Link copied!
Sign in / Sign up
15
Shares

ಮಕ್ಕಳು ಕೋಪೋದ್ರೇಕಗೊಂಡಾಗ, ಸಮಾಧಾನ ಮಾಡುವುದು ಹೇಗೆ?

ಮಗುವಿನ ಅಳು, ಮೊಂಡುತನ, ತುಂಟತನ ನಮಗೆ ಖುಷಿಕೊಟ್ಟರೂ, ಕೆಲವೊಮ್ಮೆ ನಿಲ್ಲಿಸಲಾರದ ಪರಿಸ್ಥಿತಿಯನ್ನು ತಲುಪಿಬಿಡುತ್ತದೆ. ಆದರೆ ಯಾಕೆ ನಿಮ್ಮ ಮಗು ಹೀಗೆ ಎಡೆ-ಬಿಡದೆ ಅಳುತ್ತದೆ ಎಂದು, ಯೋಚಿಸಿದ್ದೀರಾ? ಮಕ್ಕಳಿಗೆ ಹಾಸಿವಾದಾಗ ಅಥವಾ ಅಪರಿಚಿತ ವ್ಯಕ್ತಿಗಳ್ಳನ್ನು ನೋಡಿದಾಗ ಹೀಗೆ ಮಾಡುತ್ತವೆ ಎಂದು ನೀವು ಸುಮ್ಮನಾಗಬಹುದು. ಆದರೆ ಇದೆಲ್ಲವುದ್ದಕ್ಕಿಂತ ಪ್ರಮುಖ ಕಾರಣವೇನೆಂದರೆ ನಿದ್ರೆಯ ಅಭಾವದಿಂದ, ಮಕ್ಕಳು ಒಂದೇ ಸಮನೆ ಅಳುತ್ತವೆ. ಇತ್ತೀಚಿನ ಸಮೀಕ್ಷೆಯ ವರಧಿಯ ಪ್ರಕಾರ, ೩ ವರುಷಕ್ಕಿಂತ ಕೆಳಗಿನ ಮಕ್ಕಳ್ಳಿಗೆ, ಒಂದು ಗಂಟೆಯ ಅವಧಿಗೂ ಮೀರಿ ಆಟವಾಡಲು ಸಾಧ್ಯವಾಗುವುದಿಲ್ಲ.

ಹಗಲಿನ ನಿದ್ರೆಯ ಅವಧಿಯನ್ನು ಕಡಿಮೆ ಮಾಡಿದರೆ ಹೀಗಾಗುವ ಸಾಧ್ಯತೆಗಳು ಹೆಚ್ಚು ಎಂದು ಸಮೀಕ್ಷೆ ತಿಳಿಸಿದೆ. ಹೀಗೆ ನಿದ್ರಾ ಹೀನತೆಯಿಂದ ಮಕ್ಕಳು ಇನ್ನಷ್ಟು ಒತ್ತಡಗೊಳಗಾಗಿ ಹೆಚ್ಚು ರಂಪಾಟವನ್ನು ಮಾಡುತ್ತಾರೆ. ಹೇಗೆ ದೊಡ್ಡವರಲ್ಲಿ ನಿದ್ರಾಹೀನತೆ, ನಮ್ಮನ್ನು ಕೆರಳಿಸುವಂತೆ ಮಾಡುತ್ತದೆಯೋ, ಹಾಗೆಯೇ ಮಕ್ಕಳ್ಳನ್ನು ಕೋಪೋದ್ರೇಕರನ್ನಾಗಿ ಮಾಡುತ್ತದೆ.

 

ಆದರೆ ಅಲ್ಪನಿದ್ರೆಯಿಂದ ಮಕ್ಕಳ್ಳಲ್ಲಿ ಯಾವ ರೀತಿಯ ಲಕ್ಷಣಗಳು, ವರ್ತನೆಗಳು ಕಂಡುಬರುತ್ತವೆ ಎಂದು ತಿಳಿಯೋಣ ಬನ್ನಿ.

೧. ಇದ್ದಕ್ಕಿದಂತೆಯೇ ಮನಸ್ಸಿನಲ್ಲಿ ಬದಲಾವಣೆಗಳಾಗಿ, ಮಗುವು ಎಡೆ-ಬಿಡದೆ ಜೋರಾಗಿ ಅಳಲು ಪ್ರಾರಂಭಿಸುತ್ತದೆ.

೨. ಮಗುವು ಊಟವನ್ನು ತಿರಸ್ಕರಿಸುತ್ತದೆ. ಇದು ಹಸಿವಿಲ್ಲದಿರುವಿಕೆಯ ಸೂಚನೆಯಾಗಿದೆ.

೩. ತಾಯಿಯನ್ನು ಬಿಟ್ಟು ಅತ್ತ ಇತ್ತ ಹೋಗಲು ನಿರಾಕರಿಸುತ್ತದೆ.

೪. ನಿರಂತರವಾಗಿ ಕಣ್ಣು, ಕಿವಿ ಉಜ್ಜುವುದು, ಆಗಿಂದಾಗ್ಗೆ ಆಕಳಿಸುವುದು ಇವು ನೀದ್ರೆಯ ಮುನ್ಸೂಚನೆಯಾಗಿವೆ.

೫. ಮಗುವಿನ ಇಷ್ಟದ ಆಟಿಕೆಯನ್ನು ನೀಡಿದರೂ, ಅಳುವನ್ನು ನಿಲ್ಲಿಸದಿರುವುದು.

೬. ಕೈ ಕಾಲುಗಳ್ಳನ್ನು ನೆಲದಮೇಲೆ ಜೋರಾಗಿ ಬಡಿಯುವುದು ಇತ್ಯಾದಿ.


 
ಮಗುವನ್ನು ಸಮಾಧಾನ ಮಾಡುವ ವಿಧಾನಗಳು

ರಾತ್ರಿ ನಿಮ್ಮ ಮಗುವು ಪೂರ್ಣಪ್ರಮಾಣದ ನಿದ್ರೆ ಮಾಡಿದೆ ಎಂದು, ಬೆಳ್ಳಗೆ ನಿದ್ರೆ ಮಾಡಿಸುವಲ್ಲಿ ತಡಮಾಡಬೇಡಿ. ನಿಗದಿತ ಸಮಯಕ್ಕಿಂತ, ೫-೧೦ ನಿಮಿಷ ತಡವಾದರೆ ಮಗುವು ಸುಮ್ಮನಿರುತ್ತದೆ.  ಆದರೆ, ಅದಕ್ಕಿಂತ ಹೆಚ್ಚಿನ ಸಮಯವನ್ನು ಮುಂದೂಡಬೇಡಿ. ದಿನನಿತ್ಯದ ವೇಳಾಪಟ್ಟಿಯಂತೆ, ನಿಗದಿತ ಸಮಯಕ್ಕೆ ಮಕ್ಕಳ್ಳನ್ನು ಮಲಗಿಸಿದರೆ, ಮಗುವು ಚಂಡಿ ಹಿಡಿಯುವುದಿಲ್ಲ. ನಿಮಗೆ ಬೇರೆಯ ಕೆಲಸವಿದ್ದರೆ, ನಿಮ್ಮ ಕುಟುಂಬದವರಿಗೆ ಮಗುವನ್ನು ನಿಗದಿತ ಸಮಯಕ್ಕೆ ಮಲಗಿಸುವಂತೆ ಹೇಳಿ.

ನಿಮ್ಮ ಕಂದಮ್ಮಗಳು ತೀವ್ರ ಹಠ ಹಿಡಿದರೆ, ತಕ್ಷಣವೇ ಮಗುವನ್ನು ನಿಶ್ಯಬ್ದವಿರುವ ಕೋಣೆಯೊಳಗೆ ಕರೆದುಕೊಂಡು ಹೋಗಿ, ಕಡಿಮೆ ಬೆಳಕಿನ ದೀಪವನ್ನು ಹಚ್ಚಿ, ಮಗುವನ್ನು ತೊಡೆಯ ಮೇಲೆ ಹಾಕಿ ನಿಧಾನವಾಗಿ ತಟ್ಟಿ. ಮಗುವನ್ನು ಆದಷ್ಟು ನಿಮ್ಮ ಎದೆಗೆ ಒತ್ತಿಕೊಂಡಂತೆ ಮಲಗಿಸಿಕೊಳ್ಳಿ. ಹೀಗೆ ಮಾಡುವುದರಿಂದ, ಮಗುವಿಗೆ ತಾನು ಸುರಕ್ಷಿತವಾಗಿದ್ದೇನೆ ಎಂಬ ಭಾವನೆ ಮೂಡಿ, ತಕ್ಷಣ ಅಳುವನ್ನು ನಿಲ್ಲಿಸುತ್ತದೆ. ಮಗುವು ಪೂರ್ತಿಯಾಗಿ ನಿದ್ರೆಗೆ ಜಾರುವವರೆಗೂ, ಅದರ ಪಕ್ಕದಲ್ಲಿಯೇ ಕುಳಿತುಕೊಳ್ಳಿ. ಇಲ್ಲದಿದ್ದರೆ, ತನ್ನನ್ನು ತಾಯಿ ಬಿಟ್ಟು ಹೋಗಿದ್ದಾಳೆ ಎಂದು ತಿಳಿದು ಮತ್ತೆ ಅಳುವನ್ನು ಪ್ರಾರಂಭಿಸುತ್ತದೆ. ಇವೆಲ್ಲವುದರೊಂದಿಗೆ ಎದೆಹಾಲುಣಿಸುವುದ್ದನ್ನು ಮರೆಯದಿರಿ. ಹಾಲುಣಿಸುವಾಗ ಮಗುವಿನ ಹೊಟ್ಟೆ ಹಾಗೂ ಮೈಯನ್ನು ನೇವರಿಸುತ್ತಿದ್ದರೆ, ಕೆಲವೇ ಕ್ಷಣಗಳ್ಳಲ್ಲಿ ನಿದ್ರೆಗೆ ಜಾರುತ್ತದೆ.

ಈ ಲೇಖನ ನಿಮಗೆ ಉಪಯುಕ್ತವೆನಿಸಿದರೆ, ದಯವಿಟ್ಟು ನಿಮ್ಮ ಬಂಧು-ಮಿತ್ರರೊಂದಿಗೆ ಹಂಚಿಕೊಳ್ಳಿ.

Tinystep Baby-Safe Natural Toxin-Free Floor Cleaner

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon