Link copied!
Sign in / Sign up
13
Shares

ಮಕ್ಕಳು ಸುಳ್ಳು ಹೇಳಿದಾಗ ನೀವು ಏನು ಮಾಡಬೇಕು?

ಕೆಲವು ಮಕ್ಕಳು ಸುಳ್ಳು ಹೇಳುವ ಅಭ್ಯಾಸವನ್ನು ಬೆಳೆಸಿಕೊಳ್ಳುತ್ತಾರೆ. ಇದು ಮಗುವು ಯೋಚಿಸಲು ಪ್ರಾರಂಭಿಸುತ್ತಿದೆ ಮತ್ತು ವಿಷಯಗಳನ್ನು ಅವರ ಇಚ್ಚೆಯಂತೆ ಅವರ ದಾರಿಯಲ್ಲಿ ಹೋಗುವ ಕುಶಲತೆಗಳನ್ನು ಬೆಳೆಸಿಕೊಳ್ಳುತ್ತಿದೆ ಎಂದು ಸೂಚಿಸುತ್ತದೆ. ಮಕ್ಕಳು ಹಲವು ಕಾರಣಗಳಿಂದ ಸುಳ್ಳನ್ನು ಹೇಳಬಹುದು- ಅವರು ಮಾಡಿರುವ ಯಾವುದಾದರೂ ಕೆಲಸದಿಂದ ಹೆದರಿಕೊಂಡು, ಇದರಿಂದ ತೊಂದರೆಗೆ ಒಳಗಾಗಬಹುದು ಎಂದು ಚಿಂತಿತರಾಗಿ, ಅವರು ನಾಚಿಕೆ ಎಂದು ಭಾವಿಸಿ, ಸತ್ಯ ಹೇಳಿ ಸಮಜಾಯಿಸಿಕೊಳ್ಳುವಬದಲು ಸುಳ್ಳು ಹೇಳುವುದು ಸುಲಭ ಎಂದು ಭಾವಿಸಿ, ಅಥವಾ ಅವರು ಸುಳ್ಳನ್ನು ನಂಬಿರುವುದರಿಂದ.

ಕಾರಣ ಏನೇ ಇರಲಿ, ಮಕ್ಕಳಿಗೆ ಪ್ರಾಮಾಣಿಕತೆಯ ಪ್ರಾಮುಖ್ಯತೆಯನ್ನು ತಿಳಿಸುವುದರಲ್ಲಿ ಸಹಾಯ ಮಾಡುವುದು ಮತ್ತು ಮಕ್ಕಳ ಸುತ್ತ ಯಾವುದೇ ಸುಳ್ಳುಗಳನ್ನು ಹೇಳದಂತೆ ನೋಡಿಕೊಳ್ಳುವುದು ಮತ್ತು ಅವರು ಸುಳ್ಳು ಹೇಳಲು ಪ್ರಚೋದನೆ ನೀಡದಿರುವುದು, ಅದು ಅವರು ಇದನ್ನು ಅಭ್ಯಾಸ ಮಾಡಿಕೊಳ್ಳುವ ಮೊದಲು ತಿಳಿಸಿಕೊಡುವುದು ಬಹಳ ಮುಖ್ಯ. ನಿಮ್ಮ ಮಗುವಿನಿಂದ ಸುಳ್ಳು ಕೇಳುವುದು ನಿಮಗೆ ಸಾಮಾನ್ಯವಾಗಿ ಕೋಪ ಮತ್ತು ನಿರಾಶೆಯನ್ನುಂಟುಮಾಡುತ್ತದೆ ಎಂದು ನಮಗೆ ಗೊತ್ತು, ಆದರೆ ನೆನಪಿನಲ್ಲಿಟ್ಟುಕೊಳ್ಳಿ ನಿಮ್ಮ ಮಗು ಇನ್ನು ಬೆಳೆಯುತ್ತಿದೆ(ಚಿಕ್ಕದು), ಅವನ/ಅವಳ ಮೇಲೆ ನೀವು ರೇಗುವುದು ಹೆಚ್ಚು ಹಾನಿಯನ್ನು ಮಾಡಬಹುದು.

ನಿಮ್ಮ ಮಕ್ಕಳು ಸುಳ್ಳು ಹೇಳಿದಾಗ  ನೀವು ಮಾಡಬೇಕಾದ ಕೆಲವು ವಿಷಯಗಳು ಇಲ್ಲಿವೆ

೧.ಏಕೆ ಎಂದು ಅರ್ಥಮಾಡಿಕೊಳ್ಳಿ

ಅವರ ಮೇಲೆ ರೇಗುವ ಮತ್ತು ಒಡೆಯಲು ಮುಂದಾಗುವ ಮೊದಲು, ಅವರು ಏಕೆ ಸುಳ್ಳು ಹೇಳಿದರು ಎಂದು ಯೋಚಿಸಿ. ಸಾಮಾನ್ಯವಾಗಿ ಮಕ್ಕಳು ಸುಳ್ಳು ಹೇಳಲು ಕಾರಣವಿರುತ್ತದೆ, ಮತ್ತು ಸುಳ್ಳು ಏಕೆ ಹೇಳಿದರು ಎಂದು ಅರ್ಥಮಾಡಿಕೊಳ್ಳುವುದರಿಂದ ಅದನ್ನು ಸರಿಪಡಿಸಲು ಸುಲಭವಾಗುತ್ತದೆ. ಕೆಲವೊಮ್ಮೆ, ಮಕ್ಕಳು ಸುಳ್ಳು ಹೇಳುತ್ತಾರೆ ಏಕೆಂದರೆ ಅವರು ಅವರಲ್ಲಿ ಅರ್ಥ ಇದೆ ಎಂದು ಭಾವಿಸುತ್ತಾರೆ. ಮತ್ತು ಅವರು ಬೆಳೆದೊಡನೆ ಅದನ್ನು ನಿಲ್ಲಿಸುತ್ತಾರೆ, ಇಲ್ಲವಾದರೆ ಅದರ ಬಗ್ಗೆ ಸರಿಯಾದ ತೀರ್ಮಾನ ತೆಗೆದುಕೊಡು ನೀವು ಅವರನ್ನು ಸುಳ್ಳು ಹೇಳದಂತೆ ಮಾಡಬೇಕು.

೨.ನಿಮ್ಮನ್ನು ಉದಾಹರಣೆಯಾಗಿ ತೆಗೆದುಕೊಳ್ಳಿ

ಮಕ್ಕಳು ಯಾವಾಗಲು ಅನುಸರಿಸುತ್ತಾರೆ, ನಿಮ್ಮನ್ನು ನೀವೇ ಉದಾಹರಣೆಯಾಗಿ ಕೊಟ್ಟು ಹೇಗೆ ಸತ್ಯವನ್ನು ಹೇಳಬೇಕು, ಪ್ರಾಮಾಣಿಕನಾಗಿರಬೇಕು ಎಂದು ಹೇಳಿಕೊಟ್ಟರೆ ಖಂಡಿತ ಅವರು ನಿಮ್ಮನ್ನೇ ಪಾಲಿಸುತ್ತಾರೆ. ಹೇಳಿದ್ದನ್ನು ಮಾಡಿ, ನೀವು ಅವರಿಗೆ ಪ್ರಾಮಾಣಿಕತೆಯ ಬಗ್ಗೆ ಹೇಳಿದಾಗ, ಹಾಗೆ ನಡೆದುಕೊಂಡು ತೋರಿಸಿ.

೩.ಮಗುವು ನಿಮ್ಮನ್ನು ನಂಬಬಹುದೆಂದು ಭಾವಿಸಲಿ

ಮಕ್ಕಳು ಸತ್ಯ ಹೇಳಿದಾಗ ಅದರಿಂದ ಆಗುವ ಪ್ರತಿಕ್ರಿಯೆ ಕೆಟ್ಟದಾಗಿರುತ್ತದೆ ಎಂದು ಹೆದರಿ ಸುಳ್ಳು ಹೇಳಲು ಮುಂದಾಗುತ್ತಾರೆ, ಆದ್ದರಿಂದ ಮಗುವು ನಿಮ್ಮನ್ನು ಸುರಕ್ಷಿತ ಎಂದು ಭಾವಿಸಲಿ ಆಗಿದ್ದಾಗ ಮಗುವು ನಿಮ್ಮನ್ನು ನಂಬುತ್ತದೆ. ಆಗಿದ್ದಾಗ ಮಗುವು ನಿಮ್ಮ ಬಳಿ ಸುಳ್ಳು ಹೇಳುವ ಬದಲು ನಾನು ಏನೋ ಮಾಡಲು ಹೋಗಿ ಈ ರೀತಿ ತಪ್ಪು ನಡೆಯಿತು ಎಂದು ನಿಮ್ಮ ಬಳಿ ಸಂಪೂರ್ಣ ವಿವರ ನೀಡುತ್ತಾರೆ.

೪.ಬೆಸುಗೆ ಹೆಚ್ಚಿಸಿಕೊಳ್ಳಿ

ಪ್ರಾಮಾಣಿಕತೆಯನ್ನು ಪೋಷಿಸುವ ಮತ್ತು ಅದಕ್ಕೆ ಮೌಲ್ಯವನ್ನು ನೀಡುವಂತಹ ಸಂಬಂಧವನ್ನು ನಿಮ್ಮ ಮಗುವಿನೊಂದಿಗೆ ಬೆಳೆಸಿಕೊಳ್ಳಿ. ನಿಮ್ಮೊಂದಿಗೆ ಸಂಬಂಧ ಹೊಂದಿದ ಮತ್ತು ನಿಮ್ಮೊಂದಿಗೆ ವಿಶ್ವಾಸ ವ್ಯಕ್ತಪಡಿಸುವ ಮಗು ನಿಮ್ಮೊಂದಿಗೆ ಎಲ್ಲ ವಿಷಯಗಳನ್ನು ಹಂಚಿಕೊಳ್ಳಲು ಹೆಚ್ಚು ಇಷ್ಟಪಡುತ್ತಾರೆ. ನೀವು ಹೆಚ್ಚು ನಿಮ್ಮ ಮಗುವಿಗೆ ಹತ್ತಿರವಾದಷ್ಟು ಸುಳ್ಳು ಹೇಳುವ ಸಾಧ್ಯತೆ ಅತ್ಯಂತ ಕಡಿಮೆ ಇರುತ್ತದೆ.

೫.ಅವರು ಸತ್ಯವನ್ನು ಗೌರವಿಸುವಂತೆ ಮಾಡಿ

ಸತ್ಯ ಮತ್ತು ಪ್ರಾಮಾಣಿಕತೆ ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ಅಳೆಯುವ ಎರಡು ಗುಣಗಳು ಎಂದು ತಿಳಿಸಿ ಮತ್ತು ಅವು ಒಬ್ಬ ವ್ಯಕ್ತಿಯಾಗಿ ನೀವು ಯಾರು ಎಂಬುದನ್ನು ತಿಳಿಸುತ್ತವೆ. ನಿಮ್ಮ ಮಗುವಿನ ಜೊತೆ ಹೆಚ್ಚು ಮುಕ್ತವಾಗಿರಿ, ಸತ್ಯ ಮತ್ತು ಪ್ರಾಮಾಣಿಕತೆಯಿಂದ ಮಾತ್ರ ನಂಬಿಕೆಯನ್ನು ಗಳಿಸಬಹುದು ಎಂದು ಅರ್ಥಮಾಡಿಸಿ.

೬.ನಡವಳಿಕೆ ಮತ್ತು ವ್ಯಕ್ತಿಯ ನಡುವೆ ಇರುವ ವ್ಯತ್ಯಾಸ ತಿಳಿಸಿ

ನಿಮ್ಮ ಮಗು ಸುಳ್ಳು ಹೇಳುತ್ತಿದೆಯಾ ಎಂಬುದನ್ನು ಕಂಡು ಹಿಡಿಯುವುದು ಸುಲಭ ಮತ್ತು ಹೇಳುತ್ತಿದ್ದರೆ ಅವನನ್ನು ಸುಳ್ಳ ಎಂದು ಕರೆಯುವಿರಿ. ಅದರ ಬದಲು ಅವನನ್ನು ಸರಿಪಡಿಸಲು ಪ್ರಯತ್ನಿಸಿ ಮತ್ತು ಅವನನ್ನು ಹಾಗೆಂದು ಕರೆಯಬೇಡಿ. ವ್ಯಕ್ತಿಯ ಬಗ್ಗೆ ಹೇಳುವ ಬದಲು, ನಡವಳಿಕೆಯೊಂದಿಗೆ ನಿರಾಶೆ ವ್ಯಕ್ತಪಡಿಸಿ. ಅದರಿಂದ ನಿಮ್ಮ ಮಗುವಿನ ಮನಸ್ಸಲ್ಲಿ ನಾನು ತಪ್ಪು ಮಾಡಿರುವೆ ಎಂಬ ಭಾವನೆ ಮೂಡಿ, ತನ್ನ ತಪ್ಪನ್ನು ತಾನೇ ಸರಿಪಡಿಸಿಕೊಳ್ಳಲು ಪ್ರಯತ್ನಿಸುತ್ತಾನೆ/ಳೆ.

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

Recently, we launched a baby-safe, natural and toxin-free floor cleaner. Recommended by moms and doctors all over India, this floor-cleaner liquid gets rid of germs and stains without adding harmful toxins to the floor. Click here to buy it and let us know if you liked it.

Stay tuned for our future product launches - we plan to launch a range of homecare products that will keep your little explorer healthy, safe and happy!

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon