Link copied!
Sign in / Sign up
6
Shares

ಮಲಬದ್ದತೆಗೆ ಕಾರಣವಾಗುವ ಹಾಗು ಅದನ್ನು ಗುಣಪಡಿಸುವ ಆಹಾರಗಳು

"ಉಣ್ಣುವುದಕ್ಕಾಗಿ ಬದುಕಬೇಡ, ಬದುಕುವುದಕ್ಕಾಗಿ ಉಣ್ಣು ಮನುಜ "ಎಂಬ ನಾಣ್ನುಡಿ, ನಮ್ಮ ಜೀವನದಲ್ಲಿ ಆಹಾರ ಸೇವನೆಯ ಮಹತ್ವವನ್ನು ತಿಳಿಸುತ್ತದೆ. ಆಹಾರವನ್ನು ಇತ-ಮಿತದಲ್ಲಿ, ಸರಿಯಾದ ಸಮಯದಲ್ಲಿ ತಿನ್ನುವುದರಿಂದ ನಮ್ಮಆರೋಗ್ಯವನ್ನು ನಾವು ಕಾಪಾಡಿಕೊಂಡಂತಾಗುತ್ತದೆ. ಹಾಗೆಂದ ಮಾತ್ರಕ್ಕೆ ಅನಾರೋಗ್ಯಕರ ಆಹಾರಗಳಾದ ಕರಿದ ಎಣ್ಣೆ ಪದಾರ್ಥಗಳು, ರಸ್ತೆ ಬದಿ ತಿಂಡಿ ತಿನಿಸುಗಳನ್ನು ಸೇವಿಸಬಹುದು ಎಂದಲ್ಲ. ಪಾಶ್ಚಾತ್ಯ ದೇಶಗಳಲ್ಲಿ ಹೆಚ್ಚಾಗಿ ಮೈದಾಹಿಟ್ಟು, ಬ್ರೆಡ್ ಪದಾರ್ಥಗಳ ಸೇವನೆಯಿಂದ ಜನರಲ್ಲಿ ಮಲಬದತ್ತೆ ಹೆಚ್ಹಾಗಿ ಕಂಡುಬರುತ್ತದೆ.

ಆದರೆ ನಮ್ಮ ದೇಶದಲ್ಲಿ ಊಟಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುವುದರಿಂದ, ಅಡಿಗೆ ತಿನಿಸುಗಳಲ್ಲಿ ಕಬ್ಬಿಣ, ನಾರಿನಂಶವನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸುತ್ತೇವೆ. ಆದರೆ, ಎಷ್ಟು ಜನ ಮನೆ ತಿನಿಸುಗಳನ್ನು ಇಷ್ಟ ಪಡುತ್ತೇವೆ ಯೋಚಿಸಿ. ಮಕ್ಕಳಿಂದ ಹಿಡಿದು ಮುದುಕರವರೆಗೂ ಕುರುಕಲು ತಿಂಡಿಗಳ್ಳನ್ನು ಇಷ್ಟ ಪಡದವರಿಲ್ಲ.

ಪಾನಿ ಪೂರಿ, ಮಸಾಲ ಪೂರಿ, ಫ್ರೈಡ್ ರೈಸ್ ಇತ್ಯಾದಿ ಆಹಾರಗಳು, ನಮ್ಮ ಪ್ರತಿನಿತ್ಯ ಆಹಾರಗಳಲ್ಲಿ ಒಂದಾಗಿದೆ ಎಂದರೆ ತಪ್ಪಾಗುವುದಿಲ್ಲ. ಇದರಿಂದ ಮಲಬದ್ದತೆ, ಅಜೀರ್ಣ, ಹೊಟ್ಟೆ ನೋವು ಮುಂತಾದ ಸಮಸ್ಯೆಗಳು ಎದುರಾಗುತ್ತವೆ.

ಮಲಬದ್ದತೆಗೆ ಕಾರಣಗಳೇನು ಎಂದು ತಿಳಿಯೋಣ ಬನ್ನಿ.

೧. ಕಡಿಮೆ ಪ್ರಮಾಣದಲ್ಲಿ ನೀರನ್ನು ಕುಡಿಯುವುದು.

೨. ಗರ್ಭಾವಸ್ಥೆ

೩. ಒತ್ತಡದ ಜೀವನ

೪. ಮಧುಮೇಹ

೫. ಸುಲಭ ಜೀವನಶೈಲಿ

೫. ವಯಸ್ಸು ಹೆಚ್ಚಾದಂತೆ.

೬. ಶ್ರೋಣಿ ಕುಹರದ ಮಾಂಸದ ದೌರ್ಬಲ್ಯ

೭. ಕರುಳು ಅಥವಾ ಗುದ ದ್ವಾರದ ಕ್ಯಾನ್ಸರ್.

ಮಲಬದ್ದತೆಯ ಲಕ್ಷಣಗಳು.

೧. ವಾರದಲ್ಲಿ ೩ ಬಾರಿ ಮಾತ್ರ ಮಲ ವಿಸರ್ಜಿಸುವುದು.

೨. ಹೊಟ್ಟೆ ನೋವು

೩. ಮಲವಿಸರ್ಜನೆಯ ನಂತರವೂ ಹೊಟ್ಟೆ ತುಂಬಿದ ಅನುಭವವಾಗುವುದು.

೪. ಹಸಿವಾಗದೆ ಇರುವುದು.

೫. ಹೊಟ್ಟೆಯೊಳಗೆ ಕಿವುಚಿದ ಅನುಭವಾಗುವುದು.

೬. ಬೆನ್ನು ನೋವು

೭. ಹೊಟ್ಟೆ ಉಬ್ಬರಿಸಿದ ಅನುಭವವಾಗುವುದು.

೮. ಸುಸ್ತಾಗುವುದು.

ಮಲಬದ್ದತೆಗೆ ಕಾರಣವಾಗುವ ಆಹಾರಗಳು.

೧. ಡೈರಿ ಪದಾರ್ಥಗಳಾದ ಹಾಲು, ಪನ್ನೀರ್.

೨. ಮದ್ಯಪಾನ, ತಂಪು ಪಾನೀಯಗಳು, ಕಾಫಿ, ಟೀ.

೩. ಕುರಿ ಮಾಂಸ, ಹಂದಿ ಮಾಂಸ ಸೇವನೆ

೪. ಮೊಸರು, ಅಕ್ಕಿ, ಬೆಳ್ಳಗಿನ ಬ್ರೆಡ್

೪. ಸಕ್ಕರೆಯಂಶ ಹೆಚ್ಚಿರುವ ಆಹಾರ ಪದಾರ್ಥಗಳ ಸೇವನೆ

೫. ಆಲುಗೆಡ್ಡೆ ಚಿಪ್ಸ್.

೬. ಬಾಳೆಕಾಯಿ ಮಲಬದ್ದತೆಗೆ ಕಾರಣವಾದರೆ, ಬಾಳೆಹಣ್ಣು ಮಲಬದ್ದತೆಯನ್ನು ನಿವಾರಿಸುತ್ತದೆ.

೭. ಗೋಧಿ ಕೂಡ ಕೆಲವರಲ್ಲಿ ಮಲಬದ್ದತೆಯನ್ನು ಉಂಟು ಮಾಡುತ್ತದೆ.

ಮಲಬದತ್ತಯಿಂದ ಆಗುವ ದುಷ್ಪರಿಣಾಮಗಳು

೧. ಪ್ಯಲ್ಸ್/ haemorrhoids

೨. ಗುದದ್ವಾರದ fissures

೩. ಕರುಳಿನೊಳಗೆಯೇ ಮಲ ಭಿಗಿಯಾಗುವುದು

೪. ಹೊಟ್ಟೆಉಬ್ಬಿಕೊಂಡು, ಉಸಿರಾಟಕ್ಕೆ ತೊಂದರೆಯಾಗುವುದು.

ಮಲಬದ್ದತೆ ನಿವಾರಿಸುವ ಆಹಾರದ ಪಟ್ಟಿ.

೧. ಟೊಮೇಟೊ, ಪಾಲಕ್ ಸೊಪ್ಪು, ಸೇಬಿನ ಹಣ್ಣು, ಬಾಲೆ ಹಣ್ಣು, ಕಿತ್ತಳೆ ಹಣ್ಣನ್ನು ಪ್ರತ್ರಿನಿತ್ಯ ಸೇವಿಸಬೇಕು.

೨. ನೈಸರ್ಗಿಕ probiotic ಅನ್ನಿ ಸೇವಿಸಿ.

೩. ಮೊಳಕೆ ಕಾಳುಗಳ ಸೇವನೆಯನ್ನು ಹೆಚ್ಚಿಸಿ.

೪. ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಸೇವಿಸಿ.

೫. ಪೀಚ್ ಹಣ್ಣಿನಲ್ಲಿರುವ ಸೋರ್ಬಿತೊಲ್ ಹಾಗು ನಾರಿನಾಂಶ ಮಲಬದ್ದತೆಗೆ ರಾಮಬಾಣವಿದ್ದಂತೆ

೫. ಲೋಲೆಸರದ ಜ್ಯೂಸು ಅನ್ನು ಸಲಾಡ್ಗೆ ಬಳಸಿ.

೬. ಕಾಡ್ ಲಿವರ್ ಎಣ್ಣೆ ಅಥವ ಮೀನನ್ನು ಸೇವಿಸಿ

೭. ಫ್ಲಕ್ಷ್ ಬೀಜಗಳಲ್ಲಿ ಒಮೇಗಾ ೩ ಕೊಬ್ಬಿನ ಅಂಶವಿರುವುದರಿಂದ ಮಲವನ್ನು ಮೃದುಗೊಳಿಸುತ್ತದೆ

೮. ಇಸಬ್ಗೊಲ್ ಅನ್ನು ಸೇವಿಸಿ.

೯. ಬಾದಾಮಿ ಹಾಗು walnutsಗಳನ್ನು ಸೇವಿಸಿ.

೧೦. ಓಟ್ಸ್ ಅನ್ನು ಪ್ರತಿನಿತ್ಯ ಸೇವಿಸುವುದರಿಂದ ಮಲಬದ್ದತೆಯನ್ನು ಹೋಗಲಾಡಿಸಬಹುದು.

ಇವೆಲ್ಲವುಗಳಿಗಿಂತ ಹೆಚ್ಚಾಗಿ ಒತ್ತಡ ರಹಿತ ಜೀವನ, ಅಲ್ಪ ಪ್ರಮಾಣದಲ್ಲಿ ವ್ಯಾಯಾಮ ಹಾಗು ಪೌಷ್ಟಿಕ ಆಹಾರವನ್ನು ಸೇವಿಸುವುದರಿಂದ ಮಲಬದ್ದತೆಯನ್ನು ತಡೆಯಬಹುದು.

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

We have a great opportunity for you. You can EARN up to Rs 10,000/- every month right in the comfort of your own HOME. Sounds interesting? Fill in this form and we will call you.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon