Link copied!
Sign in / Sign up
34
Shares

ನಿಮ್ಮ ಮಗುವಿಗೆ ಮನೆಯಲ್ಲೇ ತಯಾರಿಸಿ ನೀಡಿ ಅಕ್ಕಿಯ ಸೆರೆಲ್ಯಾಕ್!

ಅಕ್ಕಿ ಧಾನ್ಯದ ಗಂಜಿಯನ್ನು ಸಾಮಾನ್ಯವಾಗಿ ಮಗುವಿಗೆ ಮೊದಲು ಪರಿಚಯಿಸಲಾಗುವುದು, ಇದು ಪ್ರಪಂಚದಾದ್ಯಂತ ತುಂಬಾ ಸಾಮಾನ್ಯವಾಗಿದೆ. ಶಿಶುಗಳಿಗೆ ಮೊದಲ ಘನ ಆಹಾರವಾಗಿ ಇದನ್ನು ನೀವು ಪರಿಚಯಿಸಲು ಶಿಫಾರಸು ಮಾಡಲಾಗುವುದು. ಇದು ಶಿಶುಗಳ ಉದರದಲ್ಲಿ ಸುಲಭವಾಗಿ ಜೀರ್ಣವಾಗುವುದು, ಇದರಿಂದ ಯಾವುದೇ ತರಹದ ಅಲರ್ಜಿ ಇಲ್ಲ, ಮತ್ತು ಇದನ್ನು ಸುಲಭವಾಗಿ ತಯಾರಿಸಬಹುದು ಹಾಗು ಶಿಶುಗಳು ಸುಲಭವಾಗಿ ನುಂಗಬಹುದು, ಏಕೆಂದರೆ ಇದು ಮೆತ್ತಗೆ ನಯವಾಗಿರುತ್ತದೆ.

ಅಕ್ಕಿ ಧಾನ್ಯದಿಂದ ನೀವು ಹಲವು ಬಗೆಯ ತಿನಿಸುಗಳನ್ನು ಮಾಡಬಹುದು ಮತ್ತು ಅದನ್ನು ಮಗುವಿಗೆ ನೀಡಬಹುದು. ಇದಕ್ಕೆ ನೀವು ಹಣ್ಣು ಮತ್ತು ತರಕಾರಿ ಗಂಜಿಯನ್ನು ಸೇರಿಸಿ ನಿಮ್ಮ ಹೊಸ ರುಚಿಯನ್ನು ಮಾಡಿ, ನಿಮ್ಮ ಮಗುವಿಗೆ ನೀಡಬಹುದು. ಅಕ್ಕಿ ಗಂಜಿ(ಸೆರೆಲ್ಯಾಕ್) ಮಾಡಲು ತುಂಬಾ ಸುಲಭವಾಗಿದ್ದು, ನೀವು ಪ್ರಯಾಣ ಮಾಡುವಾಗ ಕೂಡ ಇದನ್ನು ನಿಮ್ಮ ಜೊತೆ ಸುಲಭವಾಗಿ ತೆಗೆದುಕೊಂಡು ಹೋಗಬಹದು, ಹಾಗು ಇದನ್ನು ಶಿಶುಗಳ ಸುರಕ್ಷಿತ ಆಹಾರ ಎಂದು ಕೂಡ ಪರಿಗಣಿಸಲಾಗಿದೆ.

ಇದನ್ನು ೪ ತಿಂಗಳ ಮೇಲ್ಪಟ್ಟ ಶಿಶುಗಳಿಗೆ ನೀಡಬಹುದು. ಸಂಸ್ಕರಿಸಿದ ಅಥವಾ ಮೊದಲೇ ತಯಾರಿಸಿದ ಅಂಗಡಿಯಲ್ಲಿ ಸಿಗುವ ಪದಾರ್ಥಗಳಿಗಿಂತ ಇದು ಆರೋಗ್ಯಕರ ಮತ್ತು ಇದನ್ನು ಮಾಡುವುದು ಸುಲಭ.

ಇದನ್ನು ಮಾಡಲು ನಿಮಗೆ ಬೇಕಾಗಿರುವುದು

೧.ಅಕ್ಕಿ

೨.ನೀರು

ಮಾಡುವ ವಿಧಾನ

೧.ಅಕ್ಕಿ ಧಾನ್ಯದ ಸೆರೆಲ್ಯಾಕ್ ತಯಾರಿಸಲು ಮೊದಲು ನೀವು ಅಕ್ಕಿಯನ್ನು ತೆಗೆದುಕೊಂಡು ಅದನ್ನು ನೀರಿನಲ್ಲಿ ಚೆನ್ನಾಗಿ ತೊಳೆದುಕೊಳ್ಳಿ.

೨.ನಂತರ ತೊಳೆದ ಅಕ್ಕಿಯನ್ನು ಒಂದು ಶುದ್ಧವಾದ ಬಟ್ಟೆಯ ಮೇಲೆ ಹರಡಿ ೩೦-೫೦ ನಿಮಿಷಗಳ ಕಾಲ ಒಣಗಲು ಬಿಡಿ(ಗಾಳಿಯಲ್ಲಿ ಒಣಗಿದರೆ ಸಾಕು/ಬಿಸಿಲಿನ ಅವಶ್ಯಕತೆ ಇಲ್ಲ).

೩.ಅಕ್ಕಿ ಚೆನ್ನಾಗಿ ಒಣಗಿದ ನಂತರ, ಅದನ್ನು ಒಂದು ಪಾತ್ರೆಯಲ್ಲಿ ಉರಿದುಕೊಳ್ಳಿ. ಮಧ್ಯಮ ಉರಿಯಲ್ಲಿ ಅಕ್ಕಿಯನ್ನು ಉರಿದುಕೊಳ್ಳುವುದು ಉತ್ತಮ.

೪.ಅಕ್ಕಿಯು ಸಾಮಾನ್ಯವಾಗಿ ಕಂದು ಬಣ್ಣಕ್ಕೆ ಬರುತ್ತದೆ, ಅಕ್ಕಿಯನ್ನು ಉರಿದ ನಂತರ ಅದನ್ನು ಆರಲು ಬಿಡಿ.

೫.ಅಕ್ಕಿಯು ಆರಿದ ನಂತರ, ಅದನ್ನು ಒಂದು ಜಾರಿಗೆ ಹಾಕಿ ಚೆನ್ನಾಗಿ(ನುಣ್ಣಗೆ) ರುಬ್ಬಿಕೊಳ್ಳಿ. ನಿಮ್ಮ ಅಕ್ಕಿ ಪುಡಿ ತಯಾರಾಗಿದೆ ಇದನ್ನು ಗಾಳಿ ಆಡದ ಒಂದು ಡಬ್ಬಿಗೆ ಹಾಕಿ ಮುಚ್ಚಿಡಿ, ನಿಮಗೆ ಬೇಕಾದಾಗ ಉಪಯೋಗಿಸಿಕೊಳ್ಳಿ.

೬.ಸೆರೆಲ್ಯಾಕ್ ತಯಾರಿಸಲು ಒಂದು ಪಾತ್ರೆ ಅಥವಾ ಪಾನ್ ಅನ್ನು ಒಲೆ ಮೇಲೆ ಇಟ್ಟು, ಅದಕ್ಕೆ ಒಂದು ಚಮಚ ಅಕ್ಕಿ ಪುಡಿಗೆ ಅರ್ಧ ಬಟ್ಟಲು ನೀರಿನ ಪ್ರಮಾಣದಲ್ಲಿ, ನಿಮಗೆ ಬೇಕಿರುವಷ್ಟು ನೀರನ್ನು ಹಾಕಿ ಅದು ಕಾದ ನಂತರ ಅದಕ್ಕೆ ಅಕ್ಕಿ ಪುಡಿಯನ್ನು ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ, ಯಾವುದೇ ಗಂಟುಗಳು ಆಗದ ರೀತಿಯಲ್ಲಿ ನೋಡಿಕೊಳ್ಳಿ.

೭.ಚೆನ್ನಾಗಿ ಮಿಶ್ರಣ ಆಗಿದೆ ಮತ್ತು ಅಕ್ಕಿ ಪುಡಿ ಬೆಂದಿದೆ ಎಂದು ನಿಮಗೆ ತಿಳಿದ ನಂತರ ಅದನ್ನು ಕೆಳಗೆ ಇಳಿಸಿ, ಈ ಸೆರೆಲ್ಯಾಕ್ ಗಟ್ಟಿ ಇದ್ದರೆ ಇದಕ್ಕೆ ಸ್ವಲ್ಪ ಬಿಸಿ ನೀರನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.

೮.ರುಚಿ ಬೇಕೆನಿಸಿದರೆ, ಇದಕ್ಕೆ ಚಿಟಕಿ ಉಪ್ಪನ್ನು ಸೇರಿಸಿ, ಉಪ್ಪಿನ ರುಚಿ ಇರುವುದರಿಂದ ಶಿಶುವು ಇದನ್ನು ಇಷ್ಟ ಪಟ್ಟು ಸೇವಿಸುವುದು.

೯.ಇದಕ್ಕೆ ನೀವು ನಿಮ್ಮ ಎದೆಹಾಲನ್ನು ಕೂಡ ಸೇರಿಸಬಹುದು. ಎದೆಹಾಲನ್ನು ಸೇರಿಸಿದರೆ ಇದಕ್ಕೆ ಉಪ್ಪನ್ನು ಸೇರಿಸಬೇಡಿ.

೧೦.ಒಂದು ಬಟ್ಟಲಿಗೆ ಹಾಕಿ ಮಗುವಿಗೆ ತಿನ್ನಿಸಿ.

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

We have a great opportunity for you. You can EARN up to Rs 10,000/- every month right in the comfort of your own HOME. Sounds interesting? Fill in this form and we will call you.

Click here for the best in baby advice
What do you think?
100%
Wow!
0%
Like
0%
Not bad
0%
What?
scroll up icon