Link copied!
Sign in / Sign up
1
Shares

ಮನೆಯ ಸುರಕ್ಷತೆಯ ಬಗ್ಗೆ, ನೀವು ತಿಳಿಯಬೇಕಾದ ೫ ಸಂಗತಿಗಳು

ನಿಮ್ಮ ಮುದ್ದು ಕಂದಮ್ಮನ್ನನ್ನು, ಮೊದಲ ಬಾರಿಗೆ ನಿಮ್ಮ ಮನೆಗೆ ಕರೆತಂದಾಗ, ಮನೆಯವರೆಲ್ಲಾ ಕುಣಿದು ಕುಪ್ಪಳಿಸುತ್ತಾರೆ. ಮಗುವಿನ ನಗು, ತೊದಲ ಮಾತು, ಪುಟ್ಟ ಹೆಜ್ಜೆಗಳು ಮನೆಯಲ್ಲಿ ಸದಾ ಹಬ್ಬದ ವಾತಾವರಣವನ್ನು  ಸೃಷ್ಟಿಸುತ್ತದೆ. ಮಕ್ಕಳ ಕುತೂಹಲ ಎಷ್ಟರ ಮಟ್ಟಿಗಿರುತ್ತದೆ ಎಂದರೆ, ಕಣ್ಣಿಗೆ ಕಾಣಿಸಿದ್ದನ್ನು ಎಳೆದಾಡುವವರೆಗೂ ಮಕ್ಕಳಿಗೆ ಸಮಾಧಾನವಿಲ್ಲ. ಹೀಗೆ ನಿತ್ಯ ಅನ್ವೇಷಣೆಯಲ್ಲಿ ತೊಡಗಿರುವ ಮಕ್ಕಳ್ಳನ್ನು, ಮನೆಯಲ್ಲಿರುವ ಅಪಾಯಕಾರಿ ವಸ್ತುಗಳಿಂದ  ದೂರವಿರಿಸಿ.

ಮಗುವಿಗೆ ಆಟವಾಡಲು ಸುರಕ್ಷಿತವಾಗಿರುವ ಹಾಗೆ, ನಿಮ್ಮ ಮನೆಯನ್ನು ಜೋಡಿಸಬೇಕು. ಮನೆಯೊಳಗೆ ನಿತ್ಯವು ಗಾಳಿ ಬೆಳಕು ಬರುವ ಹಾಗೆ ಮನೆಯನ್ನು ರೂಪಿಸಬೇಕು. ಮನೆಯೊಳಗಿನ ಗಾಳಿಯು, ಮನೆಯ ಹೊರಗಿನ ಗಾಳಿಗಿಂತ ೧೦% ಹೆಚ್ಚು  ಕಲುಶಿತಗೊಂಡಿರುತ್ತದೆ. ಇದು ಮಗುವಿನ ಶಾರೀರಿಕ ಹಾಗು ಮಾನಸಿಕ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಪ್ರತಿದಿನ ಮನೆಯ ಒಳಗೆ ಶುದ್ದವಾದ ಗಾಳಿ ಬೆಳಕು ಬರುವಂತೆ ನೋಡಿಕೊಳ್ಳಿ. ಇಲ್ಲವಾದ್ದಲ್ಲಿ, ನಿಮ್ಮ ಮುದ್ದು ಕಂದಮ್ಮಗಳು ಆಗಿಂದ್ದಾಗ್ಗೆ ಅನಾರೋಗ್ಯಕ್ಕೆ ಗುರಿಯಾಗುವುದು ಖಚಿತ. ಹಾಗಾದರೆ ನಿಮ್ಮ ಮನೆಯ ವಾತಾವರಣವನ್ನು ತಿಳಿಯಾಗಿ, ಶುಭ್ರವಾಗಿಡಲು ಯಾವ ಯಾವ ವಿಧಾನವನ್ನು ಅನುಸರಿಸಬೇಕು ಎಂದು ತಿಳಿದುಕೊಳ್ಳೋಣ ಬನ್ನಿ.

೧. ಪಾದರಕ್ಷೆಗಳ್ಳನ್ನು ಮನೆಯ ಹೊರಗೆ ಬಿಡಿ

ಪಾದರಕ್ಷೆಗಳ್ಳನ್ನು ಹೊರಗೆ ಬಿಡುವುದರಿಂದ, ಅದರೊಂದಿಗಿರುವ ಧೂಳು, ಕ್ರಿಮಿ ಕೀಟಗಳು ಮನೆಯೊಳಗೆ ಪ್ರವೇಶ ಮಾಡುವುದನ್ನು ನಾವು ತಡೆಯಬಹುದು. ಕೆಲವರಿಗೆ ಮನೆಯ ಒಳಗೂ ಪಾದರಕ್ಷೆಗಳ್ಳನ್ನು ಹಾಕಿಕೊಂಡು ಓಡಾಡುವ ಅಭ್ಯಾಸವಿರುತ್ತದೆ.

ಮನೆಯ ಒಳಗೆ ಬಳಸುವ ಪಾದರಕ್ಷೆಗಳ್ಳನ್ನು, ಮನೆಯ ಹೊರಗಿನ ಅಂಗಳದ್ದಲ್ಲಿ ಬಳಸಬೇಡಿ. ಹೊರಗೆ, ಒಳಗೆ ಧರಿಸುವ ಪಾದರಕ್ಷೆಗಳ್ಳನ್ನು ಪ್ರತ್ಯೇಕವಾಗಿಸಿ. ಹೀಗೆ ಮಾಡುವುದರಿಂದ ಅಲರ್ಜಿ, ಚರ್ಮ ದದ್ದು ಮುಂತಾದ ಸಮಸ್ಯೆಗಳಿಂದ, ನಿಮ್ಮ ಮಗುವನ್ನು ದೂರವಿರಿಸಬಹುದು.

೨. ಒಳಾಂಗಣದ ಸಸ್ಯಗಳು, ನಿಮ್ಮ ಸ್ನೇಹಿತರಿದ್ದಂತೆ

ಅಮೇರಿಕಾದ ಪ್ರಖ್ಯಾತ ಸಂಸ್ಥೆಯಾದ NASAದ ವಿಜ್ಞಾನಿಗಳು ಒಳಾಂಗಣ ಸಸ್ಯಗಳ ಮೇಲೆ ಹಲವಾರು ಸಂಶೋಧನೆಯನ್ನು ನಡೆಸಿ, ಅದರಿಂದಾಗುವ ಆರೋಗ್ಯದ ಪ್ರಯೋಜನಗಳ್ಳನ್ನು ವಿವರಿಸಿದ್ದಾರೆ. ಮನೆಯೊಳಗಿರುವ ಇಂಗಾಲದ ಡೈಆಕ್ಸೈಡ್ಯನ್ನು ಹೀರಿಕೊಂಡು, ಆಮ್ಲಜನಕದ ಪ್ರಮಾಣವನ್ನು ವೃದ್ಧಿಸುತ್ತದೆ. ಇದರಿಂದ ಮಕ್ಕಳ್ಳಲ್ಲಿ ಶ್ವಾಸಕೋಶ ಸಂಬಂಧಿ ಖಾಯಿಗಳ ಪ್ರಮಾಣ ಕಡಿಮೆಯಾಗಿದೆ ಎಂದು ಸಮೀಕ್ಷೆಯಿಂದ ತಿಳಿದು ಬಂದಿದೆ.

೩. ನೆಲವನ್ನು ಹಾಗು ರತ್ನಗಂಬಳಿ(ಕಾರ್ಪೆಟ್)ಯನ್ನು ಶುಚಿಯಾಗಿಡಿ

ಕಣ್ಣಿಗೆ ಕಾಣದ ಕ್ರಿಮಿ ಕೀಟಗಳು, ಕಾರ್ಪೆಟ್ ಗಳ ಮೇಲೆ ರಾಜಾರೋಷವಾಗಿ ತಮ್ಮ ಸಂತಾನವನ್ನು ವೃದ್ಧಿಸುತ್ತದೆ. ಕಾರ್ಪೆಟ್ ಗಳು ತೇವಾಂಶವನ್ನು ಹೀರಿಕೊಂಡು, ಸೂಕ್ಶ್ಮಜೀವಿಗಳು ಬೆಳೆಯಲು ಸೂಕ್ತ ವಾತಾವರಣವನ್ನು ಸೃಷ್ಟಿಸುತ್ತದೆ.

ಹಾಗಾಗಿ ವಾರಕ್ಕೆ ಒಂದು ಬಾರಿಯಾದರು, ಮನೆಯ ಕಾರ್ಪೆಟ್ ಗಳ್ಳನ್ನು ಶುಚಿಗೊಳಿಸಿ. ಇದೇ ರೀತಿ, ಮನೆಯ ನೆಲವನ್ನು ಪ್ರತಿನಿತ್ಯ ಒರೆಸುವುದರಿಂದ, ಮನೆಯೊಳಗಿನ ಕ್ರಿಮಿಗಳಿಂದ ದೂರವಿರಬಹುದು.

೪. ಉತ್ತಮ ಗಾಳಿ ಬೆಳಕಿನ ವ್ಯವಸ್ಥೆ

ಕೇವಲ ಮನೆಯ ಹಜಾರದ ಬಾಗಿಲ್ಲನ್ನು ತೆರೆದಿಟ್ಟರೆ ಸಾಲದು. ಮನೆಯ ಅಡಿಗೆ ಕೋಣೆ, ಶಯನಗೃಹ, ಸ್ನಾನದ ಕೋಣೆಯ ಒಳಗೂ ಪ್ರತಿನಿತ್ಯ ಗಾಳಿ, ಬೆಳಕು ಬರುವಂತೆ ನೋಡಿಕೊಳ್ಳಿ. ಅಡಿಗೆ ಹಾಗು ಸ್ನಾನದ ಕೋಣೆಯ ನಿಷ್ಖಾಸ(exhaust) ಫ್ಯಾನ್ ಅನ್ನು ತಿರುಗಲು ಬಿಡಿ. ಹೀಗೆ ಮಾಡುವುದರಿಂದ, ಮನೆಯೊಳಗಿನ ವಿಷಕಾರಿ ಗಾಳಿ, ಹೊಗೆ ಎಲ್ಲವು ಹೊರಗೆ ಹೋಗಿ, ಮನೆಯ ಒಳಗಿನ ವಾತಾವರಣವನ್ನು ಶುಭ್ರವಾಗಿಸುತ್ತದೆ.

