Link copied!
Sign in / Sign up
14
Shares

ಮಳೆಗಾಲದಲ್ಲಿ ನಿಮ್ಮ ಮಗುವಿನ ಆರೈಕೆ

ಮಗು ಹುಟ್ಟಿದ ಕ್ಷಣದಿಂದ ಅದನ್ನು ಆರೈಸುವುದು ಮಗುವಿನ ಆರೋಗ್ಯ ದೃಷ್ಟಿಯಿಂದ ಒಳ್ಳೆಯದು. ತಾಯಿಯ ಬೆಚ್ಚನೆಯ ಗರ್ಭದಿಂದ ಬಂದ ಮಗುವನ್ನು ಹೊರ ಪ್ರಪಂಚಕ್ಕೆ ಹೊಂದಿಕೊಳ್ಳುವವರೆಗೂ ಆರೈಸಬೇಕಾಗುತ್ತದೆ. ಅದರಲ್ಲೂ ಮಳೆಗಾಲದಲ್ಲಿ ತಣ್ಣನೆಯ ವಾತವರಣವು ಮಗುವಿನ ಅನಾರೋಗ್ಯಕ್ಕೆ ಕಾರಣವಾಗಬಹುದು.

ಮಳೆಗಾಲದಲ್ಲಿ ಮಗುವಿನ ಆರೈಕೆಗೆ ಕೆಲವು ಸೂತ್ರಗಳು-

1. ಸೊಳ್ಳೆಗಳಿಂದ ರಕ್ಷಣೆ

ಮಳೆಗಾಲದಲ್ಲಿ ರಸ್ತೆ, ಚರಂಡಿ ಮತ್ತು ಹಳ್ಳಗಳಲ್ಲಿ ನೀರು ನಿಂತುಕೊಳ್ಳುವುದರಿಂದ ಸೊಳ್ಳೆಗಳ ಪ್ರಮಾಣ ಹೆಚ್ಚುತ್ತದೆ ಮತ್ತು ಸೊಳ್ಳೆಕಡಿತದಿಂದ ಡೇಂಗ್ಯೂ, ಚಿಕನ್ ಗೂನ್ಯಾ, ಮಲೇರೀಯಾದಂತಹ ಮಾರಕ ಕಾಯಿಲೆಗಳು ಬರುತ್ತವೆ. ಇದರಿಂದಾಗಿ ಮಗುವಿನ ಮೂಲಕ  ತಾಯಿಗೂ ಕೂಡ ಕಾಯಿಲೆ ಹರಡುವ ಸಂಭವವಿರುತ್ತದೆ. ಮನೆ ಮತ್ತು ಮನೆಯ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಡುವುದರಿಂದ ಸೊಳ್ಳೆಗಳ ಪ್ರಮಾಣವನ್ನು ಕಡಿಮೆಮಾಡಬಹುದು.

2. ಶೀತದಿಂದ ದೂರವಿರುವುದು

ಮಳೆಗಾಲದಲ್ಲಿ ಪರಿಸರವು ತೇವಾಂಶದಿಂದ ಕೂಡಿರುತ್ತದೆ. ಇದರಿಂದ ಮಗುವಿಗೆ ಶೀತವಾಗಬಹುದು, ಜೊತೆಗೆ ನೆಗಡಿ, ಕೆಮ್ಮು ಮತ್ತು ಜ್ವರದಂತಹ ಕಾಯಿಲೆಗಳಿಗೂ ಕೂಡ  ಮಗು ತುತ್ತಾಗಬಹುದು. ಇಂತಹ ಸಮಯದಲ್ಲಿ  ತಾಯಿಯೂ ಕೂಡ ತನ್ನ ಸುತ್ತಮುತ್ತಲಿನ ವಾತವರಣವನ್ನು ಬೆಚ್ಚಗೆ ಇರಿಸಿಕೊಳ್ಳುವುದು ಒಳ್ಳೆಯದು. ಆದಷ್ಟು ಬಿಸಿ ನೀರಿನ ಬಳಕೆ ಮತ್ತು ಬಿಸಿ ನೀರನ್ನು ಕುಡಿಯುವುದು ಉತ್ತಮ.

3. ಉಣ್ಣೆ ಬಟ್ಟೆ ಉಪಯೋಗಿಸುವುದು

ಮಗು ಮತ್ತು ತಾಯಿಯನ್ನು ಚಳಿಯಿಂದ ರಕ್ಷಿಸಲು ಉಣ್ಣೆಬಟ್ಟೆಗಳನ್ನು ಬಳಸಬಹುದು, ಉಣ್ಣೆಯ ಕಾಲುಚೀಲಗಳನ್ನು ಹಾಗು ಟೋಪಿಗಳನ್ನೂ ಉಪಯೋಗಿಸುವುದು ಒಳ್ಳೆಯ ಅಭ್ಯಾಸ.

 4. ಒಳ್ಳೆಯ ಆಹಾರ ಕ್ರಮ

ಮಗುವು ಮೊದಲ ಆರು ತಿಂಗಳು ಸಂಪೂರ್ಣ ತಾಯಿ ಹಾಲನ್ನು ಅವಲಂಬಿಸಿರುವುದರಿಂದ ತಾಯಿಯ ಆಹಾರವು ಪಥ್ಯದಿಂದ ಇರಬೇಕು. ಯಾವ ಯಾವ  ಸಮಯದಲ್ಲಿ ಎಂತಹ ಆಹಾರ ಸೇವಿಸಬೇಕೆಂಬುವುದನ್ನು ವೈದ್ಯರನ್ನು ಕೇಳಿ, ಅದೇ ತರಹ ಪೌಷ್ಠಿಕ ಆಹಾರ ಸೇವನೆ ಮಾಡುವುದು ಉತ್ತಮ.

5. ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು

ಮಗುವಿನ ಕೋಣೆಯ ಶುಚಿತ್ವ  ದಿನಕ್ಕೆ ಮೂರು ಬಾರಿಯಾದರೂ ಮಾಡಬೇಕು. ಮನೆಯ ಸುತ್ತಮುತ್ತಲು  ಕೂಡ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಹೊರಗಡೆಯಿಂದ ಯಾರೇ ಬಂದರು ಕೂಡ ಮಗುವಿನ ಕೋಣೆಗೆ ಅಥವ ಮಗುವಿನ ಹತ್ತಿರ ಬರುವ ಮುಂಚೆ ಕೈ ಕಾಲುಗಳನ್ನು ತೊಳೆಯುವುದರಿಂದ  ಮಗುವಿಗೆ ಹರಡುವು ಕೆಲವು ಸಂಕ್ರಾಮಿಕ ರೋಗಗಳನ್ನು  ತಡೆಗಟ್ಟಬಹುದು.

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

Recently, we launched a baby-safe, natural and toxin-free floor cleaner. Recommended by moms and doctors all over India, this floor-cleaner liquid gets rid of germs and stains without adding harmful toxins to the floor. Click here to buy it and let us know if you liked it.

Stay tuned for our future product launches - we plan to launch a range of homecare products that will keep your little explorer healthy, safe and happy!

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon