Link copied!
Sign in / Sign up
7
Shares

ಈ 7 ತಂತ್ರಗಳಿಂದ ಮಕ್ಕಳು ಬೆರಳು ಚೀಪುವುದನ್ನು ಬಿಡಿಸಿ!

ಮಗುವು ಚಿಕ್ಕದಿದ್ದಾಗ ಅಥವಾ ಮಗುವು ಇನ್ನೂ ಹೊಟ್ಟೆಯೊಳಗೆ ಇದ್ದಾಗ ಅದು ತನ್ನ ಬೆರಳನ್ನು ಚೀಪುವುದನ್ನು ನೋಡುವುದಕ್ಕಿಂತ ಇನ್ನೊಂದು ಮುದ್ದಾದ ವಿಷಯವಿಲ್ಲ. ಮಗುವು ಸ್ವಲ್ಪವೇ ಸ್ವಲ್ಪ ದೊಡ್ಡದಾದ ನಂತರ ಬೆರಳು ಚೀಪಿಕೊಂಡು, ತಮಗೆ ತಾವೇ ಸಮಾಧಾನ ಪಡಿಸಿಕೊಂಡು ನಿದ್ದೆ ಹೋದರೆ, ಅದು ಪೋಷಕರಿಗೆ ಸ್ವಲ್ಪ ತಲೆ ನೋವು ಕಡಿಮೆ ಮಾಡಿದಂತೆ. ಆದರೆ ಅವರು ಪ್ರಿ-ಸ್ಕೂಲ್ ಮೆಟ್ಟಿಲು ಹತ್ತುವ ಮುನ್ನ ಈ ಅಭ್ಯಾಸವನ್ನು ತ್ಯಜಿಸುವಂತೆ ಮಾಡಲು ಸೂಕ್ತ ಸಮಯ.

ಸ್ವಲ್ಪ ಬೆಳೆದಿರುವ ಮಕ್ಕಳು ತಮ್ಮನ್ನು ತಾವು ಸಮಾಧಾನ ಪಡಿಸಿಕೊಳ್ಳಲು ಬೆರಳನ್ನು ಚೀಪುತ್ತಾರೆ. ಇಂತಹ ಮಕ್ಕಳಲ್ಲಿ ನೀವು ಅವರ ಆತಂಕಕ್ಕೆ ಕಾರಣವಾಗಿರುವ ವಿಷಯವನ್ನು ಅರಿತು ಅದನ್ನು ಬಗೆಹರಿಸುವ ಮೂಲಕ ಅಥವಾ ಅವರು ಬೆರಳು ಚೀಪದೆ ಇದ್ದಾಗ ಅವರನ್ನು ಹೊಗಳುವ ಮೂಲಕ ಅವರು ಬೆರಳು ಚೀಪುವುದನ್ನು ನಿಲ್ಲಿಸಲು ಪ್ರೋತ್ಸಾಹಿಸಬಹುದು. ಇದು ಹೀಗಿದ್ದರೂ, ಮಕ್ಕಳು ಬೆಳೆಯುತ್ತಾ ಹೋದಂತೆ ತಾವಾಗಿಯೇ ಈ ಚಟವನ್ನು ಬಿಟ್ಟು ಬಿಡುತ್ತಾರೆ.

ಇದನ್ನು ನೀವು ಅತಿ ಗಂಭೀರವಾಗಿ ಪರಿಗಣಿಸಿ ದೊಡ್ಡ ವಿಷಯ ಮಾಡಿದರೆ, ಸಹಾಯಕ್ಕಿಂತ ಹೆಚ್ಚು ಇನ್ನೂ ತೊಂದರೆಗಳು ಉಂಟಾಗಬಹುದು. ಮಯೊ ಕ್ಲಿನಿಕ್ ಪ್ರಕಾರ, ದಂತವೈದ್ಯಕೀಯ ದೃಷ್ಟಿಕೋನದಿಂದ, ನಿಮ್ಮ ಮಕ್ಕಳಿಗೆ ಶಾಶ್ವತ ಹಲ್ಲುಗಳು ಬೆಳೆಯುವವರೆಗೂ ಅವರು ಬೆರಳು ಚೀಪುತ್ತಿದ್ದರೂ ಏನು ತೊಂದರೆ ಇಲ್ಲ. ಏಕೆಂದರೆ ಮೊದಲ ಹಲ್ಲುಗಳು ಉದುರಿ ಶಾಶ್ವತ ಹಲ್ಲುಗಳು ಬೆಳೆಯುವ ಸಮಯದಲ್ಲಿ ಮಾತ್ರ ಬೆರಳು ಚೀಪುವುದು ಮಕ್ಕಳ ದವಡೆಗಳ, ಹಲ್ಲುಗಳ ಆಕಾರದ ಮೇಲೆ ಪ್ರಭಾವ ಬೀರುತ್ತದೆ. ಹೀಗಾಗಿ, ಅಲ್ಲಿಯವರೆಗೂ ಬೆರಳು ಚೀಪುವುದು ಅಂತಹ ದೊಡ್ಡ ಸಮಸ್ಯೆಯೇ ಅಲ್ಲ.


ಆದರೆ ನಿಮ್ಮ ಮಗುವು ಎಷ್ಟು ತೀವ್ರವಾಗಿ ಬೆರಳನ್ನು ಚೀಪುತ್ತದೆ ಎಂಬುದು ಕೂಡ ಮುಖ್ಯವಾಗುತ್ತದೆ. ಮಗುವು ಕೇವಲ ತನ್ನ ಬೆರಳನ್ನು ತನ್ನ ಬಾಯಲ್ಲಿ ಇಟ್ಟುಕೊಳ್ಳುವುದು ಬೇರೆ, ಬೆರಳನ್ನು ಜೋರಾಗಿ ಚೀಪುವುದು ಬೇರೆ. ಎರಡನೆಯದ್ದು ಹೆಚ್ಚು ತೊಂದರೆ ಉಂಟು ಮಾಡುವಂತದ್ದು. ಒಂದು ವೇಳೆ ನಿಮ್ಮ ಮಗುವು ಈಗ ಸ್ವಲ್ಪ ದೊಡ್ಡದಾದ ಮೇಲೂ ತೀವ್ರವಾಗಿ ಬೆರಳು ಚೀಪುತ್ತಿದ್ದರೆ, ಅದನ್ನು ಬಿಡಿಸಲು ನೀವು ಏನು ಮಾಡಬಹುದೆಂಬುದನ್ನು ನಿಮಗೆ ತಿಳಿಸುತ್ತೇವೆ ಓದಿ.


೧. ಅವರ ಆತಂಕಕ್ಕೆ ಕಾರಣವಾದ ವಿಷಯವನ್ನು ತಿಳಿಯಿರಿ


ಬಹುತೇಕ ಮಕ್ಕಳು ತಮಗೆ ಆತಂಕ ಉಂಟಾದಾಗ ಅಥವಾ ಸುಸ್ತಾದಾಗ ತಮ್ಮನ್ನು ತಾವು ಸಮಾಧಾನ ಪಡಿಸಿಕೊಳ್ಳಲು ಬೆರಳನ್ನು ಚೀಪುತ್ತವೆ. ತಜ್ಞರ ಪ್ರಕಾರ ನೀವು ಮೊದಲಿಗೆ ಮಗುವು ಬೆರಳು ಚೀಪುವಂತೆ ಮಾಡುತ್ತಿರುವ ವಿಷಯ ಯಾವುದು ಎಂಬುದನ್ನು ತಿಳಿಯಬೇಕು. ಕೆಲವೊಮ್ಮೆ ಬೇಜಾರು ಆದಾಗ ಕೂಡ ಮಕ್ಕಳು ಬೆರಳನ್ನು ಚಿಪಬಹುದು. ನೀವು ಇವುಗಳ ಹಿಂದಿನ ಕಾರಣ ತಿಳಿದು ಅವುಗಳನ್ನ ಮಗುವಿನ ಮನಸ್ಸಿನಿಂದ ಹೋಗಲಾಡಿಸಲು ಪ್ರಯತ್ನಿಸಬೇಕು.


೨. ಅದರ ಬಗ್ಗೆ ಮಾತನಾಡಿ


ತಮಗೆ ಸಮಾಧಾನ ನೀಡುವ ವಿಷಯವು ತಮಗೆ ಹೇಗೆ ತೊಂದರೆ ಮಾಡುತ್ತದೆ ಎಂಬ ಅರಿವು ಮಕ್ಕಳಿಗೆ ಇರಲು ಹೇಗೆ ಸಾಧ್ಯ ಹೇಳಿ. ಬೆರಳನ್ನು ಚೀಪುವುದರಿಂದ ಆಗುವ ತೊಂದರೆಗಳು ಏನು ಎಂಬುದನ್ನು ನೀವು ನಿಮ್ಮ ಮಗುವಿಗೆ ತಿಳಿಸಿ ಹೇಳಿ. ಅದೇ ರೀತಿ, ದೊಡ್ಡವರು ಹಾಗೆಲ್ಲಾ ಬೆರಳು ಚೀಪುವುದಿಲ್ಲ ಎಂದು ಹೇಳಿ. ನೀನು ಬೆಳೆಯುತ್ತಿದ್ದೀಯ, ಬೆಳೆದು ದೊಡ್ಡವನಾಗುತ್ತಿದ್ದೀಯ, ದೊಡ್ಡವನಾಗುವಾಗ ಇದನ್ನು ಬಿಡಬೇಕು ಎಂಬುದನ್ನು ಅವರಿಗೆ ಹೇಳಲು ಸೃಜನಶೀಲ ದಾರಿಗಳನ್ನ ಕಂಡುಕೊಳ್ಳಿ. ಉದಾಹರಣೆಗೆ ನಿಮ್ಮ ಮನೆಯ ಬಳಿ ಇರುವ ಯಾವುದಾದರೂ ನಿಮ್ಮ ಮಗುವಿಗಿಂತ ಸ್ವಲ್ಪ ದೊಡ್ಡ ಹುಡುಗನನ್ನು ತೋರಿಸಿ, “ನೋಡು ಅವನು ದೊಡ್ಡವನಾದ ಮೇಲೆ ಬೆರಳು ಚೀಪುವುದನ್ನು ಬಿಟ್ಟಿದ್ದಾನೆ” ಎಂದು ಹೇಳಿ.


೩. ಅವರು ಬೆರಳು ಚೀಪದಿದ್ದಾಗ ಅವರನ್ನು ಹೊಗಳಿ


ನಿಮ್ಮ ಮಕ್ಕಳು ಬೆರಳು ಚೀಪದೆ ಇದ್ದಾಗ ಅವರನ್ನ ಹೊಗಳುವುದು ಅವರು ಆ ಅಭ್ಯಾಸವನ್ನು ಬಿಡುವಂತೆ ಮಾಡಲು ಇರುವ ಅತ್ಯಂತ ಪರಿಣಾಮಕಾರಿ ವಿಧಾನಗಳಲ್ಲಿ ಒಂದು. ವಾಷಿಂಗ್ಟನ್ ಪೋಸ್ಟ್ ಪ್ರಕಾರ ಬೆರಳು ಚೀಪುವಾಗ ಮಕ್ಕಳಿಗೆ ಬೈದರೆ ಅಥವಾ ಅವರ ಮೇಲೆ ಗದರಿದರೆ, ಅದು ಇನ್ನಷ್ಟು ತೊಂದರೆಗಳನ್ನು ಹುಟ್ಟು ಹಾಕುತ್ತವೆ. ಬೆರಳು ಚೀಪುವುದಕ್ಕೆ ನೀವು ನಿಮ್ಮ ಮಗುವನ್ನು ಹೀಯಾಳಿಸಿದರೆ ಅಥವಾ ಬೈದರೆ ಅಥವಾ ಅವಮಾನ ಮಾಡಿದರೆ, ಅವರು ನಿಮಗೆ ಕಾಣದಂತೆ ಬೆರಳು ಚೀಪಲು ಶುರು ಮಾಡುತ್ತಾರೆ ಅಥವಾ ಸಮಾಧಾನ ಪಡಿಸಿಕೊಳ್ಳಲು ಉಗುರು ಕಡಿಯುವಂತಹ ದಾರಿಗಳನ್ನ ಕಂಡುಕೊಳ್ಳಬಹುದು.

೪. ಮೃದುವಾಗಿ ನೆನಪಿಸುತ್ತಿರಿ


ಬಹುತೇಕ ಮಕ್ಕಳು ಆ ಕ್ಷಣದಲ್ಲಿ ತಾವು ಬೆರಳು ಚೀಪುತ್ತಿದ್ದೇವೆ ಎಂಬುದರ ಅರಿವನ್ನೇ ಹೊಂದಿರುವುದಿಲ್ಲ. ಅವರಿಗೆ ಗೊತ್ತಾಗದಂತೆ ಅವರ ಬೆರಳು ಅವರ ಬಾಯಿಗೆ ಹೋಗುವಷ್ಟು ಅಭ್ಯಾಸ ಆಗಿಬಿಟ್ಟಿರುತ್ತದೆ ಅವರಿಗೆ. ಮೊದಲೇ ಹೇಳಿದಂತೆ ಇಂತಹ ಸಮಯದಲ್ಲಿ ಅವರನ್ನು ಬಯ್ಯಬೇಡಿ ಅಥವಾ ಹೀಯಾಳಿಸಬೇಡಿ. ಇನ್ನೊಬ್ಬರ ಮುಂದೆ ನಿಮಗೆ ಆಗಲಿ ಅಥವಾ ನಿಮ್ಮ ಮಗುವಿಗೆ ಆಗಲಿ ಮುಜುಗರ ಆಗದಂತೆ ಅವರಿಗೆ ಬೆರಳನ್ನು ಬಾಯೆಂದು ಹೊರತೇಗುವಂತೆ ಕೈ ಸನ್ನೆ ಅಥವಾ ಬೇರೆ ಯಾವುದಾದರೂ ರೂಡಿಸಿಕೊಂಡ ಸೂಚನೆಯ ಮೂಲಕ ಅವರಿಗೆ ಹೇಳಿ. ಉದಾಹರಣೆಗೆ ಕಣ್ಣು ಹೊಡೆಯುವ ಸನ್ನೆಯೆಂದರೆ ಬಾಯಿಂದ ಬೆರಳು ಹೊರಗಡೆ ತೆಗಿ ಎಂಬ ಅರ್ಥ ಎನ್ನುವಂತೆ ಮನೆಯಲ್ಲೇ ಒಂದೆರೆಡು ಬಾರಿ ಅವರಿಗೆ ತೋರಿಸಿ ಅಭ್ಯಾಸ ಮಾಡಿಸಿ.


೫. ಮಗುವಿನ ಬೆರಳಿಗೆ ಬಟ್ಟೆ ಕಟ್ಟಿ


ಮೊದಲೇ ಹೇಳಿದಂತೆ ಮಕ್ಕಳು ತಮಗೆ ಗೊತ್ತಿಲದೆಯೇ ತಮ್ಮ ಬೆರಳನ್ನು ಚೀಪುತ್ತ ಇರುತ್ತಾರೆ. ಅದರಲ್ಲೂ ಅವರು ಮಲಗಿದ್ದಾಗ ಅವರಿಗೆ ಗೊತ್ತಾಗುವುದೇ ಇಲ್ಲ. ನಿಮ್ಮ ಮಗುವಿನ ಬೆರಳಿಗೆ ಬಟ್ಟೆಯನ್ನು ಸುತ್ತುವುದು ಈ ಅಭ್ಯಾಸವನ್ನು ಬಿಡಿಸಲು ನಿಮಗೆ ಸಹಾಯ ಮಾಡಬಹುದು. ಪರ್ಯಾಯವಾಗಿ ನೀವು ಅವರ ಕೈಗೆ ಸಾಕ್ಸ್ ಅನ್ನು ತೊಡಿಸಬಹುದು. 


೬. ಬಹುಮಾನ ಕೊಡಿ


ಬಹುಮಾನ ಕೊಟ್ಟು ಮಕ್ಕಳು ಬೆರಳು ಚೀಪುವುದನ್ನು ಬಿಡಿಸುವ ತಂತ್ರದ ಬಗ್ಗೆ ದಿ ವಾಷಿಂಗ್ಟನ್ ಪೋಸ್ಟ್ ಪತ್ರಿಕೆಯು ಒಂದು ಸಲಹೆಯನ್ನು ನೀಡುತ್ತದೆ. ಆ ಸಲಹೆ ಏನೆಂದರೆ “ಮಕ್ಕಳ ನಡವಳಿಕೆಯ ನಿಯಂತ್ರಣವನ್ನ ಮಕ್ಕಳಿಗೇ ಕೊಡಿ ಮತ್ತು ಅವರು ಸರಿಯಾಗಿ ನಡೆದುಕೊಂಡಾಗ ಅವರಿಗೆ ಹೊಗಳಿಕೆ ಮತ್ತು ಬಹುಮಾನಗಳನ್ನ ನೀಡಿ” ಎಂಬುದು. ಬಹುಮಾನಗಳು ಏನೇ ಆಗಿರಬಹುದು. ಚಿಕ್ಕ ಚಾಕಲೇಟ್ ಇಂದ ದೊಡ್ಡ ಉಡುಗೊರೆ ಆಗಿರಬಹುದು. ಅವರ ವಯಸ್ಸಿಗೆ, ತಿಳುವಳಿಕೆಗೆ ಸಲ್ಲುವಂತದ್ದು.


೭. ಸ್ಟಿಕರ್ ಚಾರ್ಟ್


ನಿಮ್ಮ ಮಗುವಿಗೆ ಸ್ಟಿಕರ್ ಅಥವಾ ಗೊಂಬೆಗಳ ಕಾರ್ಡ್ಸ್ ಎಂದರೆ ಇಷ್ಟಾನ? ಹಾಗಿದ್ದರೆ ನೀವು ಒಂದು ಸ್ಟಿಕರ್ ಚಾರ್ಟ್ ಅನ್ನು ತಯಾರಿಸಿ. ಇದು ತುಂಬಾನೇ ಸುಲಭ. ಒಂದು ದೊಡ್ಡ ಬಿಳಿಯ ಕಾರ್ಡ್ಬೋರ್ಡ್ ಪೇಪರ್ ಅಥವಾ ಯಾವುದಾದರೂ ಬಿಳಿಯ ಹಾಳೆ ತೆಗೆದುಕೊಳ್ಳಿ. ನಿಮ್ಮ ಮಗುವು ಬೆರಳು ಚೀಪದೆ ಒಂದು ದಿನ ಕಳೆದರೆ, ಅದರ ಮೇಲೆ ಒಂದು ಸ್ಟಿಕರ್ ಅಂಟಿಸಿ. ಹೀಗೆ ನಿಮ್ಮ ಮಗುವು ಬೆರಳು ಚೀಪದೆ ಕಳೆಯುವ ಪ್ರತಿಯೊಂದು ದಿನಕ್ಕೂ ನಿಮ್ಮ ಮಗುವಿಗೆ ಸ್ಟಿಕರ್ ಅನ್ನು ತೋರಿಸಿ ಆ ಚಾರ್ಟ್ ಮೇಲೆ ಅಂಟಿಸಿ. ಈ ಕಾರಣಕ್ಕಾಗಿ ನೀವು ಬುಕ್ ಸ್ಟೋರ್ಸ್ ಅಥವಾ ಫ್ಯಾನ್ಸಿ ಸ್ಟೋರ್ಸ್ ಅಲ್ಲಿ ಸಿಗುವಂತಹ ಬಾರ್ಬಿ ಸ್ಟಿಕರ್ಸ್ ಅಥವಾ ಬೈಕ್ ಸ್ಟಿಕರ್ಸ್ ಅನ್ನು ಖರೀದಿಸಿ ಇಟ್ಟುಕೊಂಡಿರಿ.

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

Recently, we launched a baby-safe, natural and toxin-free floor cleaner. Recommended by moms and doctors all over India, this floor-cleaner liquid gets rid of germs and stains without adding harmful toxins to the floor. Click here to buy it and let us know if you liked it.

Stay tuned for our future product launches - we plan to launch a range of homecare products that will keep your little explorer healthy, safe and happy!

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon