Link copied!
Sign in / Sign up
11
Shares

ವಿಶ್ವ ಸುಂದರಿ ಮಾನುಷಿ ಅವರ ಆಹಾರಪಟ್ಟಿ ಮತ್ತು ವ್ಯಾಯಾಮಗಳು

ವಿಶ್ವ ಸುಂದರಿಯ ಕೋಲಾ ಬಾಟಲಿಯಂತ ದೇಹವನ್ನು ನೋಡಿ ಅಸೂಯೆ ಪಡುತ್ತಿದ್ದೀರಾ? ಆದರೆ ಆಕೆಯ ಆಹಾರಪದ್ಧತಿ ಮತ್ತು ವ್ಯಾಯಾಮ ರೂಢಿಗಳನ್ನು ನೀವೂ ಪಾಲಿಸಿದರೆ, ನೀವು ಕೂಡ ಅಂತಹದ್ದೇ ದೇಹ ಪಡೆಯಬಹುದು.ವಿಶ್ವ ಸುಂದರಿ ಮಾನುಷಿ ಚಿಲ್ಲರ್ ಅವರ ಫಿಟ್ನೆಸ್ ಗುರು, ಪೌಷ್ಟಿಕತಜ್ಞೆ ಮಾಮಿ ಅಗರ್ವಾಲ್ ಅವರು ಸುಂದರವಾದ, ದೃಢವಾದ ಮೈಕಟ್ಟು ಬೆಳೆಸಿಕೊಳ್ಳುವುದು ಹೇಗೆ ಎಂದು ಹೇಳಿದ್ದಾರೆ.

 

ತಿಂಡಿಯನ್ನು ತಿನ್ನುವುದು ತಪ್ಪಿಸುವಂತಿಲ್ಲ : ತಿಂಡಿಯನ್ನು ತಪ್ಪಿಸುವುದರಿಂದ ದಿನದ ಕೊನೆಗೆ ನಿಮ್ಮನ್ನು ಮತ್ತಷ್ಟು ತಿನ್ನುವಂತೆ ಮಾಡುತ್ತದೆ ಮತ್ತು ದೇಹದಲ್ಲಿನ ಕೆಲವು ಶುಗರ್ ಕರಗುವುದಿಲ್ಲ.

ರೆಗ್ಯುಲರ್ ಊಟವನ್ನೇ ಮಾಡಿ ಆದರೆ ಚಿಕ್ಕ ತಟ್ಟೆಯನ್ನು ಬಳಸಿ : ಊಟವನ್ನು ನಿಯಮಿತವಾಗಿ ತಿನ್ನುವುದರಿಂದ ಕೊಬ್ಬು ಮತ್ತು ಸಕ್ಕರೆ ಹೆಚ್ಚಿರುವಂತಹ ತಿನಿಸುಗಳನ್ನು ತಿನ್ನುವ ಬಯಕೆ ಕಡಿಮೆ ಮಾಡುತ್ತದೆ.

ಸಕ್ಕರೆಯನ್ನು ದೂರವಿಡಿ, ಅದರಲ್ಲೂ ಮುಖ್ಯವಾಗಿ ರಿಫೈನ್ಡ್ ಶುಗರ್.

 

ನಿಮಗೆ ಸಹಾಯವಾಗಲೆಂದು ಇಲ್ಲಿದೆ ಒಂದು ಸ್ಯಾಂಪಲ್ ಆಹಾರಪಟ್ಟಿ

 

ಮುಂಜಾನೆ ಎದ್ದೊಡನೆ : 2-3 ಲೋಟದಷ್ಟು ಬಿಸಿ ನೀರು (ನಿಂಬೆರಸದ ಜೊತೆಗೆ ಅಥವಾ ಅದಿಲ್ಲದೆ) ಕುಡಿಯಿರಿ.

ತಿಂಡಿ : ಓಟ್ಸ್ , ತಾಜಾ ಹಣ್ಣುಗಳು, ಕಾಲುಗಳು ಅಥವಾ 2-3 ಮೊಟ್ಟೆಯ ಬಿಳಿಯ ಭಾಗ, ಬಟರ್ ಫ್ರೂಟ್, ಕ್ಯಾರಟ್, ಬೀಟ್ರೂಟ್ ಮತ್ತು ಗೆಣಸು.

ಊಟಕ್ಕೂ ಮುಂಚೆ : ಒಂದು ಲೋಟ ಎಳನೀರು ಮತ್ತು ಹಣ್ಣುಗಳು.

ಊಟದ ಸಮಯ : ಚಪಾತಿ/ಅನ್ನ ಜೊತೆಗೆ ಒಂದು ಬಟ್ಟಲು ಕತ್ತರಿಸಿದ ಚಿಕನ್/ಕಾಲುಗಳು.

ಸಂಜೆ : ಉಪ್ಪಿಲ್ಲದ ಕಾಳುಗಳು/ಬೀಜಗಳು ಜೊತೆಗೆ ಒಂದು ಹಣ್ಣು ಅಥವಾ ಬಾಳೆಹಣ್ಣಿನ ರಸಾಯನ.

ರಾತ್ರಿ : ಚಿಕನ್/ಮೀನು ಜೊತೆಗೆ ಬೇಯಿಸಿದ ತರಕಾರಿಗಳು

 

ನೀವು ತೊಡಗಿಸಿಕೊಳ್ಳಬೇಕಿರುವ ಚಟುವಟಿಕೆಗಳು

ರೆಗ್ಯುಲರ್ ಆಗಿ ಯೋಗ ಮಾಡಿ : ದೇಹದ ಆಕಾರವನ್ನು ಸರಿಯಾಗಿ ಕಾಪಾಡಿಕೊಳ್ಳಲು ಮತ್ತು ಸ್ನಾಯುಗಳನ್ನು ಒಳ್ಳೆಯ ಆರೋಗ್ಯದಲ್ಲಿ ಇರಿಸಲು ಯೋಗಾಸನ ಬಹಳ ಮುಖ್ಯ. ಅಷ್ಟೇ ಅಲ್ಲದೆ ಯೋಗವು ದೇಹದ ಪುನರ್ಸ್ಥಾಪಕ ಶಕ್ತಿ ಮತ್ತು ದೇಹದ ಮೂಲ ಶಕ್ತಿಯನ್ನು ಹೆಚ್ಚಿಸುತ್ತದೆ.

ಟ್ವಿಸ್ಟಿಂಗ್ : ಸೊಂಟ ಟ್ವಿಸ್ಟಿಂಗ್ ಅಥವಾ ಸೊಂಟ ತಿರುಗಿಸುವಿಕೆಯು ಉದ್ದಗೊಳಿಸಲು, ಗಟ್ಟಿ ಮಾಡಲು, ನಿರ್ವಿಶೀಕರಣ ಹೊಂದಲು, ಮತ್ತು ಇಡೀ ದೇಹವನ್ನು ಆಕಾರಕ್ಕೆ ತರಲು ಅತ್ಯುತ್ತಮ ವ್ಯಾಯಾಮ.

ಸ್ಕ್ವಾಟ್ಸ್ :  ಪ್ರತಿಯೊಬ್ಬರ ವರ್ಕೌಟ್ ಇದನ್ನು ಒಳಗೊಂಡಿರಲೇ ಬೇಕು. ಇದು ಕೇವಲ ಕಾಲುಗಳಿಗಲ್ಲದೆ, ದೇಹದ ಎಲ್ಲಾ ಭಾಗಗಳಿಗೂ ಬೇರೆ ಬೇರೆ ರೀತಿಯಲ್ಲಿ ಸಹಾಯ ಮಾಡುತ್ತದೆ. ಇದು ಕೇವಲ ನಿಮ್ಮ ತೊಡೆ ಮತ್ತು ಪೃಷ್ಠದ ಸ್ನಾಯುಗಳಿಗೆ ಆಕಾರ ಮತ್ತು ಶಕ್ತಿ ನೀಡುವುದಷ್ಟೇ ಅಲ್ಲದೆ, ಇದು ದೇಹದ ಎಲ್ಲಾ ಸ್ನಾಯುಗಳಿಗೂ ಶಕ್ತಿ ನೀಡುತ್ತದೆ, ರಕ್ತ ಸಂಚಾರ ವೃದ್ಧಿ ಮಾಡುತ್ತದೆ ಮತ್ತು ಸೆಲ್ಯೂಲೈಟ್ ಅನ್ನು ಹೊರಹಾಕುತ್ತದೆ.

ಓಡಿ ಅಥವಾ ಸುಮ್ಮನೆ ಕುಣಿಯಿರಿ : ದೈಹಿಕ ಒತ್ತಡವನ್ನು ಕಡಿಮೆ ಮಾಡಲು ಅತ್ಯುತ್ತಮ ದಾರಿ ಎಂದರೆ ಅದು ಓಡುವುದು ಅಥವಾ ಸುಮ್ಮನೆ ನಿಮ್ಮ ನೆಚ್ಚಿನ ಹಾಡಿನ ತಾಳಕ್ಕೆ ಕುಣಿಯುವುದು.

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

We have a great opportunity for you. You can EARN up to Rs 10,000/- every month right in the comfort of your own HOME. Sounds interesting? Fill in this form and we will call you.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon