಚು ಪ್ರವಾಸ ಕೈಗೊಳ್ಳುವಿರಿ. ಪ್ರವಾಸದ ಸಮಯದಲ್ಲಿ ಬಿಸಿಲಿನಿಂದ ಬಳಲಬಹುದು. ಸನ್ನಿವೇಶಗಳು ನಿಮ್ಮ ಪರವಾಗಿರುತ್ತದೆ ಮತ್ತು ಹಣಕಾಸಿನ ವಿಚಾರದಲ್ಲಿ ನೀವು ಉತ್ತಮವಾಗಿರುವುದನ್ನು ನೀವು ಮನಗಾಣುತ್ತೀರಿ. ಮಕ್ಕಳು ಹೆಚ್ಚು ಶ್ರಮವಹಿಸಬೇಕು ಮತ್ತು ನೀವು ಅವರ ಕಾಳಜಿ ವಹಿಸಬೇಕು. ಕೈತುಂಬಿಕ ಸಮಸ್ಯೆಗಳನ್ನು ಬಗೆಹರಿಸಲು ಬೇರೆಯರೊಂದಿಗೆ ಚರ್ಚಿಸಿದರೆ ಪ್ರಯೋಜನವಿಲ್ಲ. ಸಮಸ್ಯೆ ಏನಿದ್ದರೂ ಸಂಗಾತಿಯೊಡನೆ ಚರ್ಚಿಸಿ ಬಗೆಹರಿಸಿಕೊಳ್ಳಿ.

ಕನ್ಯಾ

ವಿದ್ಯಾರ್ಥಿಗಳು ಗಮನ ಕೇಂದ್ರೀಕರಣದಲ್ಲಿ ಕೊರತೆ ಎದುರಿಸಬಹುದು. ಹೀಗಾಗಿ ಕಠಿಣ ಪರಿಶ್ರಮ ಅವರ ಯಶಸ್ಸಿಗೆ ಮುಖ್ಯವಾಗಿರುತ್ತದೆ. ಮಕ್ಕಳ ಆರೋಗ್ಯದಲ್ಲಿ ಸಮಸ್ಯೆ ಉಂಟಾಗಬಹುದು ಮತ್ತು ಸ್ವಲ್ಪ ಮಟ್ಟಿನ ಕಿರಿಕಿರಿಯನ್ನು ಅವರು ಅವರು ಅನುಭವಿಸಬಹುದಾದ್ದರಿಂದ ಮಕ್ಕಳ ಕಾಳಜಿ ವಹಿಸಬೇಕು. ಆಫೀಸ್ ಕೆಲಸಗಳು ಸರಾಗವಾಗಿ ಆಗುತ್ತವೆ.. ನಿಮ್ಮ ಪ್ರಯತ್ನಗಳು ಯಶಸ್ಸು ಸಾಧಿಸುತ್ತವೆ. ಯಾವುದೇ ದೀರ್ಘಾವಧಿ ನಿರೀಕ್ಷೆಗಳು ಪೂರ್ಣಗೊಳ್ಳುತ್ತವೆ. ಮನೆಯಲ್ಲಿಮದುವೆ ಮಾತುಗಳನ್ನಾಡುತ್ತಾರೆ, ಆದರೆ ನೀವು ಅದಕ್ಕೆ ತಯಾರಾಗಿರುವುದಿಲ್ಲ. ಅನೀರಿಕ್ಷಿತ ಖರ್ಚು ವೆಚ್ಚ ಹೆಚ್ಚಾಗುತ್ತದೆ. ಹಳೆಯ ಗೆಳಯ-ಗೆಳತಿಯನ್ನು ಭೇಟಿ ಮಾಡುವಿರಿ. ಅತಿಯಾದ ಯೋಚನೆಯನ್ನು ನಿಲ್ಲಿಸಿ. ದಿನವೂ ವ್ಯಾಯಾಮ ಮಾಡಿ. ಮನಸ್ಸಿಗೆ ನಮ್ಮದಿ ಸಿಗುವುದು.

ತುಲಾ

ಜನವರಿಯಿಂದ ಮಾರ್ಚ್‌ವರೆಗೆ ನಿಮ್ಮ ಗಳಿಕೆಯಲ್ಲಿ ಏರಿಕೆ ಸಾಧ್ಯತೆ ಇದೆ. ವ್ಯವಹಾರದಲ್ಲಿ ಸ್ವಲ್ಪ ಎಚ್ಚರವಿರಲಿ, ಸುಮ್ಮನೆ ಯೋಚಿಸದೆ ಹಣಹೂಡಬೇಡಿ. ಈ ತಿಂಗಳು ಒಬ್ಬ ವ್ಯಕ್ತಿ ಅದರಲ್ಲೂ ಒಂದು ಹೆಣ್ಣು ನೀವು ಮಾಡುವ ಕೆಲಸದಲ್ಲಿ ಮುಖ್ಯ ಪಾತ್ರವಹಿಸುತ್ತಾರೆ ಅದು ನಿಮ್ಮ ಹೆಂಡತಿ ಅಥವಾ ಅಮ್ಮ, ಅಕ್ಕ-ತಂಗಿ ಆಗಿರಬಹುದು. ನಿಮ್ಮ ಪ್ರೀತಿಯ ವಿಷಯಗಳ ಬಗ್ಗೆ ಚಿಂತೆ ಬಿಟ್ಟು ಭವಿಷ್ಯದ ದೃಷ್ಟಿ ಇಂದ ಹಳೆ ಯಾ ಘಟನೆಗಳನ್ನು ಮರೆಯಲು ಪ್ರಯತ್ನಿಸಿ. ನೀವು ಮಾಡುವ ಕೆಲಸದಲ್ಲಿ ನಿಮಗೆ ಪೈಪೋಟಿ ನೀಡಲು ಕೆಲವರು ಎದುರಾಗುವರು ಜಾಣ್ಮೆಯಿಂದ ಎದುರಿಸಿ. ಮತ್ತೆ ಮಾಣಿಕ್ಯ ಎಂಬ ಮಾತು ನೆನಪಿರಲಿ. ಸುಮ್ಮನೆ ಯಾರಿಗೂ ಮರುಳಾಗಬೇಡಿ.

ವೃಶ್ಚಿಕ

ನಿಮ್ಮ ವಿರೋಧಿಗಳ ಮೇಲೆ ನೀವು ಯಶಸ್ಸು ಸಾಧಿಸುತ್ತೀರಿ. ಸಮಸ್ಯೆ ಇಂತಹದೇ ಇದ್ದರು ನೀವು ಅದರಿಂದ ಹೊರಬರುತ್ತೀರಿ. ಹಿರಿಯರ ಆಶೀರ್ವಾದ ನಿಮ್ಮ ಮೇಲೆ ಯಾವಾಗಲು ಇದ್ದೇ ಇದೆ. ಆರಾಮದಾಯಕವಾಗಿ ದಿನಗಳನ್ನು ಕಳೆಯುತ್ತೀರಿ. ಮಾಡಿದರೆ ಬುದ್ದಿಹೇಳಿ, ಗಂಡನಜೊತೆ ಜಗಳಬೇಡ. ಮನೆಯ ಕೆಲಸಗಳು ನಿದಾನವಾಗಿ ಸಾಗುತ್ತವೆ ಆದರೆ ಏನು ತೊಂದರೆ ಇಲ್ಲ. ನಿಮ್ಮನ್ನು ಅಗೌರವದಿಂದ ನೀವೇ ದೂರವಿರಿ. ಬೇರೆಯವರಜೊತೆ ನಿಮ್ಮ ಗುಪ್ತವಿಷಯಗಳನ್ನು ಚರ್ಚಿಸಬೇಡಿ. ನಿಮ್ಮ ವ್ಯಾಪಾರ ದಲ್ಲಿ ಒಳ್ಳೆಯ ಲಾಭ, ವ್ಯಾಪಾರಿಗಳಿಗೆ ಲಾಭ,ಗಿರಾಕಿಗಳು ನಿಮ್ಮನು ಹುಡುಕಿಕೊಂಡು ಬರುತ್ತಾರೆ. ಈ ತಿಂಗಳು ನಿಮಗೆ ಶುಭತರುತ್ತದೆ.

ಧನಸ್ಸು

ಈ ತಿಂಗಳು ನಿಮ್ಮ ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ, ಮಾಡುವ ಕೆಲಸದಲ್ಲಿ ಲಾಭ. ಫೆಬ್ರವರಿ ತಿಂಗಳಲ್ಲಿ ನೀವು ಬಳಲಿದ್ದೀರಿ, ಈ ತಿಂಗಳು ನಿಮಗೇ ಶುಭ ಸುದ್ದಿ ಯನ್ನು ತರಲಿದೆ. ಎಲ್ಲ ವಿಷಯದಲ್ಲೂ ಒಳ್ಳೆಯ ಬೆಂಬಲ ನಿಮಗೆ ಸಿಗುತ್ತದೆ. ಒಳ್ಳೆಯ ಸ್ಥಳಗಳಿಗೆ ಭೇಟಿ ನೀಡುವಿಡಿ, ಹೊಸ ವಿಷಯಗಳನ್ನು ಕಲಿಯಲು ಆಸಕ್ತಿ ಬರುತ್ತದೆ. ಪ್ರೀತಿಯ ವಿಚಾರಗಳನ್ನು ಬೇರೆಯವರ ಬಳಿ ಹೇಳಬೇಡಿ. ಒಬ್ಬೊಬ್ಬರ ಅಭಿಪ್ರಾಯಗಳು ಒಂದೊಂದೂತರ ಇರುತ್ತದೆ ನಿಮ್ಮ ಆಲೋಚನಾ ಶಕ್ತಿಯಿಂದ ವಿಚಾರಗಳನ್ನು ಬಗೆಹರಿಸಿಕೊಳ್ಳಿ. ನಿಮ್ಮ ಸಂಗಾತಿಯಿಂದ ನಿಮಗೆ ಶುಭಸುದ್ದಿ ಬರುವುದು. ನೀವು ಸಾಂಸಾರಿಕ ಜೀವನದಲ್ಲಿ ಒಳ್ಳೆಯ ಸುಖವನ್ನು ಅನುಭವಿಸುತ್ತೀರಿ.

ಮಕರ

ನಿಮ್ಮ ಮಾರ್ಚ್ ಜಾತಕದ ಪ್ರಕಾರ ಈ ತಿಂಗಳನ್ನು ನೀವು ಆರಾಮದಾಯಕ ವಾಗಿ ಆಯಾಸವಿಲ್ಲದೆ ಕಳೆಯುತ್ತೀರಿ. ಸಾಂಸಾರಿಕ ಜೀವನದ ಜಂಜಾಟದಲ್ಲಿ ನೀವು ನಿಮ್ಮ ವಿಶ್ರಾಂತಿಯನ್ನು ಮರೆತಿರುವಂತಿದೆ, ನೀವು ಕೆಲಸವನ್ನು ಕಡಿಮೆ ಮಾಡಿ ನಿಮ್ಮ್ಮ ವಯಕ್ತಿಕ ವಿಷಯಗಳತ್ತ ಗಮನಹರಿಸಿ, ವ್ಯಾಯಾಮ ಮಾಡಿ, ಒಳ್ಳೆಯ ಆಹಾರ ಸೇವಿಸಿ, ಮನರಂಜನಾ ಕ್ಷೇತ್ರಗಳಿಗೆ ಭೇಟಿ ನೀಡಿ. ನಿಮಗಾಗುತ್ತಿರುವ ತೊಂದರೆಗಳನ್ನು ನಿಮ್ಮ ಹಿರಿಯರಿಗೆ ಹೇಳಿ, ಈ ಸಮಯ ಅಸ್ತಿ ಸಂಬಂದಿತ ಜಗಳದಿಂದ ನಿಮ್ಮನ್ನು ಬಿಡುಗಡೆ ಗೊಳಿಸುತ್ತದೆ. ನಿಮ್ಮ ಸಂಗಾತಿಯೊಂದಿಗೆ ಉತ್ತಮ ಬಾಂದವ್ಯಯನ್ನು ಹೊಂದಲು ಪ್ರಯತ್ನಿಸಿ. ಹಿರಿಯರ ಆಶೀರ್ವಾದ ನಿಮ್ಮ ಮೇಲಿರುವುದು. ಒಳ್ಳೆಯ ಆಹಾರಸೇವಿಸಿ.

ಕುಂಭ

ನಿಮ್ಮ ವೆಚ್ಚ ಹೆಚ್ಚಾಗುತ್ತದೆ ಮತ್ತು ನಿಮ್ಮ ಹಣಕಾಸು ಕುಸಿದಿದೆ ಎಂಬ ಭಾವವನ್ನೂ ನೀವು ಅನುಭವಿಸುತ್ತೀರಿ. ವಿದ್ಯಾರ್ಥಿಗಳು ಶಿಕ್ಷಣದತ್ತ ಹಾಗೂ ಹೊಸ ಸಂಗತಿಗಳನ್ನು ಕಲಿಯುವುದರ ಕಡೆಗೆ ಹೆಚ್ಚು ಗಮನ ಹರಿಸುತ್ತಾರೆ. ಮಾರ್ಚ್‌ ಇಂದ ಮೇ ವರೆಗೆ ಅವರು ತಮ್ಮ ಪರ ಅಲೆ ಇರುವುದರಿಂದ ಹಿರಿಯರೊಂದಿಗೆ ಉತ್ತಮ ಸಂಬಂಧವನ್ನು ನಿರ್ವಹಿಸುತ್ತಾರೆ. ಹಿಂದೆ ಮಾಡಿದ್ದ ಅಸ್ತಿ ನಿಮಗೆ ಲಾಭವನ್ನು ತಂದುಕೊಡುತ್ತದೆ. ನೀವು ನಿಮ್ಮ ಬಾಹ್ಯ ಸೌಂದರ್ಯವನ್ನು ಹೆಚ್ಚಿಸಿಕೊಳ್ಳೂಯ್ ಪ್ರಯತ್ನಿಸುತ್ತೀರಿ. ದಿನವೂ ವ್ಯಾಯಾಮ,ಒಳ್ಳೆಯ ಆಹಾರ ಸೇವನೆಯಿಂದ ಇದು ಸಾಧ್ಯ. ಸುಮ್ಮನೆ ಪರಸ್ಪರ ಜಗಳವಾಡುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ ಎಂದು ನೀವು ಅರಿಯಬೇಕು. ಹೊರಗಿನ ಕೆಲಸ ಎಷ್ಟೇ ಇದ್ದರು ನಿಮ್ಮ ಮಕ್ಕಳೊಂದಿಗೆ ಕಾಲ ಕಳೆಯಲು ಬಿಡುವು ಮಾಡಿಕೊಳ್ಳಿ.

ಮೀನಾ

ಅತಿಯಾದ ಒತ್ತಡ ಮತ್ತು ಅತಿಯಾದ ಕೆಲಸ ನಿಮ್ಮನ್ನು ಸಂಕಷ್ಟಕ್ಕೆ ದೂಡುತ್ತದೆ. ಕೆಲಸದ ಸ್ಥಳದಲ್ಲಿ, ನಿರೀಕ್ಷಿತ ಫಲಿತಾಂಶಗಳನ್ನು ಪಡೆಯಲು ಹೆಚ್ಚುವರಿ ಪ್ರಯತ್ನ ಹಾಕುವುದರಲ್ಲಿ ನೀವು ನಂಬಿಕೆ ಇರಿಸಬೇಕು. ಹಣಕಾಸಿನ ಸಮಸ್ಯೆ ದೂರವಾಗುತ್ತದೆ. ಸಂಗತಿಯಜೊತೆ ಪ್ರೇಕ್ಷಣೀಯ ಸ್ಥಳಗಳಿಗೆ ಪ್ರವಾಸ ಕೈಗೊಳ್ಳಲು ಚಿಂತನೆ ನಡೆಸುವಿರಿ. ಮನೆ ಕೆಲಸ ಕಾರ್ಯಗಳು ಸರಾಗವಾಗಿ ಸಾಗುತ್ತದೆ. ಸ್ವಂತ ಮನೆಕಟ್ಟುವ ಬಗ್ಗೆ ಯೋಚಿಸುವಿರಿ . ಕೆಲಸದಲ್ಲಿ ನೀರೀಕ್ಷಿದ ಉತ್ತಮ ಫಲಿತಾಂಶ ನಿಮ್ಮದಾಗುವುದು. 

Tinystep Baby-Safe Natural Toxin-Free Floor Cleaner

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon