Link copied!
Sign in / Sign up
1
Shares

ಮಕ್ಕಳು ದಿನದ ಈ ಸಮಯದಲ್ಲೇ ಅಂತೇ ಗರಿಷ್ಟ ಸಂಖ್ಯೆಯಲ್ಲಿ ಹುಟ್ಟುವುದು! ಯಾವುದು ಆ ಸಮಯ?

ಮಕ್ಕಳು ಸಾಮಾನ್ಯವಾಗಿ ಹೊತ್ತಲ್ಲದ ಹೊತ್ತಲ್ಲೇ ಹುಟ್ಟುವುದನ್ನು ನೀವು ನೋಡಿರುತ್ತೀರಾ ಅಲ್ಲವಾ? ಇದರ ಬಗ್ಗೆ ಯೋಚಿಸಿ. ನೀವು ನಿಮ್ಮ ಡೈನಿಂಗ್ ಟೇಬಲ್ ಹತ್ತಿರ ಕುಳಿತು ಊಟ ಮಾಡುತ್ತಿರುವಾಗಲೇ ಅಥವಾ ಇನ್ಯಾವುದನ್ನೋ ಮಾಡುತ್ತಿರುವಾಗಲೇ ನಿಮ್ಮ ಸ್ನೇಹಿತರಬ್ಬರು ಯಾರೋ ತಮಗೆ ಮಗುವಾಗಿರುವ ಸುದ್ದಿ ಹೇಳುತ್ತಾರೆ. ಬಹುತೇಕ ಬಾರಿ ಹೀಗೆ ಆಗುತ್ತದೆ, ಇದು ಊಹೆ ಆಗಿರಬಹುದು ಎಂದೆನಿಸದರೂ, ಇದು ಸತ್ಯ. ಏಕೆಂದರೆ, ಹೊಸದೊಂದು ಅಧ್ಯಯನದ ಪ್ರಕಾರ ಮಕ್ಕಳು ದಿನದ ಒಂದು ನಿರ್ದಷ್ಟ ಸಮಯದಲ್ಲಿ ಜನಿಸುವ ಸಾಧ್ಯತೆಗಳು ತುಂಬಾ ಹೆಚ್ಚು ಎಂದು ತಿಳಿದು ಬಂದಿದೆ.


ಮಗುವಿನ ಜನನದ ಬಗ್ಗೆ ಅಧ್ಯಯನವನ್ನ ನಡೆಸಿದ ಲಂಡನ್ನಿನ ಯೂನಿವರ್ಸಿಟಿ ಕಾಲೇಜ್ ಈ ಬಗ್ಗೆ ಈ ತಿಂಗಳ ಹೊಸದರಲ್ಲಿ ಪ್ರಕಟಿಸಿದ ವೈದ್ಯಕೀಯ ಅಧ್ಯಯನವಾದ ಫ್ಲೋಸ್ ಒನ್ ಅಲ್ಲಿ ತಿಳಿಸಿದೆ. ಅದರಲ್ಲೂ ಮುಖ್ಯವಾಗಿ ಸಂಶೋಧನಾಕಾರರು ಮಕ್ಕಳು ದಿನದ ಯಾವುದಾದರೂ ಒಂದು ಸಮಯದಲ್ಲಿ ಜನಿಸುವ ಸಾಧ್ಯತೆಗಳು ಗರಿಷ್ಠವಾಗಿರುತ್ತವೆಯೇ ಎಂಬುದನ್ನು ಪರಿಶೀಲಿಸಿದ್ದಾರೆ. ಹೀಗಾಗಿ ಅವರು ಪರಿಗಣನೆಗೆ ತೆಗೆದುಕೊಂಡಿದ್ದು ಇಂಗ್ಲೆಂಡಿನಲ್ಲಿ 2005ರಿಂದ 2014ರ ವರೆಗೆ ಆದ ಬರೋಬ್ಬರಿ 50 ಲಕ್ಷ ಹೆರಿಗೆಯ ಪ್ರಕರಣಗಳನ್ನ.ಇವುಗಳನ್ನ ಸ್ಟಡಿ ಮಾಡಿದ ಮೇಲೆ ಅವರಿಗೆ ತಾವು ಹುಡುಕುತ್ತಿದ್ದ ಉತ್ತರ ಸಿಕ್ಕಿತು!


ಆ ಉತ್ತರ ಬೆಳಗಿನ ಜಾವ ಸುಮಾರು 4 ಗಂಟೆ ಎಂಬುದು. ಸಂಶೋಧನಕರಾರ ಪ್ರಕಾರ ದಿಢೀರನೆ ಹೆರಿಗೆ ಆಗಿರುವ ಪ್ರಕರಣಗಳಲ್ಲಿ ಅಥವಾ ಇನ್ನೊಂದು ರೀತಿ ಹೇಳುವುದಾದರೆ, ಮೊದಲೇ ಟೈಮ್ ಅನ್ನು ಫಿಕ್ಸ್ ಮಾಡಿದ C-ಸೆಕ್ಷನ್ ಪ್ರಕರಣಗಳ ಹೊರತಾದ ಪ್ರಕರಣಗಳಲ್ಲಿ, ಸುಮಾರು 71.5% ಅಷ್ಟು ಪ್ರಕರಣಗಳಲ್ಲಿ ಹೆರಿಗೆಯು ವಾರಾಂತ್ಯದಲ್ಲಿ, ರಜಗಳಲ್ಲಿ ಅಥವಾ ರಾತ್ರಿ 1 ಗಂಟೆಯಿಂದ ಬೆಳಗ್ಗೆ 7 ಗಂಟೆ ಒಳಗೆ ಆಗಿವೆ ಎಂದು ತಿಳಿದು ಬಂದಿದೆ. ಈ ಮಾಹಿತಿಗಳ ಪ್ರಕಾರ ಅತಿಹೆಚ್ಚು ಹೆರಿಗೆಗಳು ಆಗಿರುವುದು ಬೆಳಗಿನ ಜಾವ 4 ಗಂಟೆ ಸಮಯಕ್ಕೆ ಎಂಬುದು ತಿಳಿದು ಬಂದಿದೆ.

ಆಶ್ಚರ್ಯಕರ ಸಂಗತಿ ಎಂದರೆ ಕೇವಲ 28% ಅಷ್ಟು ಮಾತ್ರವೇ ದಿನದ ಕೆಲಸದ ಸಮಯವಾದ ಬೆಳಗ್ಗೆ 9 ರಿಂದ ಸಂಜೆ 5 ಗಂಟೆ ಒಳಗೆ ಜನಿಸಿರುವುದು. ಅಲ್ಲದೆ ಈ ಅಧ್ಯಯನದ ಕರ್ತೃಗಳಲ್ಲಿ ಒಬ್ಬರಾದ ಅಲಿಸನ್ ಮ್ಯಾಕ್ಫಾರ್ಲೀನ್ ಅವರು ಹೇಳುವ ಪ್ರಕಾರ ಹೆರಿಗೆಗಳಲ್ಲಿ ವೈದ್ಯಕೀಯ ಮಧ್ಯಸ್ತಿಕೆಯು 1950ರಿಂದ ಇತ್ತೀಚಿಗೆ ಕಡಿಮೆ ಆಗುತ್ತಲೇ ಬಂದಿದೆ. ಅಲ್ಲದೆ BBC ಹೇಳಿರುವಂತೆ ಬಹಳಷ್ಟು ಹೆಂಗಸರು ಈಗ ಮನೆಯಲ್ಲೇ ಜನ್ಮ ನೀಡುತ್ತಿದ್ದಾರೆ ಎಂಬುದನ್ನೂ ಅವರು ತಿಳಿಸಿದರು.


ಈ ಅಧ್ಯಯನ ತುಂಬಾನೇ ಮುಖ್ಯವಾದದ್ದು. ಏಕೆಂದರೆ, ಈ ಮಾಹಿತಿಯ ಆಧಾರದ ಮೇಲೆ ಆಸ್ಪತ್ರೆಯ ನಿರ್ವಾಹಕರಿಗೆ, ತಮ್ಮ ಆಸ್ಪತ್ರೆ ಸಿಬ್ಬಂದಿಗಳು ಯಾವ ಸಮಯದಲ್ಲಿ ಎಷ್ಟು ಜನರು ಇರಬೇಕು, ಯಾವ ಸಮಯಕ್ಕೆ ಎಷ್ಟು ಜನರ ಅಗತ್ಯವಿರುತ್ತದೆ ಎಂಬುದನ್ನ ಅಂದಾಜಿಸಿ, ನಿಯೋಜಿಸಲು ಸಹಾಯ ಮಾಡುತ್ತದೆ. ಇದರಿಂದ ಎಷ್ಟೋ ಕ್ಲಿಷ್ಟಕರ ಸಂದರ್ಭಗಳನ್ನ ಥಟ್ಟನೆ ನಿವಾರಿಸಬಹುದು.

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

We have a great opportunity for you. You can EARN up to Rs 10,000/- every month right in the comfort of your own HOME. Sounds interesting? Fill in this form and we will call you.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon