Link copied!
Sign in / Sign up
4
Shares

ಮನೆಯಿಂದ ಹೊರಗೆ ನಿಮ್ಮ ಶಿಶುವನ್ನು ಯಾವಾಗ ಕರೆದುಕೊಂಡು ಹೋಗಬಹುದು?

ಇದು ಪ್ರಾಯಶಃ ಎಲ್ಲಾ ತಂದೆ ತಾಯಿಯರಲ್ಲೂ ಕಾಡುವ ಪ್ರಶ್ನೆ, ಮತ್ತು ಇದಕ್ಕೆ ವಿವಿಧ ಪ್ರಾಂತ್ಯಗಳಲ್ಲಿ ಅಲ್ಲಿನ ಆಚಾರ ವಿಚಾರಗಳಂತೆ, ಕೆಲವರು ನಡೆದುಕೊಂಡರೆ, ವೈದ್ಯರ ಹೇಳಿಕೆಯನ್ನು ಕೇಳಲು ಹಲವರು ಬಯಸುತ್ತಾರೆ. ಇದಕ್ಕೆ ಎಲ್ಲಾರು ಒಪ್ಪಿರುವ ನಿಜವಾದ ಉತ್ತರ ಇಲ್ಲ, ಆದರೆ ಈ ವಿಷಯಕ್ಕೆ ವೈದ್ಯಕೀಯ ಮತ್ತು ಪೋಷಕರ ವಿವಿಧ ಭಾವನೆ ಮತ್ತು ಹಿಂದಿನಿಂದ ಬಂದ ಸಂಪ್ರದಾಯಕ್ಕೆ ಒಗ್ಗಿಕೊಂಡು ಒಡಕನ್ನು ತೋರಿಸುತ್ತಾರೆ, ಆದರೆ ಇಬ್ಬರ ದೃಷ್ಟಿಯು ಅವರವರ ನಂಬಿಕೆಗಳ ಮೇಲೆ ನಿಂತಿದೆ ಮತ್ತು ಇಬ್ಬರು ಮಗುವಿನ ಆರೋಗ್ಯವನ್ನೇ ಬಯಸುವುದು. ಇಬ್ಬರಲ್ಲೂ ಯಾವುದು ಸರಿ ಎಂದು ಪರಿಗಣಿಸಿ, ಮಗುವಿನ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಈ ತೀರ್ಮಾನವನ್ನು ತೆಗೆದುಕೊಳ್ಳಬಹುದು.

ಕೆಲವು ವೈದ್ಯಕೀಯ ಸಮುದಾಯದ ಪ್ರಕಾರ, ಮಗುವಿಗೆ ಮೊದಲ ೬-೮ ವಾರಗಳು ತುಂಬುವ ತನಕ ಮನೆ ಹೊರಗೆ ಕರೆತರುವುದು ಅವಿವೇಕಿಗಳು ಮಾಡುವ ಕೆಲಸ ಎಂದು ಹೇಳುತ್ತಾರೆ, ಇದರಿಂದ ಮಗುವಿನ ಆರೋಗ್ಯಕ್ಕೆ ತೊಂದರೆಯಾಗುತ್ತದೆ. ಇದು ಸತ್ಯ, ಏಕೆಂದರೆ ಮಗುವಿನಲ್ಲಿ ರೋಗನಿರೋಧಕಗಳು ಅತಿ ಕಡಿಮೆ ಇರುತ್ತವೆ, ಇದರಿಂದ ಕಾಯಿಲೆ ಹರಡುವ ಸೋಂಕುಗಳಿಗೆ ಶಿಶುಗಳು ಬೇಗನೆ ಗುರಿಯಾಗುತ್ತಾರೆ. ಮಗುವಿನ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು, ನಿಮ್ಮ ಮಗುವನ್ನು ಮೊದಲ ೩-೪ ತಿಂಗಳು ಹೊರಗಡೆ ಕರೆದುಕೊಂಡು ಹೋಗದೆ ಇರುವುದು ಉತ್ತಮ. ಹೊರಗಡೆ ರೋಗ ಅಥವಾ ಸೋಂಕು ಹರಡುವ ಯಾವುದೇ ವಾತಾವರಣ ಇಲ್ಲದಿದ್ದರೂ, ಹೊರಗಡೆ ಇರುವ ಜನರ ಕಾಯಿಲೆಗಳು ಹರಡಬಹುದು. ಆದ್ದರಿಂದ ನಿಮ್ಮ ಮಗುವನ್ನು ಹೊರಗಡೆ ಕರೆದುಕೊಂಡು ಹೋಗುವ ಅವಶ್ಯಕತೆ ಇದ್ದರೆ ಇದರ ಬಗ್ಗೆ ಎಚ್ಚರವಹಿಸಿ.

ನಿಮ್ಮ ಮಗುವನ್ನು ಹೊರಗಡೆ ಕರೆದೊಯ್ಯುವ ಮುನ್ನ ಪರಿಗಣಿಸಬೇಕಾದ ಕೆಲವು ವಿಷಯಗಳು:

೧.ನಿಮ್ಮ ಮಗುವು ಬಹಳಷ್ಟು ಶಾಖ ಮತ್ತು ಸೂರ್ಯನ ಬಿಸಿಲಿಗೆ ತನ್ನ ದೇಹವನ್ನು(ಚರ್ಮ) ಪ್ರದರ್ಶಿಸುವುದಿಲ್ಲ ಎಂದು ಖಚಿತಪಡಿಸಿಕೊಳ್ಳಿ

ಇದರಿಂದ ಮತ್ತಷ್ಟು ಹಾನಿಯಾಗುತ್ತದೆ, ಮಕ್ಕಳ ದೇಹವನ್ನು ಸೂರ್ಯನ ಬಿಸಿಲಿಗೆ ಮತ್ತು ಹೆಚ್ಚು ಶಾಖಕ್ಕೆ ತೋರಿಸುವುದರಿಂದ ಮಗುವಿಗೆ ತನ್ನ ಮುಂದಿನ ಜೀವನದಲ್ಲಿ ಚರ್ಮ ಕ್ಯಾನ್ಸರ್ ಬರುವಂತಹ ಹೆಚ್ಚಿನ ಅಪಾಯವಿರುತ್ತದೆ. ಆದ್ದರಿಂದ ಹೆಚ್ಚು ಬಿಸಿಲಿದ್ದರೆ ಹೊರಗಡೆಕರೆದುಕೊಂಡು ಹೋಗುವುದನ್ನು ಖಡಾಖಂಡಿತವಾಗಿ ನಿಲ್ಲಿಸಿ. ಶಿಶುಗಳ ತ್ವಚೆ ಸೂಕ್ಷ್ಮ ಮತ್ತು ಮೃದುವಾಗಿರುವುದರಿಂದ ಬಿಸಿಲಿನಿಂದ ತ್ವಚೆಯ ಸಮಸ್ಯೆಯು ಕೂಡ ಬರಬಹುದು.

೨.ಅತಿ ತಂಪಾದ (ಛಳಿಯ) ಅಥವಾ ಬಿಸಿಲಿನ ವಾತಾವರಣವಿದ್ದರೆ ಹೊರಗಡೆ ಹೋಗುವುದು ಬೇಡ

ಮೇಲೆ ಹೇಳಿರುವ ಕಾರಣಕ್ಕೆ ಶಿಶುಗಳನ್ನು ಬಿಸಿಲಿನಲ್ಲಿ ಕರೆದುಕೊಂಡು ಹೋಗುವುದು ಸೌಖ್ಯವಲ್ಲ, ಅದರಂತೆ, ಛಳಿ/ಶೀತವಾತಾವರಣದಲ್ಲೂ ಶಿಶುವನ್ನು ಕರೆದೊಯ್ಯುವುದು ಒಳಿತಲ್ಲ, ಮಗುವಿನ ಸೂಕ್ಷ್ಮತೆಗೆ ಅದರಿಂದ ಹಾನಿಯಾಗಬಹುದು. ಇದರಿಂದ ಮಗುವಿಗೆ ಶೀತ, ನೆಗಡಿ, ಕೆಮ್ಮು ಮುಂತಾದ ತೊಂದರೆಯಾಗಬಹುದು. ನೆನಪಿರಲಿ, ಸಾಮಾನ್ಯ ಶೀತವೂ ಕೂಡ ಶಿಶುವಿಗೆ ಹೆಚ್ಚು ಹಾನಿಯನ್ನುಂಟುಮಾಡಬಹುದು. ಮತ್ತು ಇದರಿಂದ ಶಿಶುವಿನ ರೋಗನಿರೋಧಕ ಶಕ್ತಿಯು ಕುಂದಬಹುದು.

೩.ನಿಮ್ಮ ಮಗುವಿಗೆ ತುಂಬಾ ಜಾಸ್ತಿ ಅಥವಾ ತುಂಬಾ ಕಡಿಮೆ ಉಡುಪನ್ನು(ಬಟ್ಟೆ) ಧರಿಸಬೇಡಿ

ತುಂಬಾ ಹೆಚ್ಚು ಬಟ್ಟೆ ಹಾಕುವುದರಿಂದ, ಮಗುವು ಬೆವರಬಹುದು, ಮತ್ತು ದೇಹದ ತಾಪಮಾನ ಹೆಚ್ಚಾಗಬಹುದು, ಇವು ಮಗುವಿಗೆ ತುಂಬಾ ಅಪಾಯಕಾರಿ ಸಂಗತಿಗಳು, ಮತ್ತು ಇವುಗಳಿಂದ ಶಿಶುಗಳಿಗೆ ಕಿರಿಕಿರಿಯಾಗಬಹುದು. ಮತ್ತೊಂದೆಡೆ, ಕಡಿಮೆ ಬಟ್ಟೆ ಧರಿಸುವುದರಿಂದ, ಹೊರಗಿನ ವಾತಾವರಣದನುಸಾರವಾಗಿ ಹಾನಿಗೊಳಗಾಗುತ್ತದೆ. ಶೀತ ವಾತಾವರಣವಿದ್ದರೆ, ಮಗುವಿಗೆ ಶೀತ, ನೆಗಡಿ, ಜ್ವರವು ಬರಬಹುದು. ಬಿಸಿಲಿದ್ದರೆ, ಚರ್ಮದಲ್ಲಿ ಸುಟ್ಟ ಕಲೆಗಳಾಗಬಹುದು ಅಥವಾ ಮೇಲಿನಂತೆ ಯಾವುದೇ ಹಾನಿಯಾಗಬಹುದು.

೪.ನಿಮ್ಮ ಪ್ರಾಂತ್ಯದ ಸಂದರ್ಭಗಳ ಬೆಗ್ಗೆ ಜಾಗರೂಕರಾಗಿರಿ

ಒಂದು ವೇಳೆ ಮಳೆಗಾಲ ಆಗಿದ್ದರೆ, ಅಥವಾ ನಿಮ್ಮ ಬೀದಿ ಅಥವಾ ಊರಿನಲ್ಲಿ ಅತಿರೇಕವಾಗಿ ಯಾವುದಾದರೂ ಒಂದು ಕಾಯಿಲೆ/ರೋಗ ಹರಡುತ್ತಿದ್ದರೆ, ನಿಮ್ಮ ಮಗುವನ್ನು ಮನೆಯ ಒಳಗಡೆ ಜೋಪಾನವಾಗಿ ನೋಡಿಕೊಳ್ಳಿ. ಇಂತಹ ಸಮಯದಲ್ಲಿ ಮಗುವಿನ ಜೊತೆ, ಮನೆ ಮುಂದೆ ನಿಂತುಕೊಳ್ಳುವುದು ಸಹ ಮಗುವಿನ ಆರೋಗ್ಯದಮೇಲೆ ಪರಿಣಾಮ ಬೀರಬಹುದು, ಮಗುವಿನಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಬೇಗನೆ ಕಾಯಿಲೆಗೆ ತುತ್ತಾಗುತ್ತವೆ.

೫.ಪೋಷಕರೇ, ನೀವು ಹೊರಗೆ ಹೋಗುವಾಗ ಯಾವಾಗಲು ಹೊದಿಕೆಯನ್ನು ತೆಗೆದುಕೊಂಡು ಹೋಗಿ

ಕೆಲವು ಸಂದರ್ಭಗಳಲ್ಲಿ ನೀವು ಮನೆಯಿಂದ ಹೊರಗೆ ಹೋಗಬೇಕಾದ ಪರಿಸ್ಥಿತಿ ಎದುರಾದರೆ, ಅಲ್ಲಿ ಸಂಭವಿಸಬಹುದಾದ ವಿವಿಧ ಸಾಧ್ಯತೆಗಳ ಬಗ್ಗೆ ಗಮನಕೊಡಿ, ಮೊದಲೇ ಯೋಚಿಸಿ. ನೀವು ಹೊರಗಡೆ ವಾತಾವರಣ ಯಾವಾಗ ಬದಲಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ, ಆದ್ದರಿಂದ ನಿಮ್ಮ ಮಗುವಿನ ರಕ್ಷಣೆಯನ್ನು ಮಾಡಿ. ಶೀತ ಅಥವಾ ಬಿಸಿಲಿನಿಂದ ತಪ್ಪಿಸಲು ಮಗುವಿಗೆ ಹೊದಿಕೆಯನ್ನು ಯಾವಾಗಲು ನಿಮ್ಮ ಬಳಿ ಇರಿಸಿಕೊಳ್ಳಿ.

ವಾತಾವರಣದ ಸ್ವಚ್ಛ ಗಾಳಿ ಪಡೆಯುವುದು ನಿಜಕ್ಕೂ ಒಳ್ಳೆಯದು, ಆದರೆ ಮೇಲಿನ ಅಂಶಗಳನ್ನು ನೆನಪಿನಲ್ಲಿಟ್ಟುಕೊಳ್ಳಿ, ಮತ್ತು ಮಗುವಿನ ಆರೋಗ್ಯವನ್ನು ಕಾಪಾಡಿಕೊಳ್ಳಿ.

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

We have a great opportunity for you. You can EARN up to Rs 10,000/- every month right in the comfort of your own HOME. Sounds interesting? Fill in this form and we will call you.

Click here for the best in baby advice
What do you think?
0%
Wow!
0%
Like
100%
Not bad
0%
What?
scroll up icon