Link copied!
Sign in / Sign up
1
Shares

ಮಕ್ಕಳು ಸಾರ್ವಜನಿಕರೆದುರು ಸಿಡಿಮಿಡಿಗೊಳ್ಳುವುದನ್ನು ಹೇಗೆ ತಡೆಯುವುದು ?


ಪ್ರವಚನಗಳು ಕಡಿಮೆ ಮಾಡುವಂತಹ ಕೆಲವು ಸನ್ನಿವೇಶಗಳಾದ ಹಸಿವು, ಆಯಾಸ, ಶಬ್ದಗಳು, ಅಪರಿಚಿತರ ಕುತೂಹಲ ಕೆರಳಿಸುವ ಸಾಮಾನುಗಳು ಇದೇ ಮುಂತಾದವುಗಳೆಲ್ಲ ಕೆಲವೊಮ್ಮೆ ಹೆಚ್ಚು ಮಾಡಬಹುದು. ನೀವು ಎಲ್ಲಿಗೆ ಹೊರಟಿದ್ದೀರಿ ಎನ್ನುವುದಕ್ಕೆ ಅನುಗುಣವಾಗಿ ಮಾಲ್ ಆಗಿದ್ದರೆ ಆಟಿಕೆಗಳನ್ನು ತೆಗೆದುಕೊಂಡು ಕೊಳ್ಳಲು, ಪಾರ್ಕ್ ಆಗಿದ್ದರೆ ಅಪರಿಚಿತರು,ಕಿರಾಣಿ ಅಂಗಡಿಗಳಾಗಿದ್ದರೆ ಮಿಠಾಯಿಗಳು, ನೆಂಟರ ಮನೆಯ ಹೊಸ ವಾತಾವರಣ, ಸಿನಿಮಾ (ಶಬ್ದಗಳು) ನಿಮ್ಮ ಮಗುವಿಗೆ ಕಿರಿಕಿರಿಯನ್ನುಂಟು ಮಾಡುವ ಅಂಶಗಳು ಯಾವುದೆಂದು ತಿಳಿದುಕೊಂಡು ಅಂತಹ ಸನ್ನಿವೇಶವನ್ನು ಎದುರಿಸಲು ಸಜ್ಜಾಗಿರಿ.

ತಡೆಯುವುದು ಹೇಗೆ ?

ಮಗುವಿನ ಕಿರಿಕಿರಿಯನ್ನು ಹೆಚ್ಚಿಸುವಂತಹ ಅಂಶಗಳ ಅಂಶಗಳ ಏನೆಂದು ಮೊದಲೇ ನಿಮಗೆ ಸೂಚನೆ ಇದ್ದರೆ ಅವಳನ್ನು ಹೇಗೆ ತಡೆಯಬಹುದೆಂದು ನೀವು ಆಲೋಚನೆ

ಮಾಡಿಕೊಳ್ಳಬಹುದು. ದಿನವಿಡೀ ಹೊರಗುಳಿಯುವ ಸನ್ನಿವೇಶವಾಗಿದ್ದರೆ, ಅಗತ್ಯ ಪ್ರಮಾಣದ ನೀರು ಹಾಗೂ ಆಹಾರಗಳನ್ನು ಜೋಡಿಸಿಟ್ಟುಕೊಳ್ಳಿ. ಮಗುವನ್ನು ಹೊಟ್ಟೆ ತುಂಬಿಸಿ ಸಂತಪ್ತಿ ಯಾಗಿಟ್ಟು ಕೊಳ್ಳಿ. ಇದರಿಂದ ಹಸಿವು ಅಥವಾ ನೀರಡಿಕೆಗಳಿಗೆ ಸಂಬಂಧಿಸಿದ ಕೆರಳುವಿಕೆಯನ್ನು ನಿವಾರಿಸಬಹುದು. ಮಗುವು ಹೆದರಿರಬಹುದು ಇಲ್ಲವೇ ಬೋರಾಗಿರಬಹುದು ಎಂದು ನೀವು ಅಂದುಕೊಳ್ಳುವ ಸನ್ನಿವೇಶಗಳನ್ನು ನಿಭಾಯಿಸಲು ಮಗುವಿನ ಆಟಿಕೆಯನ್ನು ಜತೆಯಲ್ಲಿಟ್ಟು ಕೊಳ್ಳಿರಿ.

ದೃಢವಾಗಿರಿ

ಮಗುವಿನ ಕಸಿವಿಸಿಯನ್ನು ನಿಭಾಯಿಸಲು ನಿಮಗೆ ನಿಮ್ಮದೇ ಆದ ಧೋರಣೆ ಇದ್ದರೆ ಅದರಲ್ಲಿ ಅಚಲವಾಗಿದ್ದು ಬಿಡಿ ಅಲ್ಲದೆ, ಮಗು ರಚ್ಚೆ ಹಿಡಿಯುತ್ತಿದೆ ಎಂದು ಅದು ಹೇಳಿದಂತೆ ಕುಣಿಯುವುದರಿಂದ ಮಗುವಿನ ನಡವಳಿಕೆಯು ಇನ್ನೂ ಹದಗೆಡುವುದು. ಸಾಮಾನುಗಳನ್ನು ಒಗೆದು ಹಠ ಸಾಧಿಸುವುದರಿಂದ, ತನಗೆ ಬೇಕಾದುದನ್ನು ಪಡೆದುಕೊಳ್ಳಬಹುದು ಎಂದು ಅರಿತ ಮಗು ಮುಂದೆ ಎಂದೆಂದಿಗೂ ಇದನ್ನೇ ಮುಂದುವರಿಸುವುದು. ಆದರೆ ನೀವು ಅದಕ್ಕೆ ಸೊಪ್ಪು ಹಾಕದಿದ್ದರೆ ತನ್ನ ಆಟ ಇನ್ನು ನಡೆಯುವುದಿಲ್ಲವೆಂದು ಮಗುವು ಅರಿತುಕೊಳ್ಳುವುದು.

ಸಹಾನುಭೂತಿ ತೋರಿ

ನಿಮ್ಮ ಧೋರಣೆಯಲ್ಲಿ ಅಚಲ ವಾಗುವುದರೊಂದಿಗೆ ಮಗುವಿನ ಆಕ್ರಂದನದ ಹಿನ್ನೆಲೆಯನ್ನು ಅರಿತುಕೊಳ್ಳಲು ಪ್ರಯತ್ನಿಸಿ; ಸಮಸ್ಯೆಯ ಆಳಕ್ಕಿಳಿದು ಚಿಂತಿಸಿ. ಮಗುವಿಗೆ ತಿಳಿಹೇಳಲು ಪ್ರಯತ್ನಿಸಿ. ನಾನು ಕೂಡ ಗಮನಿಸಲ್ಪಡುತ್ತೇವೆಂಬ ಭಾವನೆಯೂ ಮಗುವಿಗೆ ಬಹಳಷ್ಟು ಸಮಾಧಾನ ನೀಡುವುದಲ್ಲದೆ; ಮಗುವಿನ ಇತರ ಪ್ರವೃತ್ತಿಗಳನ್ನು ಕಡಿಮೆ ಮಾಡಲಿರುವಂತಹ ಉಪಾಯಗಳನ್ನು ನಿಮಗೆ ನೀಡುತ್ತದೆ.

ನಿಮ್ಮ ನಿಲುವಲ್ಲೇ ಗಟ್ಟಿಯಾಗಿರಿ

ಜನಸಮೂಹದ ನಡುವೆ ಮಗುವು ಕೆರಳಿದರೆ ಜನರ ಕೆಂಗಣ್ಣಿಗೆ ನೀವು ಗುರಿಯಾಗುವುದು ಸಹಜ. ಅವರು ತಮಗೆ ತೋರಿದ ಅಭಿಪ್ರಾಯಗಳನ್ನು ಹೇಳಲು ತೊಡಗುವರು. ನಿಮ್ಮ ನೀವು ಅವರ ಮುಂದೆ ಹಿಡಿದು ನಿಲ್ಲಲು ನಿಮ್ಮ ಮಗುವನ್ನು ಕಲಿಸುವಂತಹ ಅವಿವೇಕದ ಕೆಲಸವನ್ನು ಮಾಡದಿರಿ. ಜನರಲ್ಲ; ನಿಮ್ಮ ಮಗುವಿನ ಸಂತೋಷ ನಿಮಗೆ ಮುಖ್ಯ. ಮಗುವಿನ ಅಸಮಾಧಾನಕ್ಕೆ ಕಾರಣ ಕಂಡು ಹಿಡಿದು ಅದನ್ನು ನಿವಾರಿಸಲು ಪ್ರಯತ್ನಿಸಿ. ಜನರ

ಕಣ್ಣೆದುರಿಗೆ ನಿಮಗಾದ ಅವಮಾನವನ್ನು ಮಗುವಿನ ಮೇಲೆ ತೋರಿಸದಿರಿ.

ನಿಯಮಗಳನ್ನು ಪಾಲಿಸಿ

ಮನೆಯಿಂದ ಹೊರಗಡೆ ಇಡುವ ಮುನ್ನವೇ ಯಾವೆಲ್ಲ ರೀತಿಯ ವರ್ತನೆಗಳು ಅನಪೇಕ್ಷಿತ ವೆಂದು ಮಗುವಿಗೆ ತಿಳಿಸಿಬಿಡಿ. ಇದರಿಂದ ಮಗುವಿಗೆ ತನ್ನ ಯಾವ ರೀತಿಯ ವರ್ತನೆಯಿಂದ ಶ್ಲಾಘನೀಯವೆಂದೂ, ಶಿಕ್ಷೆಯೂ ಲಭಿಸುವುದೆಂಬ ಅರಿವಾಗುವುದು. ಸಮಾಜದಲ್ಲಿ ಹೇಗೆ ನಡೆದುಕೊಳ್ಳಬೇಕೆಂದು ತಿಳಿಯುವುದು. ಮಗು ಕಿರಿಕಿರಿಗೊಳ್ಳುವನೆಂಬುದರ ಸುಳಿವು

ಕಾಣಿಸಿಕೊಂಡರೆ ಶಿಕ್ಷೆಯನ್ನು ನೆನಪಿಸಿ. ಮಗುವನ್ನು ನಿಮ್ಮ ಹಿಡಿತದಲ್ಲಿಟ್ಟುಕೊಳ್ಳಬಹುದು.

ಅಂತಿಮ ಸಲಹೆ

ನಿಮ್ಮಿಂದ ನಿಭಾಯಿಸಲಾರದಷ್ಟು ಪರಿಸ್ಥಿತಿಯು ವಿಪರೀತ ಮಟ್ಟಕ್ಕೇರಿದರೆ ಮಗುವನ್ನು ಸಂತೈಸು ವುದನ್ನು ಬಿಟ್ಟು ಬಿಡಿ ಅಥವಾ ಮಗುವು ಕಿರಿಕಿರಿಗಳಿಗೊಳಗಾಗುವ ಸನ್ನಿವೇಶಗಳಿಂದ ಮಗುವನ್ನು ದೂರವಿಡಿ.ಇದರಿಂದ ನೀವಿಬ್ಬರೂ ಶಾಂತರಾಗಿರಬಹುದು. ನೀವು ಸೋತಿರೆಂದು ತಿಳಿದುಕೊಳ್ಳುವ ಅಗತ್ಯವೇನೂ ಇಲ್ಲ.

ಕೆಲವೊಮ್ಮೆ ಪರಿಹಾರಗಳಿಲ್ಲದ ಕಾರಣವೂ ಇರಬಹುದು. ತನ್ನ ಸಿಡಿಮಿಡಿಗೊಳ್ಳುವಿಕೆಯಿಂದ ಹೊರಬಂದ ಮಗುವನ್ನು ಶ್ಲಾಘಿಸಲು ಹಾಗೂ ನಿಮ್ಮ ಪ್ರೀತಿ ತೋರಲು ಮರೆಯದಿರಿ.ಕೆಲವು ಸಲ ಕೆರಳುವುದನ್ನು ನಿಭಾಯಿಸಲು ಸಾಧ್ಯವಾಗದೆ ಹೋಗಬಹುದು ಮತ್ತೆ ಕೆಲವು ನಿಭಾಯಿಸಲು ಸಾಧ್ಯವಾಗುವಂತವುಗಳು. ಯಾವುದೇ ಸಾಹಚರ್ಯದಲ್ಲಿ ನಿಮ್ಮ ಮನೋ ನಿಯಂತ್ರಣವನ್ನು ಕಳೆದುಕೊಳ್ಳದಂತೆ ನೋಡಿಕೊಳ್ಳಿ. ತಪ್ಪಿದರೆ ಪರಿಸ್ಥಿತಿಗಳು ಇನ್ನೂ ಹದಗೆಡಬಹುದು. ಶಾಂತರಾಗಿ ಎಲ್ಲವನ್ನೂ ನಿಭಾಯಿಸಲು ಪ್ರಯತ್ನಿಸಿ. ಎಲ್ಲವೂ ನೀವಂದುಕೊಂಡಷ್ಟು ಕಷ್ಟವಲ್ಲ.

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

Recently, we launched a baby-safe, natural and toxin-free floor cleaner. Recommended by moms and doctors all over India, this floor-cleaner liquid gets rid of germs and stains without adding harmful toxins to the floor. Click here to buy it and let us know if you liked it.

Stay tuned for our future product launches - we plan to launch a range of homecare products that will keep your little explorer healthy, safe and happy!

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon