Link copied!
Sign in / Sign up
8
Shares

ಮನೆಯಲ್ಲೇ ಹಳೆಯ ಬಟ್ಟೆಗಳಿಂದಲೇ ಗಾದಿ/ಕ್ವಿಲ್ಟ್ ಮಾಡುವುದಕ್ಕೆ ಸರಳ, ಸವಿವರವಾದ ಮಾರ್ಗದರ್ಶಿ!

ಗಾದಿ ಸಮಯ ಕಳೆದುಕೊಳ್ಳುವ ಒಂದು ವಿನೋದ ಮತ್ತು ಪ್ರಾಯೋಗಿಕ ವಿಧಾನ ವಾಗಿದೆ . ನೀವು ಇಷ್ಟಪಡುವಷ್ಟು ಸೃಜನಶೀಲರಾಗಿರಬಹುದು , ಮತ್ತು ರಾತ್ರಿಯಲ್ಲಿ ನಿಮ್ಮನ್ನು ಬೆಚ್ಚಗಾಗಿಸಲು ಮತ್ತುನಿಮ್ಮ ಮಕ್ಕಳಿಗೆ ಅಥವಾ ಮೊಮ್ಮಕ್ಕಳಿಗೆ ಇದನ್ನು ನೀವು ಹೊಲಿದು ಕೊಡಬಹುದು . ಮೂಲಭೂತ ಮೆರಗು ಮಾಡಲು ಹೇಗೆ ಎಂದು ತಿಳಿಯಲು ಈ  ಹಂತಗಳನ್ನು ಬಳಸಿ , ನಂತರ ನಿಮ್ಮ ಕರಕುಶಲತೆಯನ್ನು ಪ್ರದರ್ಶಿಸಿ . ಬಟ್ಟೆಗಳನ್ನು ಕಟ್ ಮಾಡಲು ಒಳ್ಳೆಯ ಹರಿತವಾದ ಕತ್ತರಿಯನ್ನು ಆರಿಸಿಕೊಳ್ಳಿ ,ಇಲ್ಲದಿದ್ದರೆ ಬಟ್ಟೆ ಕಟ್ ಮಾಡುವಾಗ ಅಡಚಣೆ ಉಂಟಾಗುತ್ತದೆ , ನೀಟಾಗಿ ಕಟ್ ಮಾಡಲು ಆಗುವುದಿಲ್ಲ . ನೀವು ನಿಯಮಿತ ಕತ್ತರಿಗಳನ್ನು ಬಳಸಲು ಆಯ್ಕೆ ಮಾಡಿದರೆ , ಅವುಗಳು ಚೆನ್ನಾಗಿ ಹರಿತವಾಗಿರುತ್ತದೆ ,  ಮತ್ತು ಬಟ್ಟೆಗಳನ್ನು ಕಟ್ ಮಾಡಲು ಅಡಚಣೆ ಇರುವುದಿಲ್ಲ . 



ನಿಯಮಿತ ಮೇಜಿನ ಮೇಲೆ ನಿಮ್ಮ ಬಟ್ಟೆಗಳನ್ನು ಇಟ್ಟು ಕಟ್ ಮಾಡಲು ಸುಲಭವಾಗಿರುತ್ತದೆ , ಒಳ್ಳೆಯ ದಾರಗಳನ್ನು ಆರಿಸಿ ಅಗ್ಗದ ದಾರ ಬಳಸುವುದನ್ನು ತಪ್ಪಿಸಿ , ಅಗ್ಗದ ದಾರ ಉಪಯೋಗಿಸಿದರೆ ಬಟ್ಟೆ ಒಗೆಯುವಾಗ ಹೊಲಿಗೆ ಬಿಟ್ಟುಕೊಳ್ಳುವ ಸಾಧ್ಯತೆ ಇರುತ್ತದೆ . ಹೆಚ್ಚಿನ  ಗುಣಮಟ್ಟದ ಹತ್ತಿ ದಾರವು ಗಾದಿಗೆ ಅತ್ಯುತ್ತಮ ಆಯ್ಕೆಯಾಗಿರುತ್ತದೆ. 


ನಂತರ ಒಳ್ಳೆಯ ಬಟ್ಟೆಗಳನ್ನು ಆಯ್ಕೆ ಮಾಡಿ . ಮೆತ್ತೆಯನ್ನು ತಯಾರಿಸುವಲ್ಲಿ ಪ್ರಮುಖ  ಹಂತವೆಂದರೆ ಬಟ್ಟೆ . ಕಾಟನ್ ಬಟ್ಟೆ ಅಥವಾ ಕಿಟನ್ ಮಿಶ್ರಿತ ಪಾಲಿಯಸ್ಟರ್ ಬಟ್ಟೆಗಳನ್ನು ಆಯ್ಕೆಮಾಡಬಹುದು . ನೀವು ಬಳಸುತ್ತಿರುವ ಬಣ್ಣಗಳು ಮತ್ತು ಅಳತೆಯನ್ನು ಪರಿಗಣಿಸಿ ಎಷ್ಟು ವಿವಿಧ ಬಣ್ಣವನ್ನು ನೀವು ಸೇರಿಸಿಕೊಳ್ಳಬೇಕು ? ಎಷ್ಟು ವಿವಿಧ ಮಾದರಿಗಳು ? , ಒಂದೇ ರೀತಿಯ ದೊಡ್ಡ ಮತ್ತು ಸಣ್ಣ ನಮೂನೆಗಳ ಜೊತೆಗೆ ಮಿಶ್ರ ಬಣ್ಣಗಳನ್ನು ಪಡೆಯಲು ಪ್ರಯತ್ನಿಸಿ . ನಿಮ್ಮ ಬಟ್ಟೆಯ ಆಯ್ಕೆಯೊಂದಿಗೆ ಸೃಜನಶೀಲತೆ ಪಡೆಯಿರಿ .

ನಂತರ ಫಿಲ್ಲಿಂಗ್ ಅಥವಾ ಗಾದಿಗೆ ತುಂಬಲು ಹಾಳೆಗಳಾಗಿ ತಯಾರಿಸಿದ ಹತ್ತಿಯನ್ನು ಆಯ್ಕೆ ಮಾಡಿ ಕೊಳ್ಳಿ , ಕಾಟನ್ ಹತ್ತಿಯಾದರೆ ಉತ್ತಮ .

ನಿಮಗೆ  ಹೆಚ್ಚುವರಿ ಬೆಚ್ಚಗಿನ ಹೊದಿಕೆ ಬೇಡದಿದ್ದರೆ ಸಣ್ಣ ಗಾದಿಗೆ ದಪ್ಪ ಹತ್ತಿಯ ಅಗತ್ಯವಿಲ್ಲ . ಹೊಲಿಗೆ ಯಂತ್ರವನ್ನು ಬಳಸಿ . ಸರಳವಾದ ಗಾದಿಗಳಿಗೆ ಹೊಲಿಗೆ ಯಂತ್ರವನ್ನು ಬಳಸಿ , ನೇರವಾದ ರೇಖೆಯನ್ನು ಮಾಡುವ ಯಾವುದೇ ಯಂತ್ರವು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ . ಒಂದು ಮಾದರಿಯನ್ನು ಪರಿಗಣಿಸಿ , ಒಂದು ಗಾದಿ ಮಾಡಲು ನಿಮಗೆ ಒಂದು ನಮೂನೆಯ ಅಗತ್ಯವಿಲ್ಲವಾದರೂ , ಉಚಿತ ಗಾದಿಯ ಮಾದರಿಗಳು ಪುಸ್ತಕದಲ್ಲಿ ಇರುತ್ತದೆ . ನಿಮ್ಮ ಸ್ವಂತ ಅಳತೆಗಳ ಆಧಾರದ ಮೇಲೆ ಸ್ವಂತ ಮಾದರಿಯನ್ನು ವಿನ್ಯಾಸಗೊಳಿಸಬಹುದು .  ಕಾಟನ್ ಬಟ್ಟೆಯಾದರೆ ನೀರಿನಲ್ಲಿ ಒಮ್ಮೆ ಹಾಕಿ ನಂತರ ಒಣಗಿಸಿ ಐರನ್ ಮಾಡಿಕೊಳ್ಳಿ ಏಕೆಂದರೆ ಕಾಟನ್ ಬಟ್ಟೆಯು ಶ್ರಿಂಕ್ ಆಗುತ್ತದೆ .

 

ಇದಕ್ಕೆ ಬೇಕಾಗಿರುವ ವಸ್ತುಗಳು 


ನಿಮಗಿಷ್ಟವಾದ ಕಾಟನ್ ಅಥವಾ ಪಾಲಿಯಸ್ಟರ್ ಮಿಶ್ರಿತ ಬಟ್ಟೆ , ಬ್ಯಾಟಿಂಗ್ ( ಅಂದರೆ ಗಾದಿಗೆ ಹಾಕಲು ಹಾಳೆಗಳಾಗಿ ತಯಾರಿಸಿದ ಹತ್ತಿ .) ಇದರಲ್ಲಿ ನಿಮಗೆ ನೈಲಾನ್ ಬ್ಯಾಟಿಂಗ್ ಕೂಡ ದೊರೆಯುತ್ತದೆ , ಕತ್ತರಿ ,ದಾರ .
ಈಗ ಹೇಗೆ ಕಟ್ ಮಾಡಿ ನಂತರ ಹೊಲಿಯುವುದೆಂದು ನೋಡೋಣ .

ಬಟ್ಟೆ  A: 9 1/2 " ×9 1/2 " - 6 ಪೀಸ್ .

ಬಟ್ಟೆ   B: 9 1/2 "× 9 1/2" - 2 ಪೀಸ್ .

ಬಟ್ಟೆ  C : 9 1/2" × 9 1/2" - 2 ಪೀಸ್ .

ಬಟ್ಟೆ  D : 9 1/2" × 9 1/2" - 2 ಪೀಸ್ .

ಬಟ್ಟೆ   E   : ( ಬಾರ್ಡರ್ ) 2 1/2" ಪಟ್ಟಿ : 4 ಪೀಸ್ .

ಬಟ್ಟೆ   F : ( ಹಿಂದೆ ) 1 1/4 ಗಜ ಅಂದರೆ 3 ಅಡಿ .

ಈಗ ಬ್ಯಾಟಿಂಗ್ ಅನ್ನು ಗಾದಿಯ ಹಿಂದಿನ ಪೀಸ್ಗಿಂತ 2" ಹೆಚ್ಚಾಗಿ ಕಟ್ ಮಾಡಿಕೂಳ್ಳಬೇಕು .

ಮೇಲಿನ ಅಳತೆಯ ಪ್ರಕಾರ ಬಟ್ಟೆಯನ್ನು ಕಟ್ಮಾಡಿಕೂಳ್ಳಿ , ನಂತರ 3 ಪೀಸ್ಗಳ ಚೌಕಾಕಾರದ ಬಟ್ಟೆಗಳನ್ನು ತೆಗೆದುಕೊಂಡು ಜೋಡಿಸಿಕೊಳ್ಳಿ . (4  ಸಾಲುಗಳನ್ನಾಗಿ )  ABA , CAD , ABA, DAC ಈ ರೀತಿ ಜೋಡಿಸಿಕೊಳ್ಳಿ , ನಂತರ ಮೊದಲ ಚೌಕವನ್ನು ಎರಡನೆಯ ಚೌಕದ ಮೇಲೆ ಇಟ್ಟು ಪಿನ್ ಮಾಡಿ ನಂತರ 1/4" ನಷ್ಟು ಹೊಲಿದುಕೊಳ್ಳಿ , ಈಗ 3 ನೆಯ ಚೌಕ 2 ನೆಯ ಚೌಕದ ಮೇಲೆ ಇಟ್ಟು ಪಿನ್ ಮಾಡಿ 1/4" ನಷ್ಟು ಹೊಲಿದುಕೊಳ್ಳಿ . ಎಲ್ಲಾ ಸಾಲುಗಳನ್ನು ಹೀಗೆ ಹೊಲಿದುಕೊಳ್ಳಿ , 2 ಮತ್ತು 4 ನೆಯ ಸಾಲನ್ನು ತಿರುಗಿಸಿ ಕೊಳ್ಳಿ ನೀವು ಹೊಲಿಯುವಾಗ ಪದರದ ಎದುರು ಗಡೆ ಹೊಲಿಯುವಂತಿರಬೇಕು , ಸಾಲುಗಳನ್ನು ತಿರುಗಿಸುತ್ತಾ ಇರಬೇಕು ಏಕೆಂದರೆ ಬಟ್ಟೆಯ ರೈಟ್ ಸೈಡ್ ಮೇಲೆ ಬರಬೇಕು .

2 ನೆಯ ಸಾಲನ್ನು ಮೇಲಿನ ಸಾಲಿನ ಮೇಲೆ ಇಡಬೇಕು . ಬ್ಯಾಟಿಂಗ್ ಹಾಗೂ ಹಿಂದೆಯ ಬಟ್ಟೆಯನ್ನು ಮೊದಲ ಗಾದಿಯ ಹಿಂಬದಿಗಿರಬೇಕು . ಹಿಂದೆಯ ಬಟ್ಟೆ ಮತ್ತು ಬ್ಯಾಟಿಂಗ್ ಅನ್ನು ಮೇಲೆ ಬರುವ ಬಟ್ಟೆಯನ್ನು 2"  ದೊಡ್ಡದಾಗಿ ಕಟ್ ಮಾಡಿಕೊಳ್ಳಬೇಕು . ನಂತರ ಬ್ಯಾಟಿಂಗನ್ನು ಮೊದಲು ಕೆಳಗೆ ಜೋಡಿಸಿ ನಂತರ ಮಧ್ಯದ ಪೀಸ್ , ನಂತರ ಮೇಲೆ ಬರುವ ಬಟ್ಟೆ ಇಟ್ಟು ಪಿನ್ಮಾಡಿಕೊಳ್ಳಬೇಕು .

ಜೋಡಿಸಿದ ನಂತರ ಎಕ್ಸ್ ಟ್ರಾ ಬರುವ ಬಟ್ಟೆಗಳನ್ನು ಟ್ರಿಮ್ ಮಾಡಿಕೊಳ್ಳಿ , ನಂತರ ಗಾದಿಯ 4 ಬದಿಯ ಕೊನೆಯನ್ನು ಸ್ವಲ್ಪವಾಗಿ ರೌಂಡಾಗಿ ಕಟ್ ಮಾಡಿಕೊಳ್ಳಬೇಕು , ಇದರಿಂದ ನಿಮಗೆ ಶೇಪ್ ಚೆನ್ನಾಗಿ ಬರುತ್ತದೆ . ನಂತರ 10" ಬಿಟ್ಟು ಸುತ್ತಲೂ ಹೊಲಿದು ಕೊಳ್ಳಬೇಕು , ಈ 10" ಏಕೆ ಬಿಡಬೇಕೆಂದರೆ ಹೊಲಿದಾದ ಮೇಲೆ ಒಳಗಿನ ಬಟ್ಟೆಯನ್ನು ಹೊರಗೆ ತೆಗೆದುಕೊಳ್ಳಲು ಸುಲಭವಾಗುತ್ತದೆ . ನಂತರ ಸುತ್ತಲೂ ಹೊಲಿದಾದ ಮೇಲೆ ಒಳಗಿನ ಬಟ್ಟೆಯನ್ನು ಹೊರಗೆ ಎಳೆದುಕೊಂಡು ನಂತರ ಆ 10" ಹೊಲಿದು ಪೂರ್ತಿ
ಮಾಡಿಕೊಳ್ಳಿ . ನಂತರ ಸುತ್ತಲೂ ಬಾರ್ಡರ್ ಹೊಲಿದುಕೊಳ್ಳಿ , ಕೊನೆಗೆ ಎಲ್ಲಾ ಪೀಸಿನ ಚೌಕಾಕಾರದ ಮೇಲೂ ಹೊಲಿಗೆ ಹಾಕಿಕೊಳ್ಳಿ . ಈಗ ನಿಮ್ಮ ಗಾದಿ ಅಥವಾ ಕ್ವಿಲ್ಟ್ ರೆಡಿಯಾಗಿದೆ . ಇದೇ ಕಲ್ಪನೆ ಉಪಯೋಗಿಸಿ ನೀವು ದೊಡ್ಡ ಗಾದಿಗಳನ್ನು ಹೊಲಿಯಬಹುದು . ನಾವೆ ನಮ್ಮ ಕೈಯಾರೆ ಗಾದಿಯನ್ನು ಹೊಲಿದು ನಮ್ಮ ಮಕ್ಕಳಿಗೆ ಅಥವಾ ಮೊಮ್ಮಕ್ಕಳಿಗೆ ಕೊಡುವಾ ಆನಂದ ಹೇಳ ತೀರದು . ನನ್ನ ಈ ಅನಿಸಿಕೆ ನಿಮಗೆ ಇಷ್ಟವಾಯಿತೆಂದು ಭಾವಿಸುತ್ತೇನೆ .

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon