Link copied!
Sign in / Sign up
29
Shares

ಈ 5 ಮನೆಮದ್ದುಗಳು ಮನೆಯಲ್ಲೇ ಕೂತು ತೂಕ ಕಡಿಮೆ ಮಾಡಿಕೊಳ್ಳಲು ಸಹಾಯ ಮಾಡುತ್ತವೆ!

ಆಧಿಕ ತೂಕ ಹೊಂದಿರುವುದು ಆ ವ್ಯಕ್ತಿಯ ಆತ್ಮ ವಿಶ್ವಾಸದ ಮೇಲೆ ಪ್ರಭಾವ ಬೀರಬಹುದು ಹಾಗು ಇದು ಕೂಡ ಆರೋಗ್ಯಕ್ಕೆ ಹಾನಿಕಾರಕ. ನಿಮ್ಮ ದೇಹದಲ್ಲಿರುವ ಹೆಚ್ಚುವರಿ ಕೊಬ್ಬು - ನಿಮ್ಮ ಸ್ಥೂಲಕಾಯವು ನಿಮ್ಮ ದೇಹಕ್ಕೆ ಡಯಾಬಿಟಿಸ್, ಹೃದಯಾಘಾತ, ಅಧಿಕ ಬಿಪಿ, ಇಂತಹ ಬಹಳಷ್ಟು ಕಾಯಿಲೆಗಳು ಉಂಟಾಗುವುದನ್ನು ಸುಲಭವಾಗಿಸುತ್ತದೆ. ಹೀಗಾಗಿ ನೀವು ನಿಮ್ಮ ಅಧಿಕ ತೂಕವನ್ನು ಇಳಿಸಿಕೊಳ್ಳುವುದು ತುಂಬಾನೇ ಮುಖ್ಯ ಮತ್ತು ನೀವು ಇದನ್ನು ಈಗಲೇ ಮಾಡುವುದು ತುಂಬಾನೇ ಒಳ್ಳೆಯದು. ನಿಮಗೆ ಗೊತ್ತಿರುವ ಹಾಗೆ ತೂಕವನ್ನು ನಿಭಾಯಿಸಲು ಇರುವುದು ಎರಡೇ ದಾರಿಗಳು - ಆರೋಗ್ಯಕರವಾದದ್ದನ್ನು ತಿನ್ನುವುದು ಮತ್ತು ವ್ಯಾಯಾಮ ಮಾಡುವುದು. ಸದೃಢ ದೇಹ ಪಡೆಯಲು ಇವುಗಳು ತುಂಬಾನೇ ಮುಖ್ಯ. ಆದರೆ, ಇವುಗಳೊಂದಿಗೆ ಇನ್ನೊಂದಷ್ಟು ಮನೆಮದ್ದುಗಳು ನಿಮಗೆ ಮನೆಯಲ್ಲೇ ತೂಕ ಕಳೆದುಕೊಳ್ಳಲು ಸಹಾಯ ಮಾಡುತ್ತವೆ.

ನೀವು ಈ ಮನೆಮದ್ದುಗಳನ್ನು ಸೇವಿಸುವುದರೊಂದಿಗೆ ಚೆನ್ನಾಗಿ ಆರೋಗ್ಯಕರವಾದದ್ದನ್ನು ಸೇವಿಸುವುದು ಮತ್ತು ವ್ಯಾಯಾಮ ಮಾಡುವುದ ಮಾಡಿದರೆ, ನೀವು ಇನ್ನಷ್ಟು ಬೇಗನೆ ತೂಕ ಕಳೆದುಕೊಳ್ಳುತ್ತೀರಿ.


ತೂಕವನ್ನು ಕಳೆದುಕೊಳ್ಳುವುದು ಹೇಗೆ?


ನೀವು ತೂಕವನ್ನು ಪರಿಣಾಮಕಾರಿಯಾಗಿ ಕಳೆದುಕೊಳ್ಳಬೇಕು ಎಂದರೆ, ನೀವು ಸೇವಿಸುವ ಕ್ಯಾಲೋರಿಗಳ ಸಂಖ್ಯೆಗಿಂತ ಹೆಚ್ಚು ಸಂಖ್ಯೆಯ ಕ್ಯಾಲೋರಿಗಳನ್ನ ನೀವು ಕರಗಿಸಬೇಕು. ಆಗ ನಿಮ್ಮ ದೇಹವು ಎನರ್ಜಿಯನ್ನು ಸೃಷ್ಟಿಸಲು ನಿಮ್ಮ ದೇಹದಲ್ಲಿನ ಕೊಬ್ಬನ್ನು ಎನರ್ಜಿ ಆಗಿ ಪರಿವರ್ತಿಸುತ್ತದೆ. ಹೀಗೆ ನಿಮ್ಮ ದೇಹದಲ್ಲಿನ ಕೊಬ್ಬಿನಾಂಶವನ್ನು ಕಡಿಮೆ ಮಾಡುತ್ತದೆ.


ಈ ಲೇಖನದಲ್ಲಿ ನಾನು ನಿಮಗೆ ತೂಕ ಕಡಿಮೆ ಮಾಡಿಕೊಳ್ಳಲು ಸಹಾಯ ಮಾಡುವ ಆಹಾರಗಳ ಬಗ್ಗೆ ಬಿಡಿ ಬಿಡಿಯಾಗಿ ವಿವರಿಸುತ್ತೇನೆ. ಇದನ್ನು ಸಂಪೂರ್ಣವಾಗಿ ಓದಿ :


೧. ದಾಲ್ಚಿನ್ನಿ (ಚಕ್ಕೆ) ಟೀ


ತೂಕವನ್ನು ನೈಸರ್ಗಿಕವಾಗಿ ಮನೆಯಲ್ಲೇ ಕಡಿಮೆ ಮಾಡಿಕೊಳ್ಳಲು ಬೆಸ್ಟ್ ಟಿಪ್ಸ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವುದು ಈ ದಾಲ್ಚಿನ್ನಿ ಚಹಾ. ಇದನ್ನು ನೀವು ನೆನಪಲ್ಲಿ ಇಟ್ಟುಕೊಳ್ಳಲೇಬೇಕು.

ರಕ್ತದಲ್ಲಿನ ಸಕ್ಕರೆ ಪ್ರಮಾಣವು ನಿಮ್ಮ ಹಸಿವು ಮತ್ತು ಶಕ್ತಿಯ ಮೇಲೆ ಪರಿಣಾಮ ಬೀರುವ ಕಾರಣ, ಅದು ನಿಮ್ಮ ದೇಹದ ತೂಕದ ಮೇಲೂ ನೇರ ಪರಿಣಾಮ ಬೀರುತ್ತದೆ. ಒಂದು ವೇಳೆ ನಿಮ್ಮ ದೇಹದಲ್ಲಿನ ಸಕ್ಕರೆ ಪ್ರಮಾಣವು ತುಲನೆಯಲ್ಲಿ ಇದ್ದರೆ, ನಿಮ್ಮ ದೇಹವು ಕೊಬ್ಬನ್ನು ಶೇಖರಿಸುವ ಬದಲು ಅದನ್ನು ಉಪಯೋಗಿಸಿ ಕರಗಿಸಿ ಬಿಡುತ್ತದೆ. ಅಲ್ಲದೆ ಅಧ್ಯಯನಗಳ ಪ್ರಕಾರ ದಾಲ್ಚಿನ್ನಿಯು ಹೈ ಬಿಪಿ ಅನ್ನು ಕೂಡ ನಿಯಂತ್ರಿಸುವಲ್ಲಿ ಮತ್ತು ಇನ್ಸುಲಿನ್ ಕಾರ್ಯವನ್ನು ವೃದ್ಧಿಸುವಲ್ಲಿ ಸಹಾಯ ಮಾಡುತ್ತದೆ ಎಂಬುದು ತಿಳಿದು ಬಂದಿದೆ. ಅಲ್ಲದೆ ದಾಲ್ಚಿನ್ನಿಯು ನಿಮ್ಮ ಎನರ್ಜಿಯನ್ನು ಹೆಚ್ಚಿಸಿ, ನಿಮ್ಮ ದೇಹವನ್ನು ನಿಷ್ಕಲ್ಮಶ ಮಾಡಿ, ಮೆಟಬೋಲಿಸಂ ವೃದ್ಧಿಸುತ್ತದೆ. ಇವೆಲ್ಲವೂ ತೂಕ ಕಡಿಮೆ ಮಾಡಿಕೊಳ್ಳಲು ಸಹಾಯ ಮಾಡುತ್ತವೆ. ಹೀಗಿದ್ದ ಮೇಲೆ ನಾವು ದಾಲ್ಚಿನ್ನಿ ಟೀ ಏಕೆ ಸೇವಿಸಬಾರದು ಹೇಳಿ?


ತಯಾರಿಸಲು ಬೇಕಿರುವ ಸಾಮಗ್ರಿಗಳು :

* ಒಂದು ಚಮಚ ಚಕ್ಕೆ ಪುಡಿ

* ಒಂದು ದಾಲ್ಚಿನ್ನಿ ಕಡ್ಡಿ

* ಒಂದು ಲೋಟ ನೀರು

ಮೊದಲಿಗೆ ಒಂದು ಕಪ್ ಅಲ್ಲಿ ಒಂದು ಚಮಚ ಚಕ್ಕೆ ಪುಡಿ ಮತ್ತು ಒಂದು ಚಕ್ಕೆ ಕಡ್ಡಿಯನ್ನು ಹಾಕಿ. ಈ ಕಪ್ ಗೆ ಒಂದು ಲೋಟ ಬಿಸಿ ಬಿಸಿ ನೀರನ್ನು ಹಾಕಿ. ಚಕ್ಕೆಯು ಬಿಸಿ ನೀರಿನೊಳಗೆ ನೆನೆಯಲು 15 ನಿಮಿಷಗಳ ಕಾಲ ಬಿಡಿ. ನಂತರ ಅದನ್ನು ಸೋಸಿ, ಚಕ್ಕೆಯನ್ನು ಬೇರ್ಪಡಿಸಿ. ಉಳಿದ ಚಕ್ಕೆ ಸ್ವಾದದ ಬಿಸಿ ಚಹಾವನ್ನು ಸೇವಿಸಿ. ನಿಮ್ಮ ತೂಕ ಇಳಿಸಿಕೊಳ್ಳಲು ದಿನಕ್ಕೆ ಇದನ್ನು ಎರಡು ಬಾರಿ ಸೇವಿಸಿ.


೨. ರೋಸ್ ದಳಗಳ ನೀರು


ರೋಜ್ ಹೂವಿನ ದಳಗಳು ಮೃದು ಮೂತ್ರವರ್ಧಕಗಳಾಗಿ ಕೆಲಸ ಮಾಡುತ್ತವೆ. ಇದರ ಅರ್ಥ ರೋಸ್ ಹೂವಿನ ದಳಗಳು ನಿಮ್ಮ ಕಿಡ್ನಿಗಳು ನಿಮ್ಮ ಮೂತ್ರದೊಂದಿಗೆ ಹೆಚ್ಚಿನ ಉಪ್ಪಿನಾಂಶವನ್ನು ಹೊರಹಾಕಲು ಉತ್ತೇಜನ ನೀಡುತ್ತವೆ. ಈ ಹೆಚ್ಚುವರಿ ಉಪ್ಪಿನಾಂಶವು ತನ್ನೊಂದಿಗೆ ದೇಹದಲ್ಲಿರುವ ಹೆಚ್ಚುವರಿ ನೀರಿನಾಂಶವನ್ನು ತೆಗೆದುಕೊಂಡು ಹೋಗುತ್ತದೆ. ಇದರಿಂದ ನಿಮ್ಮ ರಕ್ತಸಂಚಾರ ವ್ಯವಸ್ಥೆಯಲ್ಲಿ ನೀರಿನಾಂಶ ಕಡಿಮೆ ಆಗುತ್ತದೆ. ಆದರೆ, ಇದು ಕೇವಲ ತಾತ್ಕಾಲಿಕ ತೂಕ ಇಳಿಕೆ. ಇದು ಆದ ನಂತರ, ನಿಮಗೆ ಇನ್ನೂ ಜಾಸ್ತಿ ಬಾಯಾರಿಕೆ ಆಗಿ ನೀವು ಹೆಚ್ಚು ನೀರು ಕುಡಿಯುವಂತೆ ಆಗುತ್ತದೆ. ಇದರಿಂದ ನಿಮ್ಮ ದೇಹವು ಜಲೀಕರಣ ಹೊಂದುತ್ತದೆ ಮತ್ತು ಸ್ವಚ್ಛಗೊಳ್ಳುತ್ತದೆ. ಜಲೀಕರಣ ಹೊಂದಿರುವುದು ತೂಕ ಇಳಿಸಿಕೊಳ್ಳಲು ತುಂಬಾನೇ ಮುಖ್ಯ.

ತಯಾರಿಸಲು ಬೇಕಿರುವ ಸಾಮಗ್ರಿಗಳು :

* ಒಂದು ಹಿಡಿ ಒಣಗಿದ ಅಥವಾ ತಾಜಾ ಗುಲಾಬಿ ಹೂವಿನ ದಳಗಳು (ತಾಜಾ ಇದ್ದರೆ ಒಳ್ಳೆಯದು)

* 2 ಲೋಟದಷ್ಟು ಡಿಸ್ಟಿಲ್ ನೀರು

* ಮುಚ್ಚಳವಿರುವ ಒಂದು ಪಾತ್ರೆ

ಮೊದಲಿಗೆ ಪಾತ್ರೆಯನ್ನು ಸ್ಟೋವ್ ಮೇಲೆ ಇಡಿ, ಅನಂತರ ಅದರೊಳಗೆ ಗುಲಾಬಿ ಹೂವಿನ ದಳಗಳನ್ನ ಹಾಕಿ, ನಂತರ ಅವೆಲ್ಲವುಗಳು ಸಂಪೂರ್ಣವಾಗಿ ಮುಳುಗುವಷ್ಟು ಡಿಸ್ಟಿಲ್ ನೀರನ್ನು ಪಾತ್ರೆಯೊಳಗೆ ಹಾಕಿ. ನಂತರ ಪಾತ್ರೆಯ ಮುಚ್ಚಳ ಮುಚ್ಚಿ. ಮುಚ್ಚಳ ಇಲ್ಲದಿದ್ದರೆ ದೊಡ್ಡ ತಟ್ಟೆಯನ್ನಾದರೂ ಇಟ್ಟು ಅದನ್ನು ಮುಚ್ಚಿ. ನಂತರ 20 ನಿಮಿಷಗಳವರೆಗೆ ಸಣ್ಣ ಉರಿಯಲ್ಲಿ ಪಾತ್ರ್ಯೆಯನ್ನು ಕಾಯಿಸಿ. ಹೂವಿನ ದಳಗಳು ಬಣ್ಣ ಬಿಡುವವರೆಗೂ ಕಾಯಿಸಿ ನಂತರ ಅದನ್ನು ಸೋಸಿ, ದಳಗಳನ್ನ ಹೊರತೆಗೆಯಿರಿ. ಉಳಿದ ನೀರನ್ನು ಒಂದು ಪಾತ್ರೆಯಲ್ಲಿ ಹಾಕಿ 6 ದಿನಗಳವರೆಗೆ ಫ್ರಿಡ್ಜ್ ಅಲ್ಲಿ ಇಡಿ. ಇದನ್ನು ಪ್ರತಿದಿನ ಬೆಳಗ್ಗೆ ನಿಮಗೆ ಹಸಿವಾದಾಗ ½ - 1 ಕಪ್ ಅಷ್ಟು ಮಾತ್ರ ಸೇವಿಸಿ.


೩. ಸೇಬು ತಿನಿಸುಗಳು


ಸೇಬಿನಲ್ಲಿ ಇತರೆ ತರಕಾರಿಗಳು ಅಥವಾ ಹಣ್ಣುಗಳಲ್ಲಿ ಇರುವಷ್ಟು ಅಪಾರ ಪ್ರಮಾಣದ ಪೋಷಕಾಂಶಗಳು ಇಲ್ಲದೆ ಇದ್ದರೂ, ಇದು ತೂಕ ಕಡಿಮೆ ಮಾಡಿಕೊಳ್ಳಲು ಸಾಹಯ ಮಾಡಲು ಬೇಕಿರುವ ಎಲ್ಲವನ್ನು ಹೊಂದಿದೆ. ಸೇಬಿನಲ್ಲಿ ನಾರಿನಂಶ ಹೆಚ್ಚಿದ್ದು, ಇದು ನಿಮ್ಮ ಹಸಿವನ್ನು ಬಹುಕಾಲದವರೆಗೆ ನೀಗಿಸುತ್ತದೆ. ಸೇಬಿನಲ್ಲಿರುವ ಪೆಕ್ಟಿನ್ ಕೊಲೆಸ್ಟರಾಲ್ ಅನ್ನು ಕಡಿಮೆ ಮಾಡುತ್ತದೆ ಅಲ್ಲದೆ ಕಾರ್ಬೋಹೈಡ್ರೇಟ್ಸ್ ಹೀರಿಕೆಯನ್ನು ಕೂಡ ಕಡಿಮೆ ಮಾಡುತ್ತದೆ. ಕೊನೆಯದಾಗಿ ಸೇಬು ಕಡಿಮೆ ಸೋಡಿಯಂ ಹೊಂದಿರುವ ಆಹಾರ ಆಗಿದ್ದು ಇದು ಹೆಚ್ಚುವರಿ ನೀರಿನಾಂಶವನ್ನು ದೇಹದಲ್ಲಿ ಉಳಿಸಿಕೊಳ್ಳುವುದಿಲ್ಲ ಮತ್ತು ದೇಹದಲ್ಲಿ ನೀರಿನ ತೂಕ ಹೆಚ್ಚಿಸುವುದಿಲ್ಲ.

ತಯಾರಿಸಲು ಬೇಕಿರುವುದು :

* 1-2 ತಾಜಾ ಸೇಬಿನ ಹಣ್ಣುಗಳು

ಸೇಬನ್ನು ಬಿಸಿ ನೀರಿನಲ್ಲಿ ಬೇಯಿಸಿಕೊಂಡು, ಮೆತ್ತಗಾದ ಮೇಲೆ ಚೆನ್ನಾಗಿ ಜೇಜ್ಜಿಕೊಂಡು ತಿನ್ನಿ ಅಥವಾ ಸೇಬನ್ನು ಜ್ಯೂಸು ಮಾಡಿಕೊಂಡು ಕುಡಿಯಿರಿ ಅಥವಾ ಸೇಬನ್ನು ಕತ್ತರಿಸಿ ಹಾಗೆಯೇ ತಿನ್ನಿ. ಹೀಗೆ ದಿನಕ್ಕೆ 1-2 ಹಣ್ಣುಗಳನ್ನು ಸೇವಿಸಿ. ಆದರೆ ನೆನಪಲ್ಲಿ ಇಡಬೇಕಾದ ಒಂದು ವಿಷಯ ಎಂದರೆ ಯಾವುದೇ ಕಾರಣಕ್ಕೂ ಸಿಪ್ಪೆಯನ್ನು ಮಾತ್ರ ಸುಲಿದು ಬಿಸಾಕಬೇಡಿ. ಸಿಪ್ಪೆಯಲ್ಲೇ ಹೆಚ್ಚಿನ ನಾರಿನಂಶ ಇರುತ್ತದೆ. ಇದು ನೀವು ತೂಕ ಕಳೆದುಕೊಳ್ಳಲು ತುಂಬಾ ಅಗತ್ಯವಾದ ವಸ್ತು.


೪. ಕರಿಮೆಣಸು ಮತ್ತು ನಿಂಬೆ ರಸ


ಈ ರುಚಿಕರ ಮಿಶ್ರಣವು ನಿಂಬೆ ರಸ ಮತ್ತು ಕರಿಮೆಣಸನ್ನು ಒಳಗೊಂಡಿದ್ದು, ಇದು ನಿಮಗೆ ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಕರಿಮೆಣಸಿನಲ್ಲಿ ನೈಸರ್ಗಿಕ ರಾಸಾಯನಿಕ ಅಂಶವಾಗಿರುವ ಪಿಪೆರಿನ್ ಇದ್ದು, ಈ ರಾಸಾಯನಿಕವೇ ಮೆಣಸಿಗೆ ಗಾಢ ವಾಸನೆ ನೀಡುವುದು. ಕೆಲವೊಂದು ಹೊಸ ಸಂಶೋಧನೆಗಳ ಪ್ರಕಾರ ಕರಿಮೆಣಸಲ್ಲಿ ಇರುವ ಈ ಪಿಪೆರಿನ್ ಕೊಬ್ಬಿನ ಕಣಗಳನ್ನ ನಿಯಂತ್ರಿಸುವ ಜೀನ್ಸ್ ಗೆ ಸಂಬಂಧಪಟ್ಟಿದೆ ಎಂದು ತಿಳಿದು ಬಂದಿದೆ. ಅಲ್ಲದೆ ಪಿಪೆರಿನ್ ದೇಹದಲ್ಲಿನ ಕೊಬ್ಬಿನ ಕಣಗಳು ಹೋಗಲಾಡಿಸುವುದಕ್ಕೂ ಮತ್ತು ನಾವು ಸೇವಿಸುವ ಆಹಾರದಲ್ಲಿನ ಪೋಷಕಾಂಶಗಳನ್ನು ಹೀರಿಕೊಳ್ಳುವ ಸಾಮರ್ಥ್ಯವನ್ನು ಕೂಡ ಹೆಚ್ಚಿಸುತ್ತದೆ ಎಂಬುದು ತಿಳಿದು ಬಂದಿದೆ.

ತಯಾರಿಸಲು ಬೇಕಿರುವ ಸಾಮಗ್ರಿಗಳು :

* ಅರ್ಧ ನಿಂಬೆ ಹಣ್ಣಿನ ರಸ

* ತಾಜಾ ನೀರು

* ಕರಿಮೆಣಸಿನ ಪುಡಿ

ಒಂದು ಲೋಟ ನೀರಿಗೆ ಅರ್ಧ ನಿಂಬೆ ಹಣ್ಣಿನ ರಸವನ್ನು ಹಿಂಡಿಕೊಳ್ಳಿ ಮತ್ತು ಅದಕ್ಕೆ 3 ಕರಿಮೆಣಸನ್ನು ಕುಟ್ಟಿ ಪುಡಿ ಮಾಡಿ ಹಾಕಿ. ಇದನ್ನು ಚೆನ್ನಾಗಿ ಬೆರೆಸಿ, ಬೆಳಗ್ಗೆ ಎದ್ದೊಡನೆ ಕುಡಿಯಿರಿ ಮತ್ತು ರಾತ್ರಿ ಊಟದ ನಂತರ ಇನ್ನೊಂಮ್ಮೆ ಕುಡಿಯಿರಿ.


೫. ನೀರು ಕುಡಿಯುತ್ತಲೇ ಇರಿ

ಜಲೀಕರಣ ಹೊಂದಿರುವುದು ತೂಕ ಇಳಿಸಿಕೊಳ್ಳುವಾಗ ಅತ್ಯಂತ ಅಗತ್ಯವಾದ ವಿಷಯ. ಒಂದು ವೇಳೆ ನೀವೇನಾದರೂ ಮಂಜುಗಡ್ಡೆಯಷ್ಟು ತಣ್ಣಗಿನ ನೀರು ಕುಡಿದರೆ ಕೊಬ್ಬು ಕರಗುತ್ತದೆ ಎಂದು ಅಂದುಕೊಂಡರೆ ಅದು ತಪ್ಪು. ತಣ್ಣೀರು ಕುಡಿದ ನಂತರ ನಿಮ್ಮ ದೇಹವು ಪುನಃ ಹಿಂದಿನ ತಾಪಮಾನಕ್ಕೆ ಬರಲು ಸ್ವಲ್ಪವೇ ಹೆಚ್ಚು ಕ್ಯಾಲೋರಿಗಳನ್ನ ಕರಗಿಸಬಹುದು. ಅಲ್ಲದೆ ಹೆಚ್ಚೆಚ್ಚು ನೀರು ಸೇವಿಸುವುದರಿಂದ ನಿಮ್ಮ ದೇಹದಲ್ಲಿನ ಗಲೀಜು ವಸ್ತುಗಳು ಹೊರಬರುತ್ತವೆ ಮತ್ತು ನಿಮ್ಮ ದೇಹವು ನಿರ್ವಿಶೀಕರಣ ಹೊಂದುತ್ತದೆ. ಮೇಲಾಗಿ ನೀವು ಜಲೀಕರಣ ಹೊಂದಿದ್ದರೆ, ನೀವು ನೀರಿನ ತೂಕದ ಬಗ್ಗೆ ತಲೆ ಕೆಡಿಸಿಕೊಳ್ಳಬೇಕಿಲ್ಲ.

ನೀವು ಮಾಡಬೇಕಿರುವುದು ಇಷ್ಟೇ. ಪ್ರತಿದಿನ 8 ಲೋಟಗಳಷ್ಟು ನೀರನ್ನು ಸೇವಿಸುವುದು. ನಿಜ ಹೇಳಬೇಕೆಂದರೆ ಮನೆಯಲ್ಲೇ ಕೂತು ಅಧಿಕ ತೂಕವನ್ನು ಇಳಿಸಿಕೊಳ್ಳಲು ಇರುವ ಅತ್ಯುತ್ತಮ ದಾರಿಗಳಲ್ಲಿ ಇದು ಕೂಡ ಒಂದು.

--------------------------------------------------------------------------------------------------------------------------------------------------------

ಅಮ್ಮಂದಿರೆ! ನಿಮಗೆಲ್ಲಾ ಒಂದು ಸಿಹಿ ಸುದ್ದಿ ಇದೆ!

ನಾವು, ಅಂದರೆ ಟೈನಿಸ್ಟೆಪ್ ಸಂಪೂರ್ಣ ನೈಸರ್ಗಿಕ ಫ್ಲೋರ್ ಕ್ಲೀನರ್ ಅನ್ನು ಲಾಂಚ್ ಮಾಡಿದ್ದು, ಇದು ನಿಮಗೆ, ನಿಮ್ಮ ಮಗುವಿಗೆ ಮತ್ತು ನಿಮ್ಮ ಕುಟುಂಬಕ್ಕೆ ಸಂಪೂರ್ಣವಾಗಿ ಸುರಕ್ಷಿತವಾಗಿದೆ. ಈ ಕ್ಷಣವೇ ಕೀಟಾಣುಗಳಿಗೆ ಮತ್ತು ರಾಸಾಯನಿಕಗಳಿಗೆ ವಿದಾಯ ಹೇಳಿಬಿಡಿ!

ಒಮ್ಮೆ ನಮ್ಮ ಈ ಉತ್ಪನ್ನವನ್ನು ಪ್ರಯತ್ನಿಸಿ ಮತ್ತು ನಿಮಗೆ ಇಷ್ಟವಾಯಿತೇ ಎಂದು ತಿಳಿಸಿ. ಇದನ್ನು ಈಗಲೇ ಆರ್ಡರ್  ಮಾಡಲು ಇಲ್ಲಿ ಕ್ಲಿಕ್ ಮಾಡಿ!

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon