Link copied!
Sign in / Sign up
13
Shares

ಮಗುವನ್ನ ಎಬ್ಬಿಸಿ ಹಾಲುಣಿಸಲು 5 ಸರಳ ದಾರಿಗಳು!

ಶಿಶುಗಳು, ವಿಶೇಷವಾಗಿ ನವಜಾತ ಶಿಶುಗಳು ಅಥವಾ 2 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ತಮ್ಮ ಸಮಯದ ಬಹುತೇಕ ಭಾಗವನ್ನು ನಿದ್ರಿಸುವ ಮೂಲಕ ಕಳೆಯುತ್ತಾರೆ. ನಿದ್ರೆ ಅತ್ಯಗತ್ಯವಾಗಿದ್ದರೂ, ನಿಯಮಿತ ಮಧ್ಯದಲ್ಲಿ ಮಗುವಿಗೆ ಸ್ತನ್ಯಪಾನ ಮಾಡುವುದು ಕೂಡಾ ಅಗತ್ಯವಾಗಿದೆ.ಮಕ್ಕಳನ್ನು ತುಂಬಾ ಕಾಲ ಹಸಿವಿನಿಂದ ಉಳಿಸಬಾರದು. ಮಲಗಿರುವ ಮಗುವನ್ನು  ಎಚ್ಚರಗೊಳಿಸುವುದು ಚಿಕ್ಕ ಕೆಲಸವಲ್ಲ, ವಿಶೇಷವಾಗಿ ಹೊಸ ಅಮ್ಮಂದಿರಿಗೆ. ಅವರು ಆಳವಾದ ನಿದ್ರಾವಸ್ಥೆಯಲ್ಲಿರುವಾಗ ಮಗುವನ್ನು ಎಚ್ಚರಗೊಳಿಸುವುದರಿಂದ, ಮಗುವಿನ ಮೂಡ್ ಸರಿಯಾಗಿದ್ದರೆ ಚೆನ್ನ; ಇಲ್ಲವಾದಲ್ಲಿ ಆ ದಿನ ಕೆಟ್ಟಂತೆಯೇ ಸರಿ; ಅದು ಮನೆಯವರ ಮನಸ್ಥಿತಿಯನ್ನು ಹಾಳುಮಾಡುತ್ತದೆ. ಹೀಗಾಗಿ, ಮಗುವನ್ನು  ಎಬ್ಬಿಸುವುದು ನಿಮಗೆ ತೊಂದರೆದಾಯಕವಲ್ಲ ಎಂದು ಖಚಿತಪಡಿಸಿಕೊಳ್ಳಲು ಸರಳವಾದ ಉಪಾಯಗಳು ಮತ್ತು ಕೌಶಲ್ಯಗಳನ್ನು ತಿಳಿದುಕೊಳ್ಳಬೇಕು. 

ಸಮಯದ ಕೋಷ್ಟಕವನ್ನು ಮಾಡಿ ಮತ್ತು ಪ್ರತಿ ದಿನವೂ ಮಗುವನ್ನು ಅದೇ ಸಮಯದಲ್ಲಿಯೇ ಸ್ತನ್ಯಪಾನ ಮಾಡಿ. ಆಹಾರದ ಸಮಯದಲ್ಲಿ ಆಗಾಗ ಬದಲಾವಣೆಗಳು  ಉಂಟುಮಾಡುವುದು ಮಗುವಿನ ನಿದ್ರೆಯ ಚಕ್ರದಲ್ಲಿ ಹಸ್ತಕ್ಷೇಪ ಮಾಡಿದಂತಾಗಬಹುದು,ಇದು ಅಂತಿಮವಾಗಿ ಮಗುವಿನ ತೂಕ ನಷ್ಟಕ್ಕೆ ಕಾರಣವಾಗಬಹುದು. ಅನೇಕ ಮಕ್ಕಳ ವೈದ್ಯರು ದಿನಕ್ಕೆ 8-12 ಬಾರಿ (ಪ್ರತಿ ಆಹಾರದ ಮಧ್ಯೆ 2-3 ಗಂಟೆಗಳ ನಡುವಿನ ಅಂತರ) ಮಗುವಿಗೆ ಎದೆಹಾಲು ನೀಡಬೇಕೆಂದು ನಂಬುತ್ತಾರೆ. 

 

ನೀವು ಮಗುವನ್ನು ಎಚ್ಚರಗೊಳಿಸಲು ಪ್ರಯತ್ನಿಸುವ ಮುನ್ನ, ಮುಖದ ಚಲನೆ, ಸೆಳೆತ ಮತ್ತು ಕಣ್ಣುಗಳು ಮತ್ತು ಕಣ್ಣೆವೆಗಳ ಚಲನೆ, ತಮ್ಮ ಕೈಗಳನ್ನು ಮತ್ತು ಕಾಲುಗಳನ್ನು ಚಲಿಸುವ ರೀತಿ, ಮುಷ್ಟಿಯನ್ನು ಹಿಡಿದಿಟ್ಟುಕೊಳ್ಳುವುದು – ಇವೇ ಮೊದಲಾದ ಮಕ್ಕಳ ಮೃದುವಾದ ನಿದ್ದೆ ಸೂಚಿಸುವ ಚಿಹ್ನೆಗಳನ್ನು ಗಮನಿಸಿ.  

ನಿಧಾನವಾಗಿ ಮಗುವನ್ನು ಎತ್ತಿಕೊಂಡು, ಅವರ ಬಾಯಿ ನಿಮ್ಮ ಸ್ತನದ ಹತ್ತಿರ ಇರುವ  ರೀತಿಯಲ್ಲಿ ಹಾಲೂಡಿಸಿ. ಹಾಲೂಡಿಸುವಾಗ ತಾಯಿ-ಮಕ್ಕಳಿಬ್ಬರೂ ಆರಾಮವಾಗಿರುವಂತೆ ನೋಡಿಕೊಳ್ಳಿ. ಆದರ್ಶಪ್ರಾಯವಾಗಿ. 

ಮಗುವನ್ನು ಎಚ್ಚರಿಸಲು, ಅದರ ತಲೆ, ಕೈಗಳು (ಅಂಗೈಗಳು), ಮತ್ತು ಪಾದಗಳು (ಅಡಿಭಾಗಗಳು) ನಿಧಾನವಾಗಿ ಕಚಗುಳಿಯಿಡಿ ಹಾಗೂ ಅವರೊಂದಿಗೆ ಮಾತನಾಡುತ್ತಾ ಇರಿ. ನೀವು ಮಗುವನ್ನು ಕುತ್ತಿಗೆಯಲ್ಲಿ ಅಥವಾ ಕಾಲುಗಳ ಕೆಳಗೆ ಸಹ ಕಚಗುಳಿಯಿಡಲು ಶ್ರಮಿಸಬಹುದು. 

 

ಇದು ಕೆಲಸ ಮಾಡದಿದ್ದರೆ, ಸ್ವಚ್ಛ ಮತ್ತು ತೇವಾಂಶದ ಹತ್ತಿ ಬಟ್ಟೆಯನ್ನು ತೆಗೆದುಕೊಂಡು, ಅದನ್ನು ಮಗುವಿನ ಮುಖದ ಮೇಲೆ ನಿಧಾನವಾಗಿ ಒರೆಸಿರಿ. ಸಂಗೀತವನ್ನು ನುಡಿಸಿರಿ,ಇಲ್ಲವೇ ಮಗುವು ಧರಿಸಿದ ಬಟ್ಟೆಗಳನ್ನು ಬದಲಿಸುವುದರಿಂದ ಕೂಡಾ ಹೆಚ್ಚು ಹೋರಾಟವಿಲ್ಲದೇ ಮಗುವನ್ನು ಎಚ್ಚರಗೊಳಿಸುವಲ್ಲಿ ಅದ್ಭುತಗಳನ್ನು ಮಾಡಬಹುದು.  

ಮಗುವು ಸಂತೋಷದ ಮನೋಭಾವದಲ್ಲಿದ್ದರೆ, ಶೀಘ್ರದಲ್ಲೇ ಮಗುವಿಗೆ ಆಹಾರ ನೀಡಲು ನೀವು ಕೆಳಗೆ ಬರಬಹುದು. ಹೇಗಾದರೂ, ಮಗುವಿನ ಮೂಡ್ ಕೆಟ್ಟಿದ್ದರೆ,  ಅಥವಾ ನಿರಂತರವಾಗಿ ಅಳುತ್ತಿದ್ದರೆ (ಅರೆಬರೆ ನಿದ್ರೆಯಿಂದ ಎದ್ದಿದ್ದರೆ) ಮೊದಲು ಅವರನ್ನು ಸಮಾಧಾನಗೊಳಿಸಲು ಪ್ರಯತ್ನಿಸಿ. 

 

 ಶಿಶುಗಳು ಹಾಲುಣಿಸುವ ಸಮಯದಲ್ಲಿ ನಿದ್ರಿಸುವಾಗ ಅನೇಕ ತಾಯಂದಿರು ಸಹ ಭಯಭೀತರಾಗುತ್ತಾರೆ. ತಾಯಿಯ ತೋಳುಗಳ ಬಂಧಿಯಾದ ಮಗುವು ಅನುಭವಿಸುವ, ತಾಯಿಯ ದೇಹದ ಬಿಸಿಯು ಅನೇಕ ಶಿಶುಗಳು ನಿದ್ರಿಸುವುದಕ್ಕೆ ಕಾರಣವಾಗುತ್ತದೆ . 

ಆದಾಗ್ಯೂ, ನೀವು ಮಗುವನ್ನು ಎಚ್ಚರಗೊಳಿಸಲು ಬಯಸಿದರೆ, ಮಗುವು ಸ್ತನಪಾನ ಮಾಡುವುದನ್ನು ತಡೆಯಲು ಮಗುವಿನ ಬಾಯಿಯಿಂದ ನಿಮ್ಮ ತೊಟ್ಟುಗಳನ್ನು ನಿಧಾನವಾಗಿ ತೆಗೆದುಹಾಕಿ.ಹಾಲುಣಿಸುವ ಸಮಯದಲ್ಲಿ ಮಗುವನ್ನು ನೀವು ಇರಿಸಿಕೊಳ್ಳುವ ವಿಧಾನವು ಕೂಡಾ, ಮಗುವನ್ನು ನಿದ್ರೆಗೆ ತಳ್ಳುತ್ತದೆ. ಮಗುವನ್ನು ಹಾಲುಣಿಸುವ ಸಮಯದಲ್ಲಿ; ಒಂದು ಫುಟ್ಬಾಲ್ ಹಿಡಿಕೆಯ ಸ್ಥಾನದಲ್ಲಿ ಇರಿಸಬೇಕು. ಈ ಸ್ಥಾನಗಳು ಕಡಿಮೆ ನಿದ್ರೆ-ಪ್ರಚೋದಕವಾಗಿದ್ದು, ಆಹಾರದ ಸಮಯದಲ್ಲಿ ಮಗುವು ನಿದ್ರೆ ಹೋಗುವುದನ್ನು ತಡೆಯುವುದರಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. 

Tinystep Baby-Safe Natural Toxin-Free Floor Cleaner

Click here for the best in baby advice
What do you think?
100%
Wow!
0%
Like
0%
Not bad
0%
What?
scroll up icon