೫. ಮನೆಯೊಳಗೆ ಗಾಳಿ ಶುದ್ದಿಕಾರಿಗಳ್ಳನ್ನು(air purifier)ಅಳವಡಿಸಿ

ಇಂದು ಕಲುಷಿತ ವಾತಾವರಣದ್ದಲ್ಲಿ ನಾವೆಲ್ಲರು ಬದುಕುತ್ತಿದ್ದೇವೆ. ಪ್ರತಿನಿತ್ಯ ನೀವು ಉಸಿರಾಡುವ ಗಾಳಿಯಲ್ಲಿ ಹಾನಿಕಾರಕ ರಾಸಾಯನಿಕಗಳ್ಳನ್ನು, ಸೇವಿಸುತ್ತಿರುವುದರ ಅರಿವು ನಿಮಗಿದೆಯೇ? ಇದೇ ಗಾಳಿಯನ್ನು ನಿಮ್ಮ ಪುಟ್ಟ ಕಂದಮ್ಮಗಳು ಸೇವಿಸಿದರೆ , ಅದರ ಆರೋಗ್ಯದ ಮೇಲಾಗುವ ಪರಿಣಾಮಗಳೆಷ್ಟೆಂದು, ನಿಮಗೆ ತಿಳಿದಿದೆಯೇ? ಇದಕ್ಕೆಲ್ಲಾ, ಸೂಕ್ತ ಪರಿಹಾರವೇನೆಂದರೆ ನಿಮ್ಮ ಮನೆಯ ಒಳಾಂಗಣದ್ದಲ್ಲಿ Dr. Aeroguard airpurifier ಅನ್ನು ಬಳಸಿ. ಇದನ್ನು ಜರ್ಮನ್ GUI labsನವರು ಪ್ರಮಾಣಿಕರಿಸಿದ್ದಾರೆ. ಇದು ಮನೆಯೊಳಗಿನ ಗಾಳಿಯನ್ನು ಶೇಖಡ ೯೯% ನಷ್ಟು ಶುದ್ಧೀಕರಿಸಿ, ನಿಮ್ಮ ಪ್ರೀತಿಪಾತ್ರರ ಆರೋಗ್ಯವನ್ನು ಕಾಪಾಡುವಲ್ಲಿ ಯಶಸ್ವಿಯಾಗಿದೆ. ಇದು Vita-Ionsಗಳಾದ ವಿಟಮಿನ್ಸ್, diatoms, ಬೆಳ್ಳಿಯಕಣಗಳ್ಳನ್ನು ಹೊರಗೆ ಸೂಸುವುದರ ಮೂಲಕ ಶ್ವಾಸಕೋಶ ಸಂಬಂಧಿ ಖಾಯಿಲೆಗಳಾದ ದಮ್ಮು, ಅಲರ್ಜಿಯಂತ ಸಮಸ್ಯೆಗಳಿಂದ ನಿಮ್ಮ ಮಗುವನ್ನು ದೂರವಿರಿಸುತ್ತದೆ. ಇದರ ಉಚಿತ  ಪರಿಚಯಾತ್ಮಕ ಆವೃತ್ತಿಯ ಬಗ್ಗೆ ತಿಳಿಯಬೇಕಾದರೆ, ಈ ಲಿಂಕ್ ಮೇಲೆ ಒತ್ತಿ.

ನಿಮ್ಮ ಮಗುವಿನ ಆರೋಗ್ಯ ಹಾಗು ನಿಮ್ಮ ಪ್ರೀತಿಪಾತ್ರರ ಸ್ವಾಸ್ಥ್ಯದ ಬಗ್ಗೆ ನಿಮಗೆ ಕಾಳಜಿಯಿದ್ದಲ್ಲಿ, ಮೇಲೆ ಹೇಳಿರುವ ಎಲ್ಲಾ ಅಂಶಗಳ್ಳನ್ನು ನಿಮ್ಮ ಮನೆಯಲ್ಲಿ ಪಾಲಿಸಿ, ನಿಮ್ಮ ಕುಟುಂಬದವರ ಆರೋಗ್ಯವನ್ನುಕಾಪಾಡಿ.

ಲೇಖನ ನಿಮಗೆ ಉಪಯುಕ್ತವೆನಿಸಿದರೆ, ದಯವಿಟ್ಟು ನಿಮ್ಮ ಬಂಧು-ಮಿತ್ರರೊಂದಿಗೆ ಹಂಚಿಕೊಳ್ಳಿ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon