Link copied!
Sign in / Sign up
42
Shares

ಮಕ್ಕಳೊಂದಿಗೆ ಮಾಡಲೇ ಬಾರದ ಕಾರ್ಯಗಳು

ಇದೀಗ ತಾನೇ ಪಾಲಕರಾದ ತಾಯಂದಿರಿಗೆ ಹತ್ತು ಹಲವು ಶಂಕೆಗಳು ಕಾಡುತ್ತವೆ. ದಿನಕ್ಕೆ ಎಷ್ಟು ಸಲ ಮಗುವಿಗೆ ತಿನ್ನಿಸಬೇಕು ? ದಿನಕ್ಕೆ ಎಷ್ಟು ಸಲ ನಿದ್ರಿಸಬೇಕು ? ಮಗುವನ್ನು ಅಳಲು ಬಿಡಬಹುದೇ ? ನಡೆಯುವಾಗ ಆಗಾಗ ಬೀಳುತ್ತಿರುತ್ತಾನಲ್ಲಾ... ಇದು ಸಹಜವೇ ?ನಮಗೆ ನಿಮ್ಮ ಮನೋಭಾವ ಅರ್ಥವಾಗುತ್ತದೆ ! ನಿಮ್ಮ ಬೆಂಬಲಕ್ಕಾಗಿ ನಾವಿದ್ದೇವೆ...!!

ಯಾವೆಲ್ಲ ಕಾರ್ಯಗಳನ್ನು ಮಾಡಬಹುದು ಅಥವಾ ಮಾಡಬೇಕು ಎಂಬುದರ ಬಗ್ಗೆ ಹಲವಾರು ಸಲಹೆಗಳು ತಾಯಿಯರಿಗೆ ಲಭಿಸುತ್ತದೆ. ಆದರೆ, ಮಕ್ಕಳೊಂದಿಗೆ ಖಡಾಖಂಡಿತವಾಗಿ ಮಾಡಲೇಬಾರದ ಕೆಲವು ವಿಷಯಗಳ ಬಗ್ಗೆ  ತಿಳಿದುಕೊಳ್ಳೋಣ.  

೧.ಮಕ್ಕಳನ್ನು ಎಂದಿಗೂ ಅವಗಣಿಸದಿರಿ

ಮಕ್ಕಳು ಈ ಲೋಕವನ್ನು ಅರಿಯುವುದು, ಅರ್ಥ ಮಾಡಿಕೊಳ್ಳುವುದು ನಿಮ್ಮಿಂದಲೇ. ಮೊದಲ ಮೂರು ವರ್ಷಗಳಲ್ಲಿ ಮಗುವು ಕಲಿತ ಪಾಠಗಳೇ ಜೀವನದ ಕೊನೆಯವರೆಗೂ ಮಗುವಿಗೆ ಬೆಂಬಲವಾಗಿರುವುದು. ಮಕ್ಕಳು ಬಹಳ ಸೂಕ್ಷ್ಮ ಮನಸ್ಸಿನ ಸಂವೇದನಾ ಶೀಲರಾಗಿರುತ್ತಾರೆ. ಎಂದರೆ ಮಕ್ಕಳನ್ನು ಸ್ಪರ್ಶಿಸಿ ಮುದ್ದಿಸಿ ಲಾಲಿಸಿದರೆ ನಮ್ಮಿಬ್ಬರ ಸ್ನೇಹ ಬಾಂಧವ್ಯವು ಎಂದಿಗೂ ಹಚ್ಚಹಸುರಾಗಿರುವುದು. 

೨.ಮಗುವನ್ನು ಎಂದಿಗೂ ಅಳುವಂತೆ ಮಾಡಬೇಡಿ

ನಿಮ್ಮ ಮನಸ್ಸಿಗೆ ತುಂಬಾ ನೋವಾಗಿದೆಯೆಂದೂ, ನೀವು ಏನೋ  ಬೇಜಾರಲ್ಲಿದ್ದೀರೆಂದೂ ಸಂಕಲ್ಪಿಸಿಕೊಳ್ಳಿ. ಯಾರೊಬ್ಬರೂ ನಿಮ್ಮ ಸನಿಹದಲ್ಲಿ ಕುಳಿತು, ಒಂದು ಸಾಂತ್ವಾನದ ನುಡಿಯನ್ನಾಡದಿದ್ದರೆ, ನಿಮಗೇನೆನ್ನಿಸುವುದು? ನಿಮ್ಮ ಸಂಕಟವನ್ನು ಹೊರಹಾಕಲೋ,ಗೋಳಿಡಲೋ ಅರಿಯದೇ...ಸುತ್ತಮುತ್ತಲು ಏನು ನಡೆಯುತ್ತದೆಂದು ತಿಳಿಯದೇ  ಇರುವಂತಹ ಒಂದು ಸಂದರ್ಭವನ್ನು ಉಹಿಸಿದರೆ,  ನಿಮ್ಮ ಮನಸ್ಥಿತಿ ಏನಾಗಿರುವುದು ? 

ಚಿಕ್ಕ ಚಿಕ್ಕ ವಿಷಯಗಳಿಗೂ ಮಕ್ಕಳು ರಚ್ಚೆ ಹಿಡಿದು ಅಳುತ್ತಿರುತ್ತಾರೆ. ಅವರಿಗೆ ಅಳುವುದರ ಮೂಲಕವಲ್ಲದೆ ತನ್ನ ಸಂಕಟವನ್ನು ಹೊರ ಹಾಕಲು ಬೇರೆ ಯಾವ ಮಾರ್ಗವಿದೆ ಹೇಳಿ? ಮಕ್ಕಳು ಅಳುವುದು ಕೇವಲ ನಿಮ್ಮ ಗಮನವನ್ನು ಅವರೆಡೆಗೆ ಸೆಳೆಯಲು ಮಾತ್ರ. 

೩.ಮಕ್ಕಳನ್ನು ಎಂದಿಗೂ ಒಬ್ಬಂಟಿಗನಾಗಿ ಬಿಡಬೇಡಿ

ಏಕಾಂಗಿತನಕ್ಕಿಂತ ಹೆಚ್ಚಿನ ಬಂಧನ ಮನುಷ್ಯನಿಗೆ ಮಕ್ಕಳಿಗಾದರೂ ಅಷ್ಟೇ ಮಕ್ಕಳನ್ನು ತುಂಬಾ ಸಮಯಗಳವರೆಗೆ ಬಿಟ್ಟು ನಿಲ್ಲುವಾಗ ತಾವು ಏತಕ್ಕಾಗಿ ಈ ನಾಲ್ಕು ಗೋಡೆಗಳ ನಡುವಲ್ಲಿ ಬಂಧಿಸಲ್ಪಟ್ಟಿದ್ದೇವೆಂದು ಮಕ್ಕಳು ಅರ್ಥ ಮಾಡಿಕೊಳ್ಳಲಾರರು. ಮಕ್ಕಳು ತಮ್ಮೊಂದಿಗೆ ಆಡಿ ಬೆರೆತು ಬೆಳೆಯುವಂತಹ ವಾತಾವರಣ ನಿರ್ಮಾಣವಾಗಬೇಕು. ಮಕ್ಕಳು ತಮ್ಮ ಕಾಲ ಮೇಲೆ ನಿಲ್ಲುವಂತಾಗಿದೆ ಅವರ ಜೊತೆಯಲ್ಲೇ ಪಾಲಕರು ಇರಬೇಕು. 

೪.ಮಗುವಿನ ಕೈ ಹಿಡಿಯುವ ಯಾವುದೇ ಕ್ಷಣವನ್ನು ಕಳೆದುಕೊಳ್ಳಬೇಡಿ

ಮಗುವು ತನ್ನನ್ನು ಎತ್ತಿ ಕೊಳ್ಳ ಬಯಸುತ್ತದೆ. ಮಗುವನ್ನು ಎತ್ತಿಕೊಳ್ಳಬೇಕು ಜನರು ವಿಶ್ವಾಸಾರ್ಹರೆಂಬ ಭಾವನೆಯನ್ನು ಮಕ್ಕಳಲ್ಲಿ ಮೂಡಿಸಲು ಮಕ್ಕಳನ್ನು ಆಗಾಗ ಎತ್ತಿಕೊಳ್ಳಬೇಕು ಮಗುವನ್ನು ಎತ್ತಿ ಕುಳಿತು ಕೊಳ್ಳುವುದಕ್ಕಿಂತ ಬೇರೆ ಮುದ್ದಿನ ಮಮತೆಯ ಕ್ಷಣಗಳು ನಮ್ಮ ಜೀವನದಲ್ಲಿ ಇನ್ನೇನಾದರೂ ಇದೆಯೇ ಮಗುವಿನ ಮಮತೆಗಿಂತಾ ಹೆಚ್ಚಾದ ಜವಾಬ್ದಾರಿಗಳಿವೆಯೇ ? ನಿಮ್ಮ ಮುದ್ದಿನ ಕಂದನನ್ನು ಅಪ್ಪಿ ಮುದ್ದಾಡಿರಿ.

 

೫.ಎಂದಿಗೂ ಶಿಕ್ಷೆ ವಿಧಿಸಬೇಡಿ

ನಿಮ್ಮ ಮಗುವು ಇನ್ನೂ ಚಿಕ್ಕ ಮಗು ಅಷ್ಟೇ ಶಿಕ್ಷೆ ಎಂಬ ಪದದ ಅರ್ಥವೂ ಅದಕ್ಕೆ ತಿಳಿದಿಲ್ಲ.ಮಕ್ಕಳನ್ನು ಹೊಡೆಯುವುದು, ಶಿಕ್ಷಿಸುವುದು ಮಾಡಬೇಡಿ. ಶಿಕ್ಷೆ ವಿಧಿಸುವುದರಿಂದ ನಿಮ್ಮ ಅಹಂ ತೃಪ್ತಿ ಪಟ್ಟುಕೊಳ್ಳಬಹುದು. ಆದರೆ, ಮಕ್ಕಳ ಮನಸ್ಸಿನಲ್ಲಿ ಅದು ಆಳವಾದ ದುಷ್ಪರಿಣಾಮವನ್ನು ಉಂಟು ಮಾಡುತ್ತದೆ . 

ಮಗುವು ತನ್ನ ಸುತ್ತ ಮುತ್ತಲಿನ ಕತ್ತಲ ಜಗತ್ತನ್ನು ಅರ್ಥ ಮಾಡಿಕೊಳ್ಳಬೇಕಷ್ಟೆ...? ಮಕ್ಕಳನ್ನು ಶಿಕ್ಷೆಗೊಳಪಡಿಸುವುದರಿಂದ, ಮಗುವು ಮತ್ತೊಬ್ಬರ ಅಥವಾ ಜಗತ್ತಿನ ಮೇಲಿನ ತನ್ನ ನಂಬಿಕೆಯನ್ನೇ ಕಳೆದುಕೊಳ್ಳಬಹುದು. ತನ್ನ ತಂದೆ ತಾಯಂದಿರೇ ತನ್ನನ್ನು ನಂಬುವುದಿಲ್ಲವೆಂಬ ಭಾವನೆಯು ಬೆಳೆದು ಆ ಮಗುವಿನ ವ್ಯಕ್ತಿತ್ವದ ಮೇಲೆ ದುಷ್ಪರಿಣಾಮವನ್ನು ಬೀರಬಹುದು. 

ಇಷ್ಟೆಲ್ಲಾ ತಿಳಿದ ಬಳಿಕವೂ ನಿಮ್ಮ ಮಗುವನ್ನು ಶಿಕ್ಷಿಸಬೇಕೆಂದಿದ್ದೀರಾ....? 

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

Recently, we launched a baby-safe, natural and toxin-free floor cleaner. Recommended by moms and doctors all over India, this floor-cleaner liquid gets rid of germs and stains without adding harmful toxins to the floor. Click here to buy it and let us know if you liked it.

Stay tuned for our future product launches - we plan to launch a range of homecare products that will keep your little explorer healthy, safe and happy!

Click here for the best in baby advice
What do you think?
0%
Wow!
100%
Like
0%
Not bad
0%
What?
scroll up icon