Link copied!
Sign in / Sign up
98
Shares

ಮಕ್ಕಳ ಕೆಮ್ಮು ಮತ್ತು ಶೀತಕ್ಕೆ ಏನೂ ಖರ್ಚಿಲ್ಲದೆ ಮಾಡಬಹುದಾದ ೭ ಮನೆಮದ್ದುಗಳು

ಯಾವುದೇ ಪೋಷಕರಿಗೆ ತಮ್ಮ ಮಕ್ಕಳ ಅನಾರೋಗ್ಯವನ್ನು ನೋಡುವುದು ಅತ್ಯಂತ ಕೆಟ್ಟ ದುಃಸ್ವಪ್ನವನ್ನು ಕಂಡಂತೆ. ಅದು ಸಾಮಾನ್ಯವಾಗಿ ಬರುವ ಶೀತ ಅಥವಾ ಕೆಮ್ಮು ಇರಬಹುದು, ತಮ್ಮ ಮಕ್ಕಳಲ್ಲಿ ಕಾಣಿಸಿಕೊಂಡರೆ ಅವರು ಅದರ ಬಗ್ಗೆ ತುಂಬಾ ತಲೆಕೆಡಿಸಿಕೊಳ್ಳುತ್ತಾರೆ ಕೆಲವರು ಅತಿರೇಕವಾಗಿ ಕೂಡ ಆಡಬಹುದು. ಅದು ಏನೇ ಇರಲಿ, ಈ ತೊಂದರೆಗಳನ್ನು ನಿಮ್ಮ ಅಡುಗೆ ಮನೆಯಲ್ಲಿರುವ ಪದಾರ್ಥಗಳಿಂದ ತಡೆಯಬಹುದು ಮತ್ತು ಗುಣಪಡಿಸಬಹುದು.

ಶೀತ ಮತ್ತು ಕೆಮ್ಮಿಗೆ ಕೆಲವು ಮನೆಮದ್ದು ಪರಿಹಾರಗಳನ್ನು ಇಲ್ಲಿ ನೀಡಲಾಗಿದೆ.

೧.ಅರಿಶಿಣದ ಹಾಲು

ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ಮನೆ ಔಷದಿ, ಅರಿಶಿಣದ ಹಾಲು, ಒಣ ಕೆಮ್ಮಿನ ವಿರುದ್ದ ಇದು ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ. ಅರಿಶಿಣವು ತನ್ನ ಔಷದಿಯ ಮೌಲ್ಯಗಳಿಗೆ ಹೆಸರುವಾಸಿಯಾಗಿದೆ, ಅರಿಶಿಣವು ಎಲ್ಲರ ಮನೆಯಲ್ಲೂ ಸಿಗುತ್ತದೆ ಮತ್ತು ಅದು ತುಂಬಾ ವೇಗವಾಗಿ ಪರಿಹಾರವನ್ನು ಒದಗಿಸುತ್ತದೆ.

೨.ಕಾಳು(/ಕಪ್ಪು) ಮೆಣಸು ಜೊತೆಗೆ ತುಪ್ಪ

ಒಂದು ಚಮಚ ತುಪ್ಪದೊಂದಿಗೆ, ಸ್ವಲ್ಪ ಕಾಳು ಮೆಣಸು ಸೇರಿಸುವುದು, ಮತ್ತೊಂದು ಸುಲಭ ಮನೆ ಔಷದಿ, ಇದು ಶೀತ ಮತ್ತು ಕೆಮ್ಮು ಎರಡರ ವಿರುದ್ದವೂ ಕಾರ್ಯನಿರ್ವಹಿಸುತ್ತದೆ. ತುಪ್ಪ ಮತ್ತು ಕಾಳು ಮೆಣಸು ಎರಡರಲ್ಲೂ ಔಷದಿಯ ಗುಣಗಳಿವೆ, ಮತ್ತು ಇದು ಎಲ್ಲರ ಮನೆಯಲ್ಲೂ ದೊರಕುವ ಪದಾರ್ಥಗಳು.

೩.ಶುಂಠಿ ಮತ್ತು ತುಳಸಿ ಮಿಶ್ರಣ

ಶುಂಠಿಯು ಕೆಮ್ಮಿನ ವಿರುದ್ದ ಪರಿಣಾಮಕಾರಿ ಕೆಲಸ ಮಾಡುತ್ತದೆ ಎಂದು ನೀವು ತಿಳಿದೇ ಇದ್ದೀರಿ, ಇದನ್ನು ತುಳಸಿಯ ಜೊತೆ ಸೇರಿಸಿದಾಗ, ಇದರ ಮಿಶ್ರಣ ಅನಾರೋಗ್ಯದ ಮೇಲೆ ಪ್ರಚಂಡ ಕೆಲಸವನ್ನು ಮಾಡುತ್ತದೆ. ಇದು ಸ್ವಲ್ಪ ಖಾರವಾಗಿರುವುದರಿಂದ ಮಕ್ಕಳು ಸೇವಿಸಲು ಇದರ ಜೊತೆಗೆ ಸ್ವಲ್ಪ ಜೇನುತುಪ್ಪವನ್ನು ಸೇರಿಸಿ ಕೊಡಬಹುದು.

೪.ಚಿಕನ್ ಸೂಪ್(ನಾಟಿ ಕೋಳಿ)

ತಿಳಿ ಚಿಕನ್ ಸೂಪ್ ಅನ್ನು ಮಕ್ಕಳಿಗೆ ಕೊಡುವುದರಿಂದ ಅವರ ಶೀತವನ್ನು ಶಮನಮಾಡಬಹುದು. ಇದು ಮಕ್ಕಳ ಆಂತರಿಕ ದೇಹದ ತಾಪಮಾನವನ್ನು ಸರಿಹೊಂದಿಸಲು ಸಹಾಯ ಮಾಡುತ್ತದೆ, ಮತ್ತು ಮಗುವು ಶೀಘ್ರವಾಗಿ ಗುಣಮುಖವಾಗಲು ಸಹಾಯ ಮಾಡುತ್ತದೆ.

೫.ಬಿಳಿ ಈರುಳ್ಳಿ ರಸ(/ಜ್ಯೂಸ್)

ಬಿಳಿ ಈರುಳ್ಳಿಯಲ್ಲಿ ಕೆಲವು ಔಷದಿಯ ಗುಣಗಳು ಇರುವುದರಿಂದ, ಇದರ ರಸವನ್ನು ಮಕ್ಕಳಿಗೆ ನೀಡುವುದರಿಂದ ಶೀತ ಮತ್ತು ಕೆಮ್ಮನ್ನು ಕಡಿಮೆ ಮಾಡಬಹುದು. ಈ ರಸದ ಒಂದು ಚಮಚವನ್ನು ನಿಮ್ಮ ಮಗುವಿಗೆ ನೀಡುವುದರಿಂದ ಬಹಳಷ್ಟು ಉಪಯೋಗವಾಗುತ್ತದೆ.

೬.ದಾಲ್ಚಿನ್ನಿ ಮತ್ತು ಜೇನುತುಪ್ಪ

ದಾಲ್ಚಿನ್ನಿಯು ಬ್ಯಾಕ್ಟಿರಿಯಾ ವಿರುದ್ದ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ. ಒಂದು ಚಮಚ ಜೇನುತುಪ್ಪದ ಜೊತೆಗೆ ಸ್ವಲ್ಪ ದಾಲ್ಚಿನ್ನಿ ಪುಡಿಯನ್ನು ಸೇರಿಸಿ ಕೊಡುವುದರಿಂದ ಕೆಮ್ಮನ್ನು ತಡೆಗಟ್ಟಬಹುದು, ಮತ್ತು ಮಕ್ಕಳ ಗಂಟಲು ಕಟ್ಟುವುದನ್ನು ಶಮನಗೊಳಿಸಿ ಆರಾಮವಾಗಿ ಉಸಿರಾಡುವಂತೆ, ಯಾವುದೇ ಕಿರಿಕಿರಿ ಇಲ್ಲದಂತೆ ಮಾಡಬಹುದು.

೭.ಬೆಲ್ಲ ಮತ್ತು ಕಾಳು ಮೆಣಸು ಮಿಶ್ರಣ

ಬೆಲ್ಲ ಮತ್ತು ಕಪ್ಪು ಮೆಣಸು ಎರಡು ಕೂಡ ಕಫಹಾರಿ ಆಗಿ ಕೆಲಸಮಾಡುತ್ತವೆ(ಶ್ವಾಸಕೋಶದ ಮೂಲಕ ಕೆಮ್ಮನ್ನು ಬರಿಸುವಂತೆ ಮಾಡುವ ಸ್ರಾವಗಳು). ಒಂದು ಬಾರಿ ಕಫ ಹೊರಬಂದರೆ, ಎದೆಯಲ್ಲಿ ಆಗಿದ್ದ ದಟ್ಟಣೆ ಸರಾಗಗೊಳ್ಳುತ್ತದೆ ಮತ್ತು ಇದು ಮಗುವು ಹೆಚ್ಚು ಆರಮದಾಯಕವಾಗುವಂತೆ ಮಾಡುತ್ತದೆ. ಸ್ವಲ್ಪ ಬೆಲ್ಲ ಮತ್ತು ಮೆಣಸು ಪುಡಿಯನ್ನು ಕೊಡುವುದರಿಂದ ಕೆಮ್ಮು ಕಡಿಮೆಯಾಗುವುದರ ಜೊತೆಗೆ, ಮಗುವಿಗೆ ಎದೆಯ ದಟ್ಟಣೆ(ದಟ್ಟಣೆಯನ್ನು ಕಡಿಮೆ ಮಾಡುತ್ತದೆ) ಇದ್ದರು ಆರಮದಾಯಕವಾಗಿ ಉಸಿರಾಡಬಹುದು.

ನಿಮ್ಮ ಮಕ್ಕಳಿಗೆ ರಾಸಾಯನಿಕ ಔಷದಿಗಳನ್ನು ನಿಡುವ ಬದಲು, ಈ ಮನೆ ಔಷದಿಗಳನ್ನು ನೀಡುವುದರಿಂದ ಅವರು ಬೇಗನೆ ಚೇತರಿಸಿಕೊಳ್ಳುವ ಜೊತೆಗೆ ಇದರಿಂದ ಯಾವುದೇ ಅಡ್ಡ ಪರಿಣಾಮಗಳಿಲ್ಲ, ಮತ್ತು ಎಲ್ಲಾ ಪದಾರ್ಥಗಳು ತಿನ್ನಲು ಬಳಸುವ ಮತ್ತು ಎಲ್ಲರ ಮನೆಯಲ್ಲೂ ಸಿಗುವ ಔಷದಗುಣವುಳ್ಳ ಪದರ್ಥಾಗಳಾಗಿವೆ. ಆದರೂ, ಅತಿಯಾದರೆ ಅಮೃತವು ವಿಷ ಎಂಬಂತೆ, ನಿಮ್ಮ ಮಕ್ಕಳಿಗೆ ಯಾವುದೇ ಪದಾರ್ಥಗಳನ್ನು ಹೆಚ್ಚಾಗಿ ನೀಡಬೇಡಿ.

Click here for the best in baby advice
What do you think?
0%
Wow!
100%
Like
0%
Not bad
0%
What?
scroll up icon