Link copied!
Sign in / Sign up
0
Shares

ಮಳೆಗಾಲದಲ್ಲಿ ನಿಮ್ಮ ಮಕ್ಕಳನ್ನು ಆರೋಗ್ಯಕರವಾಗಿಡಲು ೫ ಸಲಹೆಗಳು

ನಾವು ಈಗ ಮಳೆಗಾಲದಲ್ಲಿ ಇದ್ದಿವಿ, ಮತ್ತು ನೀವು ನಿಮ್ಮ ಮಗುವು ಹಳ್ಳ ಕೊಳ್ಳದಲ್ಲಿ ಆಟವಾಡುತ್ತಿರುವುದನ್ನು ಕಾಣಬಹುದು. ಅದು ಏನೇ ಇರಲಿ, ಇದು ಎಲ್ಲಾ ತಮಾಷೆ ಮತ್ತು ಆಟದ ವಿಷಯವಲ್ಲ, ಏಕೆಂದರೆ ಇದರಿಂದ ನಿಮ್ಮ ಮಗುವಿಗೆ ಶೀತ, ಕೆಮ್ಮು, ಮತ್ತು ನೀರಿನಿಂದ ಹರಡಬಹುದಾಂತಹ ರೋಗಗಳು ಬರುವ ಅವಕಾಶಗಳು ಮಳೆಗಾಲದಲ್ಲಿ ಹೆಚ್ಚು.

ಮಳೆಗಾಲದಲ್ಲಿ ನಿಮ್ಮ ಮಗುವನ್ನು ರಕ್ಷಿಸಲು ಕೆಲವು ಸರಳ ಸಲಹೆಗಳು ಇಲ್ಲಿವೆ.

೧.ಬಿಸಿ ನೀರನ್ನು ಕುಡಿಯುವುದು

ನಿಮ್ಮ ಮಗುವು ಸೇರಿದಂತೆ ಎಲ್ಲರೂ ಸ್ವಚ್ಚ ನೀರನ್ನು ಕುಡಿಯುವುದು ಬಹಳ ಮುಖ್ಯವಾಗುತ್ತದೆ. ನಿಮ್ಮ ಮಗುವಿಗೆ ಬಿಸಿ ನೀರು ಅಥವಾ ಶೋಧಿಸಿದ ಮತ್ತು ಶುದ್ಧೀಕರಿಸಿದ ನೀರನ್ನು ಮಾತ್ರ ನೀಡಿ. ನೀರನ್ನು ಕುದಿಸುವುದರಿಂದ, ನೀರಿನಲ್ಲಿರುವ ರೋಗಕಾರಕಗಳನ್ನು ಕೊಲ್ಲುತ್ತದೆ, ಮತ್ತು ನೀರಿನಿಂದ ಹರಡಬಹುದಾಂತಹ ಕಾಯಿಲೆಗಳಿಂದ ತಪ್ಪಿಸುತ್ತದೆ(ಅವುಗಳು ಕಾಲರಾ ಮತ್ತು ಟೈಫಾಯಿಡ್).

೨.ಕೈಗಳನ್ನು ನಿಯಮಿತವಾಗಿ ತೊಳೆದುಕೊಳ್ಳುವುದು

ಸಾಮಾನ್ಯವಾಗಿ, ನಿಯಮಿತವಾಗಿ ಕೈಗಳನ್ನು ತೊಳೆದುಕೊಳ್ಳುವುದು ಒಳ್ಳೆಯ ಅಭ್ಯಾಸ. ಅದರಲ್ಲೂ ಪ್ರಮುಖವಾಗಿ ಮಳೆಗಾಲದಲ್ಲಿ, ಪ್ರತಿ ಸ್ವಲ್ಪ ವಿಷಯವು ಬ್ಯಾಕ್ಟೀರಿಯಾಕ್ಕೆ ನೆಲೆಯನ್ನು ಉಂಟುಮಾಡುತ್ತದೆ. ನಿಮ್ಮ ಮಗುವಿಗೆ ಆಟವಾಡಿ ಅಥವಾ ಹೊರಗಡೆಯಿಂದ ಮನೆಗೆ ಬಂದ ತಕ್ಷಣ ಮತ್ತು ಯಾವುದೇ ಗಲೀಜು ವಸ್ತುಗಳನ್ನು ಮುಟ್ಟಿದ ತಕ್ಷಣ ಕೈ ತೊಳೆದುಕೊಳ್ಳುವುದನ್ನು ಹೇಳಿಕೊಡಿ ಮತ್ತು ಊಟದ ಮುಂಚೆ ಮತ್ತು ಆದ ಮೇಲೆ ಕೈ ತೊಳೆಯುದನ್ನು ಮರೆಯದಿರಿ.

೩.ನಿಮ್ಮ ಮಗುವಿನ ರೋಗ ನಿರೋಧಕ ಶಕ್ತಿವನ್ನು ಹೆಚ್ಚಿಸಿ

ನಿಮ್ಮ ಮಗುವಿನಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿದ್ದರೆ, ಅವನು/ಅವಳು ಯಾವುದೇ ಕಾರಣಕ್ಕೂ ಬೇಗ ಕಾಯಿಲೆಗೆ/ಅನಾರೋಗ್ಯಕ್ಕೆ ಬೀಳುವುದಿಲ್ಲ. ನಿಮ್ಮ ಮಗುವಿನ ಆಹಾರ ಕ್ರಮದಲ್ಲಿ ಹೆಚ್ಚು ವಿಟಮಿನ್ ಗಳಿರುವ ಹಣ್ಣು, ತರಕಾರಿಗಳು ಮತ್ತು ಹಸಿರು ಸೊಪ್ಪುಗಳನ್ನು ಸೇರಿಸುವುದನ್ನು ಮರೆಯದಿರಿ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಆಹಾರಗಳನ್ನು ನೀಡುವುದರಿಂದ ನಿಮ್ಮ ಮಗುವು ಸಾಮಾನ್ಯ ಶೀತ, ಕೆಮ್ಮು ಮತ್ತು ಜ್ವರದಂತಹ ಕಾಯಿಲೆಗಳಿಗೆ ತುತ್ತಾದುವುದಿಲ್ಲ.

೪.ಮನೆಯಲ್ಲಿ ಮಾಡಿದ ಆಹಾರ ಸೇವನೆ

ರಸ್ತೆ ಬದಿಯ ಆಹಾರ ಸೇವನೆಯನ್ನು ತಪ್ಪಿಸಿ. ನಿಮ್ಮ ಕೈಗಳಿಂದ ತಯಾರಿಸಿದ ಆಹಾರವು ಆರೋಗ್ಯಕರವಾಗಿರುತ್ತದೆ ಮತ್ತು ನಿಮ್ಮ ಆಹಾರದಲ್ಲಿ ಬಳಸಿರುವ ಎಲ್ಲಾ ಪದಾರ್ಥಗಳು ನಿಮಗೆ ತಿಳಿದಿರುತ್ತದೆ. ಕೆಲವು ಸಂದರ್ಭಗಳಲ್ಲಿ ನೀವು ಹೊರಗಡೆ ಆಹಾರ ಸೇವಿಸುವ ಪರಿಸ್ಥಿತಿ ಬಂದರೆ, ನಿಮಗೆ ತಿಳಿದಿರುವ ಆರೋಗ್ಯಕರ ಆಹಾರ ನಿಡುವ ಹೋಟೆಲ್ ಗಳಿಗೆ ಹೋಗಿ, ಮತ್ತು ನಿಮ್ಮ ಮಗುವು ಬಿಸಿಯಿರುವ ಆಹಾರವನ್ನೇ ಸೇವಿಸುತ್ತಿದೆ ಮತ್ತು ಶುದ್ದಿಕರಿಸಿದ ಸ್ವಚ್ಛ ನೀರನ್ನೇ ಕುಡಿಯುತ್ತಿದೆ ಎಂದು ಖಚಿತಪಡಿಸಿಕೊಳ್ಳಿ.

೫.ಮಳೆ ಸಾಮಾಗ್ರಿ ಜೊತೆಯಿರಲಿ

ಮಳೆಗಾಲದಲ್ಲಿ ಮನೆಯಿಂದ ಹೊರಗಡೆ ಹೋಗುವಾಗ, ಮಳೆ ಬರದೆ ಇದ್ದರೂ, ನಿಮ್ಮ ಮಗುವಿನ ಜೊತೆ ಛತ್ರಿ ಅಥವಾ ಮಳೆಅಂಗಿ(ರೈನ್ಕೊಟ್) ಇರಲಿ. ಸರಳವಾದ ಹಳೆಯ ನೀರಸ ಛತ್ರಿಗಳು ಮತ್ತು ಮಳೆ ಕೋಟುಗಳನ್ನು ಕೊಡುವುದರ ಬದಲು ನಿಮ್ಮ ಮಗು ಉತ್ಸುಕರಾಗಲು ಹೆಚ್ಚು ವಿನೋದ ಮತ್ತು ವರ್ಣಮಯದಿಂದ ಕೂಡಿರುವುದನ್ನು ಕೊಡಿ, ಆಗ ಮಗು ಆಕರ್ಷಕವಾಗಿ ಅದನ್ನು ಧರಿಸುತ್ತದೆ.

ನಿಮ್ಮ ಮಗುವಿನ ಬಗ್ಗೆ ಈ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವುದನ್ನು ಮರೆಯದಿರಿ, ಇದರಿಂದ ನಿಮ್ಮ ಆರೋಗ್ಯವಾಗಿರುತ್ತದೆ. ಒಂದು ವೇಳೆ ನಿಮ್ಮ ಮಗು ಅನಾರೋಗ್ಯಕ್ಕೆ ಗುರಿಯಾದರೆ ಕೂಡಲೇ ವೈದ್ಯರನ್ನು ಬೇಟಿ ಮಾಡಿ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon