Link copied!
Sign in / Sign up
2
Shares

ಮಕ್ಕಳಲ್ಲಿ ತ್ವಚೆಯ ಸಮಸ್ಯೆ : ಸಲಹೆಗಳು

ಗರ್ಭಾವಸ್ಥೆಯಿಂದಲೇ ತಾಯಿಯು ತನ್ನ ಮಗುವಿನ ರಕ್ಷಣೆಯ ಜವಾಬ್ದಾರಿಯನ್ನು ಹೊರುತ್ತಾಳೆ. ಮಗುವನ್ನು ಸಾಕಿ, ದೊಡ್ಡವನನ್ನಾಗಿ/ಳಾಗಿ ಮಾಡುವವರೆಗೂ ತಾಯಿಯ ಪಾತ್ರ ಮಹತ್ವದ್ದು ಮತ್ತು ಅದನ್ನು ತಾಯಿ ಮಾತ್ರ ಮಾಡಲು ಸಾಧ್ಯ. ಏನೇ ಕಠಿಣ ಸವಾಲುಗಳು ಬಂದರು ತಾಯಿಯು ತನ್ನ ಕರ್ತವ್ಯವನ್ನು ತುಂಬಾ ಆನಂದದಿಂದ ಯಾವುದೇ ಕೊರತೆ ಇಲ್ಲದೆ ನಿಭಾಯಿಸುತ್ತಾಳೆ. ಚಿಕ್ಕ ಮಕ್ಕಳ ಚರ್ಮ ತುಂಬಾ ಸೂಕ್ಷ್ಮವಾಗಿರುವುದರಿಂದ ಸೋಂಕುಗಳು ಬೇಗನೆ ಹರಡಬಹುದು, ಅಥವಾ ಬೇಗನೆ ರೋಗಕ್ಕೆ ಗುರಿಯಾಗಬಹುದು. ಇಂತಹ ಸಮಯದಲ್ಲಿ ನೀವು ತುಂಬಾ ಎಚ್ಚರಿಕೆಯಿಂದ ಮಗುವನ್ನು ನೋಡಿಕೊಳ್ಳಬೇಕು. ಸುಮ್ಮನೆ ಮಗುವಿನ ಚರ್ಮಕ್ಕೆ ಔಷಧಿಗಳನ್ನು ಹಚ್ಚುವ ಬದಲು ಚರ್ಮಕ್ಕೆ ಆಗಿರುವ ಕಾಯಿಲೆ ಅಥವಾ ಸೋಂಕನ್ನು ಮೊದಲು ತಿಳಿದುಕೊಳ್ಳಿ ಮತ್ತು ಅದಕ್ಕೆ ತಕ್ಕ ಔಷಧಿಯನ್ನು ಉಪಯೋಗಿಸಿ.

೧.ಮೊಡವೆಗಳು

ಮೊದಲು ಮಗುವಿಗೆ ಬಂದಿರುವುದು ಮೊಡವೆಯೋ ಅಥವಾ ಸೊಳ್ಳೆಗಳು ಕಚ್ಚಿ ಮೂಡಿರುವ ಗುಳ್ಳೆಗಳೋ ಎಂಬುದನ್ನು ಖಚಿತಪಡಿಸಿಕೊಳ್ಳಿ. ಮಗುವಿಗೆ ಕಾಯಿಲೆ ಬರುವ ಮೊದಲೇ ಮುನ್ನೆಚ್ಚರಿಕೆ ವಹಿಸುವುದು ಒಳ್ಳೆಯದು. ಒಂದು ವೇಳೆ ಮೊಡವೆಯಾದರೆ ಅದಕ್ಕೆ ತಾಯಿಯ ದೇಹದಲ್ಲಿ ಆದ ಹಾರ್ಮೋನುಗಳ ಬದಲಾವಣೆಯೇ ಕಾರಣ. ಅಥವಾ ನೀವು ಬಳಸುವ ಸಾಬೂನಿನ ಅಲರ್ಜಿಯಿಂದ ಕೂಡ ಬರಬಹುದು. ವೈದ್ಯರ ಸಲಹೆ ಪಡೆಯುವುದು ಉತ್ತಮ. ಏಕೆಂದರೆ ಮಗುವಿನ ತ್ವಚೆಯು ತುಂಬಾ ಸೂಕ್ಷ್ಮವಾಗಿದ್ದು ಬೇರೆ ವಸ್ತುಗಳನ್ನು ಬಳಸುವುದರಿಂದ ಅಡ್ಡಪರಿಣಾಮವಾಗಬಹುದು.

೨.ರೇಷಸ್(rashes)

ಮಕ್ಕಳಲ್ಲಿ ಇದು ಕಾಣಿಸಿಕೊಳ್ಳುವುದು ಸಹಜ, ಇದನ್ನು ಬಂದ ಮೇಲೆ ಹೋಗಲಾಡಿಸುವ ಬಗ್ಗೆ ಚಿಂತಿಸುವುದರ ಬದಲು, ಇದು ಬರುವುದನ್ನು ತಡೆಯಿರಿ. ಸೂಕ್ಷ್ಮಚರ್ಮ ಹೊಂದಿರುವ ಮಕ್ಕಳಲ್ಲಿ ಇದು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಮಗುವಿನ ಡೈಫರ್ ಅನ್ನು ಒದ್ದೆಯಾದ ತಕ್ಷಣ ಬದಲಿಸುವುದರಿಂದ ಇದನ್ನು ತಡೆಯಬಹುದು. ಮಗುವಿನ ತ್ವಚೆಯನ್ನು ಸ್ವಚ್ಛವಾಗಿರುವಂತೆ ನೋಡಿಕೊಳ್ಳುವುದು ಉತ್ತಮ.

೩.ಅಲರ್ಜಿ

ಮಕ್ಕಳ ತ್ವಚೆ ಸೂಕ್ಷ್ಮವಾಗಿರುವುದರಿಂದ ಬದಲಾಗುವ ವಾತಾವರಣಕ್ಕೆ ಹೊಂದಿಕೊಳ್ಳುವಲ್ಲಿ ಕಷ್ಟವಾಗಬಹುದು. ಇದರಿಂದ ಅಲರ್ಜಿಯಾಗಬಹುದು. ಅಥವಾ ನೀವು ಬಳಸುವ ಸಾಬೂನು, ತ್ವಚೆಯ ಶಿಶು ಕ್ರೀಮ್ ಗಳು ಅಲರ್ಜಿಯನ್ನು ಉಂಟುಮಾಡಬಹುದು. ಕೆಲವು ಆಹಾರ ಪದಾರ್ಥಗಳು ಕೂಡ ಅಲರ್ಜಿಯನ್ನು ಉಂಟುಮಾಡಬಹುದು. ನಿಮ್ಮ ಮಗುವಿಗೆ ಅಲರ್ಜಿಯಾದ ತಕ್ಷಣ ಯಾವುದರಿಂದ ಅಲರ್ಜಿಯಾಯಿತು ಎಂಬುದನ್ನು ಗಮನಿಸಿ ಅದರ ಬಳಕೆಯನ್ನು ನಿಲ್ಲಿಸುವುದು ಒಳ್ಳೆಯದು.

೪.ಇಸುಬು

ಚರ್ಮದಲ್ಲಿ ಒಣಗಿದ ಹಾಗೂ ಕೆಂಪಾಗಿರುವ ಕಲೆಗಳು ಮೂಡುವುದನ್ನು ಇಸಬು ಎನ್ನುವರು. ಇದನ್ನು ಕಂಡ ತಕ್ಷಣ ವೈದ್ಯರನ್ನು ಭೇಟಿಯಾಗುವುದು ಒಳ್ಳೆಯದು. ಆರಂಭದಲ್ಲೇ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ಒಳ್ಳೆಯದು.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon