Link copied!
Sign in / Sign up
0
Shares

ನಿಮ್ಮ ಮತ್ತು ನಿಮ್ಮ ಅತ್ತೆಯ ಮಧ್ಯೆ ಮನಸ್ತಾಪವಿದೆಯೇ? ಗರ್ಭಾವಸ್ಥೆಯಲ್ಲಿ ಅದನ್ನು ಸುಲಭವಾಗಿ ನಿಭಾಯಿಸಲು, ಇಲ್ಲಿದೆ ೫ ಸೂತ್ರಗಳು

ಜಗಳವಿಲ್ಲದ ಮನೆಯಿಲ್ಲ, ಮನಸ್ತಾಪವಿಲ್ಲದ ಸಂಸಾರವಿಲ್ಲ. ಅತ್ತೆಯಂದಿರ ಮನಸ್ಸು ಶುದ್ಧವಾಗಿದ್ದರು, ಕೆಲವೊಮ್ಮೆ ಅವರು ತೋರಿಸುವ ಕಾಳಜಿ ಕಿರಿಕಿರಿ ಅನ್ನಿಸುತ್ತದೆ. ನೀವು ಏನು ತಿನ್ನಬೇಕು, ಮಗುವಿಗೆ ಏನು ತಿನ್ನಿಸಬೇಕು, ಹೇಗೆ ಪಾಲನೆ ಮಾಡಬೇಕು ಎಂಬ ಸಲಹೆಗಳು ಸೊಸೆಯಂದಿರಿಗೆ ಕೆಲವು ಸಂಧರ್ಬದಲ್ಲಿ ಇರುಸು-ಮುರುಸು ಉಂಟು ಮಾಡುತ್ತದೆ. ನಿಮ್ಮ ಮಗುವಿನ ಬೇಕು-ಬೇಡಗಳನ್ನು, ನಿಮ್ಮ ಅತ್ತೆಯೇ ಅಧಿಕ ಭಾರಿ ನಿರ್ಣಯಿಸುವುದರಿಂದ, ತಾಯಿಯಾದವಳಿಗೆ ಕೋಪ ಬರುವುದು ಸಹಜ. ನಿಮ್ಮ ಅತ್ತೆಯು ಅತೀಯಾಗಿ ಸಲಹೆಗಳನ್ನು ನೀಡುವುದುರಿಂದ, ನಿಮಗೆ ಅವರು ಎಲ್ಲರನ್ನು ತಮ್ಮ ಹಿಡಿತದಲ್ಲಿ ಇರಿಸಿಕೊಂಡಿದ್ದಾರೆ ಎಂಬ ಅನುಭವವಾಗಬಹುದು. ಇದರಿಂದ ಅತ್ತೆ-ಸೊಸೆಯ ನಡುವೆ ಮನಸ್ತಾಪ ಬರುವ ಸಾಧ್ಯತೆಗಳು ಹೆಚ್ಚು. ಏನೇ ಆಗಲಿ, ಗರ್ಭಾವಸ್ಥೆಯಲ್ಲಿ ನೀವು ಎಷ್ಟು ಚೆನ್ನಾಗಿ ನಿಮ್ಮ ಶಾರೀರಿಕ ಹಾಗು ಮಾನಸಿಕ ಆರೋಗ್ಯದ ಮೇಲೆ ಕಾಳಜಿವಹಿಸುತ್ತೀರ, ಅಷ್ಟು ಆರೋಗ್ಯವಾಗಿ ನಿಮ್ಮ ಮಗು ಜನಿಸುತ್ತದೆ ಎಂಬುದನ್ನು ಮರೆಯದಿರಿ.

ಮನಸ್ತಾಪದ ಸಂದರ್ಭಗಳು ನಿಮ್ಮಿಬರ ಮಧ್ಯೆ ಎದುರಾದಾಗ, ನೀವು ನಿಮ್ಮ ಅತ್ತೆಯ ಬಳಿ ಅವರಿಗೆ ಅರ್ಥ ಆಗುವ ಹಾಗೆ ಹೇಗೆ ಮಾತನಾಡಬೇಕು ಎಂದು ನಾವು ನಿಮಗೆ ಇಲ್ಲಿ ತಿಳಿಸುತ್ತೇವೆ.

೧. ನಿಮ್ಮ ಗಂಡನನ್ನು ಮಧ್ಯೆ ಎಳೆಯಬೇಡಿ

ನಿಮ್ಮ ಗಂಡನಿಗೆ ಹೆಂಡತಿ ಮುಖ್ಯವೇ, ತಾಯಿ ಮುಖ್ಯವೇ ಎಂಬ ಪ್ರಶ್ನೆ ಕೇಳಿ ಅವರನ್ನು ಗೊಂದಲಕ್ಕೆ ತಳ್ಳಬೇಡಿ. ಇದರಲ್ಲಿ ಯಾರು ಹೆಚ್ಚು, ಯಾರು ಕಡಿಮೆಯ ಹೋರಾಟವಲ್ಲ. ಯಾವುದೇ ವಿಷಯವಾದರು ನಿಮ್ಮ ಅತ್ತೆಯ ಬಳಿ ಚರ್ಚಿಸಬೇಕಾದರೆ ನಿಮ್ಮ ಗಂಡನನ್ನು ಮಧ್ಯೆ ಎಳೆಯಬೇಡಿ. ಗಂಡನ ಬಳಿ ಸಲಹೆಗಳನ್ನು ತೆಗೆದುಕೊಳ್ಳಿ, ಆದರೆ ನಿಮ್ಮ ಅತ್ತೆಯ ಮುಂದೆ ಅವರನ್ನು ಪ್ರಶ್ನಿಸದಿರಿ. ಹಾಗೆಯೆ, ನಿಮ್ಮ ಅತ್ತೆ ಯಾವುದಾದರು ವಿಷಯಗಳಿಗೆ ನಿಮ್ಮ ಗಂಡನನ್ನು ಮಧ್ಯೆ ತಂದರೆ, ನಿಮ್ಮ ಗಂಡನಿಗೆ ಅವರಿಬ್ಬರ ಮಾತುಕತೆಯ ನಡುವೆ ಬರಬೇಡಿ ಎಂದು ಹೇಳಿ. ಇಲ್ಲವಾದಲ್ಲಿ, ಇದರಿಂದ ಹೆಚ್ಚು ನೋವು ಅನುಭವಿಸುವವರು ನಿಮ್ಮ ಗಂಡನೇ ಎಂದು ಮನದಟ್ಟು ಮಾಡಿಸಿ.

೨. ನಿಮ್ಮ ಗರ್ಭಾವಸ್ಥೆಯ ಸಂಗಾತಿ, ನಿಮ್ಮ ಅತ್ತೆ

ನೀವು ನಂಬುವುದಾದರೆ ನಂಬಿ. ನಿಮ್ಮ ಅತ್ತೆ ತೋರಿಸುವ ಅತಿಯಾದ ಕಾಳಜಿ, ನಿಮಗೆ ಮುಜುಗರವೆನಿಸಬಹುದು. ಆದರೆ, ಅವರು ನಿಮ್ಮ ಗರ್ಭಾವಸ್ಥೆಯಲ್ಲಿ, ಅವರ ತಾಯ್ತನದ ನೆನಪನ್ನು ಮೆಲುಕು ಹಾಕುತಿರುತ್ತಾರೆ. ಪ್ರಾಯಶಃ ನೀವು ಕೂಡ ಅವರ ವಯಸ್ಸಿಗೆ ಬಂದಾಗ ಹೀಗೆ  ಮಾಡುವಿರಿ ಎಂದರೆ ತಪ್ಪಾಗುವುದಿಲ್ಲ. ನಿಮ್ಮ ಅತ್ತೆಗು ಕೂಡ ನಿಮ್ಮೊಂದಿಗೆ ಸಂತೋಷವನ್ನು ಹಂಚಿಕೊಳ್ಳಲು ಅವಕಾಶ ನೀಡಿ. ಇದರಿಂದ ಇಬ್ಬರ ಮಧ್ಯೆ ಮನಸ್ತಾಪ ಕಡಿಮೆಯಾಗುತ್ತದೆ.

೩. ಅತ್ತೆಯೊಂದಿಗೆ ಪ್ರೀತಿಯಿಂದ ಮಾತನಾಡಿ

ಸುಮ್ಮನೆ ಕೆಲವು ವಿಷಯಗಳ್ಳನ್ನು ತಲೆಯ ಒಳಗೆ ಇರಿಸಿಕೊಂಡು ಕೊರಗುವ ಬದಲು, ನಿಮಗೆ ಯಾವ ಸಂಗತಿಗಳು ಇಷ್ಟವಿಲ್ಲ ಎಂಬುದನ್ನು ಮುಕ್ತವಾಗಿ ಅವರೊಂದಿಗೆ ಹಂಚಿಕೊಳ್ಳಿ. ಇದರಿಂದ ನಿಮ್ಮ ಭಾವನೆಗಳಿಗೆ ಅವರು ಬೆಲೆ ಕೊಟ್ಟು ಅಂತಹ ವಿಷಯಗಳನ್ನು ಇನ್ನು ಮುಂದೆ  ನಿಮ್ಮ ಬಳಿ ಚರ್ಚಿಸುವುದಿಲ್ಲ. ನಿಮ್ಮ ಮನಸಿನ್ನಲೆಯೇ ಅವರ ಮೇಲೆ ಕೆಟ್ಟ ಅಭಿಪ್ರಾಯವನ್ನು ಹೊಂದುವ ಬದಲು, ಅವರ ಮನಸನ್ನು ತಿಳಿದುಕೊಳ್ಳಲು ಪ್ರಯತ್ನಿಸಿ. ಒಬ್ಬರನ್ನು ಒಬ್ಬರು ಅರ್ಥ ಮಾಡಿಕೊಳ್ಳುವುದು ಅಂದರೆ ಇದೆಯಲ್ಲವೇ?

೪. ತಾಳ್ಮೆಯಿಂದ ವರ್ತಿಸಿ

ನಿಮಗೆ ಇಷ್ಟವಾಗದ ವಿಷಯದ ಬಗ್ಗೆ ಆಗಾಗ ಚರ್ಚಿಸುತ್ತಿದರೆ, ನಯವಾಗಿ ಅವರ ಬಳಿ ಹೇಳಿ. ಇದರಿಂದ ನಿಮಗೆ ಆಗುವ ನೋವನ್ನು ವಿವರಿಸಿ. ಇಷ್ಟವಾಗದ ವಿಷಯವನ್ನು ಸುಮ್ಮನೆ ಕೇಳಿಸಿಕೊಂಡು ಮನ್ನಸಿನೊಳಗೆಯೇ ದ್ವೇಷ ಸಾಧಿಸುವ ಬದಲು, ತಾಳ್ಮೆ ಇಂದ ವಿವರಿಸಿದರೆ  ಎಂತಹ ವ್ಯಕ್ತಿಯಾದರು ಕೇಳುತ್ತಾರೆ. ಹೆಚ್ಚಾಗಿ ಅವರು ವಯಸ್ಸಿನಲ್ಲಿ ಹಿರಿಕರಾಗಿರುವುದರಿಂದ, ಕೆಲವೊಮ್ಮೆ ಕಿರಿಯರಿಂದ ಹೆಚ್ಚು ಗೌರವವನ್ನು ಅಪೇಕ್ಷಿಸುತ್ತಾರೆ ಹಾಗು ನಿಮ್ಮಿಬರ ವಯಸ್ಸಿನ ಅಂತರ ಈ ರೀತಿ ಬಿನ್ನಭಿಪ್ರಾಯಗಳಿಗೆ ಕಾರಣವಾಗುತ್ತದೆ . ನೀವು ತಾಳ್ಮೆ ಕಳೆದುಕೊಂಡು, ಸದಾಕಾಲ ಕೋಪಗೊಂಡು ಊಟ ನಿದ್ರೆಯಿಲ್ಲದೆ ಕೊರಗಿದರೆ, ನಿಮ್ಮೊಳಗಿರುವ ಪುಟ್ಟ ಕಂದಮ್ಮನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮಗಳಾಗುವ ಸಾಧ್ಯತೆಗಳಿವೆ.

೫. ವೈದ್ಯರ ಬಳಿ ಕರೆದುಕೊಂಡು ಹೋಗಿ

ನೀವು ಅವರನ್ನು ಪ್ರೀತಿಯಿಂದ ಆರೈಕೆ ಮಾಡಿದರೆ, ಅವರೂ ಸಹ ನಿಮ್ಮನ್ನು ಮಗಳಿಗಿಂತ ಹೆಚ್ಚಾಗಿ ಪ್ರೀತಿಸುತ್ತಾರೆ. ಹೌದು ನಿಮ್ಮ ಅತ್ತೆಯನ್ನು ತಿಂಗಳಿಗೊಮ್ಮೆ ವೈದ್ಯರ ಬಳಿ ಕರೆದುಕೊಂಡು ಹೋಗಿ, ಸಾಮಾನ್ಯ ಪರೀಕ್ಷೆಯನ್ನು ಮಾಡಿಸಿ. ಇದರಿಂದ ನಿಮ್ಮಿಬರ ಬಾಂಧವ್ಯ ಮತ್ತಷ್ಟು ಗಟ್ಟಿಯಾಗುತ್ತದೆ.

Tinystep Baby-Safe Natural Toxin-Free Floor Cleaner

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon