Link copied!
Sign in / Sign up
2
Shares

ಮನೆಯಲ್ಲಿ ಮಲಗಿದ್ದ ಮಗುವನ್ನ ಎತ್ತಿಕೊಂಡು ಹೋದ ಮಂಗ, ಮಾರನೇ ದಿನ ಏನಾಯಿತು ಗೊತ್ತೇ?

ಆ  ಊರಿನ ಹೆಸರು ತಾಳಬಸ್ತ. ಅದು ಒರಿಸ್ಸಾ ರಾಜ್ಯದ ಪ್ರಮುಖ ನಗರವಾದ ಕಟಕ್ ಬಳಿಯ ಒಂದು ಸಣ್ಣ ಊರು. ಅಲ್ಲಿ ರಾಮಕೃಷ್ಣ ನಾಯಕ ಎಂಬ ವ್ಯಕ್ತಿಗೆ ಒಂದು ಮುದ್ದಾದ ಗಂಡು ಮಗುವಾಗಿ ಕೇವಲ 16 ದಿನಗಳಷ್ಟೇ ಆಗಿದ್ದವು. ಅದೊಂದು ದುರದೃಷ್ಟಕರ ದಿನ ಬೆಳ್ಳಂಬೆಳಗ್ಗೆ 6 ಗಂಟೆಗೆ ರಾಮಕೃಷ್ಣ ನಾಯಕ ತನ್ನ ವೃದ್ಧ ತಂದೆ-ತಾಯೊಂದಿಗೆ ಮನೆಯೊಳಗೇ ಮಲಗಿದ್ದನು. ಇನ್ನೊಂದು ಬದಿಯಲ್ಲಿ ರಾಮಕೃಷ್ಣನ ಹೆಂಡತಿ ಮತ್ತು ಅವರ ಮಗು ಮಲಗಿತ್ತು.


ಎಂದಿನಂತೆ ಬೆಳಗ್ಗೆ 6 ಗಂಟೆಗೆ ರಾಮಕೃಷ್ಣ ನಾಯಕನ ಹೆಂಡತಿಯು ನಿದ್ದೆಯಿಂದ ಎದ್ದು, ಮುಖ ತೊಳೆದುಕೊಳ್ಳಲು ಎಂದು ಶೌಚಾಲಯದ ಕಡೆ ಹೋಗಬೇಕೆಂದು ಅಂದುಕೊಂಡಿದ್ದಾಳೆ. ಆಗ ತಾನೇ ಎದ್ದು, ಇನ್ನು ಅತ್ತ-ಇತ್ತ ನೋಡುತ್ತಿರುವಷ್ಟರಲ್ಲೇ, ಒಂದು ಮಂಗವು ಆಕೆಯ ಗಮನಕ್ಕೆ ಬಾರದೆ ಮನೆಯ ಒಳಗೆ ಬಂದಿದೆ. ಮಗುವನ್ನ ಅದರ ತೊಟ್ಟಿಲಿಗೆ ಸೊಳ್ಳೆಯ ಪರದೆ ಕಟ್ಟಿ, ಅದರೊಳಗೆ ಮಲಗಿಸಲಾಗಿತ್ತು. ರಾಮಕೃಷ್ಣನ ಹೆಂಡತಿ ಇನ್ನೊಂದು ಕಡೆ ಮುಖ ಮಾಡಿ, ಮೆಲ್ಲನೆ ಎದ್ದೇಳುತ್ತಿರುವಷ್ಟರಲ್ಲಿ ಮಂಗ ಓಡಿ ಬಂದು, ಮಲಗಿದ್ದ ಮಗುವನ್ನ ಎತ್ತಿಕೊಂಡು ಓಡಿ ಹೋಗಿಬಿಟ್ಟಿತು! ಮಗುವಿನ ಅಳು ಕೇಳಿದೊಡನೆ ರಾಮಕೃಷ್ಣನ ಹೆಂಡತಿ ಈ ಕಡೆ ತಿರುಗಿದಳು. ಆದರೆ, ಅಷ್ಟೋತ್ತರಲ್ಲಿ ಮಂಗವು ಮಗುವನ್ನ ಎತ್ತಿಕೊಂಡು ಪರಾರಿ ಆಗಿಬಿಟ್ಟಿತು.

ಇದು ನಡೆದದ್ದು ಮೊನ್ನೆ. ಈ ಘಟನೆ ನಡೆದ ತಕ್ಷಣ ಮನೆಮಂದಿ ಪೊಲೀಸರು ಮತ್ತು ಅರಣ್ಯ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಮಂಗ ಎಲ್ಲಿ ಹೋಯಿತೆಂದು ಯಾರು ಸರಿಯಾಗಿ ನೋಡಿರದ ಕಾರಣ, ಶೋಧಕಾರ್ಯವನ್ನ ಶುರು ಮಾಡಲಾಯಿತು. ಆದರೆ, ನೆನ್ನೆ ಇನ್ನೊಂದು ಹೃದಯ ವಿದ್ರಾವಕ ಅಂಶ ಬೆಳಕಿಗೆ ಬಂದಿದೆ.

ಅದೇನೆಂದರೆ, ಮಂಗನಿಂದ ಅಪಹರಣಕ್ಕೆ ಒಳಗಾಗಿದ್ದ ಮಗುವು, ಶವವಾಗಿ ಊರಿನ ಬಾವಿ ಒಂದರಲ್ಲಿ ಪತ್ತೆಯಾಗಿದೆ. ಮೇಲ್ನೋಟಕ್ಕೆ ಮಗುವು ಮಂಗನ ಕೈಯಿಂದ ಜಾರಿ ಬಾವಿಗೆ ಬಿದ್ದಿರುವುದಾಗಿ ತಿಳಿದು ಬರುತ್ತಿದೆ. ಆದರೆ ಪೊಲೀಸರು ಇದರ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕಲು ತನಿಖೆ ನಡೆಸುತ್ತೇವೆ ಎಂದು ತಿಳಿಸಿದ್ದಾರೆ.  

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon