Link copied!
Sign in / Sign up
1
Shares

ಮಕ್ಕಳಿರುವ ಮನೆಯಲ್ಲಿ : ಪ್ರಥಮ ಚಿಕಿತ್ಸಾ ಪೆಟ್ಟಿಗೆ

ಮಕ್ಕಳನ್ನು ಆಟವಾಡಲು ಬಿಡುವುದು ಅವರು ಚುರುಕಾಗಿ, ಚಟುವಟಿಕೆಯಿಂದ ಮತ್ತು ಜೀವನ ಪಾಠ ಕಲಿಯಲು ತುಂಬಾ ಸಹಾಯವಾಗುತ್ತದೆ ಮತ್ತು ಅವರ ಆರೋಗ್ಯಕ್ಕೂ ಇದು ಒಳ್ಳೆಯದು. ಆದರೆ ಪ್ರತಿ ಆಟವು ಗಾಯದ ಸಮಸ್ಯೆಯನ್ನು ಒಳಗೊಂಡಿರುತ್ತದೆ. ಆಟ ಯಾವುದೇ ಇರಲಿ ಅದಕ್ಕೆ ಎಷ್ಟು ಎಚ್ಚರಿಕೆವಹಿಸಿದರು ಕೆಲವೊಮ್ಮೆ ಗಾಯವಾಗುವುದು ಸಹಜ. ನಿಮ್ಮ ಮಗು ಆಟವಾಡುವಾಗ ಗಾಯ ಮಾಡಿಕೊಂಡು ಬಂದರೆ ನೀವು ಇದನ್ನು ಪ್ರಥಮ ಚಿಕಿತ್ಸೆಯಾಗಿ ಮಾಡಬಹುದು.

ಕೆಲವು ಸಾಮಾನ್ಯ ಗಾಯಗಳೆಂದರೆ, ಕೈ ಅಥವಾ ಕಾಲು ತರಚುವುದು/ಉಜ್ಜಿರುವುದು, ಕತ್ತರಿಸುವುದು, ಕೈ/ಕಾಲು ಹುಳುಕುವುದು, ಮೂಳೆ ಮುರಿಯುವುದು, ಯಾವುದೇ ಆಗಿರಲಿ ಈ ಕೆಳಗಿನವುಗಳನ್ನು ನೀವು ಪ್ರಥಮ ಚಿಕಿತ್ಸೆಯಾಗಿ ಉಪಯೋಗಿಸಬಹುದು.

೧.ನಿಮ್ಮ ಬಳಿ ಡ್ರೆಸ್ಸಿಂಗ್ ಮತ್ತು ಬ್ಯಾಂಡೇಜ್ ಅನ್ನು ಇರಿಸಿಕೊಂಡಿರಿ(ಎಲಾಸ್ಟಿಕ್ ಪ್ಯಾಡ್, ಕಣ್ಣಿನ ಪ್ಯಾಡ್, ನೋವಿನ ಸ್ಪ್ರೇ).

೨.ಕಡಿತಕ್ಕೆ, ಕೈ/ಕಾಲು ಉಜ್ಜುರಿವುದಕ್ಕೆ ಒಳ್ಳೆಯ ಆಂಟಿಬಯೋಟಿಕ್ ಮುಲಾಮನ್ನು ಉಪಯೋಗಿಸಿ.

೩.ನೋವು ಕಡಿಮೆಯಾಗಲು ಒಂದು ಬಟ್ಟೆಗೆ ಉಪ್ಪನ್ನು ಉರಿದು ಅದರಲ್ಲಿ ಹಾಕಿ ಬಿಸಿ ಶಾಖ ನೀಡಿ ಅಥವಾ ಹಾಟ್ ಬ್ಯಾಗ್ ಬಳಸಿ.

೪.ಟಿಂಚರ್ ಅನ್ನು ಬಳಸಿ, ಅದು ಸೆಪ್ಟಿಕ್ ಆಗುವುದನ್ನು ತಪ್ಪಿಸುತ್ತದೆ.

೫.ಚರ್ಮ ಕಿತ್ತಿದ್ದರೆ, ನೀರಿನಲ್ಲಿ ದೂಳನ್ನು ತೊಳೆದು ಟಿಂಚರ್ ಹಾಕಿ, ಇಲ್ಲವಾದರೆ, ಅರಿಶಿಣ ಪುಡಿಯನ್ನು ಹಾಕಿ ಇದರಿಂದ ರಕ್ತ ಹೆಪ್ಪುಗಟ್ಟಲು ಸಹಾಯವಾಗುತ್ತದೆ.

ಕೆಲವು ಮುಂಜಾಗ್ರತಾ ಕ್ರಮಗಳು

೧.ಬಿಸಿಲಿನ ಕಿರಣಗಳಿಂದ ತ್ವಚೆಯ ಸಮಸ್ಯೆಯನ್ನು ತಪ್ಪಿಸಿಕೊಳ್ಳಲು, ಸನ್ ಕ್ರೀಮ್ ಅಥವಾ ನೈಸರ್ಗಿಕವಾದ ಲೋಗಸರ(ಅಲೋವೆರಾ)ವನ್ನು ಬಳಸಿ.

೨.ಕೈ ಗಳಿಗೆ ಗ್ಲೌಸ್ ಕಾಲಿಗೆ ಶೂ ಹಾಕಲು ಹೇಳಿ.

೩.ಡಿಹೈಡ್ರೇಶನ್ ಕಡಿಮೆ ಮಾಡಲು, ಆಗಾಗ ನೀರನ್ನು ಕುಡಿಯಲು ಹೇಳಿ, ನೆನಪಿರಲಿ ಆಟವಾಡಿದ ತಕ್ಷಣ ನೀರನ್ನು ಕುಡಿಯದೆ ಸ್ವಲ್ಪ ಸಮಯದ ನಂತರ ಮತ್ತು ನೀರು ಕುಡಿದ ಸ್ವಲ್ಪ ಸಮಯದ ನಂತರ ಆಟವಾಡುವುದು ಒಳಿತು.

೪.ಮಕ್ಕಳು ಆಡುವ ಆಟಕ್ಕೆ ತಕ್ಕಂತೆ ಮುಂಜಾಗ್ರತೆ ತಗೆದುಕೊಳ್ಳಲು ಹೇಳಿ.

೫.ಸೂಕ್ಷ್ಮ ಮತ್ತು ಗಲೀಜು ಪ್ರದೇಶಗಳಲ್ಲಿ ಆಡಲು ಬಿಡಬೇಡಿ.

ನಿಮ್ಮ ಮಗು ಆಕ್ಟಿವ್ ಆಗಿ ಆಡಲು ನೈಸರ್ಗಿಕ ಆರೋಗ್ಯಕರ ಆಹಾರವನ್ನು ನೀಡಿ. ಹೆಚ್ಚು ಹಣ್ಣು-ತರಕಾರಿಗಳನ್ನು ತಿನ್ನಿಸಿ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon