Link copied!
Sign in / Sign up
1
Shares

ಶಿಶುವನ್ನು ಮನೆಗೆ ಕರೆತರುವುದು : ನಿಮಗೆ ತಿಳಿದಿರಬೇಕಾದ ವಿಷಯಗಳು!

ಒಂಬತ್ತು ತಿಂಗಳು ಕಾಯಿಸಿದ ಅತಿಥಿಯನ್ನು ಮನೆಗೆ ಕರೆತರುವ ಸಂಭ್ರಮದಲ್ಲಿದ್ದೀರೇ...? ಆ ಪುಟ್ಟ ದೇವತೆಯ ಸ್ವಾಗತ ಹೀಗೆ ಮಾಡೋಣ...!

೧.ಕೋಣೆಯನ್ನು ರೋಗವಿಮುಕ್ತಗೊಳಿಸಿ

ನವಜಾತ ಶಿಶುಗಳಿಗೆ ಫಕ್ಕನೆ ರೋಗಾಣುಗಳು ಅಂಟಿಕೊಳ್ಳುತ್ತವೆ. ಆದ ಕಾರಣ ಶಿಶುವು ಮನೆಗೆ ಕಾಲಿಡುವ ಮುನ್ನವೇ ಮನೆಯನ್ನು ರೋಗಾಣುವಿಮುಕ್ತಗೊಳಿಸಬೇಕು. ಮಗುವನ್ನು ಮಲಗಿಸುವ ಕೋಣೆಯನ್ನು ಧೂಳು ಹಾಗೂ ಕೊಳೆ ವಿಮುಕ್ತವಾಗಿರಿಸಬೇಕು. ದಿನಕ್ಕೆರಡು ಬಾರಿಯಾದರೂ ಮನೆಯನ್ನು ಗುಡಿಸಿ ಸ್ವಚ್ಛಗೊಳಿಸಬೇಕು. ಮಗುವು ಸ್ನಾನ ಮುಗಿಸಿ ಬರುವ ವೇಳೆಯಲ್ಲಿ ಮಗು ಮಲಗುವ ಕೋಣೆಯನ್ನು/ನೆಲವನ್ನು ಕ್ರಿಮಿನಾಶಕವನ್ನುಪಯೋಗಿಸಿ ಸ್ವಚ್ಛಗೊಳಿಸಿರಿ.

೨.ಅಗತ್ಯ ಸಾಧನಗಳ ಶೇಖರಣೆ

ಮನೆಯಲ್ಲಿ ಎಷ್ಟೇ ಆಳು ಕಾಳುಗಳಿದ್ದರೂ, ಮಗುವಿಗೆ ದಿನನಿತ್ಯ ಬಳಕೆ ವಸ್ತುಗಳಾದ, ಡಯಾಪರ್,ಹಾಲಿನ ಪುಡಿ,ಎಣ್ಣೆ, ಸೋಪು ಇದೇ ಮೊದಲಾದ ಸಾಮಾನುಗಳನ್ನು ಶೀಖರಿಸಿಡಿ. ‘ ತಿನ್ನು- ಕುಡಿ-ಮಲಗು’ ಎನ್ನುವ ಚಕ್ರದಲ್ಲಿ ಕಳೆಯುವ ಮಗುವಿಗೆ ಆಗಾಗ ಬದಲಾಯಿಸಲು ಡಯಾಪರಿನ ಅಗತ್ಯವನ್ನು ತಿಳಿದು, ಅದನ್ನು ಮಗು ಮಲಗುವ ಪಕ್ಕದಲ್ಲೆ ಡ್ರಾಯರಿನಲ್ಲಿ ಶೇಖರಿಸಿಡಿ. ಮಗುವಿನ ಆರೈಕೆಗೆ ಪೂರಕವಾಗುವಂತೆ ಪಕ್ಕದಲ್ಲೇ ತಲೆದಿಂಬನ್ನು ಕೂಡ ತಯಾರಾಗಿರಿಸಿಕೊಳ್ಳುವುದು, ಒತ್ತಡವನ್ನು ಕಡಿಮೆಗೊಳಿಸುತ್ತದೆ.

೩.ಅಗತ್ಯ ಸಹಾಯ ಪಡೆದುಕೊಳ್ಳಿ.

ಮನೆಯ ಸದಸ್ಯರೆಲ್ಲರೂ ನಿಮ್ಮ ಮಗುವನ್ನು ನೋಡಿಕೊಳ್ಳಲು ಸಂತೋಷದಿಂದಲೇ ಸಿದ್ಧರಾಗುವರು. ಹೊಸದಾಗಿ ಪಾಲಕರ ಹುದ್ದೆಗೆ ಭಡ್ತಿ ಪಡೆದ ನಿಮಗೆ ಅನುಭವಸ್ಥರ ಸಹಾಯ ಬೇಕಾಗಬಹುದು.ಇನ್ಫ್ಲುಯೆಂಜಾ ವ್ಯಾಕ್ಸಿನ್ ಗಳ ಬಳಕೆಯೂ ಮಗುವನ್ನು ಫ್ಲೂಗೆ ಎದುರಾಗಿ ಹೋರಾಡಲಿರುವ ಶಕ್ತಿಯನ್ನು ನೀಡುವುದು. ವೈದ್ಯರ ಫೋನ್ ನಂಬರ್ ಅನ್ನು ತೆಗೆದಿಟ್ಟುಕೊಳ್ಳುವುದು ಕೂಡ ತುರ್ತು ಪರಿಸ್ಥಿತಿಯಲ್ಲಿ ನೆರವು ನೀಡುತ್ತದೆ.

ಮಕ್ಕಳ ತಜ್ಞರ ಆಯ್ಕೆಗಾಗಿ

ಮಕ್ಕಳ ತಜ್ಞರನ್ನು ಆಯ್ಕೆ ಮಾಡುವಾಗ ವೈದ್ಯರ ಲಭ್ಯತೆ ಹಾಗೂ ಅವರು ನಿಮ್ಮಿಂದ ಎಷ್ಟು ದೂರದಲ್ಲಿದ್ದಾರೆ ಎನ್ನುವುದನ್ನು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ ವೈದ್ಯರ ಬಗ್ಗೆ ಈ ರೀತಿ ವಿಚಾರಿಸುವುದರಿಂದ ಜನರು ನಿಮ್ಮನ್ನು ತಪ್ಪು ತಿಳಿದುಕೊಳ್ಳುವರೆಂದು ಹೆದರದೇ ನಿಮ್ಮ ಅಗತ್ಯವನ್ನು ಮನಗಂಡು ಮುನ್ನುಗ್ಗಿರಿ.

೪.ಮಗುವಿನ ಅಭಿಮಾನಿಗಳನ್ನು ದೂರವಿಡಿ

ಮಗುವು ಕುಟುಂಬದ ಕೇಂದ್ರಬಿಂದು ಆಗಿರುವುದರಿಂದ ಮಗುವನ್ನು ಪ್ರೀತಿಸಲು ಹಾಗೂ ಮುದ್ದಿಸಲು ಬಂಧುಗಳ ದಂಡೇ ನೆರೆಯುವುದು. ಮೊದಲನೆಯದಾಗಿ,ಮನೆಗೆ ಬಂದ ನೆಂಟರಿಷ್ಟರನ್ನೆಲ್ಲಾ ಮಗುವಿನ ಕೋಣೆಯತ್ತ ದಾಪುಗಾಲಿಡುವುದನ್ನು ತಡೆಯಿರಿ. ಇದರಿಂದ ಮಕ್ಕಳ ವಿಶ್ರಾಂತಿಗಾಗಿ ಧಾರಾಳ ಸಮಯ ದೊರೆಯುವುದಲ್ಲದೆ, ಅಲರ್ಜಿ ಉಂಟಾಗುವುದನ್ನು ತಡೆಯಬಹುದು. ಮಗುವನ್ನು ಎತ್ತಿಕೊಳ್ಳಲು ಬಯಸುವವರಿಗೆ ಕ್ರಿಮಿನಾಶಕ(ಸಾನಿಟೈಸರ್) ಬಳಕೆ ಮಾಡಲು ವಿನಂತಿಸಿರಿ. ಭಾರತೀಯ ಕುಟುಂಬಗಳಲ್ಲಿ ಮಗುವನ್ನು ನೋಡಿದೊಡನೆಯೇ, ಮುದ್ದಿಸುವ ಮನಸ್ಸೇ ಜಾಸ್ತಿ. ಆದರೆ “ಇಲ್ಲ”ಎಂದು ಹೇಳುವ ಧೈರ್ಯವನ್ನು ನೀವು ತಂದುಕೊಳ್ಳಬೇಕು.ಇಲ್ಲದಿದ್ದರೆ ಮಗುವು ಅನಗತ್ಯ ಪ್ರಚೋದನೆಗಳಿಗೊಳಗಾಗಿ, ಅಶಾಂತಿಯ ವಾತಾವರಣ ಸೃಷ್ಟಿಯಾಗುವುದು.

೫.ಹಿರಿಯ ಮಕ್ಕಳು ಹಾಗೂ ಸಾಕು ಪ್ರಾಣಿಗಳ ನಿಭಾಯಿಸುವಿಕ

ನಿಮ್ಮ ಹಿರಿಯ ಎರಡು ಮಕ್ಕಳು;ನಿಮ್ಮ ಸಾಕುಪ್ರಾಣಿ ಮತ್ತು ಮಗುವು ತನ್ನ ಪ್ರತಿಸ್ಪರ್ಧಿಯ ಆಗಮನದಿಂದ ಅಸಮಾಧಾನಗೊಳ್ಳುವುದು ಸಹಜ. ಮಾತ್ರವಲ್ಲದೆ ಅವರು ಹಲವಾರು ಸಾಂಕ್ರಾಮಿಕ ರೋಗಗಳ ಪ್ರಮುಖ ವಾಹಕರು ಕೂಡ ಹೌದು. ಹೊಸ ಮಗುವಿನ ಆಗಮನಕ್ಕಾಗಿ ಅವರಿಬ್ಬರನ್ನು ತಯಾರುಗೊಳಿಸಿ ಹಾಗೂ ಮಗುವಿನ ಜವಾಬ್ದಾರಿಯಲ್ಲಿ ಅವರ ಸಹಾಯವನ್ನು ಕೇಳಿ ಪಡೆದುಕೊಳ್ಳಿರಿ. ಸಾಕು ಪ್ರಾಣಿಗಳು ಅಪರಿಚಿತರ ವಾಸನೆಯನ್ನು ಪಕ್ಕನೆ ಗ್ರಹಿಸಿಕೊಂಡು ಅವರ ಸನಿಹಕ್ಕೆ ಬರಲು ಹಾತೊರೆಯುವುದು. ಅವುಗಳಿಗೆ, ಮಕ್ಕಳ ಕೋಣೆಯೊಳಗಿನ ಪ್ರವೇಶವನ್ನು ನಿಯಂತ್ರಿಸಿ. ಪ್ರಾಣಿಗಳ ಸ್ವಚ್ಛತೆಗಾಗಿ ಶಾಂಪೂವನ್ನು ಬಳಸಿರಿ.

೬.ಮಗುವಿನ ಮದ್ದಿನ ವೇಳಾಪಟ್ಟಿ

ಪ್ರಥಮ ಚಿಕಿತ್ಸಾ ಪೆಟ್ಟಿಗೆಗಳು ಮತ್ತು ಕ್ಯಾಲೆಂಡರುಗಳು ಕಣ್ಣೆದುರಿಗಿದ್ದರೆ, ತಾಯಿಯರಿಗೆ ಬಹಳ ಸಹಾಯವಾಗುವುದು ಮಗುವಿನ ಮದ್ದಿನ ಚೀಟಿಗಳನ್ನು ದೃಷ್ಟಿ ಬೀಳುವ ಜಾಗದಲ್ಲಿಟ್ಟರೆ ಅನುಕೂಲವಾಗಿರುವುದು. ತಿಂಗಳು ತುಂಬದೇ ಹುಟ್ಟಿದ ಮಗುವಾಗಿದ್ದರೆ ಮಗುವಿನ ತೂಕವನ್ನು ಆಗಾಗ್ಗೆ ಪರಿಶೀಲಿಸುವಂತೆ, ಭಾರ ತಿಳಿಯುವ ಯಂತ್ರವನ್ನು ಕೂಡ ಕಂಡುಕೊಳ್ಳಿರಿ ನೀವು ನಿಮ್ಮ ಮಗುವನ್ನು ಸಲಹುತ್ತಿದ್ದೀರೇ ಹೊರತು ಲಾಭ ನೀಡುವ ವಸ್ತುಗಳನ್ನಲ್ಲ.

Tinystep Baby-Safe Natural Toxin-Free Floor Cleaner

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon