Link copied!
Sign in / Sign up
26
Shares

ಗಂಡಸರು ಹೆಚ್ಚು ಹಸ್ತಮೈಥುನದಲ್ಲಿ ತೊಡಗಿದರೆ ಅವರಿಗೆ ಮಕ್ಕಳಾಗುವುದಿಲ್ಲವ?

 

ಗಂಡಸರ ಹಸ್ತಮೈಥುನದ ಬಗ್ಗೆ ಹಲವಾರು ಮಿಥ್ಯಗಳಿವೆ. ಹಸ್ತಮೈಥುನದಲ್ಲಿ ತೊಡಗಿಸಿಕೊಳ್ಳುವ ಗಂಡಸರು ಏನೇ ಮಾಡಿದರು, ವೀರ್ಯಾಣು ಸಂಖ್ಯೆ ಯ ಕೊರತೆ ಎಂಬ ಸಮಸ್ಯೆ ಹುಟ್ಟುವವರೆಗೂ ಅವರು ವೀರ್ಯಾಣು ಬಗ್ಗೆ ಯೋಚಿಸಿಯೇ ಇರುವುದಿಲ್ಲ. ಆಗ ಅವರು ಹಸ್ತಮೈಥುನ ತಮ್ಮಲ್ಲಿ ಬಂಜೆತನ ಹುಟ್ಟಿಸಿತಾ ಎಂಬ ಪ್ರಶ್ನೆಯನ್ನ ತಮ್ಮಲ್ಲೇ ಕೇಳಿಕೊಳ್ಳುತ್ತಾರೆ.


ಜನರಲ್ಲಿ ಗಂಡಸರ ಹಸ್ತಮೈಥುನದ ಬಗ್ಗೆ ಅನೇಕಾನೇಕ ತಪ್ಪು ಗ್ರಹಿಕೆಗಳು ಇವೆ. ಬಹಳಷ್ಟು ಜನರು ಗಂಡಸು ಹೆಚ್ಚು ವೀರ್ಯ ಹೊರಹಾಕಿದಷ್ಟು, ಆತನ ವೀರ್ಯಾಣು ಸಂಖ್ಯೆ ಕಡಿಮೆ ಆಗುತ್ತದೆ ಎಂದೇ ತಪ್ಪಾಗಿ ಭಾವಿಸಿದ್ದಾರೆ. ಗಂಡಸರ ವೃಷಣಗಳು ಒಂದು ನೀರಿನ ಟ್ಯಾಂಕ್ ಅಂತೆ ವೀರ್ಯದ ಟ್ಯಾಂಕ್ ಆಗಿ ಕೆಲಸ ಮಾಡುತ್ತವೆ, ವೀರ್ಯ ಹೆಚ್ಚು ಹೊರಸೂಸಿದಷ್ಟು ವೀರ್ಯಾಣು ಸಂಖ್ಯೆ ಕಡಿಮೆ ಆಗುತ್ತದೆ ಎಂಬ ತಪ್ಪು ನಂಬಿಕೆಯೇ, ಜನರಲ್ಲಿ ಈ ತಪ್ಪು ಗ್ರಹಿಕೆ ಹರಡಲು ಕಾರಣವಾಗಿದೆ. ವಿಜ್ಞಾನ ಹೇಳುವುದೇ ಬೇರೆ !

ಅಧ್ಯಯನಗಳ ಪ್ರಕಾರ ಹಸ್ತಮೈಥುನ ಮತ್ತು ವೀರ್ಯಾಣು ಸಂಖ್ಯೆ ನಡುವೆ ಯಾವುದೇ ರೀತಿಯ ಸಂಬಂಧವಿಲ್ಲ. ಬದಲಿಗೆ, ಒಬ್ಬ ಗಂಡಸು ಹೆಚ್ಚು ಸೆಕ್ಸ್ ಅಥವಾ ಹಸ್ತಮೈಥುನದಲ್ಲಿ ತೊಡಗಿದಷ್ಟು, ಆತ ಒಂದು ಹೆಣ್ಣು ಗರ್ಭ ಧರಿಸುವಂತೆ ಮಾಡುವ ಸಾಧ್ಯತೆಗಳು ಹೆಚ್ಚಾಗುತ್ತವೆ ಎಂದು ಈ ಅಧ್ಯಯನಗಳು ತಿಳಿಸಿವೆ. ಆದರೆ ಹಸ್ತಮೈಥುನವು ವೀರ್ಯಾಣು ಸಂಖ್ಯೆ ಕೊರತೆ ಉಂಟು ಮಾಡುವುದನ್ನ ಬಿಟ್ಟು ಬೇರೆ ಯಾವುದಾದರು ಇತರೆ ರೀತಿಯಲ್ಲಿ ಬಂಜೆತನ ಉಂಟು ಮಾಡುತ್ತದೆಯೇ?


ಮೇಲಿನ ಪ್ರಶ್ನೆಗೆ ಉತ್ತರ, ಇಲ್ಲ. ಅದು ಯಾವುದೇ ಶಾರೀರಿಕ ರೀತಿಯಲ್ಲಿ ಬಂಜೆತನ ಉಂಟು ಮಾಡಲು ಸಾಧ್ಯವಿಲ್ಲ. ಅಧ್ಯಯನಗಳ ಪ್ರಕಾರ ಬಾಹ್ಯ ಶಾರೀರಿಕ ಅಂಶಗಳಾದ ಅಧಿಕ ಲೋಹ ವಿಷಕಾರಿಕತೆ, ಕೊಕೇನ್ ಅಥವಾ ಇತರೆ ಮಾದಕ ವಸ್ತುಗಳ ದುರ್ಬಳಕೆ, ಕೆಲವೊಂದು ಔಷಧಿಗಳು, ಮತ್ತು ಗಂಡಸಿನ ಜನನಾಂಗಕ್ಕೆ ಪೆಟ್ಟಾಗುವುದು ಗಂಡಸಿನ ಫಲವತ್ತತೆ ಮೇಲೆ ಪ್ರಭಾವ ಬೀರಬಹುದು. ಆದರೆ ಕೆಲವು ಗಂಡಸರು ನಿಮಿರುವಿಕೆಯ ಅಪಸಾಮಾನ್ಯತೆಯ (ಎರೆಕ್ಟ್ರೈಲ್ ಡಿಸ್ಫಂಕ್ಷನ್) ಕಾರಣದಿಂದಲೂ ಬಂಜೆತನ ಎದುರಿಸುವರು.

ನಿಮಿರುವಿಕೆಯ ಅಪಸಾಮಾನ್ಯತೆಯಲ್ಲಿ ನೂರಾರು ವಿಧಗಳಿವೆ. ಆದರೆ ಕೆಲವೊಮ್ಮೆ ಗಂಡಸು ಯಾವಾಗ ಲೈಂಗಿಕ ಪ್ರಚೋದನೆ ಹೊಂದಲು ಹೊರಗಿನ ವಿಷಯಗಳ - ಅಂದರೆ ನೀಲಿ ಚಿತ್ರಗಳಂತವುಗಳ ಮೇಲೆ ಅವಲಂಬಿತವಾಗಿ, ನೈಜ್ಯತೆಯಿಂದ ದೂರ ಉಳಿಯುತ್ತಾನೋ, ಆಗಲು ಈ ನಿಮಿರುವಿಕೆಯ ಅಪಸಾಮಾನ್ಯತೆ ಉಂಟಾಗುತ್ತದೆ. ಹಾಗೆಂದ ಮಾತ್ರಕ್ಕೆ ನೀಲಿಚಿತ್ರ ನೋಡುವುದೇ ಕೆಟ್ಟದ್ದು ಎಂದಲ್ಲ, ಆದರೆ ಕೆಲವರು ಇದರಲ್ಲಿ ಮುಳುಗಿ, ನೈಜ್ಯ ಸ್ಪರ್ಶ ಅಥವಾ ವಿಷಯಗಳಿಂದ ಪ್ರಚೋದನೆ ಹೊಂದಲು ವಿಫಲರಾಗುತ್ತಾರೆ ಮತ್ತು ಅವರಿಗೆ ಆ ನೀಲಿಚಿತ್ರದಲ್ಲಿ ಇರುವಂತಹ ಲೈಂಗಿಕ ಆಟಗಳು ಮಾತ್ರ ಪ್ರಚೋದನೆ ನೀಡುತ್ತದೆಯೇ ಹೊರತು, ಸಾಮಾನ್ಯ ಸೆಕ್ಸ್ ಅವರನ್ನ ಪ್ರಚೋದಿಸುವುದಿಲ್ಲ. ಆ ಸಮಯದಲ್ಲಿ ಅವರ ಲೈಂಗಿಕ ಕ್ರಿಯೆಯ ಕ್ಷಮತೆ ಕ್ಷೀಣಿಸಿ, ಅದೇ ಒಂದು ತೊಂದರೆಯಾಗುತ್ತದೆ.


ಈ ತೊಂದರೆ ಕೂಡ ಶಾರೀರಿಕ ಅಲ್ಲ. ಇದು ಕೇವಲ ಮಾನಸಿಕ ತೊಂದರೆ. ಗಂಡಸರ ಕೆಲವು ದಿನಗಳ ಕಾಲ ಈ ನೀಲಿಚಿತ್ರ ಮತ್ತು ಇತರೆ ಮಾದಕವೆನಿಸುವ ನೈಜ್ಯವಲ್ಲದ ವಿಷಯಗಳಿಂದ ದೂರ ಉಳಿದರೆ, ಈ ಸಮಸ್ಯೆ ತಾನಾಗಿಯೇ ಬಗೆಹರಿಯುತ್ತದೆ.

ಹೀಗಾಗಿ, ಹಸ್ತಮೈಥುನ ಮತ್ತು ಗಂಡಸರ ಫಲವತ್ತತೆಯ ನಡುವೆ ಯಾವುದೇ ರೀತಿಯ ಸಂಬಂಧ ಇರುವುದಕ್ಕೆ ವೈಜ್ಞಾನಿಕ ಪುರಾವೆ ಇಲ್ಲ. ಹೇಗೆ ಕಾಫಿ ಕುಡಿಯುವುದು, ತಲೆ ಸ್ನಾನ ಮಾಡುವುದು ಒಂದು ರೀತಿಯ ಅಭ್ಯಾಸ ಆಗಿರುತ್ತದೆಯೋ, ಹಸ್ತಮೈಥುನವು ಅದೇ ರೀತಿಯಲ್ಲಿ ಒಂದು ಅಭ್ಯಾಸವಷ್ಟೇ. ಇದರ ಬಗ್ಗೆ ಯಾವುದೇ ರೀತಿಯ ಭಯವನ್ನ ಹೊಂದುವ ಅಗತ್ಯವೇ ಇಲ್ಲ.

ನಮ್ಮ ಲೇಖನವನ್ನ ಓದಿದ ಸೂಪರ್ ಅಮ್ಮ ಆದ ನಿಮಗೆ ಥ್ಯಾಂಕ್ಸ್ !
ಇದೇ ಖುಷಿಯಲ್ಲಿ ನೀವು ಅಮೆಜಾನ್ ಇಂದ ಏನೇ ಖರೀದಿಸಿದರು ನಾವು ನಿಮಗೆ ವಿಶೇಷ ಡಿಸ್ಕೌಂಟ್ ಕೊಡುತ್ತಿದ್ದೇವೆ, ಹಾಗಿದ್ದರೆ ಇನ್ನೇಕೆ ತಡ? ಇಲ್ಲಿ ಕ್ಲಿಕ್ ಮಾಡಿ, ಡಿಸ್ಕೌಂಟ್ ಪಡೆಯಿರಿ, ಖರೀದಿಸಿ !
 
Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon