Link copied!
Sign in / Sign up
8
Shares

ಮಕ್ಕಳಿರುವ ಮನೆಯಲ್ಲಿ ಈ ೭ ಮನೆಮದ್ದುಗಳು ತುಂಬಾ ಉಪಕಾರಿ

ನೀವು ತಾಯಿಯಾದಾಗ, ನಿಮ್ಮ ಮಗುವಿನ ತತ್ಕ್ಷಣದ ಯಾವುದೇ ಅವಶ್ಯಕತೆಗಳಿಗೆ ನೀವು ಒಲವು ತೋರುತ್ತಿರಿ, ಆದರೆ ಅದನ್ನು ಪರಿಹರಿಸಲು/ನಾಶಪಡಿಸಲು ಕೆಲವು ಕೌಶಲ್ಯಗಳನ್ನು ಉಪಯೋಗಿಸಿ. ಮಧ್ಯರಾತ್ರಿ ಅಳುವುದು ಮಗುವಿಗೆ ಆರಾಮಾದಾಯಕವಾಗಿಲ್ಲ ಎಂಬುದರ ಚಿಹ್ನೆ/ಸುಳಿವು. ಆ ಕ್ಷಣದಲ್ಲಿ ವೈದ್ಯರ ಬಳಿ ಓಡುವ ಬದಲು, ಇಲ್ಲಿರುವ ಮನೆಮದ್ದುಗಳನ್ನು ಬಳಸಿ, ವೈದ್ಯರ ಬಳಿ ಹೋಗುವವರೆಗೆ, ಅದನ್ನು ತಡೆಯಲು ಅಥವಾ ಬಗೆಹರಿಸಲು ಪ್ರಯತ್ನಿಸಿ.

೧.ಕ್ಯಾಮೊಮೈಲ್ ಚಹಾ

ಕ್ಯಾಮೊಮೈಲ್ ಚಹಾವು ನಿಮ್ಮ ಮಗುವಿನ ಕರುಳನ್ನು ಸರಾಗವಾಗಿಸಿ ಹೊಟ್ಟೆ ನೋವನ್ನು ಕಡಿಮೆ ಮಾಡುತ್ತದೆ. ನಿಮ್ಮ ಮಗುವಿಗೆ ಈ ಚಹಾವನ್ನು ೧೦೦ ಮಿಲಿ ಲೀಟರ್ ಗಿಂತ ಹೆಚ್ಚು ಕೊಡಬೇಡಿ. ಚಹಾ ಪೊಟ್ಟಣವನ್ನು(ಟೀ ಬ್ಯಾಗ್) ಬಿಸಿ ನೀರಲ್ಲಿ ೪-೫ ನಿಮಿಷಗಳ ಕಾಲ ಅದ್ದಿ/ನೆನೆಸಿ, ಅದು ಬಿಸಿ ಕಡಿಮೆಯಾದ ಮೇಲೆ ಅಥವಾ ಕೋಣೆ ತಾಪಮಾನಕ್ಕೆ ಬಂದ ಮೇಲೆ ಚಹಾವನ್ನು ಮಗುವಿಗೆ ಕುಡಿಸಿರಿ.

೨.ಜೇನುತುಪ್ಪ ಮತ್ತು ನಿಂಬೆರಸ

ಜೇನುತುಪ್ಪ ಮತ್ತು ನಿಂಬೆರಸದ ಸಂಯೋಜನೆಯು ದಟ್ಟಣೆಯನ್ನು ಸರಾಗಗೋಳಿಸುವಲ್ಲಿ ಉತ್ತಮ ಕಾರ್ಯ ನಿರ್ವಹಿಸುತ್ತದೆ. ದಟ್ಟಣೆ ಮುಂದುವರೆದರೆ ಮಗುವನ್ನು ವೈದ್ಯರ ಬಳಿಗೆ ಕರೆದುಕೊಂಡು ಹೋಗಿ. ನಿಮ್ಮ ಮಗುವಿಗೆ ಇದನ್ನು ನೀಡುವಾಗ ಜಾಗರೂಕರಾಗಿರಿ, ಮತ್ತು ಇದನ್ನು ೩-೪ ಚಮಚದಷ್ಟು ಮಾತ್ರ ಅದು ಒಂದು ವರ್ಷ ಮೇಲ್ಪಟ್ಟ ಮಕ್ಕಳಿಗೆ ಮಾತ್ರ ನೀಡಿರಿ.

೩.ಅಡುಗೆ ಸೋಡಾ

ಕೀಟ ಕಡಿತದಿಂದ ಮಕ್ಕಳಿಗೆ ಉಪದ್ರವವಾಗುತ್ತದೆ. ತುರಿಕೆ/ನವೆ ಸಂವೇದನೆ ಮಕ್ಕಳನ್ನು ಕಿರಿಕಿರಿಗೊಳಿಸುತ್ತದೆ ಮತ್ತು ಅವರ ಸೂಕ್ಷ್ಮ ಚರ್ಮಕ್ಕೆ ಅದು ಉತ್ತಮವಲ್ಲ. ಅಡುಗೆ ಸೋಡಾ ಮತ್ತು ನೀರಿನ ಪೇಸ್ಟ್ ಮಾಡಿ ಹಚ್ಚುವುದರಿಂದ ನವೆ/ತುರಿಕೆಯನ್ನು ಕಡಿಮೆಮಾಡಬಹುದು. ಇದನ್ನು ತುರಿಕೆ/ನವೆ ಇರುವ ಜಾಗದಲ್ಲಿ ಮಾತ್ರ ಹಚ್ಚಿ.

೪.ಗುಳ್ಳೆ ದಂಡ(ಬಬಲ್ ವ್ಯಾಂಡ್)

ನಿಮ್ಮ ಮಗು ಅತೀಯಾಗಿ ಅಳುತ್ತಿದ್ದರೆ, ಅದು ಮಗುವಿನ ಒತ್ತಡದಿಂದ ಆಗಿರಬಹುದು. ಒಂದು ಗುಳ್ಳೆ ದಂಡ ಮಗುವಿನ ಆತಂಕ ಮತ್ತು ಒತ್ತಡವನ್ನು ರೋಮಾಂಚಕ ರೀತಿಯಲ್ಲಿ ಕಡಿಮೆ ಮಾಡಬಹುದು, ಆಕರ್ಷಕ ಗುಳ್ಳೆಗಳು ಮಕ್ಕಳ ಗಮನ ಸೆಳೆಯುತ್ತವೆ ಮತ್ತು ಅವರು ತಮ್ಮ ನೋವು ಅಥವಾ ಎಲ್ಲವನ್ನು ಮರೆತು ಖುಷಿಯಿಂದ ಆಡಲು ಪ್ರಾರಂಭಿಸುತ್ತಾರೆ.

೫.ಕಾಪಾಡಲು ಕಾಲುಚೀಲ(ಸಾಕ್ಸ್)

ಮಕ್ಕಳು ಆಗಾಗ್ಗೆ ಹೊಟ್ಟೆ ಮತ್ತು ಕತ್ತು ನೋವಿಗೆ ಒಳಗಾಗುತ್ತಾರೆ. ಬಟ್ಟೆಯಿಂದಸುತ್ತಿ ಶಾಖ ಕೊಡುವ ಬದಲು, ಈ ಮನೆಮದ್ದನ್ನು ಉಪಯೋಗಿಸಬಹುದು. ಅಕ್ಕಿಯನ್ನು/ಉಪ್ಪನ್ನು ಬಿಸಿಯಾಗುವವರೆಗೆ ಉರಿದು ಅದನ್ನು ಸಾಕ್ಸ್ ಒಳಗಡೆ ಹಾಕಿ ಕಟ್ಟಿ, ನೋವು ಇರುವ ಜಾಗದಲ್ಲಿ ಮಡಗಿ, ಅದು ನಿಮ್ಮ ಮಗುವಿನ ಮೃದುವಾದ ತ್ವಚೆಗೆ ಆರಾಮದಾಯಕವನ್ನು ಕೊಡುತ್ತದೆ.

೬.ತಾಜಾ ಶುಂಠಿ ಚಹಾ

ಸವಾರಿಯ ಸಮಯದಲ್ಲಿ ನಿಮ್ಮ ಮಗುವಿನ ವಾಕರಿಕೆಯನ್ನು ತಡೆಯಲು ಶುಂಠಿ ಸಹಾಯ ಮಾಡುತ್ತದೆ. ಕುದಿಯುವ ನೀರಿಗೆ ಶುಂಠಿಯ ಚೂರುಗಳನ್ನು ಹಾಕಿ. ಇದನ್ನು ಶೋದಿಸಿ ಬಿಸಿ ಆರಿದ ಮೇಲೆ (ಕುಡಿಯಲು ಯೋಗ್ಯ ಬಿಸಿಯಾದಾಗ) ನಿಮ್ಮ ಮಗುವಿಗೆ ಸ್ವಲ್ಪ ಕುಡಿಸಿರಿ. ಮಕ್ಕಳು ಪ್ರಯಾಣ ಮಾಡುವ ಅರ್ಧ ಗಂಟೆ ಮುಂಚೆ ಇದನ್ನು ಕುಡಿಸಿ.

೭.ಸೌತೆಕಾಯಿ

ತಂಪಾದ ಸೌತೆಕಾಯಿ ಚೂರುಗಳು ಊದಿಕೊಂಡ ಪ್ರದೇಶಗಳನ್ನು(ಊತವನ್ನು) ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ತಂಪಾದ ಮತ್ತು ಹಿತವಾದ ಪರಿಣಾಮವನ್ನು ನೀಡುವ ಜೊತೆಗೆ ತ್ವರಿತವಾದ ಪರಿಹಾರವನ್ನು ಕೊಡುತ್ತದೆ. ಒಂದು ಬಾರಿ ಸೌತೆಕಾಯಿ ತನ್ನ ತಂಪುತನವನ್ನು ಕಳೆದುಕೊಂಡರೆ ಶೈತ್ಯೀಕರಣ(ಫ್ರಿಡ್ಜ್)ದಿಂದ ಇನ್ನೊಂದು ಸೌತೆಕಾಯಿಯನ್ನು ಇರಿಸಿ.

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

We have a great opportunity for you. You can EARN up to Rs 10,000/- every month right in the comfort of your own HOME. Sounds interesting? Fill in this form and we will call you.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon