ಈ ಸುಲಭ ಉಪಾಯಗಳಿಂದ ಅಮ್ಮಂದಿರು ಜಿಮ್ ಗೆ ಹೋಗದೆ ಶೇಪ್ ಬರಿಸಿಕೊಳ್ಳಬಹುದು!
ನೀವು ಜನ್ಮ ನೀಡಿದ ಮೊದಲ ವರ್ಷದಲ್ಲಿ ನಿಮಗೆ ಸಾಕಾದಷ್ಟು ಸಮಯ, ಕೈಗಳು ಅಥವಾ ಸಹಾಯ ಇರುವುದಿಲ್ಲ. ಅಂತದರಲ್ಲಿ ನೀವು ಜಿಮ್ ಸೇರಿ ವ್ಯಾಯಾಮ ಮಾಡುವುದು ದೂರದ ಮಾತೇ ಸರಿ. ಅದು ಏನೇ ಇದ್ದರು, ಬಹುತೇಕ ತಾಯಂದಿರು ಪುನಃ ಮುಂಚಿನಂತೆ ಶೇಪ್ ಬಾರಿಸಿಕೊಳ್ಳಲು, ಫಿಟ್ ಆಗಿರಲು ಹಂಬಲಿಸುತ್ತಿರುತ್ತಾರೆ. ಹಾಗಿದ್ದರೆ, ಇವರು ಮಾಡಬೇಕಾದದ್ದು ಆದರೂ ಏನು?
ಇಲ್ಲಿನ ಕೆಲವು ಚಟುವಟಿಕೆಗಳು ಮಾಡಲು ನಿಮಗೆ ನಿಗದಿತ ಸಮಯ ಅಂತ ಇಡಬೇಕಿಲ್ಲ. ಇವುಗಳನ್ನು ನೀವು ಪ್ರತಿದಿನ ಎಲ್ಲಿ ಬೇಕಾದರೂ, ಯಾವಾಗ ಬೇಕಾದರೂ ಮಾಡಬಹುದು. ದಿನದ ಯಾವುದಾದರೂ ಸಮಯದಲ್ಲಿ ಕೇವಲ ಕೆಲವು ನಿಮಿಷಗಳ ಕಾಲ ಬಿಡುವು ಮಾಡಿಕೊಂಡರೆ ಸಾಕು. ಆ ಚಟುವಟಿಕೆಗಳು ಯಾವುದೆಂದು ಇಲ್ಲಿ ಓದಿರಿ.
೧. ಯೋಗ
ಇದು ಸಂಪೂರ್ಣ ದೇಹಕ್ಕೆ ಕೇವಲ ಶಕ್ತಿ ಮಾತ್ರ ನೀಡದೆ ಆರಾಮ ಕೂಡ ನೀಡುವುದು. ಇದನ್ನು ಮಾಡಲಿಕ್ಕೆ ನೀವು ಮನೆಯಿಂದ ಆಚೆ ತೆರಳಬೇಕಾದ ಅವಶ್ಯಕತೆಯೇ ಇಲ್ಲ. ಅಂತರ್ಜಾಲದಲ್ಲಿ ನೀವು “ಯೋಗ” ಎಂದು ಗೂಗಲ್ ಮಾಡಿದರೆ ಸಾಕು, ಸಾವಿರಾರು ವಿಡಿಯೋಗಳು, ಟುಟೋರಿಯಲ್ ಗಳು ಸಿಗುತ್ತವೆ. ನಿಮಗೆ ಸರಿ ಹೊಂದುವಂತ ಆಸನಗಳನ್ನ ದಿನಕ್ಕೆ ಕೇವಲ 30 ನಿಮಿಷಗಳವರೆಗೆ ಮಾಡುವುದರಿಂದ ನಿಮ್ಮ ದೇಹವನ್ನು ಜಡ ಹಿಡಿಯದಂತೆ ಕಾಪಾಡಿಕೊಳ್ಳಬಹುದು.
೨. ಮಲಗಿಕೊಂಡು ಶೇಪ್ ಬಾರಿಸಿಕೊಳ್ಳಿ !
ನೀವು ನಿಮ್ಮ ಮಗು ಮಲಗಿಕೊಂಡಾಗ ವ್ಯಾಯಾಮ ಮಾಡಬೇಕೆಂದೋ ಅಥವಾ ಟಿವಿ ನೋಡಬೇಕೆಂದೋ ಅನಿಸಬಹುದು, ಆದರೆ ಅಷ್ಟೇ ಹಿತಕರವಾದ ಚಟುವಟಿಕೆಯ ಮೂಲಕ ಶೇಪ್ ಬರಿಸಬಹುದು ಎಂದರೆ ಅದನ್ನು ಏಕೆ ಮಾಡಬಾರದು. ಹೌದು, ಈ ಸಮಯದಲ್ಲಿ ನೀವು ಮಲಗಿ. ಮಲಗಿಕೊಂಡಾಗ 20 ಬಾರಿ ಕೆಜೆಲ್ ವ್ಯಾಯಾಮ ಮತ್ತು 20 ಬಾರಿ ದೀರ್ಘ ಉಸಿರಾಟ ನಡೆಸಿ. ದೀರ್ಘ ಉಸಿರಾಟ ಎಂದರೆ ನೀವು ಉಸಿರನ್ನು ಬಿಡುತ್ತಾ ನಿಮ್ಮ ಹೊಟ್ಟೆಯನ್ನು ಒಳಗೆ ಎಳೆದುಕೊಳ್ಳುವುದು.
೩. ತೆವಳುವುದು
ಕೆಲವೊಂದು ಅತ್ಯುತ್ತಮ ವ್ಯಾಯಾಮಗಳು ಅತ್ಯಂತ ಸರಳ ವ್ಯಾಯಾಮಗಳು ಆಗಿರುತ್ತವೆ. ಉದಾಹರಣೆಗೆ ತೆವಳುವುದು. ಒಂದು ವಿಶಾಲವಾದ ಜಾಗವನ್ನ ಆರಿಸಿಕೊಳ್ಳಿ. ನಿಮ್ಮ ಕಾಲುಗಳನ್ನು ಸರಿಯಾಗಿ ಸಾಲಾಗಿಸಿ. ಮುಂದಿನ ಮೊಣಕಾಲು ನಿಮ್ಮ ಶೂ ಮೇಲೆ ಇರಲಿ ಹಾಗು ಹಿಂದಿನ ಕಾಲು ನೆಲಕ್ಕೆ ಬೆರಳು ಮಾಡುತ್ತಿರಲಿ. ಮುಂದಕ್ಕೆ ಹೆಜ್ಜೆ ಹಿಡುತ್ತಾ ನಿಮ್ಮ ಸೊಂಟವನ್ನು ಆದಷ್ಟು ಕೆಳಗೆ ಮಾಡುತ್ತಾ ಹೋಗಿ. ನೀವು ನಿಮ್ಮ ಮಧ್ಯದ ಭಾಗವನ್ನ ಎಷ್ಟು ಬಾಗಿಸುತ್ತಿರೋ, ಅಷ್ಟು ಪರಿಣಾಮಕಾರಿ ಈ ವ್ಯಾಯಾಮ.
೪. ಮೆಟ್ಟಿಲು ಹತ್ತಿರಿ
ನಿಮ್ಮ ಎಲ್ಲಾ ಸ್ನಾಯುಗಳಿಗೆ ಕೆಲಸ ಕೊಡಲು, ಮುಖ್ಯವಾಗಿ ಸೊಂಟದ ಕೆಳಗಿನ ಸ್ನಾಯುಗಳನ್ನು ಗಟ್ಟಿಯಾಗಿಸಲು ಮತ್ತು ನಿಮ್ಮ ಹೃದಯ ಬಡಿತ ಏರಿಸಲು ಒಂದು ಸುಲಭ ಮತ್ತು ಪರಿಣಾಮಕಾರಿ ವಿಧಾನ ಎಂದರೆ ಅದು ಮೆಟ್ಟಿಲುಗಳನ್ನು ಹತ್ತುವುದು. 10-20 ಮೆಟ್ಟಿಲುಗಳನ್ನು 5 ಬಾರಿ ಹತ್ತುವುದು-ಇಳಿಯುವದು ಮಾಡಿ. ಹತ್ತುವುದು ಇಳಿಯುವುದರ ಮಧ್ಯೆ 5 ಸೆಕೆಂಡ್ ಬಿಡುವು ಕೊಡಿ. ಹೀಗೆ ದಿನಕ್ಕೆ ನಾಲ್ಕು ಸೆಟ್ ಮಾಡಿ.
೫. ಜಂಪಿಂಗ್ ಜಾಕ್ ಮಾಡಿ

ನಮಗೆ ಶಾಲೆಯಲ್ಲಿ ಶನಿವಾರಗಳಂದು ಡ್ರಿಲ್ ಮಾಡಿಸುತ್ತಿದ್ದು ನೆನಪಿದೆಯಾ? ಪ್ರತಿ ಬಾರಿ ಜಿಗಿಯುತ್ತಾ ಕಾಲುಗಳನ್ನ ಹಗಲಿಸಿ, ಕೈಗಳನ್ನು ರೆಕ್ಕೆಗಳ ಥರ ಮೇಲೆಕ್ಕೆತ್ತಿರಿ. ಜಿಗಿದು ಮತ್ತೆ ನೆಲಕ್ಕೆ ಇಳಿಯುವಾಗ ಕಾಲುಗಳನ್ನ ಹತ್ತಿರಕ್ಕೆ ತನ್ನಿ ಮತ್ತು ಕೈಗಳನ್ನು ಸೊಂಟಗಳ ಪಕ್ಕದಲ್ಲಿ ತನ್ನಿ. ಹೀಗೆ ದಿನಕ್ಕೆ 60 ಬಾರಿ ಮಾಡಿ.
೬. ಸಣ್ಣ ವಾಯುವಿಹಾರಗಳು

ನೀವು ಒಬ್ಬರೇ ವಾಕಿಂಗ್ ಅಥವಾ ಜಾಗಿಂಗ್ ಹೋಗುವ ಬದಲು, ನಿಮ್ಮ ಮಗುವಿನೊಂದಿಗೆ ವಾಯುವಿಹಾರಕ್ಕೆ ತೆರಳಿ. ಹೀಗೆ ಮಾಡಿದರೆ, ನೀವು ನಿಮ್ಮ ಮಗು ಮಲಗಿದ್ದಾಗಿನ ಸಮಯವನ್ನು ಬೇರೆ ಚಟುವಟಿಕೆಗಳಿಗೆ ಬಳಸಬಹದು.
೭. ಭಸ್ಕಿ ಹೊಡೆಯುವುದು ಇನ್ನಷ್ಟು ಮಜವಾಗಿ ಮಾಡಿಕೊಳ್ಳಿ
ನಿಮ್ಮ ಮಗುವು ಕಿಲಕಿಲ ನಗುತ್ತದೆ, ಮತ್ತು ನಿಮಗೆ ಈ ಪಗಾನೊ ಸ್ಕ್ವಾಟ್-ಲಿಫ್ಟ್ ಇಂದ ಸಂಪೂರ್ಣ ವರ್ಕೌಟ್ ಆಗುತ್ತದೆ. ನಿಮ್ಮ ಮಗುವನ್ನು ನಿಮ್ಮ ಎದೆಯ ಮುಂದೆ ಕೈಯಲ್ಲಿ ಇರಿಸಿಕೊಂಡು, ಮೊಣಕಾಲನ್ನು ಹೀಗೆ ಬಾಗಿಸಿ ಈ ರೀತಿಯ ಭಸ್ಕಿ ಹೊಡೆಯುವ ಭಂಗಿಯಲ್ಲಿ ನಿಲ್ಲಿ. ನಂತರ, ಮೆಲ್ಲನೆ ನಿಮ್ಮ ಮೊಣಕಾಲನ್ನು ನೇರ ಮಾಡುತ್ತಾ ಮೇಲೇಳಿ. ನಿಮ್ಮ ಮಗುವನ್ನು ಕೈಗಳಲ್ಲಿ ನಿಮ್ಮ ಭುಜಕ್ಕಿಂತ ಎತ್ತರದಲ್ಲಿ ಎತ್ತಿ ಹಿಡಿಯಿರಿ. ನಂತರ, ಪುನಃ ನಿಮ್ಮ ಮೊಣಕಾಲನ್ನು ಮಡಚುತ್ತಾ, ಭಸ್ಕಿ ಹೊಡೆಯುವ ಭಂಗಿಗೆ ಬನ್ನಿ. ಇದು ನಿಮ್ಮ ಎದೆ, ಭುಜಗಳು ಮತ್ತು ಕೈಗಳನ್ನು ಗಟ್ಟಿ ಮಾಡುತ್ತದೆ. ಇದನ್ನು ನೀವು ದಿನಕ್ಕೆ 10-15 ಬಾರಿ ಮಾಡಬೇಕು.
